ಅಮೆರಿಕಾದಲ್ಲಿ ಸ್ಥಗಿತವಾಯ್ತು ಹ್ಯುಂಡೈ ವೆನ್ಯೂ ಮ್ಯಾನುವಲ್ ವೆರಿಯೆಂಟ್

ಹ್ಯುಂಡೈ ಕಂಪನಿಯ ಸರಣಿಯಲ್ಲಿ ಜನಪ್ರಿಯ ಮಾದರಿಗಳಲ್ಲಿ ವೆನ್ಯೂ ಕೂಡ ಒಂದಾಗಿದೆ. ಹ್ಯುಂಡೈ ವೆನ್ಯೂ ಕಾಂಪ್ಯಾಕ್ಟ್ ಎಸ್‍ಯುವಿಯು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿಯು ಸಾಕಷ್ಟು ಜನಪ್ರಿಯತೆಯನ್ನು ಗಳಿಸಿದೆ.

ಅಮೆರಿಕಾದಲ್ಲಿ ಸ್ಥಗಿತವಾಯ್ತು ಹ್ಯುಂಡೈ ವೆನ್ಯೂ ಮ್ಯಾನುವಲ್ ವೆರಿಯೆಂಟ್

ಅಮೆರಿಕಾ ಮಾರುಕಟ್ಟೆಯಲ್ಲಿ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಹೆಚ್ಚು ಜನಪ್ರಿಯವಾಗಿರುವುದರಿಂದ ಮ್ಯಾನುವಲ್ ಗೇರ್ ಬಾಕ್ಸ್ ಬೇಡಿಕೆಯು ತುಂಬಾ ಕಡಿಮೆಯಾಗಿದೆ. ಇದರಿಂದಾಗಿ ಹ್ಯುಂಡೈ ತನ್ನ ಎಂಟ್ರಿ ಲೆವೆಲ್ ವೆನ್ಯೂ ಮ್ಯಾನುವಲ್ ವೆರಿಯೆಂಟ್ ಅನ್ನು ಸ್ಥಗಿತಗೊಳಿಸಲು ನಿರ್ಧರಿಸಿದೆ. ಅಮೆರಿಕಾ ಮಾರುಕಟ್ಟೆಯಲ್ಲಿ ಹ್ಯುಂಡೈ ವೆನ್ಯೂ ಎಸ್ಇ ವೆರಿಯೆಂಟ್ ಸಿವಿಟಿಯೊಂದಿಗೆ ಆದರೆ ಮಿಡ್-ಸ್ಪೆಕ್ ಎಸ್ಇಎಲ್ ಮತ್ತು ರೇಂಜ್-ಟಾಪಿಂಗ್ ಡೆನಿಮ್ ವೆರಿಯೆಂಟ್ ಗಳಲ್ಲಿ ಮಾತ್ರ ಲಭ್ಯವಿರುತ್ತದೆ.

ಅಮೆರಿಕಾದಲ್ಲಿ ಸ್ಥಗಿತವಾಯ್ತು ಹ್ಯುಂಡೈ ವೆನ್ಯೂ ಮ್ಯಾನುವಲ್ ವೆರಿಯೆಂಟ್

ಅಮೆರಿಕಾದಲ್ಲಿ ಈ ಹ್ಯುಂಡೈ ವೆನ್ಯೂ 1.6-ಲೀಟರ್ ಪೆಟ್ರೋಲ್ ಎಂಜಿನ್ ನೊಂದಿಗೆ ಮಾತ್ರ ಲಭ್ಯವಿದೆ. ಈ ಎಂಜಿನ್ 121 ಬಿಹೆಚ್‍ಪಿ ಪವರ್ ಮತ್ತು 113 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ.

MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್‍ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

ಅಮೆರಿಕಾದಲ್ಲಿ ಸ್ಥಗಿತವಾಯ್ತು ಹ್ಯುಂಡೈ ವೆನ್ಯೂ ಮ್ಯಾನುವಲ್ ವೆರಿಯೆಂಟ್

ಇನ್ನು ಹ್ಯುಂಡೈ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಸೋದರಸಂಬಂಧಿ ಎಂದೇ ಹೇಳುವ ಕಿಯಾ ಸೊನೆಟ್ ಎಸ್‍ಯುವಿಗೆ ಪೈಪೋಟಿ ನೀಡುತ್ತದೆ. ಸೊನೆಟ್ ಕಾಂಪ್ಯಾಕ್ಟ್ ಎಸ್‍ಯುವಿಗೆ ಹೆಚ್ಚಿನ ಪೈಪೋಟಿಯನ್ನು ನೀಡಲು ಹ್ಯುಂಡೈ ಕಂಪನಿಯು ತನ್ನ ವೆನ್ಯೂ ಎಸ್‍ಯುವಿಯ ಸ್ಪೋರ್ಟ್ ಮಾದರಿಯನ್ನು ಇತ್ತೀಚೆಗೆ ಬಿಡುಗಡೆಗೊಳಿಸಿತು.

ಅಮೆರಿಕಾದಲ್ಲಿ ಸ್ಥಗಿತವಾಯ್ತು ಹ್ಯುಂಡೈ ವೆನ್ಯೂ ಮ್ಯಾನುವಲ್ ವೆರಿಯೆಂಟ್

ಹ್ಯುಂಡೈ ವೆನ್ಯೂ ಸ್ಪೋರ್ಟ್ ಎಸ್‍ಯುವಿಯು ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ಮಾರಾಟ ಮಾಡಲಾಗುತ್ತದೆ. ಟಾಪ್ ಎಂಡ್ ಮಾದರಿಯಾದ ಎಸ್‌ಎಕ್ಸ್ ಪ್ಲಸ್ ಕಾರಿನಲ್ಲಿ ಹೊಸ ಪ್ಯಾಡಲ್ ಶಿಫ್ಟರ್‌ನೊಂದಿಗೆ 7 ಸ್ಪೀಡಿನ ಡಿಸಿಟಿ ಗೇರ್‌ಬಾಕ್ಸ್ ನೀಡಲಾಗಿದೆ. ಹೊಸ ಎಸ್‌ಎಂಟಿ ಗೇರ್‌ಬಾಕ್ಸ್ ಎಸ್‌ಎಕ್ಸ್, ಎಸ್‌ಎಕ್ಸ್(ಒ) ಮಾದರಿಗಳಲ್ಲಿ ಅಳವಡಿಸಲಾಗಿದೆ.

MOST READ: ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಹೊಸ ಸ್ಕೋಡಾ ಕೊಡಿಯಾಕ್ ಎಸ್‍‍‍ಯುವಿ

ಅಮೆರಿಕಾದಲ್ಲಿ ಸ್ಥಗಿತವಾಯ್ತು ಹ್ಯುಂಡೈ ವೆನ್ಯೂ ಮ್ಯಾನುವಲ್ ವೆರಿಯೆಂಟ್

ಡೀಸೆಲ್ ಎಂಜಿನ್ ಅನ್ನು 6 ಸ್ಪೀಡಿನ ಮ್ಯಾನುವಲ್ ಗೇರ್ ಬಾಕ್ಸ್ ಹೊಂದಿರುವ ಎಸ್ಎಕ್ಸ್ ಹಾಗೂ ಎಸ್ಎಕ್ಸ್ (ಒ) ಮಾದರಿಗಳಲ್ಲಿ ಅಳವಡಿಸಲಾಗಿದೆ. 1.5-ಲೀಟರಿನ ಡೀಸೆಲ್ ಎಂಜಿನ್, 98.4 ಬಿಹೆಚ್‌ಪಿ ಪವರ್ ಹಾಗೂ 240 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಅಮೆರಿಕಾದಲ್ಲಿ ಸ್ಥಗಿತವಾಯ್ತು ಹ್ಯುಂಡೈ ವೆನ್ಯೂ ಮ್ಯಾನುವಲ್ ವೆರಿಯೆಂಟ್

ಹೊಸ ಹ್ಯುಂಡೈ ವೆನ್ಯೂ ಸ್ಪೋರ್ಟ್ ಕಾಂಪ್ಯಕ್ಟ್ ಎಸ್‍ಯುವಿಯಲ್ಲಿ ಗ್ರಿಲ್, ವ್ಹೀಲ್ ಆರ್ಕ್, ರೂಫ್ ರೇಲ್, ಸ್ಪೋರ್ಟ್ ಬ್ಯಾಡ್ಜ್‌, ರೆಡ್ ಬ್ರೇಕ್ ಕ್ಯಾಲಿಪರ್‌, ಹೊಸ ಗ್ರೇ ಬಂಪರ್ ಗಾರ್ನಿಷ್ ಗಳನ್ನು ಹೊಂದಿದೆ. ಇದರ ಜೊತೆಗೆ ಹ್ಯುಂಡೈ ಕಂಪನಿಯು ಹೊಸ ಡ್ಯುಯಲ್ ಟೋನ್ ಟೈಟಾನ್ ಗ್ರೇ, ಫ್ಯಾಂಟಮ್ ಬ್ಲ್ಯಾಕ್ ರೂಫ್ ಗಳನ್ನು ನೀಡಿದೆ.

MOST READ: ಬಿಡುಗಡೆಯ ಸನಿಹದಲ್ಲಿ ಹೊಸ ಮಾರುತಿ ಸುಜುಕಿ ಸೆಲೆರಿಯೊ

ಅಮೆರಿಕಾದಲ್ಲಿ ಸ್ಥಗಿತವಾಯ್ತು ಹ್ಯುಂಡೈ ವೆನ್ಯೂ ಮ್ಯಾನುವಲ್ ವೆರಿಯೆಂಟ್

ಇನ್ನು ಇಂಟಿರಿಯರ್ ನಲ್ಲಿ ಹೊಸ ಫ್ಲಾಟ್ ಬಾಟಮ್ ಸ್ಟೀಯರಿಂಗ್ ವ್ಹೀಲ್, ರೆಡ್ ಸ್ಟಿಚಿಂಗ್, ಹೊಸ ಮೆಟಲ್ ಫೂಟ್ ಪೆಡಲ್, ಡಾರ್ಕ್ ಗ್ರೇ ಅಪ್ ಹೊಲೆಸ್ಟರಿ, ಕ್ನಾಬ್ ಮೇಲೆ ರೆಡ್ ಅಸೆಂಟ್ ಡೋರ್ ಟ್ರಿಮ್ ಮೇಲೆ ರೆಡ್ ಅಸೆಂಟ್ ಗಳಿದ್ದು ಇತರ ಮಾದರಿಗಳಿಗಿಂತ ಭಿನ್ನವಾಗಿ ಹಾಗೂ ಸ್ಪೋರ್ಟಿಯಾಗಿಸಿದೆ.

ಅಮೆರಿಕಾದಲ್ಲಿ ಸ್ಥಗಿತವಾಯ್ತು ಹ್ಯುಂಡೈ ವೆನ್ಯೂ ಮ್ಯಾನುವಲ್ ವೆರಿಯೆಂಟ್

ಐಎಂಟಿ ಒಂದು ಮ್ಯಾನುವಲ್ ಗೇರ್‌ಬಾಕ್ಸ್ ಆಗಿದ್ದು, ಡ್ರೈವರ್‌ ಕ್ಲಚ್ ಬದಲಿಸುವ ಅಗತ್ಯವಿಲ್ಲದ ರೀತಿಯಲ್ಲಿ ಮಾಡಿಫೈಗೊಳಿಸಲಾಗಿದೆ. ಈ ಟೆಕ್ನಾಲಜಿಯು ಗೇರ್ ಲಿವರ್‌ನೊಂದಿಗೆ ಇಂಟೆನ್ಸಿಟಿ ಸೆನ್ಸಾರ್ ಬಳಸುತ್ತದೆಂದು ಕಂಪನಿ ಹೇಳಿದೆ. ಈ ಸೆನ್ಸಾರ್ ಡ್ರೈವರ್ ಗೇರ್‌ ಬದಲಿಸುವಾಗ ಟ್ರಾನ್ಸ್ ಮಿಷನ್ ಕಂಟ್ರೋಲ್ ಯುನಿಟ್ ಗೆ ಸೂಚನೆ ನೀಡುತ್ತದೆ. ಇದರಿಂದಾಗಿ ಕ್ಲಚ್ ಅನ್ನು ಮ್ಯಾನುವಲ್ ಆಗಿ ನಿರ್ವಹಿಸುವ ಅಗತ್ಯವಿಲ್ಲ.

ಅಮೆರಿಕಾದಲ್ಲಿ ಸ್ಥಗಿತವಾಯ್ತು ಹ್ಯುಂಡೈ ವೆನ್ಯೂ ಮ್ಯಾನುವಲ್ ವೆರಿಯೆಂಟ್

ಬಿಎಸ್-6 ಹ್ಯುಂಡೈ ವೆನ್ಯೂ ದೇಶಿಯ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ವಿಟಾರಾ ಬ್ರೆಝಾ, ಫೋರ್ಡ್ ಇಕೋಸ್ಪೋರ್ಟ್, ಮಹಿಂದ್ರಾ ಎಕ್ಸ್​ಯುವಿ 300 ಮತ್ತು ಕಿಯಾ ಸೆಲ್ಟೋಸ್ ಕಾರುಗಳಿಗೆ ಪೈಪೋಟಿ ನೀಡುತ್ತದೆ.

Article Published On: Monday, September 21, 2020, 20:14 [IST]
English summary
Hyundai Venue Manual Variant Discontinued. Read In Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+