ಆಟೋ ಎಕ್ಸ್‌ಪೋ 2020: ಗ್ರ್ಯಾಂಡ್ ಐ10 ನಿಯೋಸ್ ಟರ್ಬೊ ಪೆಟ್ರೋಲ್ ಆವೃತ್ತಿಯನ್ನು ಪ್ರದರ್ಶಿಸಲಿದೆ ಹ್ಯುಂಡೈ

ಹ್ಯುಂಡೈ ಕಳೆದ ವರ್ಷ ಗ್ರ್ಯಾಂಡ್ ಐ10 ನಿಯೋಸ್ ಅನ್ನು ಬಿಡುಗಡೆಗೊಳಿಸಿತ್ತು. ಹ್ಯುಂಡೈ ಗ್ರ್ಯಾಂಡ್ ಐ10 ನಿಯೋಸ್ ಕಾರು ಉತ್ತಮವಾಗಿ ಮಾರಾಟವಾಗುವಲ್ಲಿ ಯಶ್ವಸಿಯಾಗಿದೆ. ಹ್ಯುಂಡೈ ಐ10 ನಿಯೋಸ್ ಹ್ಯಾಚ್‍‍ಬ್ಯಾಕ್‍‍ನಲ್ಲಿ 1.0 ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಅನ್ನು ಹೊಂದಲಿದೆ ಎಂಬ ವದಂತಿಗಳಿತ್ತು.

ಆಟೋ ಎಕ್ಸ್‌ಪೋ 2020: ಗ್ರ್ಯಾಂಡ್ ಐ10 ನಿಯೋಸ್ ಟರ್ಬೊ ಪೆಟ್ರೋಲ್ ಆವೃತ್ತಿಯನ್ನು ಪ್ರದರ್ಶಿಸಲಿದೆ ಹ್ಯುಂಡೈ

ಇದೀಗ ಮುಂದಿನ ಫೆಬ್ರವರಿ ತಿಂಗಳಲ್ಲಿ ನಡೆಯುವ ಆಟೋ ಎಕ್ಸ್ ಪೋದಲ್ಲಿ ಹ್ಯುಂಡೈ ಐ10 ನಿಯೋಸ್ ಟರ್ಬೊ ಪೆಟ್ರೋಲ್ ಎಂಜಿನ್ ಮಾದರಿಯನ್ನು ಪ್ರದರ್ಶಿಸಲಿದೆ. ಹ್ಯುಂಡೈ ಗ್ರ್ಯಾಂಡ್ ಐ10 ನಿಯೋಸ್ ಹೊಸ ವಿನ್ಯಾಸದೊಂದಿದೆ ಬಿಡುಗಡೆಯಾಗಲಿದೆ. ಗ್ರ್ಯಾಂಡ್ ಐ10 ನಿಯೋಸ್ ಹ್ಯಾಚ್‍‍ಬ್ಯಾಕ್‍‍ನ ವಿನ್ಯಾಸವು ಹ್ಯುಂಡೈ ಸ್ಯಾಂಟ್ರೊ ಕಾರಿಗೆ ಹೋಲುತ್ತದೆ. ಗ್ರ್ಯಾಂಡ್ ಐ10 ಕಾರಿನ ಮುಂಭಾಗ ಸಿಗ್ನೇಚರ್ ಕ್ಯಾಸ್ಕೇಡಿಂಗ್ ಗ್ರಿಲ್ ಅನ್ನು ಹೊಂದಿದೆ.

ಆಟೋ ಎಕ್ಸ್‌ಪೋ 2020: ಗ್ರ್ಯಾಂಡ್ ಐ10 ನಿಯೋಸ್ ಟರ್ಬೊ ಪೆಟ್ರೋಲ್ ಆವೃತ್ತಿಯನ್ನು ಪ್ರದರ್ಶಿಸಲಿದೆ ಹ್ಯುಂಡೈ

ಇನ್ನೂ ಇಂಟಿಗ್ರೇಟೆಡ್ ಟರ್ನ್ ಸಿಗ್ನಿಲ್‍‍ನೊಂದಿಗೆ ಸ್ಲಿಕ್ ಪ್ರೊಜೆಕ್ಟರ್ ಹೆಡ್‍‍ಲ್ಯಾಂಪ್ ಅನ್ನು ಹೊಂದಿದೆ. ಈ ಕಾರು ಎಲ್‍ಇಡಿ ಡಿಎಆರ್‍ಎಲ್‍‍ಗಳನ್ನುಹೊಂದಿದೆ. ಇದು ಈ ಹ್ಯಾಚ್‍‍ಬ್ಯಾಕ್‍ಗೆ ಸ್ಪೋರ್ಟಿ ಮತ್ತು ಪ್ರೀಮಿಯಂ ಲುಕ್ ಅನ್ನು ನೀಡಿದೆ.

ಆಟೋ ಎಕ್ಸ್‌ಪೋ 2020: ಗ್ರ್ಯಾಂಡ್ ಐ10 ನಿಯೋಸ್ ಟರ್ಬೊ ಪೆಟ್ರೋಲ್ ಆವೃತ್ತಿಯನ್ನು ಪ್ರದರ್ಶಿಸಲಿದೆ ಹ್ಯುಂಡೈ

ಹ್ಯುಂಡೈ ಗ್ರ್ಯಾಂಡ್ ಐ10 ನಿಯೋಸ್ 15 ಇಂಚಿನ ಅಲಾಯ್ ವ್ಹೀಲ್‍ಗಳನ್ನು ಹೊಂದಿದೆ. ಕಪ್ಪು ಬಣ್ಣ ರೂಫ್ ಮತ್ತು ಶಾರ್ಪರ್ ಲೈನ್ಸ್ ಗಳಿಂದ ಕೊಡಿದೆ. ಹಿಂಭಾಗದಲ್ಲಿ ಹೊಸ ಹ್ಯಾಚ್‍‍ಬ್ಯಾಕ್‍‍ಲ್ಲಿ ಬಂಪರ್‍‍‍ಗಳನ್ನು ಹೊಂದಿದೆ. ಇನ್ನೂ ಹಿಂಭಾಗದಲ್ಲಿ ಕೆಲವು ಸಿಲ್ವರ್ ಅಂಶಗಳನ್ನು ಹೊಂದಿದೆ.

ಆಟೋ ಎಕ್ಸ್‌ಪೋ 2020: ಗ್ರ್ಯಾಂಡ್ ಐ10 ನಿಯೋಸ್ ಟರ್ಬೊ ಪೆಟ್ರೋಲ್ ಆವೃತ್ತಿಯನ್ನು ಪ್ರದರ್ಶಿಸಲಿದೆ ಹ್ಯುಂಡೈ

ಹೊಸ ಹ್ಯುಂಡೈ ಗ್ರ್ಯಾಂಡ್ ಐ10 ನಿಯೋಸ್ ಕಾರಿನ ಇಂಟಿರಿಯರ್‍‍ನಲ್ಲಿ ಡ್ಯುಯಲ್ ಟೋನ್ ಬ್ಲ್ಯಾಕ್/ಗ್ರೇ ಫಿನಿಶಿಂಗ್ ಅನ್ನು ಹೊಂದಿದೆ. ಇನ್ನೂ ಸೆಂಟ್ರೆಲ್ ಕನ್ಸೋಲ್ ಇನ್ಫೋಟೇನ್‍‍ಮೆಂಟ್ ಸಿಸ್ಟಂ ಅನ್ನು ಹೊಂದಿದೆ. ಇದನ್ನು ನಿಯಂತ್ರಿಸಲು ಎರಡು ಬದಿಯಲ್ಲಿ ಬಟನ್‍‍ಗಳಿವೆ ಅಲ್ಲದೇ ಇದು ಟಚ್‍‍ಸ್ಕ್ರೀನ್ ಆಗಿದೆ.

ಆಟೋ ಎಕ್ಸ್‌ಪೋ 2020: ಗ್ರ್ಯಾಂಡ್ ಐ10 ನಿಯೋಸ್ ಟರ್ಬೊ ಪೆಟ್ರೋಲ್ ಆವೃತ್ತಿಯನ್ನು ಪ್ರದರ್ಶಿಸಲಿದೆ ಹ್ಯುಂಡೈ

ಹ್ಯುಂಡೈ ಗ್ರ್ಯಾಂಡ್ ಐ10 ನಿಯೋಸ್‍ನಲ್ಲಿ 1.0 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಇದೇ ಎಂಜಿನ್ ಅನ್ನು ಹ್ಯುಂಡೈ ಒರಾದಲ್ಲಿ ಅಳವಡಿಸಲಾಗಿದೆ. ಈ ಟರ್ಬೊ ಪೆಟ್ರೋಲ್ ಎಂಜಿನ್ ನಿಯೋಸ್‍ನ ಟಾಪ್-ಎಂಡ್ ರೂಪಾಂತರದೊಂದಿಗೆ ಮಾತ್ರ ಲಭ್ಯವಿದೆ. ಈ ಎಂಜಿನ್ 100 ಬಿ‍‍ಹೆಚ್‍‍ಪಿ ಪವರ್ ಮತ್ತು 172 ಎನ್‍ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್‍‍ನೊಂದಿಗೆ 5 ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಾಗಿದೆ.

ಆಟೋ ಎಕ್ಸ್‌ಪೋ 2020: ಗ್ರ್ಯಾಂಡ್ ಐ10 ನಿಯೋಸ್ ಟರ್ಬೊ ಪೆಟ್ರೋಲ್ ಆವೃತ್ತಿಯನ್ನು ಪ್ರದರ್ಶಿಸಲಿದೆ ಹ್ಯುಂಡೈ

ಹ್ಯುಂಡೈ ಗ್ರ್ಯಾಂಡ್ ಐ10 ನಿಯೋಸ್ 1.0 ಟರ್ಬೊ ಪೆಟ್ರೋಲ್ ಆವೃತ್ತಿಯ ಬೆಲೆಯು ಇನ್ನೂ ಕೂಡ ತಿಳಿದುಬಂದಿಲ್ಲ. ಎಕ್ಸ್‌ಪೋದಲ್ಲಿ ಹ್ಯುಂಡೈ ಕ್ರೆಟಾ ಮತ್ತು ವೆರ್ನಾದ ಫೇಸ್‍‍ಲಿಫ್ಟ್ ಆವೃತ್ತಿಯನ್ನು ಪ್ರದರ್ಶಿಸಬಹುದು ಎಂದು ನಿರೀಕ್ಷಿಸುತ್ತೇವೆ.

ಆಟೋ ಎಕ್ಸ್‌ಪೋ 2020: ಗ್ರ್ಯಾಂಡ್ ಐ10 ನಿಯೋಸ್ ಟರ್ಬೊ ಪೆಟ್ರೋಲ್ ಆವೃತ್ತಿಯನ್ನು ಪ್ರದರ್ಶಿಸಲಿದೆ ಹ್ಯುಂಡೈ

ಈ ಕಾರಿನಲ್ಲಿ ಪ್ರಯಾಣಿಕರ ಸುರಕ್ಷತೆಗೆ ಹೆಚ್ಚಿನ ಪ್ರಮುಖ್ಯತೆಯನ್ನು ನೀಡಿದೆ. ಇದಕ್ಕಾಗಿ ಕಾರಿನಲ್ಲಿ ಏರ್‍‍ಬ್ಯಾಗಗಳು, ರಿವರ್ಸ್ ಪಾರ್ಕಿಂಗ್ ಸೆನ್ಸಾರ್‍‍‍ಗಳು, ಇಬಿಡಿಯೊಂದಿಗೆ ಎಬಿಎಸ್, ಸೀಟ್ ಬೆಲ್ಟ್ ರಿಮೈಂಡರ್, ಹೈ ಸ್ಪೀಡ್ ಅಲರ್ಟ್ ಮತ್ತು ಎಸ್‌ಒಫಿಕ್ಸ್ ಚೈಲ್ಡ್-ಸೀಟ್ ಮೌಂಟ್‍‍ಗಳನ್ನು ಒಳಗೊಂಡಿದೆ.

ಆಟೋ ಎಕ್ಸ್‌ಪೋ 2020: ಗ್ರ್ಯಾಂಡ್ ಐ10 ನಿಯೋಸ್ ಟರ್ಬೊ ಪೆಟ್ರೋಲ್ ಆವೃತ್ತಿಯನ್ನು ಪ್ರದರ್ಶಿಸಲಿದೆ ಹ್ಯುಂಡೈ

ಟರ್ಬೊ ಪೆಟ್ರೋಲ್ ಎಂಜಿನ್ ಅನ್ನು ಗ್ರ್ಯಾಂಡ್ ಐ10 ನಿಯೋಸ್‍‍ನಲ್ಲಿ ಅಳವಡಿಸಿರುವುದರಿಂದ ಹೆಚ್ಚಿನ ಕಾರು ಪ್ರಿಯರನ್ನು ಸೆಳಯಬಹುದು. ಅಲ್ಲದೇ ಈ ಎಂಜಿನ್ 100 ಬಿ‍‍ಹೆಚ್‍ಪಿ ಪವರ್ ಅನ್ನು ಉತ್ಪಾದಿಸುವುದರಿಂದ ಪರ್ಪಾಮೆನ್ಸ್ ಕಾರು ಪ್ರಿಯರಿಗೆ ಉತ್ತಮ ಆಯ್ಕೆಯಾಗಿರುತ್ತದೆ.

More from DriveSpark

Article Published On: Monday, January 27, 2020, 18:40 [IST]
English summary
Hyundai Grand i10 Nios 1.0-litre Turbo Petrol Model To Be Showcased At The Auto Expo. Read in Kananda
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+