ಸ್ಪಾಟ್ ಟೆಸ್ಟ್ ನಲ್ಲಿ ಕಂಡುಬಂದ ಬಿ‍ಎಸ್ 6 ಎಂಜಿನ್‍‍ನ ಹ್ಯುಂಡೈ ಟಕ್ಸನ್

ಬಿ‍ಎಸ್ 6 ಎಂಜಿನ್ ಹೊಂದಿರುವ 2020ರ ಹೊಸ ಹ್ಯುಂಡೈ ಟಕ್ಸನ್ ಕಾರ್ ಅನ್ನು ಶೀಘ್ರದಲ್ಲಿಯೇ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಾಗುವುದು. ಬಿಡುಗಡೆಗೂ ಮುನ್ನ ಭಾರತದಲ್ಲಿ ಈ ಕಾರ್ ಅನ್ನು ಸ್ಪಾಟ್ ಟೆಸ್ಟ್ ಮಾಡಲಾಗಿದೆ.

ಸ್ಪಾಟ್ ಟೆಸ್ಟ್ ನಲ್ಲಿ ಕಂಡುಬಂದ ಬಿ‍ಎಸ್ 6 ಎಂಜಿನ್‍‍ನ ಹ್ಯುಂಡೈ ಟಕ್ಸನ್

ಮೋಟಾರ್‍‍ಬೀಮ್ ಅಪ್‍‍ಲೋಡ್ ಮಾಡಿರುವ ಫೋಟೊಗಳಲ್ಲಿ ಮರೆಮಾಡಿ ಸ್ಪಾಟ್ ಟೆಸ್ಟ್ ಮಾಡುತ್ತಿರುವ ಹೊಸ ಟಕ್ಸನ್ ಕಾರ್ ಅನ್ನು ಕಾಣಬಹುದು. ಹ್ಯುಂಡೈ ಟಕ್ಸನ್ ಹಲವಾರು ವರ್ಷಗಳಿಂದ ದೇಶಿಯ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ. ಹ್ಯುಂಡೈ ಕಂಪನಿಯು ಕಳೆದ ವರ್ಷ ಈ ಕಾರ್ ಅನ್ನು ಫೇಸ್‍‍ಲಿಫ್ಟ್ ಮಾಡಿತ್ತು.

ಸ್ಪಾಟ್ ಟೆಸ್ಟ್ ನಲ್ಲಿ ಕಂಡುಬಂದ ಬಿ‍ಎಸ್ 6 ಎಂಜಿನ್‍‍ನ ಹ್ಯುಂಡೈ ಟಕ್ಸನ್

ಕೆಲವೇ ದಿನಗಳಲ್ಲಿ ಬಿಡುಗಡೆಯಾಗಲಿರುವ ಹ್ಯುಂಡೈ ಟಕ್ಸನ್ ಕಾರ್ ಅನ್ನು ಸ್ಪಾಟ್ ಟೆಸ್ಟ್ ಮಾಡುವಾಗ ಕ್ಯಾಮರಾದಲ್ಲಿ ಸೆರೆಹಿಡಿಯಲಾಗಿದೆ. ಈ ಸ್ಪೈ ಚಿತ್ರಗಳಲ್ಲಿ ಹೊಸ ಟಕ್ಸನ್ ಕಾರಿನಲ್ಲಿ ಎಲ್‍ಇ‍‍ಡಿ ಪ್ರೊಜೆಕ್ಟರ್ ಹೆಡ್‍‍ಲ್ಯಾಂಪ್, ಬಂಪರ್‍‍ನಲ್ಲಿರುವ ಡಿ‍ಆರ್‍ಎಲ್ ಹಾಗೂ ಫಾಗ್‍‍ಲೈಟ್‍‍ಗಳನ್ನು ಕಾಣಬಹುದು.

ಸ್ಪಾಟ್ ಟೆಸ್ಟ್ ನಲ್ಲಿ ಕಂಡುಬಂದ ಬಿ‍ಎಸ್ 6 ಎಂಜಿನ್‍‍ನ ಹ್ಯುಂಡೈ ಟಕ್ಸನ್

ಬಂಪರ್ ಬಗ್ಗೆ ಹೇಳುವುದಾದರೆ, ಈ ಎಸ್‍‍ಯುವಿಯ ಮುಂಭಾಗ ಹಾಗೂ ಹಿಂಭಾಗದಲ್ಲಿ ರಿ ಡಿಸೈನ್ ಮಾಡಲಾದ ಬಂಪರ್‍‍ಗಳಿರಲಿವೆ. ಇದರ ಜೊತೆಗೆ ಈ ಎಸ್‍ಯುವಿ ಹೊಸದಾದ ಹಾಗೂ ಅಗಲವಾದ ಗ್ರಿಲ್ ಹೊಂದಿರಲಿದೆ. ಈ ಗ್ರಿಲ್ ಈ ಎಸ್‍‍ಯುವಿಗೆ ಹೆಚ್ಚು ಬೋಲ್ಡ್ ನೆಸ್ ನೀಡುತ್ತದೆ.

ಸ್ಪಾಟ್ ಟೆಸ್ಟ್ ನಲ್ಲಿ ಕಂಡುಬಂದ ಬಿ‍ಎಸ್ 6 ಎಂಜಿನ್‍‍ನ ಹ್ಯುಂಡೈ ಟಕ್ಸನ್

ಹೊಸ ಟಕ್ಸನ್ ಎಸ್‍‍ಯುವಿಯ ಸೈಡ್‍‍ನಲ್ಲಿ ಹೆಚ್ಚಿನ ಬದಲಾವಣೆಗಳನ್ನು ಮಾಡಿಲ್ಲ. ಈ ಎಸ್‍‍ಯುವಿಯಲ್ಲಿ ಈಗ ಹೊಸ ಮಷಿನ್ ಕಟ್ ಮಲ್ಟಿ ಸ್ಪೋಕ್ ಅಲಾಯ್ ವ್ಹೀಲ್‍‍ಗಳಿರಲಿದ್ದು, ಎಸ್‍‍ಯುವಿಯನ್ನು ಮತ್ತಷ್ಟು ಆಕರ್ಷಕವಾಗಿಸುತ್ತವೆ.

ಸ್ಪಾಟ್ ಟೆಸ್ಟ್ ನಲ್ಲಿ ಕಂಡುಬಂದ ಬಿ‍ಎಸ್ 6 ಎಂಜಿನ್‍‍ನ ಹ್ಯುಂಡೈ ಟಕ್ಸನ್

ಈ ಎಸ್‍‍ಯುವಿಯಲ್ಲಿರುವ ಫ್ಯೂಯಲ್ ಫಿಲ್ಲರ್ ಕ್ಯಾಪ್ ಹಾಗೂ ಟೇಲ್‍‍ಗೇಟ್‍‍ಗಳಲ್ಲೂ ಸಹ ಡಿಸೈನ್ ಅನ್ನು ಅಪ್‍‍ಡೇಟ್ ಮಾಡಲಾಗಿದೆ. ಟೇಲ್‍‍ಲೈಟ್ ಮೊದಲಿಗಿಂತ ಸ್ಲೀಕ್ ಆಗಿದ್ದು, ಎಲ್‍ಇ‍‍ಡಿ ಯುನಿಟ್ ಅನ್ನು ಹೊಂದಿದೆ. ಈ ಎಸ್‍‍ಯುವಿಯ ಸುತ್ತಲಿರುವ ಕ್ರೋಮ್ ಈ ಕಾರಿಗೆ ಪ್ರೀಮಿಯಂ ಲುಕ್ ನೀಡುತ್ತದೆ.

ಸ್ಪಾಟ್ ಟೆಸ್ಟ್ ನಲ್ಲಿ ಕಂಡುಬಂದ ಬಿ‍ಎಸ್ 6 ಎಂಜಿನ್‍‍ನ ಹ್ಯುಂಡೈ ಟಕ್ಸನ್

ಹೊಸ ಟಕ್ಸನ್ ಎಸ್‍‍ಯುವಿಯ ಇಂಟಿರಿಯರ್‍‍ನಲ್ಲಿ ಬ್ಲೂ ಲಿಂಕ್ ಕನೆಕ್ಟಿವಿಟಿ, ಆಂಡ್ರಾಯಿಡ್ ಆಟೋ, ಆಪಲ್ ಕಾರ್ ಪ್ಲೇ ಹೊಂದಿರುವ ಟಚ್‍‍ಸ್ಕ್ರೀನ್ ಇನ್ಫೋಟೆನ್‍‍ಮೆಂಟ್ ಸಿಸ್ಟಂ, 3 ಡಿ ಮ್ಯಾಪ್ ಹೊಂದಿರುವ ನ್ಯಾವಿಗೇಶನ್‍‍ಗಳಿರಲಿವೆ.

ಸ್ಪಾಟ್ ಟೆಸ್ಟ್ ನಲ್ಲಿ ಕಂಡುಬಂದ ಬಿ‍ಎಸ್ 6 ಎಂಜಿನ್‍‍ನ ಹ್ಯುಂಡೈ ಟಕ್ಸನ್

ಕ್ಯಾಬಿನ್ ಎಸಿ ವೆಂಟ್ ಸುತ್ತಲೂ ಕಾಂಟ್ರಾಸ್ಟಿಂಗ್ ಎಲಿಮೆಂಟ್ ಹೊಂದಿರುವ ಡ್ಯುಯಲ್ ಟೋನ್ ಡ್ಯಾಶ್‍‍ಬೋರ್ಡ್ ಹೊಂದಿರಲಿದೆ. ಈ ಎಸ್‍‍ಯುವಿಯಲ್ಲಿ 360 ಡಿಗ್ರಿ ಕ್ಯಾಮರಾ ಹಾಗೂ ಅಡಾಪ್ಟಿವ್ ಕ್ರೂಸ್ ಕಂಟ್ರೋಲ್‍‍ಗಳನ್ನು ಅಳವಡಿಸಲಾಗಿದೆ.

ಸ್ಪಾಟ್ ಟೆಸ್ಟ್ ನಲ್ಲಿ ಕಂಡುಬಂದ ಬಿ‍ಎಸ್ 6 ಎಂಜಿನ್‍‍ನ ಹ್ಯುಂಡೈ ಟಕ್ಸನ್

ಮಾರುಕಟ್ಟೆಯಲ್ಲಿರುವ ಹ್ಯುಂಡೈ ಟಕ್ಸನ್ ಸಿಕೆಡಿಯಾಗಿದ್ದರೆ, ಹೊಸ ಟಕ್ಸನ್ ಕಾರ್ ಅನ್ನು ಭಾರತದಲ್ಲಿಯೇ ತಯಾರಿಸಲಾಗುವುದು. ಈ ಕಾರಣಕ್ಕೆ ಹೊಸ ಟಕ್ಸನ್ ಕಾರಿನ ಬೆಲೆಯು ಹಳೆಯ ಕಾರಿಗಿಂತ ಕಡಿಮೆಯಾಗಿರಲಿದೆ.

ಸ್ಪಾಟ್ ಟೆಸ್ಟ್ ನಲ್ಲಿ ಕಂಡುಬಂದ ಬಿ‍ಎಸ್ 6 ಎಂಜಿನ್‍‍ನ ಹ್ಯುಂಡೈ ಟಕ್ಸನ್

ಮೆಕಾನಿಕಲ್ ಅಂಶಗಳ ಬಗ್ಗೆ ಹೇಳುವುದಾದರೆ, ಟಕ್ಸನ್ ಕಾರಿನಲ್ಲಿ 2.0 ಲೀಟರಿನ ಪೆಟ್ರೋಲ್ ಹಾಗೂ ಡೀಸೆಲ್ ಬಿ‍ಎಸ್ 6 ಎಂಜಿನ್‍‍ಗಳಿರಲಿವೆ. ಪೆಟ್ರೋಲ್ ಎಂಜಿನ್ 154 ಬಿ‍ಹೆಚ್‍‍ಪಿ ಪವರ್ ಹಾಗೂ 192 ಎನ್‍ಎಂ ಟಾರ್ಕ್ ಉತ್ಪಾದಿಸಿದರೆ, ಡೀಸೆಲ್ ಎಂಜಿನ್ 185 ಬಿ‍‍ಹೆಚ್‍‍ಪಿ ಪವರ್ ಹಾಗೂ 400 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ.

ಸ್ಪಾಟ್ ಟೆಸ್ಟ್ ನಲ್ಲಿ ಕಂಡುಬಂದ ಬಿ‍ಎಸ್ 6 ಎಂಜಿನ್‍‍ನ ಹ್ಯುಂಡೈ ಟಕ್ಸನ್

ಎರಡೂ ಎಂಜಿನ್‍ಗಳಲ್ಲೂ 6 ಸ್ಪೀಡಿನ ಮ್ಯಾನುವಲ್ ಹಾಗೂ ಆಟೋಮ್ಯಾಟಿಕ್ ಗೇರ್‍‍‍ಬಾಕ್ಸ್ ಅಳವಡಿಸಲಾಗುವುದು. ಡೀಸೆಲ್ ಎಂಜಿನ್ ಮಾತ್ರ ಆಲ್ ಡ್ರೈವ್ ಸಿಸ್ಟಂ ಹೊಂದಿರಲಿದೆ. ಬಿ‍ಎಸ್ 6 ಎಂಜಿನ್‍‍ನಲ್ಲಿ ಬಿಡುಗಡೆಯಾಗಲಿರುವ ಹೊಸ ಟಕ್ಸನ್ ಮೂಲ ಮಾದರಿಯ ಬೆಲೆಯು ರೂ.20 ಲಕ್ಷಗಳಾದರೆ, ಟಾಪ್ ಎಂಡ್ ಮಾದರಿಯ ಬೆಲೆ ರೂ.30 ಲಕ್ಷಗಳಾಗಲಿದೆ. ಇವು ಎಕ್ಸ್ ಶೋರೂಂ ದರಗಳಾಗಿವೆ.

ಸ್ಪಾಟ್ ಟೆಸ್ಟ್ ನಲ್ಲಿ ಕಂಡುಬಂದ ಬಿ‍ಎಸ್ 6 ಎಂಜಿನ್‍‍ನ ಹ್ಯುಂಡೈ ಟಕ್ಸನ್

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಅಪ್‍‍ಡೇಟ್ ಮಾಡಲಾದ ಡಿಸೈನ್ ಹಾಗೂ ಹಲವಾರು ಫೀಚರ್‍‍ಗಳನ್ನು ಹೊಂದಿರುವ ಹೊಸ ಟಕ್ಸನ್ ಕಾರು ಖಂಡಿತವಾಗಿಯೂ ಭಾರತದಲ್ಲಿ ಗ್ರಾಹಕರನ್ನು ಹೆಚ್ಚಿನ ಸಂಖ್ಯೆಯ ಗ್ರಾಹಕರನ್ನು ತನ್ನತ್ತ ಸೆಳೆಯಲಿದೆ. ಈ ಕಾರು ಬಿಡುಗಡೆಯಾದ ನಂತರ ಸ್ಕೋಡಾ ಕೊಡಿಯಾಕ್ ಹಾಗೂ ಫೋಕ್ಸ್ ವ್ಯಾಗನ್ ಟಿಗ್ವಾನ್ ಕಾರುಗಳಿಗೆ ಪೈಪೋಟಿ ನೀಡಲಿದೆ.

More from DriveSpark

Article Published On: Saturday, January 25, 2020, 16:27 [IST]
English summary
Hyundai Tucson Facelift BS6 Model Spotted Testing Ahead Of India Launch. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+