ಬಿಡುಗಡೆಯಾಗಲಿದೆ ಬಹುನಿರೀಕ್ಷಿತ ಹ್ಯುಂಡೈ ಟಕ್ಸನ್ ಫೇಸ್‌ಲಿಫ್ಟ್ ಎಸ್‍ಯುವಿ
ಹ್ಯುಂಡೈ ಕಂಪನಿಯು ತನ್ನ ಹೊಸ ಟಕ್ಸನ್ ಫೇಸ್‌ಲಿಫ್ಟ್ ಎಸ್‍ಯುವಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ಇದೀಗ ಹೊಸ ಟಕ್ಸನ್ ಫೇಸ್‌ಲಿಫ್ಟ್ ಎಸ್‍ಯುವಿಯನ್ನು ಬಿಡುಗಡೆಗೊಳಿಸುವುದರ ಮಾಹಿತಿಯನ್ನು ಹ್ಯುಂಡೈ ಬಹಿರಂಗಪಡಿಸಿದೆ.

ದೇಶಾದ್ಯಂತ ವಿರುವ ಲಾಕ್ ಡೌನ್ ಅವಧಿಯು ಮುಕ್ತಾಯಗೊಂಡ ಬಳಿಕ ಈ ಎಸ್‍ಯುವಿಯನ್ನು ಬಿಡುಗಡೆಗೊಳಿಸಲಾಗುತ್ತದೆ. ಹ್ಯುಂಡೈ ಕಂಪನಿಯು ಸಾಂಟಾ ಎಫ್‍ಇ ಕಾರ್ ಅನ್ನು ಸ್ಥಗಿತಗೊಳಿಸಿದ ನಂತರ ಟಕ್ಸನ್ ಕಾರು ಹ್ಯುಂಡೈನ ಪ್ರಮುಖ ಎಸ್‍ಯುವಿಯಾಗಿದೆ. ಇತ್ತೀಚೆಗೆ ನಡೆದ 2020ರ ಆಟೋ ಎಕ್ಸ್ ಪೋದಲ್ಲಿ ಎರಡನೇ ತಲೆಮಾರಿನ ಟಕ್ಸನ್ ಎಸ್‍ಯುವಿಯನ್ನು ಪ್ರದರ್ಶಿಸಲಾಗಿತ್ತು. ಇದು ಫೇಸ್‍ಲಿಫ್ಟ್ ಆವೃತ್ತಿಯಾಗಿರುವ ಕಾರಣಕ್ಕೆ ಈ ಎಸ್‍ಯುವಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ.

2020ರ ಹ್ಯುಂಡೈ ಟಕ್ಸನ್ ಫೇಸ್‌ಲಿಫ್ಟ್ ಎಸ್‍ಯುವಿಯಲ್ಲಿ 2.0 ಲೀಟರಿನ ಟರ್ಬೊಚಾರ್ಜ್ಡ್ ಡೀಸೆಲ್ ಎಂಜಿನ್ ಹೊಂದಿದೆ. ಈ ಎಂಜಿನ್ 182 ಬಿಹೆಚ್‍ಪಿ ಪವರ್ ಹಾಗೂ 400 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‍ನಲ್ಲಿ 8 ಸ್ಪೀಡಿನ ಆಟೋಮ್ಯಾಟಿಕ್ ಗೇರ್‍ಬಾಕ್ಸ್ ಅಳವಡಿಸಲಾಗಿದೆ.
MOST READ: ಹೋಂಡಾ ಡಬ್ಲ್ಯುಆರ್-ವಿ ಫೇಸ್‍ಲಿಫ್ಟ್ ಕಾರಿನ ಮೈಲೇಜ್ ಮಾಹಿತಿ ಬಹಿರಂಗ

ಇನ್ನು 2.0 ಲೀಟರಿನ ಪೆಟ್ರೋಲ್ ಎಂಜಿನ್ 150 ಬಿಹೆಚ್‍ಪಿ ಪವರ್ ಹಾಗೂ 192 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‍ನಲ್ಲಿ 6 ಸ್ಪೀಡಿನ ಆಟೋಮ್ಯಾಟಿಕ್ ಗೇರ್‍ಬಾಕ್ಸ್ ಜೋಡಿಸಲಾಗಿದೆ. ಯಾವುದೇ ಮಾದರಿಗಳಲ್ಲೂ ಮ್ಯಾನುವಲ್ ಗೇರ್‍ಬಾಕ್ಸ್ ಆಯ್ಕೆಯನ್ನು ಹೊಂದಿರುವುದಿಲ್ಲ.

ಈ ಎಸ್‍ಯುವಿಯ ಮುಂಭಾಗ ಹಾಗೂ ಹಿಂಭಾಗದಲ್ಲಿರುವ ಬಂಪರ್, ಪೆಂಟಾ ಎಲ್‍ಇಡಿ ಪ್ರೊಜೆಕ್ಟರ್ ಹೆಡ್‍ಲೈಟ್ ಯುನಿಟ್, ಎಲ್‍ಇಡಿ ಟೇಲ್‍ಲೈಟ್, 18 ಇಂಚಿನ ಡೈಮಂಡ್ ಕಟ್ ವ್ಹೀಲ್‍ಗಳನ್ನು ಅಪ್‍ಡೇಟ್ ಮಾಡಲಾಗಿದೆ.
MOST READ: ಭಾರತದಲ್ಲಿ ಬಿಡುಗಡೆಯಾಯ್ತು ಬಹುನಿರೀಕ್ಷಿತ ಸ್ಕೋಡಾ ಕರೋಕ್ ಎಸ್‍ಯುವಿ

ಇನ್ನು ಹೊಸ ಟಕ್ಸನ್ ಎಸ್‍ಯುವಿಯ ಇಂಟಿರಿಯರ್ ನಲ್ಲಿ 10 ವೇ ಪವರ್ ಅಡ್ಜಸ್ಟಬಲ್ ಡ್ರೈವರ್ ಸೀಟ್, 8ವೇ ಪವರ್ಡ್ ಕೋ ಪ್ಯಾಸೆಂಜರ್ ಸೀಟ್, ಡ್ಯುಯಲ್ ಜೋನ್ ಕ್ಲೈಮೆಟ್ ಕಂಟ್ರೋಲ್, ಬ್ಲೂ ಲಿಂಕ್ ಕನೆಕ್ಟಿವಿಟಿ, ವೈರ್‍ಲೆಸ್ ಚಾರ್ಜಿಂಗ್, ಆಪಲ್ ಕಾರ್ ಪ್ಲೇ ಹಾಗೂ ಆಂಡ್ರಾಯಿಡ್ ಆಟೋ ಹೊಂದಿರುವ 8 ಇಂಚಿನ ಟಚ್‍ಸ್ಕ್ರೀನ್ ಇನ್ಫೋಟೆನ್‍ಮೆಂಟ್ ಸಿಸ್ಟಂಗಳಿವೆ.

ಇದರ ಜೊತೆಗೆ ಹ್ಯುಂಡೈನ ಐಬ್ಲೂ ಹಾಗೂ ವಾಯ್ಸ್ ಕಮಾಂಡ್‍ಗಳಿವೆ. ಕ್ಯಾಬಿನ್‍ನಲ್ಲಿ ಎಸಿ ವೆಂಟ್‍ಗಳನ್ನು ಹೊಂದಿರುವ ಡ್ಯುಯಲ್ ಟೋನ್ ಡ್ಯಾಶ್‍ಬೋರ್ಡ್‍ಗಳನ್ನು ನೀಡಲಾಗಿದೆ. ಹೊಸ ಎಸ್‍ಯುವಿ 360 ಡಿಗ್ರಿಯ ಕ್ಯಾಮರಾ, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಹಾಗೂ ಪನೋರಾಮಿಕ್ ಸನ್‍ರೂಫ್‍ಗಳನ್ನು ಹೊಂದಿದೆ.
MOST READ: ಸ್ಪಾಟ್ ಟೆಸ್ಟ್ನಲ್ಲಿ ಕಾಣಿಸಿಕೊಂಡ ಟೊಯೊಟಾ ಫಾರ್ಚೂನರ್ ಫೇಸ್ಲಿಫ್ಟ್

ಹೊಸ ಹ್ಯುಂಡೈ ಟಕ್ಸನ್ ಫೇಸ್‌ಲಿಫ್ಟ್ ಎಸ್‍ಯುವಿಯನ್ನು ಜಿಎಲ್ 2 ಡಬ್ಲ್ಯುಡಿ, ಜಿಎಲ್‍ಎಸ್ 2 ಡಬ್ಲ್ಯುಡಿ ಹಾಗೂ ಜಿಎಲ್‍ಎಸ್ 4 ಡಬ್ಲ್ಯುಡಿ ಎಂಬ ಮೂರು ಮಾದರಿಗಳಲ್ಲಿ ಮಾರಾಟ ಮಾಡಲಾಗುವುದು. ಜಿಎಲ್ ಹಾಗೂ ಜಿಎಲ್‍ಎಸ್ ಮಾದರಿಗಳನ್ನು ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್‍ನಲ್ಲಿ ಮಾರಾಟ ಮಾಡಲಾಗುವುದು.

ಟಾಪ್ ಎಂಡ್ ಮಾದರಿಯಾದ ಜಿಎಲ್‍ಎಸ್ 4 ಡಬ್ಲ್ಯುಡಿ ಮಾದರಿಯನ್ನು ಡೀಸೆಲ್ ಎಂಜಿನ್‍ನಲ್ಲಿ ಮಾತ್ರ ಮಾರಾಟ ಮಾಡಲಾಗುವುದು. ಈ ಎಸ್‍ಯುವಿಯಲ್ಲಿ ಇಕೊ, ಸ್ಮಾರ್ಟ್ ಹಾಗೂ ಪ್ರೊ ಎಂಬ ಮೂರು ವಿಧದ ಡ್ರೈವಿಂಗ್ ಮೋಡ್‍ಗಳಿವೆ.

ಹೊಸ ಟಕ್ಸನ್ ಫೇಸ್‌ಲಿಫ್ಟ್ ಎಸ್‍ಯುವಿ ಪಾರ್ಕಿಂಗ್ ಸೆನ್ಸಾರ್, ಇಎಸ್‍ಸಿ, ಹಿಲ್ ಡಿಸೆಂಟ್ ಕಂಟ್ರೋಲ್, ಹಿಲ್ ಅಸಿಸ್ಟ್, ಪಡಲ್ ಲ್ಯಾಂಪ್, ಕಾರ್ನರಿಂಗ್ ಲ್ಯಾಂಪ್, ಪವರ್ಡ್ ಟೇಲ್‍ಗೇಟ್, ಎಲೆಕ್ಟ್ರಿಕ್ ಪಾರ್ಕಿಂಗ್ ಬ್ರೇಕ್ ಹಾಗೂ ಡೈನಾಮಿಕ್ ಸ್ಟಾಬಿಲಿಟಿ ಕಂಟ್ರೋಲ್‍ನಂತಹ ಹಲವಾರು ಫೀಚರ್‍ಗಳನ್ನು ಹೊಂದಿದೆ.


Click it and Unblock the Notifications