ಅಚ್ಚರಿಯ ಬೆಲೆಗಳೊಂದಿಗೆ ಬಿಡುಗಡೆಯಾದ ಕಿಯಾ ಕಾರ್ನಿವಾಲ್ ಎಂಪಿವಿ

2020ರ ಆಟೋ ಎಕ್ಸ್‌ಪೋದಲ್ಲಿ ಕಿಯಾ ಬಹುನೀರಿಕ್ಷಿತ ಕಾರ್ನಿವಾಲ್ ಎಂಪಿವಿ ಆವೃತ್ತಿಯು ಬಿಡುಗಡೆಗೊಂಡಿದೆ. ಹೊಸ ಕಾರು ದೇಶಿಯ ಮಾರುಕಟ್ಟೆಯಲ್ಲಿ ಟೊಯೊಟಾ ಇನೋವಾ ಕ್ರಿಸ್ಟಾ ಕಾರಿಗೆ ಪೈಪೋಟಿಯಾಗಿ ಮಾರುಕಟ್ಟೆ ಪ್ರವೇಶಿಸಿದ್ದು, ಹೊಸ ಕಾರು ಆಕರ್ಷಕ ಬೆಲೆ ಪಡೆದುಕೊಂಡಿದೆ.

ಅಚ್ಚರಿಯ ಬೆಲೆಗಳೊಂದಿಗೆ ಬಿಡುಗಡೆಯಾದ ಕಿಯಾ ಕಾರ್ನಿವಾಲ್ ಎಂಪಿವಿ

ಕಾರ್ನಿವಾಲ್ ಎಂಪಿವಿ ಆವೃತ್ತಿಯನ್ನು ಗ್ರಾಹಕರು 7 ಸೀಟರ್, 8 ಸೀಟರ್ ಮತ್ತು 9 ಸೀಟರ್ ಆವೃತ್ತಿಯಲ್ಲಿ ಖರೀದಿ ಮಾಡಬಹುದಾಗಿದ್ದು, ಪ್ರೀಮಿಯಂ, ಪ್ರೆಸ್ಟಿಜ್ ಮತ್ತು ಲಿಮೊಸಿನ್ ವೆರಿಯೆಂಟ್‌ಗಳನ್ನು ಹೊಂದಿದೆ. ಇದರಲ್ಲಿ ಪ್ರೀಮಿಯಂ ಕಾರು ಬೆಸ್ ವೆರಿಯೆಂಟ್‌ ಆವೃತ್ತಿಯಾಗಿ ಮಾರಾಟವಾಗಲಿದ್ದರೆ ಲಿಮೊಸಿನ್ ವೆರಿಯೆಂಟ್ ಹೈ ಎಂಡ್ ಆವೃತ್ತಿಯಾಗಿ ಮಾರಾಟಗೊಳ್ಳಲಿದೆ. ಪ್ರತಿ ಸ್ಪರ್ಧಿ ಇನೋವಾ ಕ್ರಿಸ್ಟಾ ಕಾರಿಗಿಂತಲೂ ಹೆಚ್ಚಿನ ಮಟ್ಟದ ಫೀಚರ್ಸ್ ಜೊತೆಗೆ ಬೆಲೆಯಲ್ಲೂ ಕಾರ್ನಿವಾಲ್ ತುಸು ದುಬಾರಿಯಾಗಿದೆ.

ಅಚ್ಚರಿಯ ಬೆಲೆಗಳೊಂದಿಗೆ ಬಿಡುಗಡೆಯಾದ ಕಿಯಾ ಕಾರ್ನಿವಾಲ್ ಎಂಪಿವಿ

ದೆಹಲಿ ಎಕ್ಸ್‌ಶೋರೂಂ ಪ್ರಕಾರ ಕಾರ್ನಿವಾಲ್ ಕಾರು ಆರಂಭಿಕವಾಗಿ ರೂ. 24.95 ಲಕ್ಷ ಬೆಲೆ ಹೊಂದಿದ್ದು, ಹೈ ಎಂಡ್ ಆವೃತ್ತಿಯು ರೂ.33.95 ಲಕ್ಷ ಬೆಲೆ ಪಡೆದುಕೊಂಡಿದೆ.

ಅಚ್ಚರಿಯ ಬೆಲೆಗಳೊಂದಿಗೆ ಬಿಡುಗಡೆಯಾದ ಕಿಯಾ ಕಾರ್ನಿವಾಲ್ ಎಂಪಿವಿ

ಕಾರ್ನಿವಾಲ್ ವೆರಿಯೆಂಟ್ ಮತ್ತು ಬೆಲೆ(ಎಕ್ಸ್‌ಶೋರೂಂ ಪ್ರಕಾರ)

ಪ್ರೀಮಿಯಂ (7 ಸೀಟರ್) - ರೂ. 24.95 ಲಕ್ಷ

ಪ್ರೀಮಿಯಂ (8 ಸೀಟರ್) - ರೂ. 25.15 ಲಕ್ಷ

ಪ್ರೆಸ್ಟಿಜ್ (7 ಸೀಟರ್) - ರೂ. 28.95 ಲಕ್ಷ

ಪ್ರೆಸ್ಟಿಜ್ (9 ಸೀಟರ್) - ರೂ. 29.95 ಲಕ್ಷ

ಲಿಮೊಸಿನ್ (7 ಸೀಟರ್) ರೂ. 33.95 ಲಕ್ಷ

ಅಚ್ಚರಿಯ ಬೆಲೆಗಳೊಂದಿಗೆ ಬಿಡುಗಡೆಯಾದ ಕಿಯಾ ಕಾರ್ನಿವಾಲ್ ಎಂಪಿವಿ

ಎಂಜಿನ್ ಸಾಮರ್ಥ್ಯ ಮತ್ತು ಪರ್ಫಾಮೆನ್ಸ್

ಕಾರ್ನಿವಾಲ್ ಕಾರಿನಲ್ಲಿ ಕೇವಲ ಒಂದೇ ಎಂಜಿನ್ ಆಯ್ಕೆಯನ್ನು ನೀಡಲಾಗಿದ್ದು, 2.2-ಲೀಟರ್ ಫೋರ್ ಸಿಲಿಂಡರ್ ಡೀಸೆಲ್ ಎಂಜಿನ್ ಜೋಡಣೆ ಹೊಂದಿದೆ. ಪ್ರತಿ ವೆರಿಯೆಂಟ್‌ನಲ್ಲೂ 8-ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ನೀಡಲಾಗಿದ್ದು, 200-ಬಿಎಚ್‌ಪಿ, 440-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲದು. ಈ ಮೂಲಕ ಮೈಲೇಜ್‌ನಲ್ಲೂ ಗಮನಸೆಳೆಯುವ ಕಾರ್ನಿವಾಲ್ ಕಾರು 2,200 ಕೆಜಿ ತೂಕ ಹೊಂದಿದ್ದು, ಎಆರ್‌ಎಐ ಸಂಸ್ಥೆಯು ಪ್ರಮಾಣಿಕರಿಸಿದಂತೆ ಪ್ರತಿ ಲೀಟರ್ ಡೀಸೆಲ್‌ಗೆ ಗರಿಷ್ಠ 13.9 ಕಿ.ಮೀ ಮೈಲೇಜ್ ನೀಡಲಿದೆ.

ಅಚ್ಚರಿಯ ಬೆಲೆಗಳೊಂದಿಗೆ ಬಿಡುಗಡೆಯಾದ ಕಿಯಾ ಕಾರ್ನಿವಾಲ್ ಎಂಪಿವಿ

ಹೊಸ ಕಾರಿನಲ್ಲಿರುವ ಪ್ರೀಮಿಯಂ ತಾಂತ್ರಿಕ ಸೌಲಭ್ಯಗಳು ಮತ್ತು ಐಷಾರಾಮಿ ವಿನ್ಯಾಸದಿಂದಾಗಿ ಕಾರ್ನಿವಾಲ್ ಕಾರು ಆವೃತ್ತಿಯನ್ನು 'ಲಗ್ಷುರಿ ಎಂಪಿವಿ' ವಿಭಾಗದಲ್ಲಿ ಗುರುತಿಸಲಾಗಿದ್ದು, ಸಿಗ್ನೆಚರ್ ಟೈಗರ್ ನೋಸ್ ಗ್ರಿಲ್ ಮತ್ತು ಸ್ವೆಪ್ಟ್ ಆಫ್ ಕ್ರೋಮ್ , ಸ್ವೆಪ್ಟ್‌ಬ್ಯಾಕ್ ಎಲ್‌ಇಡಿ ಪ್ರೋಜೆಕ್ಟರ್, ಬಂಪರ್ ರಕ್ಷಣೆಗಾಗಿ ಸಿಲ್ವರ್ ಸ್ಕಫ್ ಪ್ಲೇಟ್ ಜೋಡಣೆ ಹೊಂದಿದಿರುವುದು ಪ್ರಮುಖ ಆಕರ್ಷಣೆಯಾಗಿದೆ.

ಅಚ್ಚರಿಯ ಬೆಲೆಗಳೊಂದಿಗೆ ಬಿಡುಗಡೆಯಾದ ಕಿಯಾ ಕಾರ್ನಿವಾಲ್ ಎಂಪಿವಿ

ಫುಲ್ ಸೈಜ್ ಎಂಪಿವಿಯಾಗಿರುವ ಕಾರ್ನಿವಾಲ್ ಕಾರು ಉದ್ದಳತೆಯಲ್ಲಿ ಗಮನಸೆಳೆಯಲಿದ್ದು, ಎಲೆಕ್ಟ್ರಾನಿಕ್ ಸ್ಲೈಡಿಂಗ್ ಡೋರ್ ಸಿಸ್ಟಂ ಹೊಂದಿದೆ. ಹಾಗೆಯೇ ಹೊಸ ಕಾರಿನಲ್ಲಿ 18-ಇಂಚಿನ ಕ್ರೋಮ್ ಲೇಪಿತ ಅಲಾಯ್ ವೀಲ್ಹ್ ಜೋಡಣೆ ಮಾಡಲಾಗಿದ್ದು, ಇದು ಕಾರ್ನಿವಾಲ್ ಕಾರಿನ ಬಲಿಷ್ಠತೆಗೆ ಮತ್ತಷ್ಟು ಪೂರಕವಾಗಿದೆ.

ಅಚ್ಚರಿಯ ಬೆಲೆಗಳೊಂದಿಗೆ ಬಿಡುಗಡೆಯಾದ ಕಿಯಾ ಕಾರ್ನಿವಾಲ್ ಎಂಪಿವಿ

ಹೊರ ಭಾಗದ ವಿನ್ಯಾಸಕ್ಕಿಂತಲೂ ಒಳ ಭಾಗದ ಡಿಸೈನ್ ಸೌಲಭ್ಯವು ಕಾರ್ನಿವಾಲ್ ಕಾರಿಗೆ ಜನಪ್ರಿಯತೆ ತಂದುಕೊಡಲಿದ್ದು, ಅರಾಮದಾಯಕ ಪ್ರಯಾಣಕ್ಕೆ ಪೂರಕವಾದ ಆಸನ ಸೌಲಭ್ಯ, 50ಕ್ಕೂ ಹೆಚ್ಚು ಪ್ರೀಮಿಯಂ ಫೀಚರ್ಸ್‌ಗಳನ್ನು ಒಳಗೊಂಡಿರುವುದು ಗ್ರಾಹಕರನ್ನು ಮೊದಲ ನೋಟದಲ್ಲೇ ಸೆಳೆಯುತ್ತದೆ.

ಅಚ್ಚರಿಯ ಬೆಲೆಗಳೊಂದಿಗೆ ಬಿಡುಗಡೆಯಾದ ಕಿಯಾ ಕಾರ್ನಿವಾಲ್ ಎಂಪಿವಿ

ಎಲೆಕ್ಟ್ರಿಕ್ ಪವರ್ಡ್ ಡ್ರೈವರ್ ಸೀಟ್, ಲೆದರ್ ಹೊದಿಕೆ ಪಡೆದಿರುವ ಮಲ್ಟಿ ಫಂಕ್ಷನ್ ಸ್ಟಿರಿಂಗ್ ವೀಲ್ಹ್, ಸ್ಟಿರಿಂಗ್ ವೀಲ್ಹ್‌ನಲ್ಲಿ ಆಡಿಯೋ ಮೌಂಟ್ ಕಂಟ್ರೋಲ್, ಕಾಲ್ಸ್ ಕಂಟ್ರೋಲ್ ಸೇರಿದಂತೆ ಹಲವು ಕಂಟ್ರೋಲ್ಸ್ ಬಟನ್‌ಗಳ ಸೌಲಭ್ಯಗಳಿವೆ.

ಅಚ್ಚರಿಯ ಬೆಲೆಗಳೊಂದಿಗೆ ಬಿಡುಗಡೆಯಾದ ಕಿಯಾ ಕಾರ್ನಿವಾಲ್ ಎಂಪಿವಿ

ಹೊಸ ಕಾರಿನ ಡ್ಯಾಶ್‌ಬೋರ್ಡ್ ಕೂಡಾ ಗಮನಸೆಳೆಯಲಿದ್ದು, ಸೆಂಟ್ರಲ್ ಇನ್ಪೋಟೈನ್‌ಮೆಂಟ್, 8-ಇಂಚಿನ ಟಚ್ ಸ್ಕ್ರೀನ್ ಇನ್ಪೋಟೈನ್‌ಮೆಂಟ್, ಇನ್ ಬಿಲ್ಟ್ ನ್ಯಾವಿಗೆಷನ್, ಆ್ಯಪಲ್ ಕಾರ್ ಪ್ಲೇ, ಅಂಡ್ರಾಯಿಡ್ ಆಟೋ, ವೆಹಿಕಲ್ ಟೆಲಿಮ್ಯಾಟಿಕ್, ವೆಂಟಿಲೆಟೆಡ್ ಸೀಟುಗಳ ಸೌಲಭ್ಯವನ್ನು ಹೊಂದಿದ್ದು, ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್ ಸಿಸ್ಟಂ, ಆರ್ಮ್ ರೆಸ್ಟ್‌ನೊಂದಿಗೆ ಚಾಲಕನಿಗೆ ಸರಳವಾಗಿ ಸಿಗಬಹುದಾದ ಗೇರ್ ನಾಬ್, ಲಿಮೊಸಿನ್ ಮಾದರಿಯಲ್ಲಿ ನಪ್ಪಾ ಲೆದರ್ ಆಸನ ಸೌಲಭ್ಯವಿದೆ.

ಅಚ್ಚರಿಯ ಬೆಲೆಗಳೊಂದಿಗೆ ಬಿಡುಗಡೆಯಾದ ಕಿಯಾ ಕಾರ್ನಿವಾಲ್ ಎಂಪಿವಿ

ಕಾರ್ನಿವಾಲ್ ಉದ್ದಳತೆ

ಕಿಯಾ ಕಾರ್ನಿವಾಲ್ ಕಾರು ಎಂಪಿವಿ ಕಾರುಗಳಲ್ಲೇ ಅತಿ ಹೆಚ್ಚು ಉದ್ದಳತೆ ಹೊಂದಿದ್ದು, 5,115-ಎಂಎಂ ಉದ್ದ, 1,985-ಎಂಎಂ ಅಗಲ, 1,740-ಎಂಎಂ ಎತ್ತರ, 3,060-ಎಂಎಂ ವೀಲ್ಹ್ ಬೆಸ್, 180-ಎಂಎಂ ಗ್ರೌಂಡ್ ಕ್ಲಿಯೆರೆನ್ಸ್ ಮತ್ತು 540-ಲೀಟರ್‌ ಸಾಮರ್ಥ್ಯದ ಬೂಟ್ ಸ್ಪೆಸ್ ಸೌಲಭ್ಯ ಹೊಂದಿದೆ.

ಅಚ್ಚರಿಯ ಬೆಲೆಗಳೊಂದಿಗೆ ಬಿಡುಗಡೆಯಾದ ಕಿಯಾ ಕಾರ್ನಿವಾಲ್ ಎಂಪಿವಿ

ಕಾರ್ನಿವಾಲ್ ಪ್ರೀಮಿಯಂ ಫೀಚರ್ಸ್‌ಗಳು

* 8-ಇಂಚಿನ ಟಚ್ ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ * ಎಂಟು ಸ್ಪೀಕರ್ಸ್(ಹರ್ಮನ್/ಕರ್ಡೋನ್) * 220 ವೊಲ್ಟ್ ಲ್ಯಾಪ್‌ಟಾಪ್ ಚಾರ್ಜರ್ * 10-ಹಂತದಲ್ಲಿ ಹೊಂದಾಣಿಕೆ ಮಾಡಬಹುದಾದ ಡ್ರೈವರ್ ಸೀಟ್ * ವೆಂಟಿಲೆಟೆಡ್ ಡ್ರೈವರ್ ಸೀಟ್ * ಸ್ಮಾರ್ಟ್ ಕೀ ಜೊತೆ ಪುಶ್ ಬಟನ್ ಸ್ಟಾರ್ಟ್/ಸ್ಟಾಪ್ * ಸೆಂಟ್ರಲ್ ಲಾಕಿಂಗ್ * ಆಟೋ ORVMs * 18-ಇಂಚಿನ ಅಲಾಯ್ ವೀಲ್ಹ್ * ಮೂರನೇ ಸಾಲಿನಲ್ಲೂ 60:40 ಅನುಪಾತದ ಆಸನ * UVO ಕನೆಕ್ಟೆಡ್ ಟೆಕ್ನಾಲಜಿ * ವೈರ್ ಲೆಸ್ ಮೊಬೈಲ್ ಚಾರ್ಜಿಂಗ್

ಅಚ್ಚರಿಯ ಬೆಲೆಗಳೊಂದಿಗೆ ಬಿಡುಗಡೆಯಾದ ಕಿಯಾ ಕಾರ್ನಿವಾಲ್ ಎಂಪಿವಿ

ಸುರಕ್ಷಾ ಫೀಚರ್ಸ್‌ಗಳು

* ಎಬಿಎಸ್ ಜೊತೆ ಇಬಿಡಿ * ಹಿಲ್ ಸ್ಟಾರ್ಟ್ ಅಸಿಸ್ಟ್ ಕಂಟ್ರೋಲ್ * ರೋಲ್ ಓವರ್ ಮಿಟಿಗೆಷನ್ * ಎಲೆಕ್ಟ್ರಾನಿಕ್ ಸ್ಟ್ಯಾಬಿಲಿಟಿ ಕಂಟ್ರೋಲ್ * 6 ಏರ್‌ಬ್ಯಾಗ್ * ಫ್ರಂಟ್ ಆ್ಯಂಡ್ ರಿಯರ್ ಪಾರ್ಕಿಂಗ್ ಕ್ಯಾಮೆರಾ * ಸೀಟ್ ಬೆಲ್ಟ್ ರಿಮೆಂಡರ್ * ಇಮ್‌ಮೊಬಿಲೈಜರ್ * ISOFIX ಚೈಲ್ಡ್ ಸೀಟ್ ಮೌಂಟ್

Most Read Articles

Kannada
English summary
Auto Expo 2020: Kia Carnival launched. Read in Kannada.
Story first published: Wednesday, February 5, 2020, 13:10 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more