ಬಿಡುಗಡೆಗೂ ಮುನ್ನ 2020ರ ಹ್ಯುಂಡೈ ವೆರ್ನಾ ಕಾರಿನ ಇಂಟಿರಿಯರ್ ಮಾಹಿತಿ ಬಹಿರಂಗ

ಹ್ಯುಂಡೈ ಇಂಡಿಯಾ ಕಂಪನಿಯು ತನ್ನ ಜನಪ್ರಿಯ ಸೆಡಾನ್ ಆವೃತ್ತಿಯಾದ ವೆರ್ನಾ ಬಿಎಸ್6 ಆವೃತ್ತಿಯನ್ನು ಇದೇ ತಿಂಗಳು 26ಕ್ಕೆ ಬಿಡುಗಡೆಗೊಳಿಸುತ್ತಿದ್ದು, ಹೊಸ ಕಾರಿನಲ್ಲಿ ಹಲವಾರು ತಾಂತ್ರಿಕ ಅಂಶಗಳ ಬದಲಾವಣೆಗಳೊಂದಿಗೆ ಬಿಡುಗಡೆ ಮಾಡುತ್ತಿದೆ.

ಬಿಡುಗಡೆಗೂ ಮುನ್ನ 2020ರ ಹ್ಯುಂಡೈ ವೆರ್ನಾ ಕಾರಿನ ಇಂಟಿರಿಯರ್ ಮಾಹಿತಿ ಬಹಿರಂಗ

ಏಪ್ರಿಲ್ 1ರಿಂದ ಬಿಎಸ್-6 ಎಮಿಷನ್ ನಿಯಮವು ಕಡ್ಡಾಯವಾಗಿ ಜಾರಿಗೆ ಬರುತ್ತಿದ್ದು, ಹ್ಯುಂಡೈ ವೆರ್ನಾ ಸೆಡಾನ್ ಫೇಸ್‌ಲಿಫ್ಟ್ ಆವೃತ್ತಿಯು ಬಿಎಸ್-6 ಎಂಜಿನ್ ಪ್ರೇರಿತ ಹೊಸ ಎಂಜಿನ್ ಆಯ್ಕೆಯನ್ನು ಪಡೆದುಕೊಳ್ಳುವುದರ ಜೊತೆಗೆ ಕಾರಿನ ಹೊರ ಭಾಗದ ವಿನ್ಯಾಸದಲ್ಲೂ ಕೂಡಾ ಸಾಕಷ್ಟು ಬದಲಾವಣೆ ಪಡೆದುಕೊಂಡಿದೆ. ಸಿ ಸೆಗ್ಮೆಂಟ್ ಸೆಡಾನ್ ಆವೃತ್ತಿಗಳಲ್ಲೇ ವಿಶೇಷ ಎನ್ನಿಸಲಿರುವ ಹೊಸ ಫೇಸ್‌ಲಿಫ್ಟ್ ಕಾರು ಈ ಬಾರಿ ನ್ಯೂ ಜನರೇಷನ್ ಹೋಂಡಾ ಸಿಟಿ ಮತ್ತು ಮಾರುತಿ ಸುಜುಕಿ ಸಿಯಾಜ್ ಕಾರುಗಳಿಗೆ ಭರ್ಜರಿ ಪೈಪೋಟಿ ನೀಡಲಿದೆ.

ಬಿಡುಗಡೆಗೂ ಮುನ್ನ 2020ರ ಹ್ಯುಂಡೈ ವೆರ್ನಾ ಕಾರಿನ ಇಂಟಿರಿಯರ್ ಮಾಹಿತಿ ಬಹಿರಂಗ

ಸದ್ಯ ಅನಾವರಣಗೊಳಿಸಲಾಗಿರುವ ಹೊಸ ಕಾರು ಪ್ರಸ್ತುತ ಮಾರುಕಟ್ಟೆಯಲ್ಲಿರುವ ಆವೃತ್ತಿಗಿಂತಲೂ ವಿಭಿನ್ನ ವಿನ್ಯಾಸ ಹೊಂದಿರುವುದರ ಜೊತೆಗೆ 35ಕ್ಕೂ ಹೆಚ್ಚು ಫೀಚರ್ಸ್‌ಗಳನ್ನು ಒಳಗೊಂಡ ಬ್ಲ್ಯೂ ಲಿಂಕ್ ತಂತ್ರಜ್ಞಾನವನ್ನು ಪಡೆದುಕೊಳ್ಳುವುದು ಬಹುತೇಕ ಖಚಿತವಾಗಿದೆ.

ಬಿಡುಗಡೆಗೂ ಮುನ್ನ 2020ರ ಹ್ಯುಂಡೈ ವೆರ್ನಾ ಕಾರಿನ ಇಂಟಿರಿಯರ್ ಮಾಹಿತಿ ಬಹಿರಂಗ

ಇದಲ್ಲದೆ ಹೊಸ ಕಾರಿನ ಇಂಟಿರಿಯರ್ ಕುರಿತಾಗಿ ಇದೇ ಮೊದಲ ಬಾರಿಗೆ ಕೆಲವು ಮಹತ್ವದ ಮಾಹಿತಿಗಳು ಲಭ್ಯವಾಗಿದ್ದು, ಹೊಸ ಕಾರಿನಲ್ಲಿ ಕ್ರೆಟಾ ಮಾದರಿಯಲ್ಲೇ ಹೊಸ ವಿನ್ಯಾಸದ 7.0-ಇಂಚಿನ ಇನ್ಪೋಟೈನ್‌ಮೆಂಟ್ ಸಿಸ್ಟಂ ನೀಡಲಾಗಿದೆ. ಹಾಗೆಯೇ ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಕೂಡಾ ಬದಲಾವಣೆಗೊಂಡಿದ್ದು, ಫ್ಲಕ್ಸ್ ವುಡ್ ಡ್ಯಾಶ್‌ಬೋರ್ಡ್, ಅಲ್ಯುಮಿನಿಯಂ ಟ್ರಿಮ್, ಹೊಸ ಮಾದರಿಯ ಎಸಿ ವೆಂಟ್ಸ್ ಮತ್ತು ಆಸನಗಳ ಡಿಸೈನ್ ಬದಲಾವಣೆಗೊಳಿಸಲಾಗಿದೆ.

ಬಿಡುಗಡೆಗೂ ಮುನ್ನ 2020ರ ಹ್ಯುಂಡೈ ವೆರ್ನಾ ಕಾರಿನ ಇಂಟಿರಿಯರ್ ಮಾಹಿತಿ ಬಹಿರಂಗ

ಇದರೊಂದಿಗೆ ವೆರ್ನಾ ಫೇಸ್‌ಲಿಫ್ಟ್ ಕಾರಿನ ಮುಂಭಾಗದ ಗ್ರಿಲ್ ಸ್ಲಾಟ್ ಸಹ ಸಾಕಷ್ಟು ಬದಲಾವಣೆಯನ್ನು ಹೊಂದಿದ್ದು, ವಿದೇಶಿ ಮಾರುಕಟ್ಟೆಗಳಲ್ಲಿ ಸದ್ಯ ಮಾರಾಟದಲ್ಲಿರುವ ಸೊನಾಟಾ ಸೆಡಾನ್ ಮಾದರಿಯ ಹೋಲಿಕೆಯನ್ನು ಪಡೆದುಕೊಂಡಿರುವುದು ಪ್ರಮುಖ ಆಕರ್ಷಣೆಯಾಗಲಿದೆ. ಹೊಸ ಕಾರು ಮಾದರಿಯಲ್ಲಿನ ಹೆಡ್‌ಲ್ಯಾಂಪ್ ಸೌಲಭ್ಯವು ಸಹ ಕಾರಿನ ನೋಟಕ್ಕೆ ಮತ್ತಷ್ಟು ಬಲಿಷ್ಠತೆಯನ್ನು ತುಂಬಲಿದ್ದು, ಮೂರು ಲೈಟ್‌ಗಳೂ ಪ್ರತ್ಯೇಕ ಹೋಸ್ ವಿನ್ಯಾಸವನ್ನು ಪಡೆದುಕೊಂಡಿರುವುದು ಪ್ರೀಮಿಯಂ ಹೆಚ್ಚಿಸಿದೆ.

ಬಿಡುಗಡೆಗೂ ಮುನ್ನ 2020ರ ಹ್ಯುಂಡೈ ವೆರ್ನಾ ಕಾರಿನ ಇಂಟಿರಿಯರ್ ಮಾಹಿತಿ ಬಹಿರಂಗ

ಜೊತೆಗೆ ಎಲ್ಇಡಿ ಹೆಡ್‌ಲ್ಯಾಂಪ್ ಭೀಮ್, ಪ್ರೋಜೆಕ್ಟರ್ ಹೆಡ್‌ಲ್ಯಾಂಪ್ ಮತ್ತು ಸನ್‌ರೂಫ್ ಇದರಲ್ಲಿದ್ದು,ಕಾರಿನ ಹಿಂಭಾಗದ ತಾಂತ್ರಿಕ ವಿನ್ಯಾಸದಲ್ಲೂ ಮಹತ್ವದ ಬದಲಾವಣೆಗಳನ್ನು ತರಲಾಗಿದೆ.

ಬಿಡುಗಡೆಗೂ ಮುನ್ನ 2020ರ ಹ್ಯುಂಡೈ ವೆರ್ನಾ ಕಾರಿನ ಇಂಟಿರಿಯರ್ ಮಾಹಿತಿ ಬಹಿರಂಗ

ಇನ್ನು ಟೈಲ್ ಲ್ಯಾಂಪ್, ಬೂಟ್ ಲಿಡ್ ಮತ್ತು ಸ್ಪೋರ್ಟಿ ಮಾದರಿಯ ಕ್ರೊಮ್ ನೀಡಿರುವುದು ಕೂಡಾ ಮಹತ್ವದ ಬದಲಾವಣೆ ಕಾರಣವಾಗಿದ್ದು, ಪ್ರಸ್ತುತ ಮಾದರಿಗಿಂತಲೂ ಅತ್ಯುತ್ತಮ ಇಂಟಿರಿಯರ್ ಫೀರ್ಚಸ್‌ಗಳು ಈ ಕಾರಿನಲ್ಲಿವೆ.

ಬಿಡುಗಡೆಗೂ ಮುನ್ನ 2020ರ ಹ್ಯುಂಡೈ ವೆರ್ನಾ ಕಾರಿನ ಇಂಟಿರಿಯರ್ ಮಾಹಿತಿ ಬಹಿರಂಗ

ಹೊಸ ಕಾರಿನ ಎಂಜಿನ್‌ನಲ್ಲಿ ಭಾರೀ ಬದಲಾವಣೆ

ಸದ್ಯ ಮಾರುಕಟ್ಟೆಯಲ್ಲಿರುವ ವೆರ್ನಾ ಮಾದರಿಯು 1.6-ಲೀಟರ್ ಡೀಸೆಲ್ ಮತ್ತು 1.6-ಲೀಟರ್ ಪೆಟ್ರೋಲ್ ಜೊತೆಗೆ 1.4-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯನ್ನು ಹೊಂದಿದ್ದು, ಫೇಸ್‌ಲಿಫ್ಟ್ ಆವೃತ್ತಿಯಲ್ಲಿ ಬಿಎಸ್-6 ನಿಯಮಾವಳಿಗೆ ಅನುಗುಣವಾಗಿ ಕೆಲವು ಮಹತ್ವದ ಬದಲಾವಣೆಗಳನ್ನು ತರಲಾಗಿದೆ.

ಬಿಡುಗಡೆಗೂ ಮುನ್ನ 2020ರ ಹ್ಯುಂಡೈ ವೆರ್ನಾ ಕಾರಿನ ಇಂಟಿರಿಯರ್ ಮಾಹಿತಿ ಬಹಿರಂಗ

ಹೊಸ ಎಮಿಷನ್‌ ನಿಯಮದಿಂದಾಗಿ ಹಳೆಯ ಎಂಜಿನ್ ಆಯ್ಕೆಗಳಿಗೆ ಗುಡ್‌ಬೈ ಹೇಳಿರುವ ಹ್ಯುಂಡೈ ಸಂಸ್ಥೆಯು ಹೊಸದಾಗಿ 1.5-ಲೀಟರ್ ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್ ಆವೃತ್ತಿಗಳನ್ನು ಪರಿಚಯಿಸುತ್ತಿದ್ದು, ಇದೇ ಎಂಜಿನ್ ಮಾದರಿಯು ವೆರ್ನಾದಲ್ಲಿ ಮಾತ್ರವಲ್ಲ ಕ್ರೆಟಾ ಮತ್ತು ವೆನ್ಯೂನಲ್ಲೂ ಬಳಕೆ ಮಾಡಲಾಗಿದೆ.

ಬಿಡುಗಡೆಗೂ ಮುನ್ನ 2020ರ ಹ್ಯುಂಡೈ ವೆರ್ನಾ ಕಾರಿನ ಇಂಟಿರಿಯರ್ ಮಾಹಿತಿ ಬಹಿರಂಗ

ಪರ್ಫಾಮೆನ್ಸ್ ಪ್ರಿಯರಿಗಾಗಿ 7-ಸ್ಪೀಡ್ ಡ್ಯುಯಲ್ ಕ್ಲಚ್ ಪ್ರೇರಿತ 1.0-ಲೀಟರ್ ಟರ್ಬೋ ಎಂಜಿನ್ ನೀಡುವ ಸುಳಿವು ನೀಡಿದ್ದು, ಹೊಸ ಕಾರಿನ ಹಾರ್ಸ್ ಪವರ್ ಕುರಿತಾಗಿ ಯಾವುದೇ ಮಾಹಿತಿ ಬಹಿರಂಗವಾಗಿಲ್ಲ. ಟರ್ಬೋ ಆವೃತ್ತಿಯು ಈಗಾಗಲೇ ಚೀನಿ ಮತ್ತು ಥೈಲ್ಯಾಂಡ್ ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಲಭ್ಯವಿದ್ದು, ಸೆಡಾನ್ ಕಾರುಗಳಲ್ಲೇ ಇದು ಬಲಿಷ್ಠ ಟರ್ಬೋ ಆವೃತ್ತಿಯಾಗಿರಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

Source: Autocar India

Article Published On: Thursday, March 19, 2020, 11:30 [IST]
English summary
Hyundai Verna Facelift Spotted Revealing New Exterior & Interior Changes. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+