ಬಿಎಸ್-6 ವರ್ಷನ್ ವೆರ್ನಾ ಹೊಸ ಟಿವಿ ಜಾಹೀರಾತು ಬಿಡುಗಡೆ ಮಾಡಿದ ಹ್ಯುಂಡೈ

ಹ್ಯುಂಡೈ ಕಂಪನಿಯು ಬಿಎಸ್-6 ನಿಯಮ ಅನುಸಾರವಾಗಿ ತನ್ನ ಪ್ರಮುಖ ಕಾರುಗಳನ್ನು ಈಗಾಗಲೇ ಬಿಡುಗಡೆಗೊಳಿಸಿದ್ದು, ವೆರ್ನಾ ಸೆಡಾನ್ ಮಾದರಿಯು ಕೂಡಾ ಹೊಸ ವಿನ್ಯಾಸ ಮತ್ತು ಆಕರ್ಷಕ ಎಂಜಿನ್ ಆಯ್ಕೆಯೊಂದಿಗೆ ಮಾರಾಟವಾಗುತ್ತಿದೆ.

ಬಿಎಸ್-6 ವರ್ಷನ್ ವೆರ್ನಾ ಹೊಸ ಟಿವಿ ಜಾಹೀರಾತು ಬಿಡುಗಡೆ

ಹೊಸ ವೆರ್ನಾ ಕಾರು ಬಿಡುಗಡೆಯ ನಂತರ ಇದೀಗ ಹೊಸ ಕಾರಿನ ಪರ್ಫಾಮೆನ್ಸ್ ಕುರಿತಾಗಿ ವಿನೂತನ ಟಿವಿ ಜಾಹೀರಾತು ಬಿಡುಗಡೆ ಮಾಡಲಾಗಿದ್ದು, ಹೊಸ ಕಾರಿನ ಪರ್ಫಾಮೆನ್ಸ್ ಸೆಡಾನ್ ಪ್ರಿಯರ ಪ್ರಮುಖ ಆಕರ್ಷಣೆಯಾಗಿದೆ. ವೆರ್ನಾ ಫೇಸ್‌ಲಿಫ್ಟ್‌ ಕಾರು ಮಾದರಿಯು ಗ್ರಾಹಕ ಬೇಡಿಕೆಯೆಂತೆ ಎಸ್, ಎಸ್ ಪ್ಲಸ್, ಎಸ್ಎಕ್ಸ್, ಎಸ್ಎಕ್ಸ್ (ಒ) ಮತ್ತು ಎಸ್ಎಕ್ಸ್ (ಒ) ಟರ್ಬೋ ಎಂಬ ಆರು ರೂಪಾಂತರಗಳಲ್ಲಿ ಖರೀದಿಗೆ ಲಭ್ಯವಿದ್ದು, ಎಲ್ಲಾ ರೂಪಾಂತರಗಳು ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳನ್ನು ಹೊಂದಿವೆ.

ಬಿಎಸ್-6 ವರ್ಷನ್ ವೆರ್ನಾ ಹೊಸ ಟಿವಿ ಜಾಹೀರಾತು ಬಿಡುಗಡೆ

ಏಪ್ರಿಲ್ 1ರಿಂದ ಜಾರಿಗೆ ಬಂದಿರುವ ಬಿಎಸ್-6 ಎಮಿಷನ್ ನಿಯಮ ಅನುಸಾರವಾಗಿ ಹೊಸ ಕಾರಿನಲ್ಲಿ 1.5-ಲೀಟರ್ ಪೆಟ್ರೋಲ್, 1.5-ಲೀಟರ್ ಡೀಸೆಲ್ ಮತ್ತು ಪರ್ಫಾಮೆನ್ಸ್ ಪ್ರಿಯರಿಗಾಗಿ 1.0-ಲೀಟರ್ ಟರ್ಬೋ ಪೆಟ್ರೋಲ್ ಎಂಜಿನ್ ಆಯ್ಕೆ ನೀಡಲಾಗಿದೆ.

ಹೊಸ ಹ್ಯುಂಡೈ ವೆರ್ನಾ ಫೇಸ್‌ಲಿಫ್ಟ್‌ ಕಾರು ಎಕ್ಸ್ ಶೋರೂಂ ಪ್ರಕಾರ ಆರಂಭಿಕವಾಗಿ ರೂ.9.30 ಲಕ್ಷ ಬೆಲೆ ಹೊಂದಿದ್ದು, ಟಾಪ್ ಎಂಡ್ ಮಾದರಿಯು ಗರಿಷ್ಠ ತಾಂತ್ರಿಕ ಸೌಲಭ್ಯಗಳೊಂದಿಗೆ ರೂ. 15.09 ಲಕ್ಷ ಬೆಲೆ ಹೊಂದಿದೆ.

ಬಿಎಸ್-6 ವರ್ಷನ್ ವೆರ್ನಾ ಹೊಸ ಟಿವಿ ಜಾಹೀರಾತು ಬಿಡುಗಡೆ

ಟರ್ಬೋ ಪೆಟ್ರೋಲ್ ಆವೃತ್ತಿಯನ್ನು ಎಸ್ಎಕ್ಸ್(ಒ) ವೆರಿಯೆಂಟ್‌ನಲ್ಲಿ ಮಾತ್ರವೇ ಜೋಡಣೆ ಮಾಡಲಾಗಿದ್ದು, ಈ ವೆರಿಯೆಂಟ್ ಬೆಲೆಯು ಎಕ್ಸ್‌ಶೋರೂಂ ಪ್ರಕಾರ ರೂ.13.99 ಲಕ್ಷ ಬೆಲೆ ಹೊಂದಿದೆ. ಈ ಎಲ್ಲಾ ಎಂಜಿನ್ ಆಯ್ಕೆಗಳನ್ನು ಬಿಎಸ್-6 ನಿಯಮಕ್ಕೆ ಅನುಗುಣವಾಗಿ ನವೀಕರಿಸಲಾಗಿದ್ದು, ಹಲವಾರು ಪ್ರೀಮಿಯಂ ಫೀಚರ್ಸ್ ನೀಡಲಾಗಿದೆ.

ಬಿಎಸ್-6 ವರ್ಷನ್ ವೆರ್ನಾ ಹೊಸ ಟಿವಿ ಜಾಹೀರಾತು ಬಿಡುಗಡೆ

1.5-ಲೀಟರ್ ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್‍ ಗಳು ಕ್ರಮವಾಗಿ 115-ಬಿಹೆಚ್‍ಪಿ, 144 ಎನ್ಎಂ ಟಾರ್ಕ್ ಮತ್ತು 250 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎರಡು ಎಂಜಿನ್‍ ಗಳು ಗ್ರಾಹಕರ ಬೇಡಿಕೆ ಅನುಸಾರವಾಗಿ 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ ಅನ್ನು ಪಡೆದುಕೊಂಡಿವೆ.

ಬಿಎಸ್-6 ವರ್ಷನ್ ವೆರ್ನಾ ಹೊಸ ಟಿವಿ ಜಾಹೀರಾತು ಬಿಡುಗಡೆ

ಇನ್ನು 1.0-ಲೀಟರ್ ಟರ್ಬೊ-ಪೆಟ್ರೋಲ್ ಮಾದರಿಯು 120 ಬಿಹೆಚ್‌ಪಿ ಪವರ್ ಮತ್ತು 172-ಎನ್ಎಂ ಟಾರ್ಕ್ ಉತ್ಪಾದನಾ ಸಾಮರ್ಥ್ಯ ಹೊಂದಿದ್ದು, ಈ ಎಂಜಿನ್ ಅನ್ನು 7 ಸ್ಪೀಡ್ ಡಿಸಿಟಿ ಗೇರ್‌ಬಾಕ್ಸ್ ಆಯ್ಕೆ ನೀಡಲಾಗುತ್ತಿದೆ.

ಬಿಎಸ್-6 ವರ್ಷನ್ ವೆರ್ನಾ ಹೊಸ ಟಿವಿ ಜಾಹೀರಾತು ಬಿಡುಗಡೆ

ಇದರೊಂದಿಗ ಹೊಸ ಕಾರಿನ ವಿಶೇಷ ವಿನ್ಯಾಸದ 8.0-ಇಂಚಿನ ಇನ್ಪೋಟೈನ್‌ಮೆಂಟ್ ಸಿಸ್ಟಂ ನೀಡಲಾಗಿದ್ದು, ಹೊಸ ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ಫ್ಲಕ್ಸ್ ವುಡ್ ಡ್ಯಾಶ್‌ಬೋರ್ಡ್, ಅಲ್ಯುಮಿನಿಯಂ ಟ್ರಿಮ್, ಹೊಸ ಮಾದರಿಯ ಎಸಿ ವೆಂಟ್ಸ್ ಮತ್ತು ಸೀಟ್‍ ಗಳ ಡಿಸೈನ್ ಬದಲಾವಣೆಗೊಳಿಸಲಾಗಿದೆ.

ಬಿಎಸ್-6 ವರ್ಷನ್ ವೆರ್ನಾ ಹೊಸ ಟಿವಿ ಜಾಹೀರಾತು ಬಿಡುಗಡೆ

ಜೊತೆಗೆ ಹ್ಯಾಂಡ್ಸ್-ಫ್ರೀ ಟೈಲ್‌ಗೇಟ್ ಓಪನಿಂಗ್, ವೈರ್‌ಲೆಸ್ ಮೊಬೈಲ್ ಫೋನ್ ಚಾರ್ಜರ್ ಮತ್ತು ಸನ್‌ರೂಫ್ ಸೌಲಭ್ಯವಿದ್ದು, ಹೊಸ ಕಾರಿನ ಮತ್ತೊಂದು ಪ್ರಮುಖ ಬದಲಾವಣೆಯೆಂದರೆ ದೊಡ್ಡ 45 ಫೀಚರ್ಸ್‍ ಒಳಗೊಂಡ ಬ್ಲೂ ಲಿಂಕ್ ಕನೆಕ್ಟಿವಿಟಿ ಸೂಟ್‌ ಪ್ರಮುಖ ಆಕರ್ಷಣೆಯಾಗಿದೆ.

MOST READ: ವಾಹನ ಖರೀದಿಯನ್ನು ಸುಲಭವಾಗಿಸಲಿದೆ ಅಗಸ್ಟ್ 1ರಿಂದ ಜಾರಿಗೆ ಬರಲಿರುವ ಹೊಸ ವಿಮಾ ನೀತಿ..

ಬಿಎಸ್-6 ವರ್ಷನ್ ವೆರ್ನಾ ಹೊಸ ಟಿವಿ ಜಾಹೀರಾತು ಬಿಡುಗಡೆ

ಇನ್ನು ಹೊಸ ವೆರ್ನಾ ಫೇಸ್‌ಲಿಫ್ಟ್ ಕಾರಿನಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ರಿಯರ್ ಪಾರ್ಕಿಂಗ್ ಸೆನ್ಸಾರ್ ಮತ್ತು ಮುಂಭಾಗದ ಸೀಟ್ ಬೆಲ್ಟ್ ರಿಮೈಂಡರ್ ಅನ್ನು ಹೊಂದಿದ್ದು, ಆರು ಏರ್‌ಬ್ಯಾಗ್‌ಗಳು, ಇಎಸ್‍ಸಿ, ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ, ಫ್ರಂಟ್ ಪಾರ್ಕಿಂಗ್ ಸೆನ್ಸಾರ್(ಟಾಪ್ ವೆರಿಯೆಂಟ್ ನಲ್ಲಿ ಮಾತ್ರ) ಮತ್ತು ಟಯರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಂ ಅನ್ನು ಹೊಂದಿದೆ.

Article Published On: Friday, July 31, 2020, 14:11 [IST]
English summary
Hyundai Verna New TVC Video Released. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+