Just In
- 29 min ago Triber: 7 ಜನ ಹೋಗಬಹುದಾದ ರೆನಾಲ್ಟ್ ಟ್ರೈಬರ್ ಖರೀದಿಸಬೇಕೇ.. ಆನ್-ರೋಡ್ ಬೆಲೆ ಎಷ್ಟು, EMI ಏನು?
- 13 hrs ago ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- 15 hrs ago Kia Carens: ಗ್ಲೋಬಲ್ ಎನ್ಸಿಎಪಿ ಸುರಕ್ಷತಾ ಪರೀಕ್ಷೆ.. 3-ಸ್ಟಾರ್ ಪಡೆದ ಕಿಯಾ ಕ್ಯಾರೆನ್ಸ್
- 16 hrs ago ಈ ಬೈಕ್ಗಳನ್ನು ಗ್ರಾಹಕರು ಮುಗಿಬಿದ್ದು ಖರೀದಿಸುತ್ತಿದ್ದಾಗಲೇ ಬೆಲೆ ಏರಿಕೆ ಮಾಡಿ ಶಾಕ್ ಕೊಟ್ಟ ಟ್ರಯಂಫ್
Don't Miss!
- Lifestyle ಹೋಟೆಲ್ ರುಚಿಯ ಪನೀರ್ ಪೆಪ್ಪರ್ ಫ್ರೈ ಮನೆಯಲ್ಲೇ ಮಾಡಿ..! 10 ನಿಮಿಷದಲ್ಲಿ ರೆಡಿ..!
- News Petrol Price: ಇಂದಿನ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ವಿವರ ತಿಳಿಯಿರಿ
- Finance ಎಂಡಿಎಚ್ ಮತ್ತು ಎವರೆಸ್ಟ್ ಸೇರಿದಂತೆ ಎಲ್ಲಾ ಬ್ರಾಂಡ್ ಮಸಾಲೆಗಳ ಮಾದರಿಗಳ ಪರೀಕ್ಷೆಗೆ ಮುಂದಾದ FSSAI
- Sports CSK vs LSG IPL 2024: ಐಪಿಎಲ್ನಲ್ಲಿ ಈ ದಾಖಲೆ ಮಾಡಿದ ಮೊದಲ ಸಿಎಸ್ಕೆ ನಾಯಕ ರುತುರಾಜ್ ಗಾಯಕ್ವಾಡ್
- Movies 'KGF-2' ಚಿತ್ರದಿಂದ ಸಿಕ್ಕಿದ್ದು 200 ಕೋಟಿ ರೂ.; 'ಟಾಕ್ಸಿಕ್', 'ರಾಮಾಯಣ'ಕ್ಕೆ ಯಶ್ 50-50 ಡೀಲ್!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಬಿಎಸ್-6 ಹ್ಯುಂಡೈ ಸ್ಯಾಂಟ್ರೋ
ಬಿಎಸ್-6 ಪೆಟ್ರೋಲ್ ಕಾರುಗಳ ಮಾದರಿಗಳ ಮಾರಾಟಕ್ಕೆ ಈಗಾಗಲೇ ಚಾಲನೆ ನೀಡಿರುವ ಹ್ಯುಂಡೈ ಸಂಸ್ಥೆಯು ಶೀಘ್ರದಲ್ಲೇ ಸ್ಯಾಂಟ್ರೋ ಹ್ಯಾಚ್ಬ್ಯಾಕ್ ಹೊಸ ಆವೃತ್ತಿಯನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದ್ದು, ಇದೇ ತಿಂಗಳಾಂತ್ಯಕ್ಕೆ ಹೊಸ ಕಾರು ಖರೀದಿಗೆ ಲಭ್ಯವಾಗಲಿದೆಯೆಂತೆ.
ಮುಂಬರುವ ಏಪ್ರಿಲ್ 1ರಿಂದ ಬಿಎಸ್-6 ನಿಯಮವು ಕಡ್ಡಾಯವಾಗಿ ಜಾರಿಗೆ ಬರುತ್ತಿದ್ದು, ಬಹುತೇಕ ಕಾರು ಉತ್ಪಾದನಾ ಸಂಸ್ಥೆಗಳು ಹೊಸ ನಿಯಮ ಅನುಸಾರ ಪ್ರಸ್ತುತ ವಾಹನ ಮಾದರಿಗಳನ್ನು ಉನ್ನತೀಕರಿಸುತ್ತಿವೆ. ಹ್ಯುಂಡೈ ಕೂಡಾ ಈಗಾಗಲೇ ಗ್ರ್ಯಾಂಡ್ ಐ10 ನಿಯೊಸ್ ಕಾರಿನ ಪೆಟ್ರೋಲ್ ಕಾರನ್ನು ಬಿಎಸ್-6 ನಿಯಮದಂತೆ ಬಿಡುಗಡೆ ಮಾಡಿದ್ದು, ಮುಂಬರುವ ಮಾರ್ಚ ಅಂತ್ಯದೊಳಗೆ ಬಹುತೇಕ ಕಾರು ಮಾದರಿಗಳನ್ನು ಬಿಎಸ್-6 ಎಂಜಿನ್ನೊಂದಿಗೆ ಬಿಡುಗಡೆ ಮಾಡಲಿದೆ.
ಬಿಎಸ್-6 ಎಂಜಿನ್ನಿಂದಾಗಿ ಹೊಸ ಕಾರಗಳ ಬೆಲೆಯಲ್ಲಿ ತುಸು ದುಬಾರಿಯಾಗಿಲಿದ್ದು, ಪೆಟ್ರೋಲ್ ಕಾರುಗಳ ಬೆಲೆಯು ಪ್ರಸ್ತುತ ಮಾರುಕಟ್ಟೆಯಲ್ಲಿರುವ ಬೆಲೆಗಿಂತ ರೂ.10 ಸಾವಿರದಿಂದ ರೂ.30 ಸಾವಿರ ತನಕ ಮತ್ತು ಡೀಸೆಲ್ ಕಾರುಗಳ ಬೆಲೆಯು ರೂ.80 ಸಾವಿರದಿಂದ ರೂ.1.50 ಲಕ್ಷದ ತನಕ ಹೆಚ್ಚುವರಿ ಬೆಲೆ ಪಡೆಯಲಿವೆ.
ಇದೀಗ ಬಿಡುಗಡೆಗೆ ಸಿದ್ದವಾಗಿರುವ ಸ್ಯಾಂಟ್ರೋ ಕೂಡಾ ಹೊಸ ಪೆಟ್ರೋಲ್ ಎಂಜಿನ್ನೊಂದಿಗೆ ಬಿಡುಗಡೆಯಾಗಲಿದ್ದು, ಬೆಲೆ ಏರಿಕೆಯೊಂದಿಗೆ ಕಾರಿನ ವಿನ್ಯಾಸದಲ್ಲಿ ಕೆಲವು ಪ್ರಮುಖ ಬದಲಾವಣೆಗಳನ್ನು ಪಡೆದುಕೊಳ್ಳಲಿದೆ.
ಇನ್ನು 2018ರ ಅಕ್ಟೋಬರ್ನಲ್ಲಿ ಬಿಡುಗಡೆಯಾಗಿದ್ದ ಹೊಸ ತಲೆಮಾರಿನ ಸ್ಯಾಂಟ್ರೋ ಕಾರು ಇದುವರೆಗೆ ದಾಖಲೆ ಪ್ರಮಾಣದ ಮಾರಾಟ ಕಂಡಿದ್ದು, ದೆಹಲಿ ಎಕ್ಸ್ಶೋರೂಂ ಪ್ರಕಾರ ರೂ. 4.30 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ.5.79 ಲಕ್ಷ ಬೆಲೆ ಪಡೆದುಕೊಂಡಿದೆ. ಪೆಟ್ರೋಲ್ ಮತ್ತು ಸಿಎನ್ಜಿ ಎಂಜಿನ್ ಆಯ್ಕೆಯನ್ನು ಮಾತ್ರ ಹೊಂದಿರುವ ಸ್ಯಾಂಟ್ರೋ ಕಾರು ಬಿಎಸ್-6 ಎಂಜಿನ್ ನಂತರ ಎಲ್ಲಾ ಆವೃತ್ತಿಗಳಲ್ಲೂ ಮ್ಯಾನುವಲ್ ಮತ್ತು ಎಎಂಟಿ ಗೇರ್ಬಾಕ್ಸ್ ಪಡೆದುಕೊಳ್ಳಲಿದೆ.
ಇದಲ್ಲದೇ ಹ್ಯುಂಡೈ ಸಂಸ್ಥೆಯು ಬಿಎಸ್-6 ಮಾದರಿಯನ್ನು ಬಿಡುಗಡೆ ಮಾಡುವುದಕ್ಕೂ ಮುನ್ನ ತನ್ನ ನೆಚ್ಚಿನ ಗ್ರಾಹಕರಿಗಾಗಿ ಆ್ಯನಿವರ್ಸರಿ ಸ್ಯಾಂಟ್ರೋ ಎಡಿಷನ್ ಬಿಡುಗಡೆ ಮಾಡಿರುವುದು ಹಲವು ವಿಶೇಷತೆಗಳಿಗೆ ಕಾರಣವಾಗಿದೆ.
ಆ್ಯನಿವರ್ಸರಿ ಎಡಿಷನ್ ಸ್ಯಾಂಟ್ರೋ ಕಾರಿನ ಸ್ಪೋರ್ಟ್ಜ್ ಆವೃತ್ತಿಯಲ್ಲಿ ಮಾತ್ರವೇ ಖರೀದಿಗೆ ಲಭ್ಯವಿದ್ದು, ಗ್ರಾಹಕರು ತಮ್ಮ ಬೇಡಿಕೆಗೆ ತಕ್ಕಂತೆ ಆಟೋಮ್ಯಾಟಿಕ್ ಅಥವಾ ಮ್ಯಾನುವಲ್ ಗೇರ್ಬಾಕ್ಸ್ ಮಾದರಿಯನ್ನು ಖರೀದಿ ಮಾಡಬಹುದು.
ಆ್ಯನಿವರ್ಸರಿ ಎಡಿಷನ್ ಹೊರಭಾಗದಲ್ಲಿ ಕಪ್ಪು ಮಿಶ್ರಿತ ಹೊಂದಿರುವ ಒಆರ್ವಿಎಂಎಸ್, ಡೋರ್ ಹ್ಯಾಂಡಲ್, ಗ್ಲಾಸಿ ಬ್ಲ್ಯಾಕ್ ಬಣ್ಣದ ರೂಫ್ ರೈಲ್ಸ್, ಗನ್ಮೆಟಲ್ ಗ್ರೇ ವೀಲ್ಹ್ ಕವರ್ಸ್, ರಿಯರ್ ಕ್ರೋಮ್ ಗಾರ್ನಿಶ್ ಮತ್ತು ಕಾರಿನ ಹಿಂಭಾಗದ ಬೂಟ್ ಲಿಡ್ ಮೇಲ್ಭಾಗದಲ್ಲಿ ಆ್ಯನಿವರ್ಸರಿ ಎಡಿಷನ್ ಚಿಹ್ನೆಯನ್ನು ಜೋಡಿಸಲಾಗಿದೆ. ಜೊತೆಗೆ ಕಾರಿನ ಒಳಭಾಗದ ವಿನ್ಯಾಸದಲ್ಲೂ ಕೆಲವು ಬದಲಾವಣೆಗಳನ್ನು ಗ್ರಾಹಕರ ಆಕರ್ಷಣೆಗೆ ಕಾರಣವಾಗಲಿದೆ.
ಕಾರಿನ ಒಳವಿನ್ಯಾಸದಲ್ಲಿ ಪ್ರಮುಖ ಬದಲಾವಣೆ ಅಂದ್ರೆ, ಸಂಪೂರ್ಣ ಕಪ್ಪು ಬಣ್ಣದ ಇಂಟಿರಿಯರ್ ಜೊತೆಗೆ ತಿಳಿನಿಲಿ ಬಣ್ಣದ ಇನ್ಸ್ರ್ಟ್, ಹೊಸ ಫ್ಯಾಬ್ರಿಕ್ ಆಸನಗಳನ್ನು ಪಡೆದುಕೊಂಡಿದ್ದು, ಇನ್ನುಳಿದ ತಾಂತ್ರಿಕ ಅಂಶಗಳನ್ನು ಸಾಮಾನ್ಯ ಕಾರಿನ ಮಾದರಿಯಲ್ಲೇ ಮುಂದುವರಿಸಲಾಗಿದೆ.
ಇನ್ನೊಂದು ಪ್ರಮುಖ ಆಕರ್ಷಣೆಯೆಂದರೆ ಈ ಬಾರಿ ಹೊಸ ಕಾರಿನಲ್ಲಿ ಗ್ರಾಹಕರ ಬೇಡಿಕೆಯೆಂತೆ ಎರಡು ಹೊಸ ಬಣ್ಣಗಳ ಆಯ್ಕೆ ಸಹ ನೀಡಲಾಗಿದ್ದು, ಪೊಲಾರ್ ವೈಟ್ ಮತ್ತು ಅಕ್ವಾ ಟೀಲ್ ಬಣ್ಣಗಳಲ್ಲಿ ಸ್ಯಾಂಟ್ರೋ ಖರೀದಿಗೆ ಲಭ್ಯವಿದೆ.
ಹೊಸ ಕಾರಿನಲ್ಲಿ ಸಾಮಾನ್ಯ ಮಾದರಿಯ ಕಾರುಗಳಲ್ಲಿ ನೀಡಲಾಗಿರುವ ತಾಂತ್ರಿಕ ಅಂಶಗಳನ್ನೇ ಮುಂದುವರಿಸಲಾಗಿದ್ದು, ಆ್ಯನಿವರ್ಸರಿ ಎಡಿಷನ್ ಹೊರತುಪಡಿಸಿ ಸಾಮಾನ್ಯ ಬೆಲೆಗಳಲ್ಲಿ ಎರಾ, ಮ್ಯಾಗ್ನಾ, ಸ್ಪೋರ್ಟ್ಜ್ ಮತ್ತು ಅಸ್ಟ್ರಾ ವೆರಿಯೆಂಟ್ಗಳನ್ನು ಖರೀದಿ ಮಾಡಬಹುದು.
ಆ್ಯನಿವರ್ಸರಿ ಎಡಿಷನ್ ಸ್ಯಾಂಟ್ರೋ 1.1-ಲೀಟರ್ ಪೆಟ್ರೋಲ್ ಎಂಜಿನ್ನೊಂದಿಗೆ 5-ಸ್ಪೀಡ್ ಮ್ಯಾನುವಲ್ ಅಥವಾ ಆಟೋಮ್ಯಾಟಿಕ್ ಗೇರ್ಬಾಕ್ಸ್ ಆಯ್ಕೆ ಹೊಂದಿದ್ದರೆ, ಸಾಮಾನ್ಯ ಸ್ಯಾಂಟ್ರೋ ಆವೃತ್ತಿಗಳಲ್ಲಿ ಪೆಟ್ರೋಲ್ ಎಂಜಿನ್ ಜೊತೆಗೆ ಸಿಎನ್ಜಿ ಆವೃತ್ತಿಯನ್ನು ಖರೀದಿ ಮಾಡಬಹುದು.