ಯುಎಸ್ಎ ಮಾರುಕಟ್ಟೆಗಾಗಿ ಕೊನಾ ಇವಿ ಸ್ಪೆಷಲ್ ಎಡಿಷನ್ ಅನಾವರಣಗೊಳಿಸಿದ ಹ್ಯುಂಡೈ

ಕೊನಾ ಎಲೆಕ್ಟ್ರಿಕ್ ಎಸ್‌ಯುವಿ ಮಾರಾಟದಲ್ಲಿ ಹೊಸ ದಾಖಲೆಗೆ ಕಾರಣವಾಗಿರುವ ಹ್ಯುಂಡೈ ಕಂಪನಿಯು ಅತಿ ಕಡಿಮೆ ಅವಧಿಯಲ್ಲಿ 1 ಲಕ್ಷ ಮಾರಾಟ ಗುರಿ ತಲುಪಿದ್ದು, ಇದೀಗ ಕೊನಾ ಕಾರು ಮಾದರಿಯಲ್ಲಿ ಗ್ರಾಹಕರ ಬೇಡಿಕೆ ಅನುಸಾರವಾಗಿ ಸ್ಪೆಷಲ್ ಎಡಿಷನ್ ಅನಾವರಣಗೊಳಿಸಿದೆ.

ಯುಎಸ್ಎ ಮಾರುಕಟ್ಟೆಗಾಗಿ ಕೊನಾ ಸ್ಪೆಷಲ್ ಎಡಿಷನ್ ಅನಾವರಣಗೊಳಿಸಿದ ಹ್ಯುಂಡೈ

ಹ್ಯುಂಡೈ ನಿರ್ಮಾಣದ ಕೊನಾ ಎಲೆಕ್ಟ್ರಿಕ್ ಎಸ್‌ಯುವಿ ಕಾರು ಈಗಾಗಲೇ ಭಾರತದಲ್ಲೂ ಮಾರಾಟವಾಗುತ್ತಿದ್ದು, ವಿದೇಶಿ ಮಾರುಕಟ್ಟೆಗಳಲ್ಲೂ ಭಾರೀ ಬೇಡಿಕೆ ಪಡೆದುಕೊಳ್ಳುತ್ತಿದೆ. ಭಾರತವನ್ನು ಹೊರತುಪಡಿಸಿ ಯುರೋಪ್ ಮತ್ತು ಯುಎಸ್ಎ ಮಾರುಕಟ್ಟೆಗಾಗಿ ಹೊಸ ಕಾರಿನಲ್ಲಿ ನೈಟ್ ಎಡಿಷನ್ ಎನ್ನುವ ಸ್ಪೆಷಲ್ ಆವೃತ್ತಿಯನ್ನು ಬಿಡುಗಡೆ ಮಾಡಲಾಗುತ್ತಿದ್ದು, ಪ್ರಸ್ತುತ ಮಾರುಕಟ್ಟೆಯಲ್ಲಿರುವ ಸಾಮಾನ್ಯ ಕೊನಾ ಕಾರಿಗಿಂತಲೂ ಹೊಸ ಕಾರು ಕೆಲವು ಪ್ರೀಮಿಯಂ ಫೀಚರ್ಸ್‌ನೊಂದಿಗೆ ಅಭಿವೃದ್ದಿಗೊಂಡಿದೆ.

ಯುಎಸ್ಎ ಮಾರುಕಟ್ಟೆಗಾಗಿ ಕೊನಾ ಸ್ಪೆಷಲ್ ಎಡಿಷನ್ ಅನಾವರಣಗೊಳಿಸಿದ ಹ್ಯುಂಡೈ

ಪ್ರೀಮಿಯಂ ಫೀಚರ್ಸ್ ಜೊತೆಗೆ ಕೆಲವು ಹೆಚ್ಚುವರಿ ಬಣ್ಣಗಳ ಆಯ್ಕೆಗಳನ್ನು ಪಡೆದುಕೊಂಡಿದ್ದು, ಟೆಸ್ಲಾ ಕಾರು ಮಾದರಿಗಳಿಗೆ ಮತ್ತಷ್ಟು ಪೈಪೋಟಿ ನೀಡುವುದಕ್ಕಾಗಿ ಸ್ಪೆಷನ್ ಎಡಿಷನ್ ಬಿಡುಗಡೆ ಮಾಡಲಾಗುತ್ತಿದೆ.

ಯುಎಸ್ಎ ಮಾರುಕಟ್ಟೆಗಾಗಿ ಕೊನಾ ಸ್ಪೆಷಲ್ ಎಡಿಷನ್ ಅನಾವರಣಗೊಳಿಸಿದ ಹ್ಯುಂಡೈ

ಸ್ಪೆಷಲ್ ಎಡಿಷನ್ ಕೊನಾ ಕಾರು ಮಾದರಿಯು ಮುಂದಿನ ಕೆಲವೇ ದಿನಗಳಲ್ಲಿ ಬಿಡುಗಡೆಯಾಗುತ್ತಿದ್ದು, ಹೊಸ ಕಾರಿನ ಮೈಲೇಜ್ ಪ್ರಮಾಣವು ಪ್ರಸ್ತುತ ಮಾರುಕಟ್ಟೆಯಲ್ಲಿರುವ ಸಾಮಾನ್ಯ ಮಾದರಿಯೆಂತೆ ಮುಂದುವರಿಸಲಾಗಿದೆ.

ಯುಎಸ್ಎ ಮಾರುಕಟ್ಟೆಗಾಗಿ ಕೊನಾ ಸ್ಪೆಷಲ್ ಎಡಿಷನ್ ಅನಾವರಣಗೊಳಿಸಿದ ಹ್ಯುಂಡೈ

ಕೊನಾ ಇವಿ ಕಾರು ದುಬಾರಿ ಬೆಲೆ ನಡುವೆಯು ಅತ್ಯುತ್ತಮ ತಾಂತ್ರಿಕ ಅಂಶಗಳು ಮತ್ತು ಮೈಲೇಜ್ ವಿಚಾರವಾಗಿ ಗ್ರಾಹಕರ ಆಯ್ಕೆಯಲ್ಲಿ ಮುಂಚೂಣಿ ಸಾಧಿಸುತ್ತಿದ್ದು, ಸಾಮಾನ್ಯ ಕಾರುಗಳಿಂತಲೂ ಶೇ.80ರಷ್ಟು ಕಡಿಮೆ ರನ್ನಿಂಗ್ ಕಾಸ್ಟ್ ಹೊಂದಿರುವ ಕೊನಾ ಕಾರು ಪ್ರತಿ ಕಿ.ಮೀ ಗೆ ರೂ.1 ಕ್ಕಿಂತಲೂ ಕಡಿಮೆ ನಿರ್ವಹಣಾ ವೆಚ್ಚ ಹೊಂದಿದೆ.

ಯುಎಸ್ಎ ಮಾರುಕಟ್ಟೆಗಾಗಿ ಕೊನಾ ಸ್ಪೆಷಲ್ ಎಡಿಷನ್ ಅನಾವರಣಗೊಳಿಸಿದ ಹ್ಯುಂಡೈ

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಎರಡು ಮಾದರಿಯ ಬ್ಯಾಟರಿ ಆಯ್ಕೆಯನ್ನು ಹೊಂದಿರುವ ಕೊನಾ ಎಲೆಕ್ಟ್ರಿಕ್ ಕಾರು 64kWh ಮತ್ತು 39.2kWh ಬ್ಯಾಟರಿ ವೈಶಿಷ್ಟ್ಯತೆಗಳನ್ನು ಹೊಂದಿದ್ದು, ಭಾರತದಲ್ಲಿ ಸದ್ಯಕ್ಕೆ 39.2kWh ಬ್ಯಾಟರಿ ಹೊಂದಿರುವ ಮಾದರಿಯನ್ನು ಮಾತ್ರವೇ ಮಾರಾಟ ಮಾಡಲಾಗುತ್ತಿದೆ.

ಯುಎಸ್ಎ ಮಾರುಕಟ್ಟೆಗಾಗಿ ಕೊನಾ ಸ್ಪೆಷಲ್ ಎಡಿಷನ್ ಅನಾವರಣಗೊಳಿಸಿದ ಹ್ಯುಂಡೈ

ಕೇವಲ 52 ನಿಮಿಷಗಳಲ್ಲಿ ಶೇ.80 ರಷ್ಟು ಬ್ಯಾಟರಿ ಚಾರ್ಜ್‌ ಮಾಡಬಲ್ಲ ಡಿಸಿ ಫಾಸ್ಟ್ ಚಾರ್ಜರ್ ಸೌಲಭ್ಯವು ಈ ಕಾರಿನಲ್ಲಿದ್ದು, 39.2kWh ಬ್ಯಾಟರಿ ಸಾಮರ್ಥ್ಯದೊಂದಿಗೆ ಪ್ರತಿ ಚಾರ್ಜ್‌ಗೆ ಗರಿಷ್ಠ 452 ಕಿ.ಮಿ ಮೈಲೇಜ್ ಹಿಂದಿರುಗಿಸಬಲ್ಲದು.

ಯುಎಸ್ಎ ಮಾರುಕಟ್ಟೆಗಾಗಿ ಕೊನಾ ಸ್ಪೆಷಲ್ ಎಡಿಷನ್ ಅನಾವರಣಗೊಳಿಸಿದ ಹ್ಯುಂಡೈ

ಹ್ಯುಂಡೈ ಹೊಸ ಎಲೆಕ್ಟ್ರಿಕ್ ಕಾರು ಪರ್ಫಾಮೆನ್ಸ್ ಕಾರುಗಳಂತೆಯೇ ಉತ್ತಮ ಮುನ್ನಡೆ ಕಾಯ್ದುಕೊಂಡಿದ್ದು, 100kW ಫ್ರಂಟ್ ವೀಲ್ಹ್ ಮೋಟಾರ್ ಪವರ್ ಮೂಲಕ 131-ಬಿಎಚ್‌ಪಿ ಮತ್ತು 395-ಎನ್ಎಂ ಟಾರ್ಕ್ ಉತ್ಪಾದನೆಯೊಂದಿಗೆ ಕೇವಲ 9.7-ಸೇಕೆಂಡುಗಳಲ್ಲಿ ಸೊನ್ನೆಯಿಂದ 100ಕಿ.ಮಿ ವೇಗ ತಲುಪಬಲ್ಲದು.

MOST READ: ರೂ.5 ಲಕ್ಷಕ್ಕಿಂತ ಕಡಿಮೆ ಬೆಲೆಯ ಜನಪ್ರಿಯ ಕಾರುಗಳಿವು

ಯುಎಸ್ಎ ಮಾರುಕಟ್ಟೆಗಾಗಿ ಕೊನಾ ಸ್ಪೆಷಲ್ ಎಡಿಷನ್ ಅನಾವರಣಗೊಳಿಸಿದ ಹ್ಯುಂಡೈ

ಕೊನಾ ಕಾರು 155 ಕಿ.ಮಿ ಟಾಪ್ ಸ್ಪೀಡ್ ಸೌಲಭ್ಯವನ್ನು ಹೊಂದಿದ್ದು, ಪೂರ್ಣ ಪ್ರಮಾಣದಲ್ಲಿ ಬ್ಯಾಟರಿ ಚಾರ್ಜ್‌ ಆಗಲು ಕನಿಷ್ಠ 8 ಗಂಟೆ ತೆಗೆದುಕೊಳ್ಳಲಿದೆ. ಹೀಗಾಗಿ ಕೋನಾ ಕಾರಿನಲ್ಲಿ ಫಾಸ್ಟ್ ಚಾರ್ಜಿಂಗ್ ಸೌಲಭ್ಯವು ಆಕರ್ಷಕವಾಗಿದೆ.

ಯುಎಸ್ಎ ಮಾರುಕಟ್ಟೆಗಾಗಿ ಕೊನಾ ಸ್ಪೆಷಲ್ ಎಡಿಷನ್ ಅನಾವರಣಗೊಳಿಸಿದ ಹ್ಯುಂಡೈ

ವಾರಂಟಿ ಮತ್ತು ಬೆಲೆ(ಎಕ್ಸ್‌ಶೋರೂಂ ಪ್ರಕಾರ)

ಹೊಸ ಕಾರು ತುಸು ದುಬಾರಿ ಎನ್ನಿಸಲಿದ್ದು, ಕಾರಿನ ಬೆಲೆಯನ್ನು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 23.90 ಲಕ್ಷಕ್ಕೆ ನಿಗದಿಪಡಿಸಲಾಗಿದೆ. ಹಾಗೆಯೇ ಹೊಸ ಕಾರಿನ ಮೇಲೆ ರೂ.1.50 ಲಕ್ಷ ತೆರಿಗೆ ವಿನಾಯ್ತಿ ಸಹ ಸಿಗಲಿದ್ದು, ಬ್ಯಾಟರಿ ಮೇಲೆ 8 ವರ್ಷಗಳ ವಾರಂಟಿ ನೀಡಲಾಗಿದೆ.

MOST READ: ಪ್ರತಿ ಚಾರ್ಜ್‌ಗೆ 480 ಕಿ.ಮೀ ಮೈಲೇಜ್ ನೀಡುವ ಎಲೆಕ್ಟ್ರಿಕ್ ಎಸ್‌ಯುವಿ ಬಿಡುಗಡೆ ಮಾಡಲಿದೆ ನಿಸ್ಸಾನ್

ಯುಎಸ್ಎ ಮಾರುಕಟ್ಟೆಗಾಗಿ ಕೊನಾ ಸ್ಪೆಷಲ್ ಎಡಿಷನ್ ಅನಾವರಣಗೊಳಿಸಿದ ಹ್ಯುಂಡೈ

ಕೊನಾ ಕಾರು ಬೆಲೆ ತುಸು ದುಬಾರಿಯಾಗಿದ್ದರೂ ಸಹ ಉತ್ತಮ ಮೈಲೇಜ್ ಮತ್ತು ಪ್ರೀಮಿಯಂ ಫೀಚರ್ಸ್‌ಗಳಿಂದಾಗಿ ಖರೀದಿಗೆ ಉತ್ತಮ ಎನ್ನಿಸಲಿದ್ದು, ಸ್ಪೋರ್ಟಿ ವಿನ್ಯಾಸದ ಜೊತೆಗೆ ಕಾಸ್‌ಕ್ಲಾಡಿಂಗ್ ಫ್ರಂಟ್ ಗ್ರಿಲ್, ಬಾಡಿ ಕಲರ್ ಬಂಪರ್, ಸ್ಲಿಕ್ ಎಲ್ಇಡಿ ಟೈಲ್ ಲೈಟ್ಸ್, ಶಾರ್ಪ್ ಶೋಲ್ಡ್‌ರ್ ಲೈನ್ಸ್, ರಿಯರ್ ಸ್ಪಾಯ್ಲರ್ ನೀಡಿರುವುದು ಹೊಸ ಕಾರಿಗೆ ಮತ್ತಷ್ಟು ಆಕರ್ಷಣೆಯಾಗುವಂತೆ ಮಾಡಿದೆ.

Article Published On: Friday, July 24, 2020, 16:43 [IST]
English summary
Hyundai Unveiled Special Night Edition For Kona In US Market. Read in kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+