ಭಾರತದಲ್ಲಿ ಪ್ರೀಮಿಯಂ ಎಂಪಿವಿ ಮತ್ತು ಎಸ್‌ಯುವಿ ಕಾರುಗಳನ್ನು ಬಿಡುಗಡೆ ಮಾಡಲಿದೆ ಹ್ಯುಂಡೈ

ಮಾರುತಿ ಸುಜುಕಿ ನಂತರ ದೇಶದ ಎರಡನೇ ಅತಿದೊಡ್ಡ ಕಾರು ಉತ್ಪಾದನಾ ಮತ್ತು ಮಾರಾಟ ಕಂಪನಿಯಾಗಿ ಹೊರಹೊಮ್ಮಿರುವ ಹ್ಯುಂಡೈ ಇಂಡಿಯಾ ವಿವಿಧ ಮಾದರಿಯ ಕಾರು ಮಾದರಿಗಳ ಮೂಲಕ ಗ್ರಾಹಕರ ಆಯ್ಕೆಯಲ್ಲಿ ಮುಂಚೂಣಿ ಸಾಧಿಸಿದ್ದು, ಮುಂಬರುವ ದಿನಗಳಲ್ಲಿ ಮತ್ತಷ್ಟು ಹೊಸ ಕಾರು ಮಾದರಿಗಳನ್ನು ಬಿಡುಗಡೆಗೊಳಿಸುವ ಯೋಜನೆಯಲ್ಲಿದೆ.

ಭಾರತದಲ್ಲಿ ಪ್ರೀಮಿಯಂ ಎಂಪಿವಿ ಮತ್ತು ಎಸ್‌ಯುವಿ ಕಾರುಗಳನ್ನು ಬಿಡುಗಡೆ ಮಾಡಲಿದೆ ಹ್ಯುಂಡೈ

ಕಳೆದ ಕೆಲವು ವರ್ಷಗಳಿಂದ ಹೊಸ ಕಾರುಗಳ ಮಾರಾಟದಲ್ಲಿ ನಿರಂತರವಾಗಿ ಬೆಳವಣಿಗೆ ಸಾಧಿಸುತ್ತಿರುವ ಹ್ಯುಂಡೈ ಕಂಪನಿಯು ಮಧ್ಯಮ ಗಾತ್ರದ ಪ್ರೀಮಿಯಂ ಕಾರುಗಳ ಮಾರಾಟದಲ್ಲಿ ಸಾಕಷ್ಟು ಮುನ್ನಡೆ ಸಾಧಿಸಿದ್ದು, ಇದೀಗ ಮಾರುಕಟ್ಟೆ ವಿಸ್ತರಣೆಗಾಗಿ ಪ್ರೀಮಿಯಂ ಮಾದರಿಯ ಎಂಪಿವಿ ಮತ್ತು ಎಸ್‌ಯುವಿ ಕಾರುಗಳ ಮಾರಾಟದತ್ತ ಎದುರು ನೋಡುತ್ತಿದೆ. ಮಾರುಕಟ್ಟೆಯಲ್ಲಿ ಸದ್ಯ ಭಾರೀ ಜನಪ್ರಿಯತೆ ಹೊಂದಿರುವ ಟೊಯೊಟಾ ಫಾರ್ಚೂನರ್ ಮತ್ತು ಇನೋವಾ ಕ್ರಿಸ್ಟಾ ಕಾರುಗಳಿಗೆ ಪೈಪೋಟಿಯಾಗಿ ಹ್ಯುಂಡೈ ಹೊಸ ಕಾರುಗಳು ಮಾರುಕಟ್ಟೆ ಪ್ರವೇಶಿಸಲಿವೆ.

ಭಾರತದಲ್ಲಿ ಪ್ರೀಮಿಯಂ ಎಂಪಿವಿ ಮತ್ತು ಎಸ್‌ಯುವಿ ಕಾರುಗಳನ್ನು ಬಿಡುಗಡೆ ಮಾಡಲಿದೆ ಹ್ಯುಂಡೈ

ಹೊಸ ಕಾರುಗಳ ಬಿಡುಗಡೆ ಕುರಿತಂತೆ ನಿನ್ನೆಯಷ್ಟೇ ನಡೆದ ಕ್ರೆಟಾ ನ್ಯೂ ಜನರೇಷನ್ ಆವೃತ್ತಿಯ ಬಿಡುಗಡೆಯ ವೇಳೆ ಮಾಹಿತಿ ಹಂಚಿಕೊಳ್ಳಲಾಗಿದ್ದು, ಪ್ರೀಮಿಯಂ ಮಾದರಿಯ ಎಂಪಿವಿ ಮತ್ತು ಎಸ್‌ಯುವಿ ಕಾರುಗಳ ಬಿಡುಗಡೆಗಾಗಿ ಮಾರುಕಟ್ಟೆ ಅಧ್ಯಯನ ನಡೆಸುತ್ತಿರುವುದಾಗಿ ಹೇಳಲಾಗಿದೆ.

ಭಾರತದಲ್ಲಿ ಪ್ರೀಮಿಯಂ ಎಂಪಿವಿ ಮತ್ತು ಎಸ್‌ಯುವಿ ಕಾರುಗಳನ್ನು ಬಿಡುಗಡೆ ಮಾಡಲಿದೆ ಹ್ಯುಂಡೈ

ಭಾರತದಲ್ಲಿ ಪ್ರೀಮಿಯಂ ಆವೃತ್ತಿಗಳ ಮಾರಾಟಕ್ಕೆ ಉತ್ತಮ ಮಾರುಕಟ್ಟೆ ಇರುವುದಾಗಿ ಹೇಳಿಕೊಂಡಿರುವ ಹ್ಯುಂಡೈ ಸಂಸ್ಥೆಯು ಯುರೋಪ್ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆಯಲ್ಲಿರುವ ಫುಲ್ ಸೈಜ್ 7 ಸೀಟರ್ ಎಸ್‌ಯುವಿ ಮತ್ತು 9 ಸೀಟರ್ ಎಂಪಿವಿ ಕಾರನ್ನು ಪರಿಚಯಿಸುವುದಾಗಿ ಹೇಳಿಕೊಂಡಿದೆ.

ಭಾರತದಲ್ಲಿ ಪ್ರೀಮಿಯಂ ಎಂಪಿವಿ ಮತ್ತು ಎಸ್‌ಯುವಿ ಕಾರುಗಳನ್ನು ಬಿಡುಗಡೆ ಮಾಡಲಿದೆ ಹ್ಯುಂಡೈ

ಹೊಸ ಕಾರುಗಳನ್ನು 2021-22 ಹಣಕಾಸು ವರ್ಷದ ಅವಧಿಯೊಳಗೆ ಬಿಡುಗಡೆ ಮಾಡುವುದಾಗಿ ಹೇಳಿಕೊಂಡಿರುವ ಹ್ಯುಂಡೈ ಕಂಪನಿಯು ಬಿಡುಗಡೆಗೂ ಎಂಜಿನ್ ಆಯ್ಕೆ ಮತ್ತು ಬೆಲೆ ವಿಚಾರದಲ್ಲಿ ಮಾರುಕಟ್ಟೆ ಅಧ್ಯಯನವನ್ನು ಪರಿಣಿಸಿ ಮಹತ್ವದ ನಿರ್ಧಾರ ಕೈಗೊಳ್ಳಲಿದೆ. ಹೊಸ ಕಾರುಗಳು ಮೇಲೆ ಹೇಳಿದಂತೆ ಐಷಾರಾಮಿ ಸೌಲಭ್ಯಗಳೊಂದಿಗೆ ಬಿಡುಗಡೆಯಾಗಲಿದ್ದು, ಬೆಲೆಯಲ್ಲೂ ಕೂಡಾ ತುಸು ದುಬಾರಿಯಾಗಿರಲಿವೆ.

ಭಾರತದಲ್ಲಿ ಪ್ರೀಮಿಯಂ ಎಂಪಿವಿ ಮತ್ತು ಎಸ್‌ಯುವಿ ಕಾರುಗಳನ್ನು ಬಿಡುಗಡೆ ಮಾಡಲಿದೆ ಹ್ಯುಂಡೈ

ಬಿಡುಗಡೆಯಾಗಲಿರುವ ಹೊಸ ಕಾರುಗಳ ಕುರಿತಾಗಿ ಯಾವುದೇ ಅಧಿಕೃತ ಮಾಹಿತಿ ಇಲ್ಲವಾದರೂ 7 ಸೀಟರ್ ಸೀಟರ್ ಫುಲ್ ಸೈಜ್ ಎಸ್‌ಯುವಿ ಮತ್ತು 9 ಸೀಟರ್ ಎಂಪಿವಿ ಬಿಡುಗಡೆಗೊಳಿಸುವುದಾಗಿ ಹೇಳಿಕೊಂಡಿದ್ದು, ಇವು ಇನೋವಾ ಕ್ರಿಸ್ಟಾ, ಫಾರ್ಚೂನರ್ ಮತ್ತು ಇತ್ತೀಚೆಗೆ ಬಿಡುಗಡೆಯಾಗಿರುವ ಕಿಯಾ ಕಾರ್ನಿವಾಲ್ ಕಾರಿಗೂ ಪೈಪೋಟಿ ನೀಡಲಿವೆ.

ಭಾರತದಲ್ಲಿ ಪ್ರೀಮಿಯಂ ಎಂಪಿವಿ ಮತ್ತು ಎಸ್‌ಯುವಿ ಕಾರುಗಳನ್ನು ಬಿಡುಗಡೆ ಮಾಡಲಿದೆ ಹ್ಯುಂಡೈ

7 ಸೀಟರ್ ಆವೃತ್ತಿಯು ಹಲವಾರು ಐಷಾರಾಮಿ ಸೌಲಭ್ಯಗಳೊಂದಿಗೆ ಬಿಡುಗಡೆಯಾಗಲಿದ್ದು, ಇದು ನೇರವಾಗಿ ಫಾರ್ಚೂನರ್ ಪೈಪೋಟಿಯಾಗುವ ಮೂಲಕ ಫೋರ್ಡ್ ಎಂಡೀವರ್ ಮತ್ತು ಎಂಜಿ ಮೋಟಾರ್ ಬಿಡುಗಡೆ ಮಾಡುತ್ತಿರುವ ಹೊಸ ಗ್ಲೊಸ್ಟರ್ ಕಾರಿಗೂ ಟಕ್ಕರ್ ನೀಡಲಿದೆ.

ಭಾರತದಲ್ಲಿ ಪ್ರೀಮಿಯಂ ಎಂಪಿವಿ ಮತ್ತು ಎಸ್‌ಯುವಿ ಕಾರುಗಳನ್ನು ಬಿಡುಗಡೆ ಮಾಡಲಿದೆ ಹ್ಯುಂಡೈ

9 ಸೀಟರ್ ಮಾದರಿಯು ಕಾರ್ನಿವಾಲ್ ಮಾದರಿಯ ಆಸನ ಸೌಲಭ್ಯ ಹೊಂದಲಿದ್ದು, ಗ್ರಾಹಕರ ಬೇಡಿಕೆಯೆಂತೆ ವಿವಿಧ ಆವೃತ್ತಿಗಳ ಆಯ್ಕೆಯೊಂದಿಗೆ ಇನೋವಾ ಕ್ರಿಸ್ಟಾ ಮತ್ತು ಕಾರ್ನಿವಾಲ್ ಕಾರಿನ ಮಧ್ಯದ ಸ್ಥಾನವನ್ನು ಪಡೆದುಕೊಳ್ಳಲಿದೆ.

ಭಾರತದಲ್ಲಿ ಪ್ರೀಮಿಯಂ ಎಂಪಿವಿ ಮತ್ತು ಎಸ್‌ಯುವಿ ಕಾರುಗಳನ್ನು ಬಿಡುಗಡೆ ಮಾಡಲಿದೆ ಹ್ಯುಂಡೈ

ಹೀಗಾಗಿ ಹೊಸ ಕಾರುಗಳು ಭಾರತದಲ್ಲಿ ಉತ್ತಮ ಪೈಪೋಟಿ ನೀಡುವ ಎಲ್ಲಾ ಗುಣಲಕ್ಷಣಗಳನ್ನು ಹೊಂದಿದ್ದು, ಕೇಂದ್ರ ಸರ್ಕಾರವು ಕಳೆದ ವರ್ಷ ಜಾರಿಗೆ ತಂದಿರುವ ಆಮದು ನೀತಿಯಲ್ಲಿನ ತಿದ್ದುಪಡಿ ಕೂಡಾ ಹ್ಯುಂಡೈ ಸೇರಿದಂತೆ ಹಲವು ವಿದೇಶಿ ವಾಹನ ಕಂಪನಿಗಳಿಗೆ ವರದಾನವಾಗಿದೆ.

ಭಾರತದಲ್ಲಿ ಪ್ರೀಮಿಯಂ ಎಂಪಿವಿ ಮತ್ತು ಎಸ್‌ಯುವಿ ಕಾರುಗಳನ್ನು ಬಿಡುಗಡೆ ಮಾಡಲಿದೆ ಹ್ಯುಂಡೈ

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹೊಸ ಆಮದು ನೀತಿಯಡಿ ವಿದೇಶಿ ಮಾರುಕಟ್ಟೆಗಳಿಂದ ವಾಹನ ಕಂಪನಿಗಳು ತಮ್ಮದೆ ಉತ್ಪಾದನೆಯ 2500 ವಾಹನಗಳನ್ನು ಯಾವುದೇ ಹೆಚ್ಚುವರಿ ಷರತ್ತುಗಳಿಲ್ಲದೆ ಆಮದು ಮಾಡಿಕೊಂಡು ಭಾರತದಲ್ಲಿ ಮಾರಾಟ ಮಾಡಬಹುದಾಗಿದ್ದು, ಇದೀಗ ಹ್ಯುಂಡೈ ಸೇರಿದಂತೆ ಹಲವು ಕಾರು ಕಂಪನಿಗಳು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಜನಪ್ರಿಯವಾಗಿರುವ ಕೆಲವು ಕಾರು ಮಾದರಿಗಳನ್ನು ಸೀಮಿತ ಪ್ರಮಾಣದಲ್ಲಿ ಮಾರಾಟಕ್ಕೆ ಮುಂದಾಗಿವೆ.

Note: Images are representative purpose only

More from DriveSpark

Article Published On: Tuesday, March 17, 2020, 18:37 [IST]
English summary
South Korean carmaker, Hyundai Motors is planning to enter premium SUV and MPV segment in India. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+