ವೈರಸ್ ಭೀತಿ ಹೆಚ್ಚಳ: ಕಾರ್ ಸ್ಯಾನಿಟೈಜ್‌ಗೆ ಹೊಸ ಆಫರ್ ನೀಡಿದ ಹ್ಯುಂಡೈ

ವಿಶ್ವಾದ್ಯಂತ ಕರೋನಾ ವೈರಸ್ ಪ್ರಮಾಣವು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದ್ದು, ಭಾರತದಲ್ಲೂ ಕೂಡಾ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಇದರಿಂದ ವಾಣಿಜ್ಯ ಚಟುವಟಿಕೆಗಳು ಕುಂಠಿತಗೊಳ್ಳುತ್ತಿದ್ದು, ಇದೀಗ ಮತ್ತೊಮ್ಮೆ ದೇಶಾದ್ಯಂತ ವಿವಿಧ ರಾಜ್ಯಗಳು ಎರಡನೇ ಹಂತದ ಲಾಕ್‌ಡೌನ್ ವಿಧಿಸಿವೆ.

ಕಾರ್ ಸ್ಯಾನಿಟೈಜ್‌ಗೆ ಹೊಸ ಆಫರ್ ನೀಡಿದ ಹ್ಯುಂಡೈ

ಸೋಂಕು ನಿಯಂತ್ರಣಕ್ಕೆ ತರಲು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಹರಸಾಹಸಪಡುತ್ತಿದ್ದು, ಸೂಕ್ತ ಲಸಿಕೆಯಿಲ್ಲದ ಹಿನ್ನಲೆಯಲ್ಲಿ ವೈರಸ್ ನಿಯಂತ್ರಣಕ್ಕೆ ಸಿಗುತ್ತಿಲ್ಲ. ಇದರಿಂದ ಸದ್ಯಕ್ಕೆ ವೈರಸ್‌ ದಾಳಿಯಿಂದ ರಕ್ಷಿಸಿಕೊಳ್ಳಲು ಸಾಮಾಜಿಕ ಅಂತರದೊಂದಿಗೆ ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳುವುದು ಅನಿವಾರ್ಯವಾಗಿದೆ. ಜೊತೆಗೆ ಸುರಕ್ಷಿತ ಸಂಚಾರಕ್ಕಾಗಿ ವಾಹನಗಳಲ್ಲೂ ವಿವಿಧ ಮಾದರಿಯ ಹಲವು ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, ಸ್ಯಾನಿಟೈಜ್‌ಗೆ ಹೆಚ್ಚು ಬೇಡಿಕೆ ಉಂಟಾಗಿದೆ.

ಕಾರ್ ಸ್ಯಾನಿಟೈಜ್‌ಗೆ ಹೊಸ ಆಫರ್ ನೀಡಿದ ಹ್ಯುಂಡೈ

ಈ ನಿಟ್ಟಿನಲ್ಲಿ ತನ್ನ ಗ್ರಾಹಕರ ಆರೋಗ್ಯ ದೃಷ್ಠಿಯಿಂದ ಅತಿ ಕಡಿಮೆ ಬೆಲೆಗೆ ಕಾರ್ ಸ್ಯಾನಿಟೈಜ್ ಸೇವೆಗಳನ್ನು ಆರಂಭಿಸಿರುವ ಹ್ಯುಂಡೈ ಕಂಪನಿಯು ವೈರಸ್ ಹರಡದಂತೆ ಹಲವು ಹೊಸ ಕ್ರಮಗಳನ್ನು ಅಳವಡಿಸುತ್ತಿರುವುದು ಗ್ರಾಹಕರ ಆಕರ್ಷಣೆಗೆ ಕಾರಣವಾಗಿದೆ.

ಕಾರ್ ಸ್ಯಾನಿಟೈಜ್‌ಗೆ ಹೊಸ ಆಫರ್ ನೀಡಿದ ಹ್ಯುಂಡೈ

ಹೊಸ ಸ್ಯಾನಿಟೈಜ್ ಸರ್ವೀಸ್ ಕ್ಯಾಂಪ್ ಅನ್ನು ಇದೇ ತಿಂಗಳು 15ರಿಂದ 31ರ ತನಕ ಆರಂಭಿಸಿರುವ ಹ್ಯುಂಡೈ ಕಂಪನಿಯು, ಕಂಟ್ಯಾಕ್ಟ್ ಲೆಸ್ ಮೂಲಕ ಹೊಸ ಸ್ಯಾನಿಟೈಜ್ ಸೇವೆಗಳನ್ನು ಹ್ಯುಂಡೈ ಕೇರ್ ಆ್ಯಪ್ ಮೂಲಕ ಮನೆ ಬಾಲಿಗೆಗೆ ಸೇವೆಗಳನ್ನು ಒದಗಿಸುತ್ತಿದೆ.

ಕಾರ್ ಸ್ಯಾನಿಟೈಜ್‌ಗೆ ಹೊಸ ಆಫರ್ ನೀಡಿದ ಹ್ಯುಂಡೈ

ಸ್ಯಾನಿಟೈಜ್ ಸೇವೆಗಳಲ್ಲಿ ಮುಖ್ಯವಾಗಿ ಕಾರಿನ ಹೊರದ ಭಾಗದ ಡ್ರೈ ವಾಷ್‌ಗೆ ರೂ. 340, ಸ್ಮೋಕ್ ಸ್ಯಾನಿಟೈಜ್‌ಗೆ ರೂ. 599(ಕಾರಿನ ಒಳಭಾಗ ಮಾತ್ರ) ಮತ್ತು ಇಂಟಿರಿಯರ್ ಸರ್ಫೇಸ್ ಸ್ಯಾನಿಟೈಜ್‌ಗೆ ರೂ. 999 ದರ ನಿಗದಿಮಾಡಲಾಗಿದ್ದು, ಸೋಂಕು ಭೀತಿಯಿಂದ ಪಾರಾಗಲು ಹೊಸ ಸ್ಯಾನಿಟೈಜ್ ಸೇವೆಯು ಉಪಯಕ್ತವಾಗಿದೆ.

ಕಾರ್ ಸ್ಯಾನಿಟೈಜ್‌ಗೆ ಹೊಸ ಆಫರ್ ನೀಡಿದ ಹ್ಯುಂಡೈ

ಇನ್ನು ಕರೋನಾ ವೈರಸ್‌ನಿಂದಾಗಿ ಆಟೋ ಉದ್ಯಮದಲ್ಲಿ ಸುರಕ್ಷಿತ ವ್ಯಾಪಾರ-ವಹಿವಾಟು ಇದೀಗ ಹೊಸ ಸವಾಲಾಗಿ ಪರಿಣಮಿಸಿದೆ. ಇದರಿಂದ ಬಹುತೇಕ ಆಟೋ ಕಂಪನಿಗಳು ಆನ್‌ಲೈನ್ ವಹಿವಾಟಿಗೆ ಹೆಚ್ಚು ಆದ್ಯತೆ ನೀಡುತ್ತಿದ್ದು, ಗ್ರಾಹಕರು ಕೂಡಾ ವೈರಸ್ ಭಯದಿಂದಾಗಿ ಆನ್‌ಲೈನ್ ಪ್ಲ್ಯಾಟ್‌‌‌ಫಾರ್ಮ್‌ನತ್ತ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ.

MOST READ: ರೂ.5 ಲಕ್ಷಕ್ಕಿಂತ ಕಡಿಮೆ ಬೆಲೆಯ ಜನಪ್ರಿಯ ಕಾರುಗಳಿವು

ಕಾರ್ ಸ್ಯಾನಿಟೈಜ್‌ಗೆ ಹೊಸ ಆಫರ್ ನೀಡಿದ ಹ್ಯುಂಡೈ

ಲಾಕ್‌ಡೌನ್ ವಿನಾಯ್ತಿ ನಂತರ ವಾಹನ ಮಾರಾಟದಲ್ಲಿ ಹಲವು ಹೊಸ ಬದಲಾಣೆಗಳನ್ನು ಪರಿಚಯಿಸಿರುವ ಆಟೋ ಕಂಪನಿಗಳು ಸುರಕ್ಷಿತ ವ್ಯಾಪಾರ-ವಹಿವಾಟು ನಡೆಸುತ್ತಿದ್ದು, ಸಂಕಷ್ಟದ ಪರಿಸ್ಥಿತಿಯಲ್ಲೂ ಹೊಸ ಕಾರುಗಳ ಮಾರಾಟ ಪ್ರಮಾಣದಲ್ಲಿ ತುಸು ಚೇತರಿಕೆ ಕಂಡುಬರುತ್ತಿದೆ.

ಕಾರ್ ಸ್ಯಾನಿಟೈಜ್‌ಗೆ ಹೊಸ ಆಫರ್ ನೀಡಿದ ಹ್ಯುಂಡೈ

ಕಾರು ಮಾರಾಟದಲ್ಲಿ ಎರಡನೇ ಅತಿದೊಡ್ಡ ಕಂಪನಿಯಾಗಿ ಹೊರಹೊಮ್ಮಿರುವ ಹ್ಯುಂಡೈ ಕೂಡಾ ಇದೀಗ ಇದೀಗ ಕಾರುಗಳ ಮಾರಾಟದಲ್ಲಿ ಗಮನಸೆಳೆಯುತ್ತಿದ್ದು, ಮೇ 4 ರಿಂದ ಇದುವರೆಗೆ ಸುಮಾರು 40 ಸಾವಿರ ಬುಕ್ಕಿಂಗ್‌ಗಳನ್ನು ಕ್ಲಿಕ್ ಟು ಬೈ ಆನ್‌ಲೈನ್ ಪ್ಲ್ಯಾಟ್‌ಫಾರ್ಮ್ ಮೂಲಕ ಪಡೆದುಕೊಂಡಿದೆ.

MOST READ: ಪ್ರತಿ ಚಾರ್ಜ್‌ಗೆ 480 ಕಿ.ಮೀ ಮೈಲೇಜ್ ನೀಡುವ ಎಲೆಕ್ಟ್ರಿಕ್ ಎಸ್‌ಯುವಿ ಬಿಡುಗಡೆ ಮಾಡಲಿದೆ ನಿಸ್ಸಾನ್

ಕಾರ್ ಸ್ಯಾನಿಟೈಜ್‌ಗೆ ಹೊಸ ಆಫರ್ ನೀಡಿದ ಹ್ಯುಂಡೈ

ಜೊತೆಗೆ ಹೊಸ ಕಾರುಗಳ ಕುರಿತಾಗಿ ಹೆಚ್ಚಿನ ಮಾಹಿತಿಗಾಗಿ ಕ್ಲಿಕ್ ಟು ಬೈ ಆನ್‌ಲೈನ್ ಪ್ಲ್ಯಾಟ್‌ಫಾರ್ಮ್‌ಗೆ ಸುಮಾರು 15 ಲಕ್ಷಕ್ಕೂ ಹೆಚ್ಚು ಜನ ಹೊಸ ವೆಬ್‌ತಾಣಕ್ಕೆ ಭೇಟಿ ನೀಡಿದ್ದು, ಇದು ಆನ್‌ಲೈನ್ ಕಾರು ಮಾರಾಟಕ್ಕೆ ಹೆಚ್ಚಿನ ಬೇಡಿಕೆ ಇರುವುದನ್ನು ಸ್ಪಷ್ಟಪಡಿಸುತ್ತದೆ.

Article Published On: Friday, July 17, 2020, 19:36 [IST]
English summary
Hyundai Launches Nationwide Hygiene Drive For Its Customers. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+