ಹೊಸ ಕಾರುಗಳ ಮಾರಾಟದಲ್ಲಿ ಭರ್ಜರಿಯಾಗಿ ಮುನ್ನಡೆ ಕಾಯ್ದುಕೊಂಡ ಹ್ಯುಂಡೈ
ಕರೋನಾ ವೈರಸ್ ಪರಿಣಾಮ ಆರಂಭ ದಿನಗಳಲ್ಲಿ ಕುಸಿತ ಕಂಡಿದ್ದ ಹೊಸ ವಾಹನಗಳ ಮಾರಾಟವು ತದನಂತರದ ದಿನಗಳಲ್ಲಿ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದ್ದು, ಹ್ಯುಂಡೈ ಕೂಡಾ ಹೊಸ ಕಾರು ಮಾರಾಟದಲ್ಲಿ ಭರ್ಜರಿಯಾಗಿ ಮುನ್ನಡೆ ಕಾಯ್ದುಕೊಳ್ಳುತ್ತಿದೆ.

ಲಾಕ್‌ಡೌನ್ ನಂತರ ಏಪ್ರಿಲ್ ಮತ್ತು ಮೇ ತಿಂಗಳಿನ ಹೊಸ ವಾಹನ ಮಾರಾಟದಲ್ಲಿ ಸಾಕಷ್ಟು ಇಳಿಕೆಯಾಗಿದ್ದರಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದ ಆಟೋ ಕಂಪನಿಗಳು ನಂತರದ ದಿನಗಳಲ್ಲಿ ಹಲವಾರು ಆಫರ್‌ಗಳನ್ನು ನೀಡುವ ಮೂಲಕ ವಾಹನ ಮಾರಾಟದಲ್ಲಿ ಹಂತ ಹಂತವಾಗಿ ಚೇತರಿಕೆ ಕಂಡಿದ್ದವು. ಆದರೆ ಎರಡು ತಿಂಗಳ ಅವಧಿಯಲ್ಲಿ ಹೊಸ ವಾಹನಗಳ ಬೇಡಿಕೆಯು ಇದ್ದಕ್ಕಿಂತಕ್ಕೆ ದುಪ್ಪಟ್ಟು ಹೆಚ್ಚಳಗೊಂಡಿದ್ದು, ಅಕ್ಟೋಬರ್ ಮತ್ತು ನವೆಂಬರ್ ಅವಧಿಯಲ್ಲಿನ ಹ್ಯುಂಡೈ ಕಾರು ಮಾರಾಟವು ಕಳೆದ ವರ್ಷಕ್ಕಿಂತಲೂ ಸಾಕಷ್ಟು ಹೆಚ್ಚಳಗೊಂಡಿದೆ.

ಹೌದು, ಕಳೆದ 2019ರ ನವೆಂಬರ್ ಅವಧಿಯಲ್ಲಿನ ಕಾರು ಮಾರಾಟಕ್ಕಿಂತಲೂ ಈ ವರ್ಷದ ನವೆಂಬರ್ ಅವಧಿಯಲ್ಲಿ ಶೇ.9ರಷ್ಟು ಕಾರು ಮಾರಾ ಬೆಳವಣಿಗೆ ಸಾಧಿಸಿರುವ ಹ್ಯುಂಡೈ ಕಂಪನಿಯು ಒಟ್ಟು 48,800 ಯುನಿಟ್ ಮಾರಾಟ ಮಾಡಿದೆ.

ಕಳೆದ ವರ್ಷದ ನವೆಂಬರ್‌ನಲ್ಲಿ 44,600 ಯುನಿಟ್ ಮಾಡಿದ್ದ ಹ್ಯುಂಡೈ ಕಂಪನಿಯು ಈ ಬಾರಿ ಕರೋನಾ ವೈರಸ್‌ನಿಂದಾಗಿರುವ ಆರ್ಥಿಕ ಸಂಕಷ್ಟದಲ್ಲೂ ಶೇ. 9 ರಷ್ಟು ಹೆಚ್ಚುವರಿ ಕಾರು ಮಾರಾಟ ಮಾಡಿದ್ದು, ಹ್ಯುಂಡೈ ನಿರ್ಮಾಣದ ಬಹುತೇಕ ಕಾರುಗಳು ನಿರೀಕ್ಷೆಗೂ ಮೀರಿ ಬೇಡಿಕೆ ಪಡೆದುಕೊಂಡಿವೆ.

ಮತ್ತೊಂದು ವಿಶೇಷತೆ ಅಂದರೆ ಹ್ಯುಂಡೈ ಕಂಪನಿಯ ಕಾರು ಮಾರಾಟವು ಇದೇ ಮೊದಲ ಬಾರಿಗೆ ಅತಿ ಹೆಚ್ಚು ಬೇಡಿಕೆ ಪಡೆದುಕೊಂಡಿದ್ದು, ಈ ಹಿಂದೆ 52,000 ಯನಿಟ್ ಮಾರಾಟವೇ ಅತಿ ಹೆಚ್ಚು ಬೇಡಿಕೆಯಾಗಿತ್ತು. ಇದೀಗ ಅಕ್ಟೋಬರ್‌ನಲ್ಲಿ 56,605 ಮತ್ತು ನವೆಂಬರ್‌ನಲ್ಲಿ 48,800 ಯನಿಟ್ ಕಾರು ಮಾರಾಟ ಮಾಡುವ ಹೊಸ ನೀರಿಕ್ಷೆ ಹುಟ್ಟುಹಾಕಿದ್ದು, ವರ್ಷಾಂತ್ಯದ ಆಫರ್‌ಗಳಿಂದಾಗಿ ಹ್ಯುಂಡೈ ಕಾರುಗಳ ಬೇಡಿಕೆಯು ಇನ್ನಷ್ಟು ಹೆಚ್ಚಳವಾಗುವ ನೀರಿಕ್ಷೆಗಳಿವೆ.

ಡಿಸೆಂಬರ್ ಅವಧಿಯಲ್ಲಿನ ಕಾರು ಮಾರಾಟ ಸಂಖ್ಯೆಯು ತಿಂಗಳ ಕೊನೆಯಲ್ಲಿ ಪ್ರಕಟವಾಗಲಿದ್ದು, ಹ್ಯುಂಡೈ ಕಾರು ಮಾರಾಟದಲ್ಲಿ ಕ್ರೆಟಾ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯೇ ಅಗ್ರಸ್ಥಾನದಲ್ಲಿದೆ.

ಕ್ರೆಟಾ ಕಾರು ಮಾದರಿಯು ಕಳೆದ ನವೆಂಬರ್‌ನಲ್ಲಿ ಬರೋಬ್ಬರಿ 12,017 ಯುನಿಟ್ ಮಾರಾಟಗೊಳ್ಳುವ ಮೂಲಕ ಟಾಪ್ 10 ಕಾರು ಮಾರಾಟದಲ್ಲಿ ಸ್ಥಾನ ಪಡೆದುಕೊಂಡಿದ್ದು, ನ್ಯೂ ಜನರೇಷನ್ ಆವೃತ್ತಿ ನಂತರ ಕ್ರೆಟಾ ಕಾರು ಮಾರಾಟವು ಕಳೆದ ವರ್ಷಕ್ಕಿಂತ ಶೇ. 80ರಷ್ಟು ಹೆಚ್ಚಳಗೊಂಡಿದೆ.
MOST READ: ಬಿಡುಗಡೆಗೆ ಸಿದ್ದವಾದ ಹೋಂಡಾದ ಮೊದಲ ಎಲೆಕ್ಟ್ರಿಕ್ ಕಾರು

ಹ್ಯುಂಡೈ ಕಾರು ಮಾರಾಟದಲ್ಲಿ ಎರಡನೇ ಸ್ಥಾನದಲ್ಲಿರುವ ಗ್ರಾಂಡ್ ಐ10 ನಿಯೊಸ್ ಕಾರು ಮಾದರಿಯು ಅಕ್ಟೋಬರ್‌ನಲ್ಲಿ ಒಟ್ಟು 10,936 ಯನಿಟ್ ಮಾರಾಟಗೊಂಡಿದ್ದು, ವೆನ್ಯೂ ಸಬ್ ಫೋರ್ ಮೀಟರ್ ಕಂಪ್ಯಾಕ್ಟ್ ಎಸ್‌ಯುವಿ ಕಾರು ಮಾದರಿಯು 9,265 ಯುನಿಟ್ ಮಾರಾಟಗೊಂಡಿದೆ.

ನಾಲ್ಕನೇ ಸ್ಥಾನದಲ್ಲಿರುವ ಐ20 ಕಾರು ಮಾದರಿಯು 9,096 ಯನಿಟ್ ಮಾರಾಟಗೊಂಡಿದ್ದು, ಐ20 ಕಾರಿನಲ್ಲಿ ಸದ್ಯ ನ್ಯೂ ಜನರೇಷನ್ ಮಾದರಿಯನ್ನು ಪರಿಚಯಿಸಲಾಗಿದೆ. ಬಿಎಸ್ 6 ಜಾರಿ ನಂತರ ಪೆಟ್ರೋಲ್ ವರ್ಷನ್‌ನಲ್ಲಿ ಮಾತ್ರ ಮಾರಾಟವಾಗುತ್ತಿದ್ದ ಐ20 ಕಾರು ಇದೀಗ ಪೆಟ್ರೋಲ್, ಟರ್ಬೋ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಯೊಂದಿಗೆ ಮತ್ತಷ್ಟು ಬೇಡಿಕೆ ಪಡೆದುಕೊಳ್ಳುತ್ತಿದೆ.
MOST READ: 2020ರ ಅವಧಿಯಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು..!

ಇನ್ನು ಹ್ಯುಂಡೈ ನಿರ್ಮಾಣದ ಇನ್ನುಳಿದ ಕಾರು ಮಾದರಿಗಳಾದ ಔರಾ ಕಂಪ್ಯಾಕ್ಟ್ ಸೆಡಾನ್ ಮಾದರಿಯು 3,063 ಯುನಿಟ್, ಸ್ಯಾಂಟ್ರೋ ಕಾರು ಮಾದರಿಯು 2,822 ಯನಿಟ್, ವೆರ್ನಾ ಸೆಡಾನ್ ಮಾದರಿಯು 1,487 ಯನಿಟ್, ಟ್ಯೂಸಾನ್ ಎಸ್‌ಯುವಿ ಮಾದರಿಯು 76 ಯುನಿಟ್, ಎಲಾಂಟ್ರಾ ಐಷಾರಾಮಿ ಸೆಡಾನ್ ಮಾದರಿಯು 38 ಯನಿಟ್ ಮತ್ತು ಎಲೆಕ್ಟ್ರಿಕ್ ಕಾರು ಮಾದರಿಯಾದ ಕೊನಾ ಎಸ್‌ಯುವಿ ಕಾರು ಮಾದರಿ ಮಾರಾಟದಲ್ಲಿ ಯಾವುದೇ ಬೇಡಿಕೆ ದಾಖಲಾಗಿಲ್ಲ.


Click it and Unblock the Notifications