ಜಪಾನ್‌ನಲ್ಲಿ ಸ್ಥಗಿತವಾಗಲಿದೆ ಭಾರತ ನಿರ್ಮಿತ ಮಾರುತಿ ಸುಜುಕಿ ಬಲೆನೊ ಕಾರು

ಮಾರುತಿ ಸುಜುಕಿ ಕಂಪನಿಯ ಬಲೆನೊ ಕಾರು ಭಾರತದಲ್ಲಿ ಅತಿ ಹೆಚ್ಚು ಮಾರಾಟವಾಗುವ ಕಾರುಗಳಲ್ಲಿ ಒಂದಾಗಿದೆ. ಪ್ರಸ್ತುತ ಭಾರತೀಯ ಮಾರುಕಟ್ಟೆಯಲ್ಲಿ ಬಿಎಸ್-6 ಮಾರುತಿ ಫೇಸ್‍‍ಲಿಫ್ಟ್ ಕಾರನ್ನು ಮಾರಾಟ ಮಾಡಲಾಗುತ್ತಿದೆ.

ಜಪಾನ್‌ನಲ್ಲಿ ಸ್ಥಗಿತವಾಗಲಿದೆ ಭಾರತ ನಿರ್ಮಿತ ಮಾರುತಿ ಸುಜುಕಿ ಬಲೆನೊ ಕಾರು

ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್(ಎಂಎಸ್ಐಎಲ್) ಸಂಸ್ಥೆಯು ರಫ್ತು ಮಾಡುವ ಕಾರುಗಳಲ್ಲಿ ಬಲೆನೂ ಕೂಡ ಒಂದಾಗಿದೆ. ಭಾರತದಲ್ಲಿ ನಿರ್ಮಿತಗೊಂಡ ಸುಜುಕಿ ಬಾಲೆನೊ ಕಾರು ಜಪಾನ್ ನಲ್ಲಿ ಸ್ಥಗಿತವಾಗಲಿದೆ ಎಂದು ವರದಿಗಳು ಪ್ರಕಟವಾಗಿದೆ. ಇದು ಜಾಪಾನಿನ ತಯಾರಕರು ಭಾರತದಿಂದ ಆಮದು ಮಾಡಿಕೊಳ್ಳುವ ಏಕೈಕ ಮಾದರಿಯಾಗಿದೆ. ಜಪಾನಿನ ಮಾರುಕಟ್ಟೆಯಲ್ಲಿ ಬಲನೊ ಕಾರು ಉತ್ತಮವಾಗಿ ಮಾರಾಟವನ್ನು ಕಾಣುತ್ತಿಲ್ಲ. ಜಪಾನ್ ಗ್ರಾಹಕರನ್ನು ಸೆಳೆಯುವಲ್ಲಿ ಭಾರತ ನಿರ್ಮಿತ ಬಲೆನೊ ಕಾರು ವೈಫಲ್ಯ ಕಂಡಿದೆ.

ಜಪಾನ್‌ನಲ್ಲಿ ಸ್ಥಗಿತವಾಗಲಿದೆ ಭಾರತ ನಿರ್ಮಿತ ಮಾರುತಿ ಸುಜುಕಿ ಬಲೆನೊ ಕಾರು

2016ರ ಮಾರ್ಚ್ ತಿಂಗಳಲ್ಲಿ ಬಿಡುಗಡೆಯಾದ ಬಲೆನೊ ಕಾರು ಜಪಾನ್ ದೇಶದ ಮಾನದಂಡಗಳಿಗೆ ಅನುಗುಣವಾಗಿ ಅಭಿವೃದ್ದಿ ಪಡಿಸಲಾಗಿದೆ. ಜಪಾನ್ ದೇಶದಲ್ಲಿ 2016ರಲ್ಲಿ ಬಿಡುಗಡೆಯಾದ ಈ ಕಾರು ಆರಂಭದಲ್ಲಿ ಕೇವಲ ಕೆ 12 ಸಿ 1.2-ಲೀಟರ್ ಡ್ಯುಯಲ್ಜೆಟ್ ಎನ್‌ಎ ಪೆಟ್ರೋಲ್ ನಾಲ್ಕು ಸಿಲಿಂಡರ್ ಎಂಜಿನ್‌ನೊಂದಿಗೆ ಮಾರಾಟ ಮಾಡಲಾಗುತ್ತಿತ್ತು.

MOST READ: ಬಿಡುಗಡೆಯಾಯ್ತು ಮಾರುತಿ ಸುಜುಕಿ ಸೂಪರ್ ಕ್ಯಾರಿ ಬಿಎಸ್-6 ಎಸ್-ಸಿಎನ್‌ಜಿ ಮಾದರಿ

ಜಪಾನ್‌ನಲ್ಲಿ ಸ್ಥಗಿತವಾಗಲಿದೆ ಭಾರತ ನಿರ್ಮಿತ ಮಾರುತಿ ಸುಜುಕಿ ಬಲೆನೊ ಕಾರು

ಈ ಎಂಜಿನ್ ಸುಮಾರು 6,000 ಆರ್‌ಪಿಎಂನಲ್ಲಿ 90 ಬಿಹೆಚ್‍ಪಿ ಪವರ್ ಮತ್ತು 4,400 ಆರ್‌ಪಿಎಂನಲ್ಲಿ 118 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತಿದ್ದರು. ಈ ಎಂಜಿನ್ ನೊಂದಿಗೆ ಸಿವಿಟಿ ಆಯ್ಕೆಯನ್ನು ನೀಡಿದ್ದರು.

ಜಪಾನ್‌ನಲ್ಲಿ ಸ್ಥಗಿತವಾಗಲಿದೆ ಭಾರತ ನಿರ್ಮಿತ ಮಾರುತಿ ಸುಜುಕಿ ಬಲೆನೊ ಕಾರು

ಕೆಲವು ತಿಂಗಳ ನಂತರ ಮಾರುತಿ ಸುಜುಕಿ ಕಂಪನಿಯು ತನ್ನ ಬಲೆನೊ ಮಾದರಿಯಲ್ಲಿ ಕೆ10 ಸಿ 1.0-ಲೀಟರ್ ಬೂಸ್ಟರ್‌ಜೆಟ್ ಟರ್ಬೊ ಪೆಟ್ರೋಲ್ ಮೂರು-ಸಿಲಿಂಡರ್ ಎಂಜಿನ್ ಅನ್ನು ಅಳವಡಿಸಿದರು. ಭಾರತದಲ್ಲಿ ಈ ಮಾದರಿಯನ್ನು ಬಲೆನೊ ಆರ್ಎಸ್ ಹೆಸರಿನಲ್ಲಿ ಮಾರಾಟ ಮಾಡಲಾಗುತ್ತದೆ.

MOST READ: ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಬಿಎಸ್-6 ಮಾರುತಿ ಎಸ್-ಕ್ರಾಸ್ ಪೆಟ್ರೋಲ್ ಆವೃತ್ತಿ

ಜಪಾನ್‌ನಲ್ಲಿ ಸ್ಥಗಿತವಾಗಲಿದೆ ಭಾರತ ನಿರ್ಮಿತ ಮಾರುತಿ ಸುಜುಕಿ ಬಲೆನೊ ಕಾರು

ಆದರೆ ಮಾರುತಿ ಸುಜುಕಿ ಕಂಪನಿಯು ಈ ಆರ್ಎಸ್ ಮಾದರಿಯನ್ನು ಜನವರಿ ತಿಂಗಳಲ್ಲಿ ಸ್ಥಗಿತಗೊಳಿಸಲಾಯಿತು. ಈ ಕೆ10 ಸಿ 1.0-ಲೀಟರ್ ಬೂಸ್ಟರ್‌ಜೆಟ್ ಟರ್ಬೊ ಪೆಟ್ರೋಲ್ ಮೂರು-ಸಿಲಿಂಡರ್ ಎಂಜಿನ್ 5,500 ಆರ್‌ಪಿಎಂನಲ್ಲಿ 100 ಬಿಹೆಚ್‍ಪಿ ಪವರ್ ಮತ್ತು 4,500 ಆರ್‌ಪಿಎಂನಲ್ಲಿ 150 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 6-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಅಳವಡಿಸಲಾಗಿದೆ.

ಜಪಾನ್‌ನಲ್ಲಿ ಸ್ಥಗಿತವಾಗಲಿದೆ ಭಾರತ ನಿರ್ಮಿತ ಮಾರುತಿ ಸುಜುಕಿ ಬಲೆನೊ ಕಾರು

ಫೀಚರ್ ಗಳ ವಿಷಯದಲ್ಲಿ ಸುಜುಕಿ ಬಲೆನೊ ಭಾರತದಲ್ಲಿರುವ ಮಾದರಿಯಂತೆ ಬಹುತೇಕ ಒಂದೇ ರೀತಿಯಲ್ಲಿದೆ. ಆದರೆ ಜಪಾನ್ ಮಾನದಂಡಗಳ ಅನುಸರಿಸಲು ಮುಂಭಾಗ ಹಿಟಡ್ ಸೀಟುಗಳು, ಕ್ರೂಸ್ ಕಂಟ್ರೋಲ್, ಇಎಸ್ಪಿ ಮತ್ತು ಇತರ ಫೀಚರ್ ಗಳನ್ನು ಹೊಂದಿದೆ.

MOST READ: ದಾಖಲೆ ಪ್ರಮಾಣದಲ್ಲಿ ಮಾರಾಟವಾಗುತ್ತಿವೆ ಮಾರುತಿ ಸುಜುಕಿ ಎಕ್ಸ್‌ಎಲ್6

ಜಪಾನ್‌ನಲ್ಲಿ ಸ್ಥಗಿತವಾಗಲಿದೆ ಭಾರತ ನಿರ್ಮಿತ ಮಾರುತಿ ಸುಜುಕಿ ಬಲೆನೊ ಕಾರು

ಇನ್ನು ಸುಜುಕಿ ಬಲೆನೊ ಎನ್‌ಎ ಮಾದರಿಯು ಪ್ರತಿ ಲೀಟರ್ ಗೆ 24.6 ಕಿ,ಮೀ ಮೈಲೇಜ್ ಅನ್ನು ನೀಡುತ್ತದೆ. ಇನ್ನು ಬಲೆನೊ ಟರ್ಬೋ ಮಾದರಿಯು ಪ್ರತಿ ಲೀಟರ್ ಗೆ 19.6 ಕಿ,ಮೀ ಮೈಲೇಜ್ ಅನ್ನು ನೀಡುತ್ತದೆ.

ಜಪಾನ್‌ನಲ್ಲಿ ಸ್ಥಗಿತವಾಗಲಿದೆ ಭಾರತ ನಿರ್ಮಿತ ಮಾರುತಿ ಸುಜುಕಿ ಬಲೆನೊ ಕಾರು

ಜಪಾನ್ ಮಾರುಕಟ್ಟೆಯಲ್ಲಿ ಭಾರತ ನಿರ್ಮಿತ ಸುಜುಕಿ ಬಲೆನೊ ಕಾರುಗಳ ಮಾರಾಟದಲ್ಲಿ ಕುಸಿತ ಕಂಡಿದೆ. ಇದರಿಂದ ಜೂನ್ ತಿಂಗಳಲ್ಲಿ ಜಪಾನ್ ದೇಶದಲ್ಲಿ ಸುಜುಕಿ ಬಲೆನೊ ಕಾರನ್ನು ಸ್ಥಗಿತಗೊಳಿಸಲಿದೆ.

Most Read Articles

Kannada
English summary
India-made Suzuki Baleno to be discontinued in Japan. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more