ಅನಾವರಣವಾಯ್ತು ಬಹುನಿರೀಕ್ಷಿತ ಹ್ಯುಂಡೈ ಐ20 ಎನ್ ಕಾರು
ಜನಪ್ರಿಯ ಕಾರು ತಯಾರಕ ಕಂಪನಿಯಾದ ಹ್ಯುಂಡೈ ತನ್ನ ಐ20 ಎನ್ ಪರ್ಫಾಮೆನ್ಸ್ ಕಾರನ್ನು ಅನಾವರಣಗೊಳಿಸಿದೆ. ಈ ಹೊಸ ಹ್ಯುಂಡೈ ಐ20 ಎನ್ ಕಾರನ್ನು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮುಂದಿನ ವರ್ಷ ಬಿಡುಗಡೆಯಾಗಲಿದೆ.

ಹೊಸ ಐ20 ಎನ್ ಅಡ್ರಿನಾಲಿನ್-ಪ್ಯಾಕ್ಡ್ ಹಾಟ್ ಎಂದು ಖ್ಯಾತಿಯಾಗಿದೆ. ಹೊಸ ಐ20 ಎನ್ ಉತ್ತಮ ಫಾರ್ಮೆನ್ಸ್ ಮತ್ತು ಪವರ್ ಫುಲ್ ಕಾರು ಆಗಿರಲಿದೆ. ಈ ಹೊಸ ಹಾಟ್ ಹ್ಯಾಚ್ ನಲ್ಲಿ 6-ಲೀಟರ್ ಟರ್ಬೋಚಾರ್ಜ್ಡ್ ನಾಲ್ಕು ಸಿಲಿಂಡರ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 204 ಬಿಹೆಚ್‍ಪಿ ಪವರ್ ಮತ್ತು 275 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ ಸ್ಟ್ಯಾಂಡರ್ಡ್ ಆಗಿ ಅಳವಡಿಸಲಾಗಿದೆ.

ಹೊಸ ಹ್ಯುಂಡೈ ಐ20 ಎನ್ ಕಾರು 6.7 ಸೆಕೆಂಡುಗಳಲ್ಲಿ 0-100 ಕಿ.ಮೀ ಸ್ಪೀಡ್ ಅನ್ನು ಕ್ರಮಿಸುತ್ತದೆ. ಈ ಹ್ಯುಂಡೈ ಐ20 ಎನ್ ಕಾರು 250 ಕಿ,ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ. ಇನ್ನು ಹೊಸ ಹ್ಯುಂಡೈ ಐ20 ಎನ್ ಕಾರಿನಲ್ಲಿರುವ ಎಂಜಿನ್ ದೊಡ್ಡದಾದ ಟರ್ಬೊ ಮತ್ತು ಇಂಟರ್ಕೂಲರ್ ಅನ್ನು ಪಡೆಯುತ್ತದೆ.
MOST READ: 2020ರ ಸಿಟಿ ಕಾರಿನ ಉತ್ಪಾದನೆಯನ್ನು ಪ್ರಾರಂಭಿಸಿದ ಹೋಂಡಾ

ಜೊತೆಗೆ 350-ಬಾರ್ ಫ್ಯೂಯಲ್ -ಇಂಜೆಕ್ಷನ್ ಸಿಸ್ಟಂ ಅನ್ನು ಕೂಡ ಹೊಂದಿರಲಿದೆ, ಇನ್ನು ಹ್ಯುಂಡೈ ಐ20 ಎನ್ ಕಾರಿನಲ್ಲಿ ಪರ್ಫಾಮೆನ್ಸ್ ಹೆಚ್ಚಿಸುವ ಸಲುವಾಗಿ, 1.6-ಲಿಟ್ರೆ ಎಂಜಿನ್ ಸಹ ವೇರಿಯಬಲ್ ವಾಲ್ವ್ ಟೈಮಿಂಗ್ ಅನ್ನು ಪಡೆಯುತ್ತದೆ. ಇನ್ನು ಸ್ಟ್ಯಾಂಡರ್ಡ್ ಕಾರಿನ ಮೇಲೆ, ಚಾಸಿಸ್ ಅನ್ನು ಬಲಪಡಿಸಲಾಗಿದೆ.

ಹೊಸ ಹ್ಯುಂಡೈ ಐ20 ಎನ್ ಲೈನ್ ಕಾರಿನ ಮುಂಭಾಗ ಎನ್-ಲೈನ್ ಬ್ಯಾಡ್ಜ್ ನೊಂದಿಗೆ ಮರುವಿನ್ಯಾಸಗೊಳಿಸಲಾದ ಮುಂಭಾಗದ ಗ್ರಿಲ್ ಮತ್ತು ಫಾಗ್ ಲ್ಯಾಂಪ್ ನೊಂದಿಗೆ ಹೊಸ ಸ್ಪೋರ್ಟಿಯರ್ ಬಂಪರ್ ಅನ್ನು ಪಡೆಯುತ್ತದೆ.
MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಹೊಸ 17-ಇಂಚಿನ ಅಲಾಯ್ ವ್ಹೀಲ್ ಗಳು ಮತ್ತು ಬ್ಲ್ಯಾಕ್ ಔಟ್ ಸೈಡ್ ಸ್ಕಿರ್ಟಿಂಗ್ಗಾಗಿ ಸೈಡ್ ಪ್ರೊಫೈಲ್ ಬದಲಾಗದೆ ಉಳಿದಿದೆ. ಈ ಕಾರಿನ ಹಿಂಭಾಗದಲ್ಲಿ ಸ್ವಲ್ಪಮಟ್ಟಿಗೆ ನವೀಕರಿಸಿದ ಕನೆಕ್ಟಿವಿಟಿ ಟೈಲ್ ಲ್ಯಾಂಪ್‌ಗಳನ್ನು ಮತ್ತು ಟ್ವಿನ್ ಎಕ್ಸಾಸ್ಟ್ ಪೈಪ್ ಅನ್ನು ಹೊಂದಿದೆ.

ಹೊಸ ಹ್ಯುಂಡೈ ಐ20 ಎನ್ ಲೈನ್ ಕಾರಿನ ಇಂಟಿರಿಯರ್ ನಲ್ಲಿ ಬ್ಲ್ಯಾಕ್ ಥೀಮ್ ಅನ್ನು ಹೊಂದಿದೆ. ಎನ್ ಲೋಗೊ ಹೊಂದಿರುವ ಎನ್-ಬ್ರ್ಯಾಂಡೆಡ್ ಸ್ಪೋರ್ಟಿ ಸೀಟುಗಳು ಮತ್ತು ಎನ್-ಬ್ರ್ಯಾಂಡೆಡ್ ಸ್ಟೀಯರಿಂಗ್ ವ್ಹೀಲ್ ಅನ್ನು ಹೊಂದಿದೆ.
MOST READ: ಬಿಡುಗಡೆಯ ಸನಿಹದಲ್ಲಿ ಹೊಸ ಮಾರುತಿ ಸುಜುಕಿ ಸೆಲೆರಿಯೊ

ಇನ್ನು ಭಾರತೀಯ ಮಾರುಕಟ್ಟೆಗೆ ಸಂಬಂಧಿಸಿದಂತೆ, ಹ್ಯುಂಡೈ ಕಂಪನಿಯು ತನ್ನ ಹೊಸ ಐ20 ಕಾರನ್ನು ಮುಂದಿನ ತಿಂಗಳ ಆರಂಭದಲ್ಲಿ ಬಿಡುಗಡೆಗೊಳಿಸಬಹುದು ಎಂದು ನಿರೀಕ್ಷಿಸುತ್ತೇವೆ. ಆದರೆ ಹ್ಯುಂಡೈ ಕಂಪನಿಯು ಈ ಹೊಸ ಕಾರಿನ ಬಿಡುಗಡೆಯ ದಿನಾಂಕವನ್ನು ಬಹಿರಂಗಪಡಿಸಿಲ್ಲ. ಇನ್ನು ಕೆಲವು ಡೀಲರುಗಳು ಅನ್ನು ಪ್ರಾರಂಭಿಸಿದ್ದಾರೆ ಎಂದು ಕೆಲವು ವರದಿಗಳು ಪ್ರಕಟವಾಗಿದೆ.

ಹೊಸ ಹ್ಯುಂಡೈ ಐ20 ಎನ್ ಲೈನ್ ಕಾರು ಮುಂದಿನ ವರ್ಷದ ಆರಂಭದಲ್ಲಿ ಯುರೋಪಿಯನ್ ಮಾರುಕಟ್ಟೆಗಳಲ್ಲಿ ಬಿಡುಗಡೆಯಾಗಲಿದೆ. ಆದರೆ ಈ ಹೊಸ ಹ್ಯುಂಡೈ ಐ20 ಎನ್ ಲೈನ್ ಕಾರು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವ ಸಾಧ್ಯತೆಗ್


Click it and Unblock the Notifications