ದುಬಾರಿ ಬೆಲೆಯ ಐ10 ಎನ್ ಲೈನ್ ಕಾರು ಬಿಡುಗಡೆ ಮಾಡಿದ ಹ್ಯುಂಡೈ

ದಕ್ಷಿಣ ಕೊರಿಯಾದ ಹ್ಯುಂಡೈ ಮೋಟಾರ್ಸ್ ಕಂಪನಿಯು ತನ್ನ ಜನಪ್ರಿಯ ಹ್ಯಾಚ್‌ಬ್ಯಾಕ್ ಕಾರು ಮಾದರಿಯಾದ ಗ್ರಾಂಡ್ ಐ10 ಆವೃತ್ತಿಯಲ್ಲಿ ಐ10 ಎನ್ ಲೈನ್ ಪರ್ಫಾಮೆನ್ಸ್ ಮಾದರಿಯನ್ನು ಅನಾವರಣಗೊಳಿಸಿದ್ದು, ಹೊಸ ಕಾರು ಸದ್ಯ ಮಾರುಕಟ್ಟೆಯಲ್ಲಿರುವ ಸಾಮಾನ್ಯ ಗ್ರಾಂಡ್ ಐ10 ಮಾದರಿಗಿಂತಲೂ ಹೆಚ್ಚು ದುಬಾರಿ ಬೆಲೆಯೊಂದಿಗೆ ಮಾರುಕಟ್ಟೆ ಪ್ರವೇಶಿಸಿದೆ.

ದುಬಾರಿ ಬೆಲೆಯ ಐ10 ಎನ್ ಲೈನ್ ಕಾರು ಬಿಡುಗಡೆ ಮಾಡಿದ ಹ್ಯುಂಡೈ

ಭಾರತವನ್ನು ಹೊರತುಪಡಿಸಿ ಯರೋಪಿನ ಪ್ರಮುಖ ಮಾರುಕಟ್ಟೆಗಳಿಗಾಗಿ ಅನಾವರಣಗೊಂಡಿರುವ ಐ10 ಎನ್ ಲೈನ್ ಕಾರು ಮಾದರಿಯ ಹಲವಾರು ಐಷಾರಾಮಿ ಫೀಚರ್ಸ್‌ಗೊಂದಿಗೆ ಅನಾವರಣಗೊಂಡಿದ್ದು, ಹೊಸ ಮೊದಲಿಗೆ ಜರ್ಮನಿಯಲ್ಲಿ ಬಿಡುಗಡೆಯಾಗಿದೆ. ಹೊಸ ಐ10 ಎನ್ ಲೈನ್ ಕಾರು ಟರ್ಕಿಯಲ್ಲಿರುವ ಹ್ಯುಂಡೈ ಎರಡನೇ ಅತಿ ದೊಡ್ಡ ಕಾರು ಉತ್ಪಾದನಾ ಘಟಕದಲ್ಲಿ ನಿರ್ಮಾಣಗೊಂಡಿದ್ದು, ಸಾಮಾನ್ಯ ಕಾರು ಮಾದರಿಗಿಂತ ಹೊಸ ಕಾರು ಹಲವಾರು ಹೊಸ ಬದಲಾವಣೆಗಳೊಂದಿಗೆ ಅಭಿವೃದ್ದಿಯಾಗಿದೆ.

ದುಬಾರಿ ಬೆಲೆಯ ಐ10 ಎನ್ ಲೈನ್ ಕಾರು ಬಿಡುಗಡೆ ಮಾಡಿದ ಹ್ಯುಂಡೈ

ಐ10 ಎನ್ ಲೈನ್ ಕಾರು ಮಾದರಿಯನ್ನು ಪರ್ಫಾಮೆನ್ಸ್ ಪ್ರಿಯರಿಗಾಗಿಯೇ ವಿಶೇಷವಾಗಿ ಅಭಿವೃದ್ದಿಗೊಳಿಸಿದ್ದು, ರೆಡ್ ಆಕ್ಸೆಂಟ್, ಸಿಂಗಲ್ ಪೀಸ್ ಸ್ಪೋರ್ಟಿ ಗ್ರಿಲ್ ಜೊತೆ ಎನ್ ಲೈನ್ ಲೊಗೊ, ಟ್ರೈ-ಬಾರ್ ಎಲ್ಇಡಿ ಡಿಆರ್‌ಎಲ್ಎಸ್ ಮತ್ತು ಬಲಿಷ್ಠವಾಗಿರುವ ಫ್ರಂಟ್ ಬಂಪರ್ ಆಯ್ಕೆ ಹೊಂದಿದೆ.

ದುಬಾರಿ ಬೆಲೆಯ ಐ10 ಎನ್ ಲೈನ್ ಕಾರು ಬಿಡುಗಡೆ ಮಾಡಿದ ಹ್ಯುಂಡೈ

ಜೊತೆಗೆ ಹೊಸ ಕಾರಿನಲ್ಲಿ ರೆಡ್ ಆಕ್ಸೆಂಟ್ ಹೊಂದಿರುವ 16-ಇಂಚಿನ ಸ್ಪೋರ್ಟಿ ಅಲಾಯ್ ವೀಲ್ಹ್, ಟ್ವಿನ್-ಟಿಪ್ ಎಕ್ಸಾಸ್ಟ್, ಕಾರಿನ ಒಳಭಾಗದಲ್ಲಿ ಎನ್ ಲೈನ್ ಬ್ಯಾಡ್ಜ್, ಮೆಟಲ್ ಪೆಡಲ್ಸ್, ರೆಡ್ ಕಾಟ್ರಾಸ್ಟ್ ಸ್ಟಿಚ್, ಪ್ರೋಜೆಕ್ಟರ್ ಹೆಡ್‌ಲ್ಯಾಂಪ್ ಮತ್ತು ಫಾಗ್‌ಲ್ಯಾಂಪ್, ಎಲ್ಇಡಿ ಟೈಲ್ ಲೈಟ್, ಎಲ್ಇಡಿ ಡಿಆರ್‌ಎಲ್ಎಸ್ ಹೊಂದಿದೆ.

ದುಬಾರಿ ಬೆಲೆಯ ಐ10 ಎನ್ ಲೈನ್ ಕಾರು ಬಿಡುಗಡೆ ಮಾಡಿದ ಹ್ಯುಂಡೈ

ಇದಲ್ಲದೇ ಐಷಾರಾಮಿ ಫೀಚರ್ಸ್‌ಗಳಾದ ಆಟೋ ಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್, ವೈರ್‌ಲೆಸ್ ಮೊಬೈಲ್ ಚಾರ್ಜಿಂಗ್, 8-ಇಂಚಿನ ಇನ್ಪೋಟೈನ್‌ಮೆಂಟ್ ಸಿಸ್ಟಂ, 33 ಫೀಚರ್ಸ್‌ಗಳನ್ನು ಒಳಗೊಂಡ ಬ್ಲೂ ಲಿಂಕ್ ಟೆಕ್ನಾಲಜಿ ಸೌಲಭ್ಯದ ಜೊತೆಗೆ ಹೆಚ್ಚುವರಿ ಪ್ಯಾಕೇಜ್ ಪಡೆದಕೊಳ್ಳಬಹುದಾಗಿದೆ.

MOST READ: ಲಾಕ್‌ಡೌನ್ ಸಂಕಷ್ಟ: ಸೆಕೆಂಡ್ ಹ್ಯಾಂಡ್ ಕಾರು ಮಾರಾಟ ಉದ್ಯಮ ಆರಂಭಿಸಿದ ಫೋಕ್ಸ್‌ವ್ಯಾಗನ್

ದುಬಾರಿ ಬೆಲೆಯ ಐ10 ಎನ್ ಲೈನ್ ಕಾರು ಬಿಡುಗಡೆ ಮಾಡಿದ ಹ್ಯುಂಡೈ

ಹೊಸ ಕಾರಿನಲ್ಲಿ 100-ಬಿಎಚ್‌ಪಿ 172-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲ 1.0-ಲೀಟರ್ ಟಿ-ಜಿಡಿಐ ಟರ್ಬೋಚಾರ್ಜ್ಡ್ ತ್ರಿ-ಸಿಲಿಂಡರ್ ಎಂಜಿನ್ ನೀಡಲಾಗಿದ್ದು, 5-ಸ್ಪೀಡ್ ಮ್ಯಾನುವಲ್ ಗೇರ್‌ಬೈಕ್ ಹೊಂದಿದೆ.

ದುಬಾರಿ ಬೆಲೆಯ ಐ10 ಎನ್ ಲೈನ್ ಕಾರು ಬಿಡುಗಡೆ ಮಾಡಿದ ಹ್ಯುಂಡೈ

ಈ ಮೂಲಕ ಸಾಮಾನ್ಯ ಗ್ರಾಂಡ್ ಐ10 ನಿಯೋಸ್ ಸ್ಪೋರ್ಟ್ ಕಾರಿಗಿಂತಲೂ ಹೆಚ್ಚು ಐಷಾರಾಮಿ ಫೀಚರ್ಸ್ ಒಳಗೊಂಡಿರುವ ಐ10 ಎನ್ ಲೈನ್ ಕಾರು ಯುರೋಪ್ ಮಾರುಕಟ್ಟೆಗಳಲ್ಲಿ ಆರಂಭಿಕವಾಗಿ 18,790 ಯುರೋ ಹೊಂದಿದ್ದು, ಇದು ಭಾರತೀಯ ರೂಪಾಯಿ ಲೆಕ್ಕಾಚಾರದಲ್ಲಿ ರೂ.16.08 ಲಕ್ಷ ಬೆಲೆ ಹೊಂದಿರಲಿದೆ.

MOST READ: ರೂ.5 ಲಕ್ಷಕ್ಕಿಂತ ಕಡಿಮೆ ಬೆಲೆಯ ಜನಪ್ರಿಯ ಕಾರುಗಳಿವು

ದುಬಾರಿ ಬೆಲೆಯ ಐ10 ಎನ್ ಲೈನ್ ಕಾರು ಬಿಡುಗಡೆ ಮಾಡಿದ ಹ್ಯುಂಡೈ

ಆದರೆ ಭಾರತದಲ್ಲಿ ಮಾರಾಟವಾಗುತ್ತಿರುವ ಗ್ರಾಂಡ್ ಐ10 ನಿಯೋಸ್ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ.5,06,990 ಬೆಲೆ ಹೊಂದಿದ್ದರೆ ಟಾಪ್ ಎಂಡ್ ಮಾದರಿಯು ರೂ. 8,29,459 ಬೆಲೆ ಹೊಂದಿದೆ. ಆದರೆ ವಿದೇಶಿ ಮಾರುಕಟ್ಟೆಯಲ್ಲಿರುವ ಬಹುತೇಕ ಕಾರು ಮಾದರಿಗಳು ಗುಣಮಟ್ಟದ ಸೌಲಭ್ಯಗಳೊಂದಿಗೆ ಲಭ್ಯವಿರಲಿದ್ದರೆ ಭಾರತದಲ್ಲಿ ಮಾರಾಟವಾಗುವ ಕಾರುಗಳ ಬೆಲೆ ತಗ್ಗಿಸುವುದಕ್ಕಾಗಿ ಪ್ರೀಮಿಯಂ ಫೀಚರ್ಸ್‌ಗಳ ಬದಲಾಗಿ ಸಾಮಾನ್ಯ ಸೌಲಭ್ಯಗಳನ್ನು ಜೋಡಿಸಲಾಗುತ್ತದೆ.

Article Published On: Thursday, June 18, 2020, 14:13 [IST]
English summary
Hyundai Launched Performance Based i10 N Line In Germany. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+