ಹೊಸ ಹ್ಯುಂಡೈ ಐ20 ಕಾರಿನ ಮೈಲೇಜ್ ಮಾಹಿತಿ ಬಹಿರಂಗ
ದೇಶದ ಎರಡನೇ ಅತಿ ದೊಡ್ಡ ಕಾರು ತಯಾರಕ ಕಂಪನಿಯಾದ ಹ್ಯುಂಡೈ ತನ್ನ ಬಹುನಿರೀಕ್ಷಿತ ಮೂರನೇ ತಲೆಮಾರಿನ ಐ20 ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ಹುಂಡೈ ಕಂಪನಿಯು ಈ ಹೊಸ ಐ20 ಕಾರಿನ ಬಿಡುಗಡೆ ದಿನಾಂಕವನ್ನು ಬಹಿರಂಗಪಡಿಸಿದೆ.

ಈ ಹೊಸ ಹ್ಯುಂಡೈ ಐ20 ಕಾರು ಭಾರತೀಯ ಮಾರುಕಟ್ಟೆಯಲ್ಲಿ ಮಂದಿನ ತಿಂಗಳ 05ರಂದು ಬಿಡುಗಡೆಯಾಗಲಿದೆ. ಹ್ಯುಂಡೈ ಕಂಪನಿಯು ತನ್ನ ಹೊಸ ಐ20 ಕಾರಿಗಾಗಿ ಅಧಿಕೃತವಾಗಿ ಪ್ರಿ ಬುಕ್ಕಿಂಗ್ ಸ್ವೀಕರಿಸಲು ಈಗಾಗಲೇ ಪ್ರಾರಂಭಿಸಲಾಗಿದೆ. ಮೂರನೇ ತಲೆಮಾರಿನ ಐ20 ಕಾರನ್ನು ಖರೀದಿಸುವ ಗ್ರಾಹರು ಟೋಕನ್ ಮೊತ್ತ ರೂ.21,000 ಪಾವತಿಸಿ ಆನ್‌ಲೈನ್‌ನಲ್ಲಿ ಅಥವಾ ಹ್ಯುಂಡೈ ಕಂಪನಿಯ ಡೀಲರುಗಳ ಬಳಿ ತೆರಳಿ ಬುಕ್ಕಿಂಗ್ ಮಾಡಿಕೊಳ್ಳಬಹುದಾಗಿದೆ. ಹೊಸ ಹ್ಯುಂಡೈ ಐ20 ಕಾರಿನ ಮೈಲೇಜ್ ಮಾಹಿತಿ ಬಹಿರಂಗವಾಗಿದೆ.

ವರದಿಯ ಪ್ರಕಾರ, ಹೊಸ ಹ್ಯುಂಡೈ ಐ20 ಕಾರು ಮೂರು ಎಂಜಿನ್ ಆಯ್ಕೆಗಳನ್ನು ಹೊಂದಿರಲಿದೆ. ಇದರಲ್ಲಿ 1.2ಎಲ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿರುತ್ತದೆ. ಈ ಎಂಜಿನ್ 83 ಬಿಹೆಚ್‌ಪಿ ಪವರ್ ಮತ್ತು 114 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 5-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಮತ್ತು 6-ಸ್ಪೀಡ್ ಸಿವಿಟಿ ಆಯ್ಕೆಗೆ ಜೋಡಿಸಲಾಗುವುದು. ಈ ಎಂಜಿನ್ ಪ್ರತಿ ಲೀಟರ್‌ಗೆ ಕ್ರಮವಾಗಿ 20.28 ಕಿಮೀ ಮತ್ತು 20 ಕಿಮೀ ಮೈಲೇಜ್ ನೀಡುತ್ತದೆ.
MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಇದರೊಂದಿಗೆ 1.0ಎಲ್ ಟರ್ಬೊ ಪೆಟ್ರೋಲ್ ಎಂಜಿನ್ ಅನ್ನು ಹೊಂದಿರಲಿದೆ. ಈ ಎಂಜಿನ್ 120 ಬಿಹೆಚ್‌ಪಿ ಪವರ್ ಮತ್ತು 172 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ 7-ಸ್ಪೀಡ್ ಮತ್ತು ಸ್ಪೀಡ್ ಐಎಂಟಿ ಆಯ್ಕೆಯನ್ನು ನೀಡಲಾಗುತ್ತದೆ. ಈ ಎಂಜಿನ್ ಪ್ರತಿ ಲೀಟರ್‌ಗೆ ಕ್ರಮವಾಗಿ 20.2 ಕಿಮೀ ಮೈಲೇಜ್ ನೀಡುತ್ತದೆ.

ಇನ್ನು 1.5ಎಲ್ ಡೀಸೆಲ್ ಎಂಜಿನ್ ಅನ್ನು ಹೊಂದಿರುತ್ತದೆ. ಈ ಎಂಜಿನ್ 100 ಬಿಹೆಚ್‌ಪಿ ಪವರ್ 240 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 6-ಸ್ಪೀಡ್ ಮ್ಯಾನ್ಯುವಲ್ ಗೇರ್‌ಬಾಕ್ಸ್ ಜೋಡಿಸಲಾಗಿದೆ. ಈ ಎಂಜಿನ್ ಪ್ರತಿ ಲೀಟರ್‌ಗೆ ಕ್ರಮವಾಗಿ 20.28 ಕಿಮೀ ಮತ್ತು 20 ಕಿಮೀ ಮೈಲೇಜ್ ನೀಡುತ್ತದೆ.
MOST READ: 2020ರ ಸಿಟಿ ಕಾರಿನ ಉತ್ಪಾದನೆಯನ್ನು ಪ್ರಾರಂಭಿಸಿದ ಹೋಂಡಾ

ಹೊಸ ಹ್ಯುಂಡೈ ಐ20 ಕಾರು ಈಗಗಾಲೇ ಡೀಲರುಗಳ ಬಳಿ ತಲುಪಲು ಪ್ರಾರಂಭವಾಗಿದೆ. ಹೊಸ ಹ್ಯುಂಡೈ ಐ20 ಕಾರಿನ ಮುಂಭಾಗದಲ್ಲಿರು ಕ್ಯಾಸ್ಕೇಡಿಂಗ್ ಗ್ರಿಲ್ ಅನ್ನು ಹೊಂದಿದೆ. ಹಿಂದಿನ ಐ20 ಮಾದರಿಗೆ ಹೋಲಿಸಿದರೆ ಹೆಡ್ ಲ್ಯಾಂಪ್ ಮತ್ತು ಸೈಡ್ ಫ್ರೋಪೈಲ್ ವಿನ್ಯಾಸವನ್ನು ನವೀಕರಿಸಲಾಗಿದೆ ದೊಡ್ಡ ಕ್ರೀಸ್ ಲೈನ್ ಗಳನ್ನು ಒಳಗೊಂಡಿದೆ.

ಹೊಸ ಹುಂಡೈ ಐ20 ಕಾರಿನ ಪಿಲ್ಲರ್‍ಗಳು ಬ್ಲ್ಯಾಕ್ ಬಣ್ಣವನ್ನು ಹೊಂದಿದೆ. ವಿಡಬ್ಲ್ಯೂ ಟೈಗನ್‍ನಲ್ಲಿ ಇರುವಂತಹ ಕೆಂಪು ಇಲ್‍ಇಡಿ ಡಿಆರ್‍ಎಲ್ ಸ್ಟಾಪ್ ಲೈಟ್ ಹಿಂಭಾಗದಲ್ಲಿ ಇಲ್‍ಇಡಿ ಟೇಲ್‍ಲೈಟ್ ಹೊಂದಿದೆ. ಇನ್ನು ಹೊಸ ಹ್ಯುಂಡೈ ಕಾರಿನ ಇಂಟಿರಿಯರ್‍ನಲ್ಲಿ 4 ಸ್ಫೋಕ್ ಸ್ಟೀಟಿಯರಿಂಗ್ ವ್ಹೀಲ್ ಅನ್ನು ಅಳವಡಿಸಲಾಗಿದೆ.
MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಈ ಕಾರಿನ ಇಂಟಿರಿಯರ್‍ನಲ್ಲಿರುವ ಡಿಜಿಟಲ್ ಕ್ಲಸ್ಟರ್ ನಲ್ಲಿ ಆ್ಯಪಲ್ ಕಾರ್‍ಪ್ಲೇ ಮತ್ತು ಆಂಡ್ರಾಯ್ಡ್ ಆಟೋ, ಹ್ಯುಂಡೈನ ಕನೆಕ್ಟಿವಿಟಿ ಸೂಟ್ ಮತ್ತು ಇತರ ಹಲವಾರು ಫೀಚರ್‍ಗಳನ್ನು ಹೊಂದಿದೆ. ಯುಎಸ್‌ಬಿ ಪೋರ್ಟ್ ಮತ್ತು ವೈರ್‌ಲೆಸ್ ಚಾರ್ಜಿಂಗ್ ಪ್ಯಾಡ್ ಅನ್ನು ಸಹ ಹೊಂದಿರಲಿದೆ.

ಹೊಸ ಹ್ಯುಂಡೈ ಐ20 ಕಾರಿನಲ್ಲಿ ಹೊಸ 16 ಡ್ಯುಯಲ್ ಟೋನ್ ಅಲಾಯ್ ವ್ಹೀಲ್‍ಗಳು, ಇಂಟಿಗ್ರೇಟೆಡ್ ಟರ್ನ್ ಇಂಡಿಕೇಟರ್‍ಗಳೊಂದಿಗೆ ಸ್ಲಿಕ್ ಒಆರ್‍ವಿಎಂಗಳು ಮತ್ತು ಶಾರ್ಕ್ ಫಿನ್ ಆಂಟೆನಾವನ್ನು ಕೂಡ ಆಳವಡಿಸಲಾಗಿದೆ.

ಹೊಸ ಹ್ಯುಂಡೈ ಐ20 ಕಾರು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಮಾರುತಿ ಸುಜುಕಿ ಬಲೆನೊ, ಟಾಟಾ ಆಲ್ಟ್ರೋಜ್, ಫೋಕ್ಸ್‌ವ್ಯಾಗನ್ ಪೊಲೊ ಮತ್ತು ಹೋಂಡಾ ಜಾಝ್ ಕಾರುಗಳಿಗೆ ಪೈಪೋಟಿ ನೀಡುತ್ತದೆ.


Click it and Unblock the Notifications