ನ್ಯೂ ಜನರೇಷನ್ ಐ20 ಕಾರಿನ ಆಕರ್ಷಕ ಟಿವಿಸಿ ಬಿಡುಗಡೆಗೊಳಿಸಿದ ಹ್ಯುಂಡೈ

ದೇಶದ ಎರಡನೇ ಅತಿ ದೊಡ್ಡ ಕಾರು ತಯಾರಕ ಕಂಪನಿಯಾದ ಹ್ಯುಂಡೈ ತನ್ನ ಬಹುನಿರೀಕ್ಷಿತ ಮೂರನೇ ತಲೆಮಾರಿನ ಐ20 ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಬಿಡುಗಡೆಗೊಳಿಸಿತ್ತು . ಈ ಹೊಸ ಹ್ಯುಂಡೈ ಐ20 ಕಾರಿನ ಆರಂಭಿಕ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.6.79 ಲಕ್ಷಗಳಾಗಿದೆ.

ನ್ಯೂ ಜನರೇಷನ್ ಐ20 ಕಾರಿನ ಆಕರ್ಷಕ ಟಿವಿಸಿ ಬಿಡುಗಡೆಗೊಳಿಸಿದ ಹ್ಯುಂಡೈ

ಇದೀಗ ಹ್ಯುಂಡೈ ಕಂಪನಿಯು ನ್ಯೂ ಜನರೇಷನ್ ಐ20 ಕಾರಿನ ಆಕರ್ಷಕ ಟೀಸರ್ ಅನ್ನು ಬಿಡುಗಡೆಗೊಳಿಸಿದೆ. ಹ್ಯುಂಡೈ ಟಿವಿಸಿ ವೀಡಿಯೋವನ್ನು ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ಹಂಚಿಕೊಳ್ಳಲಾಗಿದೆ. ಟಿವಿಸಿಯಲ್ಲಿ ನ್ಯೂ ಜನರೇಷನ್ ಐ20 ಕಾರಿನ ಬೋಲ್ಡ್ ವಿನ್ಯಾಸ ಮತ್ತು ಪವರ್ ಅನ್ನು ಪ್ರದರ್ಶಿಸಿದೆ. ಹಿಂದಿನ ಮಾದರಿಗಿಂತ ಉದ್ದವಾದ ವ್ಹೀಲ್ ಬೇಸ್ ಅನ್ನು ಹೊಂದಿದೆ. ನ್ಯೂ ಜನರೇಷನ್ ಐ20 ಪವರ್ ಫುಲ್ ಹ್ಯಾಚ್‍ಬ್ಯಾಕ್ ಆಗಿದೆ.

ನ್ಯೂ ಜನರೇಷನ್ ಐ20 ಕಾರಿನ ಆಕರ್ಷಕ ಟಿವಿಸಿ ಬಿಡುಗಡೆಗೊಳಿಸಿದ ಹ್ಯುಂಡೈ

ಹೊಸ ಹ್ಯುಂಡೈ ಐ20 ಕಾರು ಈಗಗಾಲೇ ಡೀಲರುಗಳ ಬಳಿ ತಲುಪಲು ಪ್ರಾರಂಭವಾಗಿದೆ. ಹೊಸ ಹ್ಯುಂಡೈ ಐ20 ಕಾರಿನ ಮುಂಭಾಗದಲ್ಲಿರು ಕ್ಯಾಸ್ಕೇಡಿಂಗ್ ಗ್ರಿಲ್ ಅನ್ನು ಹೊಂದಿದೆ. ಹಿಂದಿನ ಐ20 ಮಾದರಿಗೆ ಹೋಲಿಸಿದರೆ ಹೆಡ್ ಲ್ಯಾಂಪ್ ಮತ್ತು ಸೈಡ್ ಫ್ರೋಪೈಲ್ ವಿನ್ಯಾಸವನ್ನು ನವೀಕರಿಸಲಾಗಿದೆ ದೊಡ್ಡ ಕ್ರೀಸ್ ಲೈನ್ ಗಳನ್ನು ಒಳಗೊಂಡಿದೆ.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ನ್ಯೂ ಜನರೇಷನ್ ಐ20 ಕಾರಿನ ಆಕರ್ಷಕ ಟಿವಿಸಿ ಬಿಡುಗಡೆಗೊಳಿಸಿದ ಹ್ಯುಂಡೈ

ಹೊಸ ಹುಂಡೈ ಐ20 ಕಾರಿನ ಪಿಲ್ಲರ್‍‍ಗಳು ಬ್ಲ್ಯಾಕ್ ಬಣ್ಣವನ್ನು ಹೊಂದಿದೆ. ವಿಡಬ್ಲ್ಯೂ ಟೈಗನ್‍‍‍ನಲ್ಲಿ ಇರುವಂತಹ ಕೆಂಪು ಇ‍ಲ್‍ಇಡಿ ಡಿಆರ್‍ಎಲ್ ಸ್ಟಾಪ್ ಲೈಟ್ ಹಿಂಭಾಗದಲ್ಲಿ ಇ‍ಲ್‍ಇಡಿ ಟೇಲ್‍‍ಲೈಟ್ ಹೊಂದಿದೆ. ಇನ್ನು ಹೊಸ ಹ್ಯುಂಡೈ ಕಾರಿನ ಇಂಟಿರಿಯರ್‍‍ನಲ್ಲಿ 4 ಸ್ಫೋಕ್ ಸ್ಟೀಟಿಯರಿಂಗ್ ವ್ಹೀಲ್ ಅನ್ನು ಅಳವಡಿಸಲಾಗಿದೆ.

ನ್ಯೂ ಜನರೇಷನ್ ಐ20 ಕಾರಿನ ಆಕರ್ಷಕ ಟಿವಿಸಿ ಬಿಡುಗಡೆಗೊಳಿಸಿದ ಹ್ಯುಂಡೈ

ಈ ಕಾರಿನ ಇಂಟಿರಿಯರ್‍‍ನಲ್ಲಿರುವ ಡಿಜಿಟಲ್ ಕ್ಲಸ್ಟರ್ ನಲ್ಲಿ ಆ್ಯಪಲ್ ಕಾರ್‍‍ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಮತ್ತು ಹ್ಯುಂಡೈನ ಕನೆಕ್ಟಿವಿಟಿ ಸೂಟ್ ಹೊಂದಿದೆ. ಇದರೊಂದಿಗೆ ಯುಎಸ್‌ಬಿ ಪೋರ್ಟ್‌ ಮತ್ತು ವೈರ್‌ಲೆಸ್ ಚಾರ್ಜಿಂಗ್ ಪ್ಯಾಡ್, ಬೋಸ್ 7 ಸ್ಪೀಕರ್ ಸಿಸ್ಟಮ್, ಎಲೆಕ್ಟ್ರಿಕ್ ಸನ್‌ರೂಫ್ ಮತ್ತು ಇತರ ಅತ್ಯಾಧುನಿಕ ಫೀಚರ್ ಗಳನ್ನು ಹೊಂದಿದೆ.

MOST READ: 2020ರ ಸಿಟಿ ಕಾರಿನ ಉತ್ಪಾದನೆಯನ್ನು ಪ್ರಾರಂಭಿಸಿದ ಹೋಂಡಾ

ನ್ಯೂ ಜನರೇಷನ್ ಐ20 ಕಾರಿನ ಆಕರ್ಷಕ ಟಿವಿಸಿ ಬಿಡುಗಡೆಗೊಳಿಸಿದ ಹ್ಯುಂಡೈ

ಹೊಸ ಹ್ಯುಂಡೈ ಐ20 ಕಾರು ಮೂರು ಎಂಜಿನ್ ಆಯ್ಕೆಗಳನ್ನು ಹೊಂದಿರಲಿದೆ. ಇದರಲ್ಲಿ 1.2ಎಲ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿರುತ್ತದೆ. ಈ ಎಂಜಿನ್ 83 ಬಿಹೆಚ್‌ಪಿ ಪವರ್ ಮತ್ತು 114 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 5-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಮತ್ತು 6-ಸ್ಪೀಡ್ ಸಿವಿಟಿ ಆಯ್ಕೆಗೆ ಜೋಡಿಸಲಾಗುವುದು.

ನ್ಯೂ ಜನರೇಷನ್ ಐ20 ಕಾರಿನ ಆಕರ್ಷಕ ಟಿವಿಸಿ ಬಿಡುಗಡೆಗೊಳಿಸಿದ ಹ್ಯುಂಡೈ

ಇದರೊಂದಿಗೆ 1.0ಎಲ್ ಟರ್ಬೊ ಪೆಟ್ರೋಲ್ ಎಂಜಿನ್ ಅನ್ನು ಹೊಂದಿರಲಿದೆ. ಈ ಎಂಜಿನ್ 120 ಬಿಹೆಚ್‌ಪಿ ಪವರ್ ಮತ್ತು 172 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ 7-ಸ್ಪೀಡ್ ಮತ್ತು ಸ್ಪೀಡ್ ಐಎಂಟಿ ಆಯ್ಕೆಯನ್ನು ನೀಡಲಾಗುತ್ತದೆ.

MOST READ: ಬಿಡುಗಡೆಯ ಸನಿಹದಲ್ಲಿ ಹೊಸ ಮಾರುತಿ ಸುಜುಕಿ ಸೆಲೆರಿಯೊ

ಇನ್ನು 1.5ಎಲ್ ಡೀಸೆಲ್ ಎಂಜಿನ್ ಅನ್ನು ಹೊಂದಿರುತ್ತದೆ. ಈ ಎಂಜಿನ್ 100 ಬಿಹೆಚ್‌ಪಿ ಪವರ್ 240 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 6-ಸ್ಪೀಡ್ ಮ್ಯಾನ್ಯುವಲ್ ಗೇರ್‌ಬಾಕ್ಸ್‌ ಜೋಡಿಸಲಾಗಿದೆ.

ನ್ಯೂ ಜನರೇಷನ್ ಐ20 ಕಾರಿನ ಆಕರ್ಷಕ ಟಿವಿಸಿ ಬಿಡುಗಡೆಗೊಳಿಸಿದ ಹ್ಯುಂಡೈ

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಹೊಸ ಹ್ಯುಂಡೈ ಕಾರು ಅತ್ಯಾಧುನಿಕ ಫೀಚರ್, ಆಕರ್ಷಕ ವಿನ್ಯಾಸ ಮತ್ತು ಪವರ್ ಫುಲ್ ಎಂಜಿನ್ ಅನ್ನು ಹೊಂದಿದೆ. ಈ ಎಲ್ಲಾ ಕಾರಣದಿಂದ ಈ ಹೊಸ ಹ್ಯುಂಡೈ ಕಾರು ಭಾರತೀಯ ಮಾರುಕಟ್ಟೆಯ ಗ್ರಾಹಕರನ್ನು ಸೆಳೆಯಬಹುದು. ಈ ಹೊಸ ಹ್ಯುಂಡೈ ಐ20 ಕಾರು ಭಾರತೀಯ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಬಲೆನೊ, ಟಾಟಾ ಆಲ್ಟ್ರೋಜ್, ಫೋಕ್ಸ್‌ವ್ಯಾಗನ್ ಪೊಲೊ ಮತ್ತು ಹೋಂಡಾ ಜಾಝ್ ಕಾರುಗಳಿಗೆ ಪೈಪೋಟಿ ನೀಡುತ್ತದೆ.

Most Read Articles

Kannada
English summary
All-new Hyundai i20 Tvc. Read In Kannada.
Story first published: Saturday, November 7, 2020, 14:15 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X