ಲೋಗೋ ಮೂಲಕವೇ ಸಾಮಾಜಿಕ ಅಂತರ ಕುರಿತು ಜಾಗೃತಿ ಮೂಡಿಸಿದ ಹ್ಯುಂಡೈ

ಮಹಾಮಾರಿ ಕರೋನಾ ವೈರಸ್ ಹೊಡೆತಕ್ಕೆ ಇಡಿ ವಿಶ್ವವೇ ತಲ್ಲಣಗೊಂಡಿದ್ದು, ವೈರಸ್ ಹರಡುವಿಕೆಯನ್ನು ಪರಿಣಾಮಕಾರಿಯಾಗಿ ತಗ್ಗಿಸಲು ಹಲವಾರು ಕಠಿಣ ಕ್ರಮಗಳನ್ನು ಜಾರಿಗೆ ತರಲಾಗುತ್ತಿದೆ.

ಲೋಗೋ ಮೂಲಕವೇ ಸಾಮಾಜಿಕ ಅಂತರ ಕುರಿತು ಜಾಗೃತಿ ಮೂಡಿಸಿದ ಹ್ಯುಂಡೈ

ಕರೋನಾ ವೈರಸ್‌ ತಡೆಯಲು ಸೂಕ್ತವಾದ ವೈದ್ಯಕೀಯ ಚಿಕಿತ್ಸೆ ಇಲ್ಲದಿರುವುದೇ ದೊಡ್ಡ ಆತಂಕಕ್ಕೆ ಕಾರಣವಾಗಿದ್ದು, ಈ ವೇಳೆ ವೈರಸ್ ಹರಡದಂತೆ ನಮ್ಮನ್ನು ನಾವೇ ಸ್ವಯಂರಕ್ಷಣೆ ಮಾಡಿಕೊಳ್ಳುವುದೇ ಪ್ರಮುಖ ಜವಾಬ್ದಾರಿಯಾಗಿದೆ. ವೈರಸ್ ಹರಡುವಿಕೆಯನ್ನು ತಡೆಯಲು ಸರ್ಕಾರಗಳು ಲಾಕ್ ಡೌನ್ ವಿಧಿಸಲಾಗಿದ್ದರೂ ನಿಯಮ ಉಲ್ಲಂಘನೆ ಮಾಡುವ ಪ್ರಕರಣಗಳು ಹೆಚ್ಚುತ್ತಿದ್ದು, ಸಂಕಷ್ಟಕರ ಪರಿಸ್ಥಿತಿಯಲ್ಲೂ ಸಾಮಾಜಿಕ ಅಂತರವನ್ನು ಕಾಯ್ದಕೊಳ್ಳುವಲ್ಲಿ ಅಸಡ್ಡೆ ತೋರುತ್ತಿರುವ ಕೆಲವರು ಮಾಹಾಮಾರಿ ವೈರಸ್‌ಗೆ ತುತ್ತಾಗುತ್ತಿದ್ದಾರೆ.

ಲೋಗೋ ಮೂಲಕವೇ ಸಾಮಾಜಿಕ ಅಂತರ ಕುರಿತು ಜಾಗೃತಿ ಮೂಡಿಸಿದ ಹ್ಯುಂಡೈ

ಈ ಕುರಿತು ಜಾಗೃತಿಯೊಂದು ಮೂಡಿಸಿರುವ ಹ್ಯುಂಡೈ ಕಂಪನಿಯು ತನ್ನದೇ ಶೈಲಿಯಲ್ಲಿ ಜನತೆಗೆ ಒಂದು ಉತ್ತಮ ಸಂದೇಶ ನೀಡಿದೆ. ಲೋಗೋ ಮೂಲಕವೇ ಜನತೆಯಲ್ಲಿ ಜಗ್ಗಟ್ಟಿನ ಜೊತೆ ಸಾಮಾಜಿಕ ಅಂತರ ಕಾಯ್ದಕೊಳ್ಳುವ ಬಗ್ಗೆ ಸಂದೇಶ ನೀಡಲಾಗಿದ್ದು, ಕರೋನಾ ತೊಲಗಿಸಲು ವಿಶ್ವಾಸ ವ್ಯಕ್ತಪಡಿಸಿದೆ.

ಲೋಗೋ ಮೂಲಕವೇ ಸಾಮಾಜಿಕ ಅಂತರ ಕುರಿತು ಜಾಗೃತಿ ಮೂಡಿಸಿದ ಹ್ಯುಂಡೈ

ಜಗತ್ತಿನಾದ್ಯಂತ ದಿನಂಪ್ರತಿ ಸಾವಿರಾರು ಜನರ ಜೀವವನ್ನು ಬಲಿಪಡೆಯುತ್ತಿರುವ ವೈರಸ್‌ನಿಂದ ಬಚಾವ್ ಆಗಲು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದು ಪ್ರಮುಖ ಅಂಶವಾಗಿದ್ದು, ಪ್ರತಿಯೊಬ್ಬರು ವೈರಸ್ ತಡೆಯುವುದಕ್ಕಾಗಿ ಕೆಲವು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾದ ಪರಿಸ್ಥಿತಿ ಎದುರಾಗಿದೆ.

ಲೋಗೋ ಮೂಲಕವೇ ಸಾಮಾಜಿಕ ಅಂತರ ಕುರಿತು ಜಾಗೃತಿ ಮೂಡಿಸಿದ ಹ್ಯುಂಡೈ

ವೈರಸ್ ಅಟ್ಟಹಾಸ ಹೆಚ್ಚಾಗುತ್ತಿದ್ದಂತೆ ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ಲಾಕ್ ಡೌನ್ ವಿಧಿಸಲಾಗಿದ್ದು, ಬಹುತೇಕ ವಾಣಿಜ್ಯ ಚಟುವಟಿಕೆಗಳನ್ನು ಸ್ಥಗಿತಗೊಂಡಿವೆ. ಈ ಹಿನ್ನಲೆಯಲ್ಲಿ ಭಾರತ ಸೇರಿ ವಿಶ್ವದ ಹಲವು ರಾಷ್ಟ್ರಗಳ ಆರ್ಥಿಕ ಪರಿಸ್ಥಿತಿ ಶೋಚನೀಯ ಸ್ಥಿತಿ ತಲುಪಿದೆ. ಕರೋನಾ ವೈರಸ್ ವಿರುದ್ಧ ಹೋರಾಟಕ್ಕಾಗಿ ಆರಂಭಿಸಲಾಗಿರುವ ದೇಣಿಗೆ ಸಂಗ್ರಹ ಅಭಿಯಾನಕ್ಕೆ ಈಗಾಗಲೇ ಭಾರೀ ಪ್ರಮಾಣದ ನೆರವು ಹರಿದು ಬಂದಿದ್ದು, ಉದ್ಯಮಿಗಳು, ಚಿತ್ರ ನಟರು, ಸರ್ಕಾರಿ ಅಧಿಕಾರಿಗಳು ಮತ್ತು ಜನಸಾಮಾನ್ಯರು ಸಹ ತಮ್ಮ ಕೈಲಾದಷ್ಟು ದೇಣಿಗೆ ನೀಡಿ ಕರೋನಾ ವಿರುದ್ಧ ಸರ್ಕಾರದ ಹೋರಾಟಕ್ಕೆ ಶಕ್ತಿ ತುಂಬಿದ್ದಾರೆ.

ಲೋಗೋ ಮೂಲಕವೇ ಸಾಮಾಜಿಕ ಅಂತರ ಕುರಿತು ಜಾಗೃತಿ ಮೂಡಿಸಿದ ಹ್ಯುಂಡೈ

ಅದರಲ್ಲೂ ಆಟೋ ಉತ್ಪಾದನಾ ಕಂಪನಿಗಳು ಕರೋನಾ ವಿರುದ್ದ ಹೋರಾಟಕ್ಕಾಗಿ ಸಂಕಷ್ಟದ ಸಮಯದಲ್ಲೂ ಸರ್ಕಾರದ ಜೊತೆ ನಿಂತಿರುವುದಲ್ಲದೆ ವೈದ್ಯಕೀಯ ಉಪಕರಣಗಳ ತಯಾರಿಕೆಗೆ ಮುಂದಾಗಿವೆ.

ಲೋಗೋ ಮೂಲಕವೇ ಸಾಮಾಜಿಕ ಅಂತರ ಕುರಿತು ಜಾಗೃತಿ ಮೂಡಿಸಿದ ಹ್ಯುಂಡೈ

ಆರೋಗ್ಯ ಕೇಂದ್ರಗಳಿಗೆ ಅಗತ್ಯವಿರುವ ಟೆಸ್ಟಿಂಗ್ ಕಿಟ್, ವೆಂಟಿಲೆಟರ್ ಮತ್ತು ಐಸಿಯು ಯುನಿಟ್‌ಗೆ ಅಗತ್ಯವಿರುವ ಸೌಲಭ್ಯಗಳನ್ನು ನೀಡುವುದಾಗಿ ಘೋಷಣೆ ಮಾಡಿದ್ದು, ಆರೋಗ್ಯ ಇಲಾಖೆಯ ಬೇಡಿಕೆಗಳನ್ನು ಪೂರೈಸಲು ಸಿದ್ದವಾಗುತ್ತಿವೆ.

ಲೋಗೋ ಮೂಲಕವೇ ಸಾಮಾಜಿಕ ಅಂತರ ಕುರಿತು ಜಾಗೃತಿ ಮೂಡಿಸಿದ ಹ್ಯುಂಡೈ

ಇದರ ಜೊತೆಗೆ ಗ್ರಾಮೀಣ ಭಾಗದಲ್ಲಿನ ಆರೋಗ್ಯ ಸೌಕರ್ಯ ಮತ್ತು ಮೂಲಭೂತ ಸೌಕರ್ಯಗಳ ನಿರ್ಮಾಣಕ್ಕಾಗಿ ವಿಶೇಷ ಆದ್ಯತೆ ನೀಡುವುದಾಗಿ ಹೇಳಿಕೊಂಡಿರುವ ಆಟೋ ಕಂಪನಿಗಳು ಪರಿಸರ ಮತ್ತು ಆರೋಗ್ಯ ಕಾಳಜಿಗೆ ವಿಶೇಷ ಆಸಕ್ತಿ ವಹಿಸಿದ್ದು, ಶೀಘ್ರದಲ್ಲೇ ವೈದ್ಯಕೀಯ ಉಪಕರಣಗಳನ್ನು ಸರಬರಾಜು ಮಾಡುವುದಾಗಿ ಘೋಷಣೆ ಮಾಡಿವೆ.

ಲೋಗೋ ಮೂಲಕವೇ ಸಾಮಾಜಿಕ ಅಂತರ ಕುರಿತು ಜಾಗೃತಿ ಮೂಡಿಸಿದ ಹ್ಯುಂಡೈ

ಇನ್ನು ಚೀನಾದಿಂದ ಶುರುವಾದ ಕರೋನಾ ವೈರಸ್ ಹರಡುವಿಕೆಯು ಇದೀಗ ಇಡೀ ವಿಶ್ವವನ್ನೇ ವ್ಯಾಪಿಸಿದ್ದು, ಇದುವರೆಗೆ 15 ಲಕ್ಷ ಜನರಲ್ಲಿ ಸೋಂಕು ಕಾಣಿಸಿಕೊಂಡಿರುವುದಲ್ಲದೆ 90 ಸಾವಿರ ಜನ ಪ್ರಾಣಕಳೆದುಕೊಂಡಿದ್ದಾರೆ. ಸೋಂಕು ಪಿಡಿತರಲ್ಲಿ ಇದುವರೆಗೆ ಸುಮಾರು 3.40 ಲಕ್ಷ ಜನ ಗುಣಮುಖರಾಗಿದ್ದು, ಶೇ.5 ರಷ್ಟು ಜನರ ಸ್ಥಿತಿ ಶೋಚನೀಯವಾಗಿದೆ.

ಲೋಗೋ ಮೂಲಕವೇ ಸಾಮಾಜಿಕ ಅಂತರ ಕುರಿತು ಜಾಗೃತಿ ಮೂಡಿಸಿದ ಹ್ಯುಂಡೈ

ಹೀಗಾಗೀ ವೈರಸ್ ತಡೆಗಾಗಿ ಈಗಾಗಲೇ ವಿಶ್ವದ ಎಲ್ಲಾ ರಾಷ್ಟ್ರಗಳು ಒಗ್ಗಟ್ಟಿನಿಂದ ಹೋರಾಟ ನಡೆಸುತ್ತಿದ್ದು, ಕೊರತೆಯಾಗಿರುವ ವೈದ್ಯಕೀಯ ಉಪಕರಣಗಳ ಉತ್ಪಾದನೆಗಾಗಿ ಆಟೋ ಕಂಪನಿಗಳು ಒಪ್ಪಿಗೆ ನೀಡಿವೆ.

Article Published On: Thursday, April 9, 2020, 20:47 [IST]
English summary
Hyundai logo promotes social distancing amidst coronavirus pandemic. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+