ಪವರ್‌ಫುಲ್ ಡೀಸೆಲ್ ಎಂಜಿನ್‌ನೊಂದಿಗೆ ಬಿಎಸ್-6 ಹ್ಯುಂಡೈ ವೆನ್ಯೂ ಬಿಡುಗಡೆ

ಹ್ಯುಂಡೈ ಇಂಡಿಯಾ ಸಂಸ್ಥೆಯು ತನ್ನ ಜನಪ್ರಿಯ ಕಂಪ್ಯಾಕ್ಟ್ ಎಸ್‌ಯುವಿ ಆವೃತ್ತಿಯಾದ ವೆನ್ಯೂ ಬಿಎಸ್-6 ಆವೃತ್ತಿಯನ್ನು ಬಿಡುಗಡೆಗೊಳಿಸಿದ್ದು, ಹೊಸ ಕಾರು ಈ ಹಿಂದಿಗಿಂತಲೂ ಬಲಿಷ್ಠ ಎಂಜಿನ್ ಆಯ್ಕೆ ಪಡೆದುಕೊಂಡಿದೆ.

ಪವರ್‌ಫುಲ್ ಡೀಸೆಲ್ ಎಂಜಿನ್‌ನೊಂದಿಗೆ ಬಿಎಸ್-6 ಹ್ಯುಂಡೈ ವೆನ್ಯೂ ಬಿಡುಗಡೆ

ವೆನ್ಯೂ ಬಿಎಸ್-6 ಆವೃತ್ತಿಯಲ್ಲಿ ಹೊಸ ಎಮಿಷನ್ ನಿಯಮ ಅನುಗುಣವಾಗಿ ಎಂಜಿನ್ ಆಯ್ಕೆಯನ್ನು ಬದಲಾವಣೆಗೊಳಿಸಿದ್ದು, 1.4-ಲೀಟರ್ ಡೀಸೆಲ್ ಎಂಜಿನ್ ಮಾದರಿಯನ್ನು ಸ್ಥಗಿತಗೊಳಿಸಿ ಸಂಸ್ಥೆಯು ಹೊಸದಾಗಿ 1.5-ಲೀಟರ್ ಡೀಸೆಲ್ ಎಂಜಿನ್ ನೀಡಲಾಗಿದೆ. ಈ ಮೂಲಕ ಕ್ರೆಟಾ ಮತ್ತು ಸೆಲ್ಟೊಸ್ ಡೀಸೆಲ್ ಕಾರುಗಳಿಗೆ ಸರಿಸಮನಾಗಿರುವ ವೆನ್ಯೂ ಹೊಸ ಕಾರು ಹೊಸ ಪೆಟ್ರೋಲ್ ಎಂಜಿನ್‌ನಲ್ಲೂ ಮಹತ್ವದ ಬದಲಾವಣೆಯೊಂದಿಗೆ ದುಬಾರಿ ಬೆಲೆ ಪಡೆದುಕೊಂಡಿದೆ.

ಪವರ್‌ಫುಲ್ ಡೀಸೆಲ್ ಎಂಜಿನ್‌ನೊಂದಿಗೆ ಬಿಎಸ್-6 ಹ್ಯುಂಡೈ ವೆನ್ಯೂ ಬಿಡುಗಡೆ

ಬಿಎಸ್-6 ವೈಶಿಷ್ಟ್ಯತೆಯ ನಂತರ ಹ್ಯುಂಡೈ ಕಾರಿನಲ್ಲಿ 1.2-ಲೀಟರ್ ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್ ಖರೀದಿಗೆ ಲಭ್ಯವಿದ್ದು, ಪರ್ಫಾಮೆನ್ಸ್ ಪ್ರಿಯರಿಗಾಗಿ ಹೈ ಎಂಡ್ ಆವೃತ್ತಿಯಲ್ಲಿ 1.0-ಲೀಟರ್ ಟರ್ಬೋ ಪೆಟ್ರೋಲ್ ಎಂಜಿನ್ ಪಡೆದುಕೊಂಡಿದೆ.

ಪವರ್‌ಫುಲ್ ಡೀಸೆಲ್ ಎಂಜಿನ್‌ನೊಂದಿಗೆ ಬಿಎಸ್-6 ಹ್ಯುಂಡೈ ವೆನ್ಯೂ ಬಿಡುಗಡೆ

1.2-ಲೀಟರ್ ಕಪ್ಪಾ ಪೆಟ್ರೋಲ್ ಮತ್ತು 1.0-ಲೀಟರ್ ಟರ್ಬೋ ಪೆಟ್ರೋಲ್ ಮಾದರಿಯು ಈ ಹಿಂದಿನಂತೆಯೇ ಮುಂದುವರಿಸಲಾಗಿದ್ದರೂ ಹೊಸ ಎಮಿಷನ್ ನಿಯಮದಿಂದಾಗಿ ಪರ್ಫಾಮೆನ್ಸ್‌ನಲ್ಲಿ ತುಸು ಬದಲಾವಣೆಯಾಗಿದ್ದು, ಹೊಸದಾಗಿ ಪರಿಚಯಿಸಿರುವ 1.5-ಲೀಟರ್ ಡೀಸೆಲ್ ಎಂಜಿನ್ ಅನ್ನು ಸದ್ಯ ಮಾರುಕಟ್ಟೆಯಲ್ಲಿರುವ ಸೆಲ್ಟೊಸ್‌ನಿಂದ ಎರವಲು ಪಡೆಯಲಾಗಿದೆ.

ಪವರ್‌ಫುಲ್ ಡೀಸೆಲ್ ಎಂಜಿನ್‌ನೊಂದಿಗೆ ಬಿಎಸ್-6 ಹ್ಯುಂಡೈ ವೆನ್ಯೂ ಬಿಡುಗಡೆ

ದಕ್ಷಿಣ ಕೊರಿಯಾದಲ್ಲಿ ಸಹೋದರ ಸಂಸ್ಥೆಗಳಾಗಿರುವ ಹ್ಯುಂಡೈ ಮತ್ತು ಕಿಯಾ ಮೋಟಾರ್ಸ್ ಸಂಸ್ಥೆಗಳು ಭಾರತದಲ್ಲೂ ಕೂಡಾ ಎಂಜಿನ್ ಮತ್ತು ತಂತ್ರಜ್ಞಾನ ಎರವಲು ಪಡೆದುಕೊಳ್ಳುತ್ತಿದ್ದು, ಕಳೆದ ಅಗಸ್ಟ್‌ನಲ್ಲಿ ಬಿಡುಗಡೆ ಮಾಡಲಾದ ಸೆಲ್ಟೊಸ್ ಡೀಸೆಲ್ ಎಂಜಿನ್ ಮಾದರಿಯನ್ನೇ ಇದೀಗ ಹ್ಯುಂಡೈ ಹೊಸ ಕಾರುಗಳಿಗೂ ಬಳಕೆ ಮಾಡಿಕೊಳ್ಳುತ್ತಿದೆ. ಬಿಎಸ್-6 ನಿಯಮದಿಂದಾಗಿ 1.4-ಲೀಟರ್ ಡೀಸೆಲ್ ಎಂಜಿನ್ ಅನ್ನು ಸ್ಥಗಿತಗೊಳಿಸಲಾಗಿದ್ದು, ಇದರ ಜೊತೆಗೆ 1.6-ಲೀಟರ್ ಡೀಸೆಲ್ ಎಂಜಿನ್ ಅನ್ನು ಸಹ ಸ್ಥಗಿತಗೊಳಿಸಲಾಗಿದೆ.

ಪವರ್‌ಫುಲ್ ಡೀಸೆಲ್ ಎಂಜಿನ್‌ನೊಂದಿಗೆ ಬಿಎಸ್-6 ಹ್ಯುಂಡೈ ವೆನ್ಯೂ ಬಿಡುಗಡೆ

ಹೀಗಾಗಿ ಮುಂಬರುವ ಹ್ಯುಂಡೈ ಹೊಸ ಕಾರುಗಳಲ್ಲಿ 1.0-ಲೀಟರ್ ಟರ್ಬೋ ಪೆಟ್ರೋಲ್, 1.2-ಲೀಟರ್ ಕಪ್ಪಾ ಪೆಟ್ರೋಲ್, 1.5-ಲೀಟರ್ ಪೆಟ್ರೋಲ್ ಎಂಜಿನ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್ ನೀಡಲಿದ್ದು, ಈ ಹಿಂದಿನ 1.4-ಲೀಟರ್ ಡೀಸೆಲ್ ಮತ್ತು 1.6-ಲೀಟರ್ ಎಂಜಿನ್‌ಗಳು ಇನ್ಮುಂದೆ ಖರೀದಿಗೆ ಲಭ್ಯವಿರುವುದಿಲ್ಲ.

ಪವರ್‌ಫುಲ್ ಡೀಸೆಲ್ ಎಂಜಿನ್‌ನೊಂದಿಗೆ ಬಿಎಸ್-6 ಹ್ಯುಂಡೈ ವೆನ್ಯೂ ಬಿಡುಗಡೆ

ಇನ್ನು ಬಿಎಸ್-6 ವೆನ್ಯೂ ಕಾರು ಬಿಎಸ್-6 ನಂತರ ಆರಂಭಿಕವಾಗಿ ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 6.70 ಲಕ್ಷದಿಂದ(ಪೆಟ್ರೋಲ್) ಟಾಪ್ ಎಂಡ್ ಮಾದರಿಯು ರೂ.11.50 ಲಕ್ಷ(ಪೆಟ್ರೋಲ್) ಬೆಲೆ ಪಡೆದುಕೊಂಡಿದ್ದು, ಹೊಸದಾಗಿ ಪರಿಚಯಿಸಲಾಗಿರುವ 1.5-ಲೀಟರ್ ಮಾದರಿಯು ಆರಂಭಿಕವಾಗಿ ಎಕ್ಸ್‌ಶೋರೂಂ ಪ್ರಕಾರ ರೂ. 8.09 ಲಕ್ಷ ಮತ್ತು ಟಾಪ್ ಎಂಡ್ ಮಾದರಿಯು ರೂ.11.49 ಲಕ್ಷ ಬೆಲೆ ಹೊಂದಿದೆ.

ಪವರ್‌ಫುಲ್ ಡೀಸೆಲ್ ಎಂಜಿನ್‌ನೊಂದಿಗೆ ಬಿಎಸ್-6 ಹ್ಯುಂಡೈ ವೆನ್ಯೂ ಬಿಡುಗಡೆ

ಹೊಸ ಎಂಜಿನ್ ನಂತರ ವೆನ್ಯೂ ಕಾರು ರೂ. 19 ಸಾವಿರದಿಂದ ರೂ.55 ಸಾವಿರದಷ್ಟು ಹೆಚ್ಚಳವಾಗಿದ್ದು, ಎಂಜಿನ್ ಹೊರತಾಗಿ ಹೊಸ ಕಾರಿನಲ್ಲಿ ಯಾವುದೇ ಹೆಚ್ಚುವರಿ ತಾಂತ್ರಿಕ ಅಂಶಗಳನ್ನು ಬದಲಾವಣೆ ಮಾಡಲಾಗಿಲ್ಲ.

ಪವರ್‌ಫುಲ್ ಡೀಸೆಲ್ ಎಂಜಿನ್‌ನೊಂದಿಗೆ ಬಿಎಸ್-6 ಹ್ಯುಂಡೈ ವೆನ್ಯೂ ಬಿಡುಗಡೆ

ವೆನ್ಯೂ ಸದ್ಯ ಹ್ಯುಂಡೈ ನಿರ್ಮಾಣದ ಇತರೆ ಕಾರುಗಳಿಂತಲೂ ಅತಿ ವಿನೂತನ ತಂತ್ರಜ್ಞಾನ ಸೌಲಭ್ಯಗಳನ್ನು ಹೊತ್ತು ಬಂದಿದ್ದು, ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಒಟ್ಟು 5 ವೆರಿಯೆಂಟ್‌ಗಳಲ್ಲಿ ಲಭ್ಯವಿರುವ ಹೊಸ ಕಾರು ಹಲವು ಪ್ರೀಮಿಯಂ ಫೀಚರ್ಸ್ ಪಡೆದುಕೊಂಡಿದೆ.

ಪವರ್‌ಫುಲ್ ಡೀಸೆಲ್ ಎಂಜಿನ್‌ನೊಂದಿಗೆ ಬಿಎಸ್-6 ಹ್ಯುಂಡೈ ವೆನ್ಯೂ ಬಿಡುಗಡೆ

ಪ್ರೀಮಿಯಂ ಸೌಲಭ್ಯಗಳ ಜೊತೆಗೆ ಹೊಸ ಕಾರಿನಲ್ಲಿ ಸುರಕ್ಷತೆಗೂ ಹೆಚ್ಚಿನ ಒತ್ತು ನೀಡಲಾಗಿದ್ದು, ಕ್ರೂಸ್ ಕಂಟ್ರೋಲ್, ಫ್ರಂಟ್ ವೀಲ್ಹ್ ಡಿಸ್ಕ್ ಬ್ರೇಕ್, ಆರು ಏರ್‌ಬ್ಯಾಗ್, ಹಿಲ್ ಅಸಿಸ್ಟ್ ಕಂಟ್ರೋಲ್, ಬ್ರೇಕ್ ಅಸಿಸ್ಟ್ ಕಂಟ್ರೋಲ್, ಎಬಿಎಸ್, ಇಬಿಡಿ, ಇಎಸ್‌ಸಿ, ವಿಎಸ್ಎಂ, ಸ್ಪೀಡ್ ಸೆನ್ಸಾರಿಂಗ್ ಆಟೋ ಡೋರ್ ಲಾಕ್, ISOFIX ಸೀಟ್, ಹೊಂದಿರುವ ವೆನ್ಯೂ ಕಾರು ಕಂಪ್ಯಾಕ್ಟ್ ಎಸ್‌ಯುವಿ ಕಾರುಗಳಲ್ಲೇ ವಿಶೇಷ ಎನ್ನಿಸಲಿದೆ.

More from DriveSpark

Article Published On: Tuesday, February 18, 2020, 20:02 [IST]
English summary
Hyundai Venue BS6 Launched in India. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+