ಬರಲಿದೆ 5 ನಿಮಿಷ ಚಾರ್ಜ್ ಮಾಡಿದರೆ 50 ಕಿ.ಮೀ ಚಲಿಸುವ ಕಾರು..!
ಫಿಯೆಟ್ ಆಟೋಮೊಬೈಲ್ಸ್, ಇಟಲಿ ಮೂಲದ ಎಫ್‌ಸಿಎ ಗ್ರೂಪ್‌ನ ಭಾಗವಾಗಿದೆ. ಭಾರತದಲ್ಲಿ ಅಷ್ಟೇನೂ ಜನಪ್ರಿಯವಾಗದ ಕಾರಣಕ್ಕೆ ಫಿಯೆಟ್ ಕಂಪನಿಯು ದೇಶಿಯ ಮಾರುಕಟ್ಟೆಗೆ ಗುಡ್ ಬೈ ಹೇಳಿತ್ತು. ಇತ್ತೀಚಿನ ವರದಿಗಳ ಪ್ರಕಾರ ಫಿಯೆಟ್ ಕಂಪನಿಯು ಮತ್ತೆ ಭಾರತಕ್ಕೆ ಕಾಲಿಟ್ಟಿದೆ.

ದೇಶಿಯ ಮಾರುಕಟ್ಟೆಯಲ್ಲಿ ಫಿಯೆಟ್ 500 ಎಲೆಕ್ಟ್ರಿಕ್ ಕಾರನ್ನು ಬಿಡುಗಡೆಗೊಳಿಸಲು ಮುಂದಾಗಿದೆ. ಈ ಕಾರು ಕೆಲವು ತಿಂಗಳ ಹಿಂದೆ ಬಿಡುಗಡೆಯಾದ ಫಿಯೆಟ್ 500 ಕಾರಿನ ಮೂರನೇ ತಲೆಮಾರಿನ ಮಾದರಿಯಾಗಿದೆ. ಈ ಮಾದರಿಯು ಫಿಯೆಟ್‌ನ ಮೊದಲ ಎಲೆಕ್ಟ್ರಿಕ್ ಕಾರ್ ಆಗಿದೆ. ಎಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆ ಹೆಚ್ಚುತ್ತಿರುವುದರಿಂದ ಭಾರತದಲ್ಲಿ ಈ ಕಾರನ್ನು ಬಿಡುಗಡೆಗೊಳಿಸುತ್ತಿರುವುದಾಗಿ ಫಿಯೆಟ್ ಹೇಳಿದೆ.

ಈಗಾಗಲೇ, ಅನೇಕ ಕಂಪನಿಗಳು ತಮ್ಮ ಸರಣಿಯಲ್ಲಿ ಹೊಸ ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆಗೊಳಿಸುತ್ತಿವೆ. ಕರೋನಾ ವೈರಸ್‌ನಿಂದಾಗಿ ವಾಹನಗಳ ಬಿಡುಗಡೆಯನ್ನು ಮುಂದೂಡಲಾಗುತ್ತಿದೆ. ಕರೋನಾ ವೈರಸ್ ಹಾವಳಿ ಕಡಿಮೆಯಾದ ನಂತರ, ಭಾರತದಲ್ಲಿ ಹೆಚ್ಚಿನ ಸಂಖ್ಯೆಯ ಕಾರುಗಳನ್ನು ಬಿಡುಗಡೆಗೊಳಿಸುವ ನಿರೀಕ್ಷೆಗಳಿವೆ.
MOST READ:ಕರೋನಾದಿಂದ ಬೈಕ್ ಕಳೆದುಕೊಂಡ ಯುವಕನಿಗೆ ಸರ್ ಪ್ರೈಸ್ ಗಿಫ್ಟ್ ನೀಡಿದ ಟಿವಿಎಸ್

ಇದಕ್ಕಾಗಿ ವಾಹನ ತಯಾರಕ ಕಂಪನಿಗಳು ಕಾತರದಿಂದ ಕಾಯುತ್ತಿವೆ. ಅದರಂತೆ, ಫಿಯೆಟ್ 500 ಎಲೆಕ್ಟ್ರಿಕ್ ಕಾರನ್ನು ಸಹ ಶೀಘ್ರದಲ್ಲೇ ಬಿಡುಗಡೆಗೊಳಿಸಲಾಗುವುದು. ವರದಿಗಳ ಪ್ರಕಾರ, ಫಿಯೆಟ್ ಈ ಕಾರ್ ಅನ್ನು ವಿಶಿಷ್ಟವಾದ ಪ್ಲಾಟ್‌ಫಾರಂನಲ್ಲಿ ತಯಾರಿಸಿದೆ. ಈ ಕಾರಿನಲ್ಲಿ ಹೊಸ ವಿನ್ಯಾಸದ ಕಾನ್ಸೆಪ್ಟ್ ಹಾಗೂ ಟೆಕ್ನಿಕಲ್ ಫೀಚರ್‌ಗಳನ್ನು ನಿರೀಕ್ಷಿಸಬಹುದು.

ಫಿಯೆಟ್ 500 ಎಲೆಕ್ಟ್ರಿಕ್ ಕಾರನ್ನು ಹಿಂದಿನ 500 ಮಾದರಿಗಿಂತ ಹೆಚ್ಚು ಸ್ಪೇಶಿಯಸ್ ಆಗಿ ತಯಾರಿಸಲಾಗಿದೆ. ಈ ಕಾರು 2 ಸೆಂ.ಮೀನ ವ್ಹೀಲ್ ಬೇಸ್ ಹೊಂದಿದೆ. ಈ ಎಲೆಕ್ಟ್ರಿಕ್ ಕಾರಿನಲ್ಲಿ 87 ಕಿ.ವ್ಯಾ ಸಾಮರ್ಥ್ಯದ ಎಲೆಕ್ಟ್ರಿಕ್ ಮೋಟರ್ ಅಳವಡಿಸಲಾಗಿದ್ದು ಹೆಚ್ಚಿನ ಪವರ್ ಉತ್ಪಾದಿಸುತ್ತದೆ. 4 ಕಿ.ವ್ಯಾನ ಲಿಥಿಯಂ-ಐಯಾನ್ ಬ್ಯಾಟರಿ ಅಗತ್ಯವಾದ ಪವರ್ ಅನ್ನು ನೀಡುತ್ತದೆ.
MOST READ:ಮನೆ ತಲುಪಲು 1800 ಕಿ.ಮೀ ಸೈಕಲ್ ತುಳಿದ ಯುವಕ..!

ಈ ಬ್ಯಾಟರಿಯು ಸಂಪೂರ್ಣವಾಗಿ ಚಾರ್ಜ್ ಆದ ನಂತರ 320 ಕಿ.ಮೀಗಳವರೆಗೆ ಚಲಿಸಬಹುದು. 500 ಇ ಕಾರಿನಲ್ಲಿ ಅಳವಡಿಸಿರುವ ಎಲೆಕ್ಟ್ರಿಕ್ ಮೋಟರ್ ಕೇವಲ 9.0 ಸೆಕೆಂಡುಗಳಲ್ಲಿ ಗಂಟೆಗೆ 0-100 ಕಿ.ಮೀ ವೇಗವನ್ನು ತಲುಪುವ ಸಾಮರ್ಥ್ಯವನ್ನು ಹೊಂದಿದೆ.

ಈ ಕಾರಿನ ಟಾಪ್ ಸ್ಪೀಡ್ ಪ್ರತಿ ಗಂಟೆಗೆ 150 ಕಿ.ಮೀಗಳಾಗಿದೆ. ಇದರ ಚಾರ್ಜಿಂಗ್ ಸಾಮರ್ಥ್ಯವು ನಮಗೆ ಆಶ್ಚರ್ಯವನ್ನುಂಟುಮಾಡುತ್ತದೆ. 500 ಎಲೆಕ್ಟ್ರಿಕ್ ಕಾರಿನಲ್ಲಿ 85 ಕಿ.ವ್ಯಾ ಫಾಸ್ಟ್ ಚಾರ್ಜಿಂಗ್ ತಂತ್ರಜ್ಞಾನವನ್ನು ನೀಡಲಾಗಿದೆ. ಈ ಚಾರ್ಜರ್ ಕೇವಲ 5 ನಿಮಿಷಗಳಲ್ಲಿ 50 ಕಿ.ಮೀಗಳವರೆಗೆ ಚಲಿಸುವಷ್ಟು ಚಾರ್ಜ್ ಮಾಡುತ್ತದೆ.
MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

35 ನಿಮಿಷಗಳಲ್ಲಿ 80% ಚಾರ್ಜ್ ಮಾಡಬಹುದು. ಈ ಕಾರನ್ನು ಪೂರ್ತಿಯಾಗಿ ಚಾರ್ಜ್ ಮಾಡಲು ಹೆಚ್ಚು ಸಮಯ ಕಾಯಬೇಕಾದ ಅವಶ್ಯಕತೆಯಿಲ್ಲ. ಆದರೆ ಈ ಫೀಚರ್ ಫಾಸ್ಟ್ ಚಾರ್ಜಿಂಗ್ ಸ್ಟೇಷನ್‌ಗಳಲ್ಲಿ ಮಾತ್ರ ಕಾರ್ಯನಿರ್ವಹಿಸುತ್ತದೆ. ಸಾಮಾನ್ಯ ಚಾರ್ಜಿಂಗ್ ಪಾಯಿಂಟ್‌ಗಳಲ್ಲಿ ವೇಗವಾಗಿ ಚಾರ್ಜ್ ಆಗುವುದಿಲ್ಲ.

ಈ ಕಾರನ್ನು 7.4 ಕಿ.ವ್ಯಾ ಸಾಮರ್ಥ್ಯದ ಪ್ಲಗ್ ಪಾಯಿಂಟ್‌ನಲ್ಲಿ ಚಾರ್ಜ್ ಮಾಡಿದರೆ ಪೂರ್ತಿಯಾಗಿ ಚಾರ್ಜ್ ಆಗಲು ಸುಮಾರು 6 ಗಂಟೆ ಬೇಕಾಗುತ್ತದೆ. ಈ ಕಾರಣಕ್ಕೆ ಫಾಸ್ಟ್ ಚಾರ್ಜಿಂಗ್‌ಗಾಗಿ ಫಾಸ್ಟ್ ಚಾರ್ಜಿಂಗ್ ಪಾಯಿಂಟ್‌ಗಳನ್ನು ಬಳಸುವಂತೆ ಫಿಯೆಟ್ ಹೇಳಿದೆ.
MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಈ ಕಾರನ್ನು ಮನೆಯಲ್ಲಿ ಚಾರ್ಜ್ ಮಾಡಲು ಕಂಪನಿಯು ಇಸಿ ವಾಲ್ಬಾಕ್ಸ್ ಚಾರ್ಜಿಂಗ್ ಕಿಟ್ ಅನ್ನು ನೀಡಲಿದೆ. ಇದನ್ನು ಎಂಜಿ ಇಪಿಎಸ್ ಸಹಾಯದಿಂದ ಕಂಪನಿಯು ಸಿದ್ಧಪಡಿಸಿದೆ. ಇದರ ಸಾಮರ್ಥ್ಯ 2.3 ಕಿ.ವ್ಯಾಗಳಾಗಿದ್ದು 7.4 ಕಿ.ವ್ಯಾಗೆ ಅಪ್‌ಗ್ರೇಡ್ ಮಾಡಬಹುದಾಗಿದೆ.

ಇದರ ಜೊತೆಗೆ ಈ ಕಾರಿನಲ್ಲಿ ಯು ಕನೆಕ್ಟ್ ಫೀಚರ್ ಹೊಂದಿರುವ 5 ಇಂಚಿನ ಇನ್ಫೋಟೇನ್‌ಮೆಂಟ್ ಸಿಸ್ಟಂ ಸಹ ನೀಡಲಾಗುವುದು. ಇದರೊಂದಿಗೆ 7 ಇಂಚಿನ ಟಿಎಫ್‌ಟಿ ಡಿಸ್‌ಪ್ಲೇ ಹಾಗೂ 10.25 ಇಂಚಿನ ಹೆಚ್‌ಡಿ ಟಚ್ ಸ್ಕ್ರೀನ್ ಸಹ ನೀಡಲಾಗುವುದು. ಟಚ್ ಸ್ಕ್ರೀನ್ ನ್ಯಾವಿಗೇಷನ್, ವೈರ್‌ಲೆಸ್ ಆಪಲ್ ಕಾರ್ ಪ್ಲೇ ಹಾಗೂ ಆಂಡ್ರಾಯ್ಡ್ ಆಟೋ ಫೀಚರ್‌ಗಳನ್ನು ಹೊಂದಿರಲಿದೆ.

ಈ ಕಾರನ್ನು ಸದ್ಯಕ್ಕೆ ಇಟಲಿಯಲ್ಲಿರುವ ಮಿರಾಫಿಯೋರಿ ಉತ್ಪಾದನಾ ಘಟಕದಲ್ಲಿ ಉತ್ಪಾದಿಸಲಾಗುತ್ತಿದೆ. ಈ ಕಾರನ್ನು ಭಾರತದಲ್ಲಿ ಸಿಬಿಯು ಮೂಲಕ ಮಾರಾಟ ಮಾಡುವ ಸಾಧ್ಯತೆಗಳಿವೆ. ಯಾವಾಗ ಮಾರಾಟ ಮಾಡಲಾಗುವುದು ಎಂಬ ಬಗ್ಗೆ ಯಾವುದೇ ಅಧಿಕೃತ ಮಾಹಿತಿಗಳಿಲ್ಲ. ಈ ವರ್ಷದ ಅಂತ್ಯದ ವೇಳೆಗೆ ಈ ಕಾರ್ ಅನ್ನು ಬಿಡುಗಡೆಗೊಳಿಸುವ ಸಾಧ್ಯತೆಗಳಿವೆ.

ಭಾರತದಲ್ಲಿ ಬಿಡುಗಡೆಯಾದ ನಂತರ ಫಿಯೆಟ್ 500 ಕಾರಿನ ಬೆಲೆ ರೂ.40 ಲಕ್ಷಗಳಾಗುವ ನಿರೀಕ್ಷೆಗಳಿವೆ. ಕಾರು ವಿಭಿನ್ನವಾದ ಟೆಕ್ನಿಕಲ್ ಫೀಚರ್ ಹಾಗೂ ರೆಟ್ರೊ ಶೈಲಿಯನ್ನು ಹೊಂದಿರುವ ಕಾರಣಕ್ಕೆ ಹೆಚ್ಚು ಬೆಲೆಯನ್ನು ಹೊಂದಿರಲಿದೆ.
ಮೂಲ: ಐಎಬಿ


Click it and Unblock the Notifications