ಆಟೋ ಎಕ್ಸ್‌ಪೋ 2020: ಪ್ರತಿ ಚಾರ್ಜ್‌ಗೆ 450ಕಿ.ಮೀ ಮೈಲೇಜ್ ನೀಡುವ ಕಿಯಾ ನಿರೋ ಇವಿ ಅನಾವರಣ

ಕಿಯಾ ಮೋಟಾರ್ಸ್ ಸಂಸ್ಥೆಯು ಭಾರತದಲ್ಲಿ ಹಲವಾರು ಹೊಸ ಕಾರು ಮಾದರಿಗಳನ್ನು ಬಿಡುಗಡೆ ಮಾಡುತ್ತಿದ್ದು, ಸಾಮಾನ್ಯ ಕಾರು ಮಾದರಿಗಳಲ್ಲದೇ ವಿವಿಧ ಮಾದರಿಯ ಎಲೆಕ್ಟ್ರಿಕ್ ಕಾರು ಆವೃತ್ತಿಗಳನ್ನು ಸಹ ಬಿಡುಗಡೆಗೊಳಿಸುತ್ತಿದೆ.

ಆಟೋ ಎಕ್ಸ್‌ಪೋ 2020: ಪ್ರತಿ ಚಾರ್ಜ್‌ಗೆ 450ಕಿ.ಮೀ ಮೈಲೇಜ್ ನೀಡುವ ಕಿಯಾ ನಿರೋ ಇವಿ ಅನಾವರಣ

ಸೆಲ್ಟೊಸ್ ಮೂಲಕ ಇದೀಗ ಗ್ರಾಹಕರ ಗಮನಸೆಳೆದಿರುವ ಕಿಯಾ ಸಂಸ್ಥೆಯು ಶೀಘ್ರದಲ್ಲೇ ಎಲೆಕ್ಟ್ರಿಕ್ ಕಾರುಗಳ ಮಾರಾಟಕ್ಕೂ ಚಾಲನೆ ನೀಡಲಿದ್ದು, ತನ್ನ ಬಹುನೀರಿಕ್ಷಿತ ನಿರೋ ಎಲೆಕ್ಟ್ರಿಕ್ ಎಸ್‌ಯುವಿ ಆವೃತ್ತಿಯನ್ನು ದೆಹಲಿ ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಳಿಸಿದೆ. ನಿರೋ ಕಾರು ಈಗಾಗಲೇ ಅಂತರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಖರೀದಿಗೆ ಲಭ್ಯವಿದ್ದು, ಇದೀಗ ಭಾರತದಲ್ಲೂ ಹೊಸ ಕಾರು ಬಿಡುಗಡೆಗೊಳ್ಳಲು ಅಂತಿಮ ಹಂತದ ಸಿದ್ದತೆಯಲ್ಲಿದೆ.

ಆಟೋ ಎಕ್ಸ್‌ಪೋ 2020: ಪ್ರತಿ ಚಾರ್ಜ್‌ಗೆ 450ಕಿ.ಮೀ ಮೈಲೇಜ್ ನೀಡುವ ಕಿಯಾ ನಿರೋ ಇವಿ ಅನಾವರಣ

ಸಹೋದರ ಸಂಸ್ಥೆ ಹ್ಯುಂಡೈಗಿಂತಲೂ ಅತ್ಯುತ್ತಮ ಕಾರು ಉತ್ಪನ್ನಗಳನ್ನು ಹೊಂದಿರುವ ಕಿಯಾ ಸಂಸ್ಥೆಯು ಭಾರತದಲ್ಲಿ ಭಾರೀ ಪ್ರಮಾಣದ ಬಂಡವಾಳ ಹೂಡಿಕೆ ಮಾಡಿದ್ದು, ಗ್ರಾಹಕರ ಬೇಡಿಕೆಯೆಂತೆ ಅಗ್ಗದ ಬೆಲೆಯಲ್ಲಿ ಉತ್ತಮ ಮಾದರಿಯ ಹ್ಯಾಚ್‌ಬ್ಯಾಕ್, ಎಸ್‌ಯುವಿ, ಸೆಡಾನ್, ಎಂಪಿವಿ ಮತ್ತು ಎಲೆಕ್ಟ್ರಿಕ್ ಕಾರುಗಳ ಬಿಡುಗಡೆಯ ಯೋಜನೆಯಲ್ಲಿದೆ.

ಆಟೋ ಎಕ್ಸ್‌ಪೋ 2020: ಪ್ರತಿ ಚಾರ್ಜ್‌ಗೆ 450ಕಿ.ಮೀ ಮೈಲೇಜ್ ನೀಡುವ ಕಿಯಾ ನಿರೋ ಇವಿ ಅನಾವರಣ

ಸೆಲ್ಟೊಸ್ ನಂತರ ಕಾರ್ನಿವಾಲ್ ಕಾರನ್ನು ಬಿಡುಗಡೆಗೊಳಿಸಿರುವ ಕಿಯಾ ಸಂಸ್ಥೆಯು ಮುಂದಿನ ಕಾರು ಮಾದರಿಯಾಗಿ ಎಲೆಕ್ಟ್ರಿಕ್ ಕಾರು ಆವೃತ್ತಿಯನ್ನು ಆಯ್ಕೆ ಮಾಡಿಕೊಂಡಿದ್ದು, ಸೊಲ್ ಹ್ಯಾಚ್‌ಬ್ಯಾಕ್ ಇಲ್ಲವೇ ಇದೀಗ ಅನಾವರಣಗೊಂಡಿರುವ ನಿರೋ ಎಲೆಕ್ಟ್ರಿಕ್ ಬಿಡುಗಡೆಯಾಗುವುದು ಬಹುತೇಕ ಖಚಿತ ಎನ್ನಲಾಗಿದೆ. ಆದರೆ ಸೊಲ್ ಕಾರು ಇದುವರೆಗೂ ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಳ್ಳದಿರುವುದು ನಿರೋ ಮೇಲೆ ನೀರಿಕ್ಷೆಯಿಡಲಾಗಿದೆ.

ಆಟೋ ಎಕ್ಸ್‌ಪೋ 2020: ಪ್ರತಿ ಚಾರ್ಜ್‌ಗೆ 450ಕಿ.ಮೀ ಮೈಲೇಜ್ ನೀಡುವ ಕಿಯಾ ನಿರೋ ಇವಿ ಅನಾವರಣ

ನಿರೋ ಎಲೆಕ್ಟ್ರಿಕ್ ಮತ್ತು ಸೊಲ್ ಎಲೆಕ್ಟ್ರಿಕ್ ಈಗಾಗಲೇ ಚೀನಾ ಮತ್ತು ಕೊರಿಯಾದಲ್ಲಿ ಮಾರಾಟಗೊಳ್ಳುತ್ತಿದ್ದು, ಇದೀಗ ಮೊದಲ ಬಾರಿಗೆ ಭಾರತದಲ್ಲೂ ಬಿಡುಗಡೆಯಾಗುತ್ತಿರುವುದು ಭಾರೀ ನೀರಿಕ್ಷೆ ಹುಟ್ಟುಹಾಕಿವೆ.

ಆಟೋ ಎಕ್ಸ್‌ಪೋ 2020: ಪ್ರತಿ ಚಾರ್ಜ್‌ಗೆ 450ಕಿ.ಮೀ ಮೈಲೇಜ್ ನೀಡುವ ಕಿಯಾ ನಿರೋ ಇವಿ ಅನಾವರಣ

ನಿರೋ ಕಾರು ಪ್ರತಿ ಚಾರ್ಜ್‌ಗೆ 450 ಕಿ.ಮೀ ಮೈಲೇಜ್‌ನೊಂದಿಗೆ ಹಲವು ಪ್ರೀಮಿಯಂ ಫೀಚರ್ಸ್ ಪಡೆದುಕೊಂಡಿರಲಿದ್ದು, ಕೇವಲ 50 ನಿಮಿಷಗಳಲ್ಲಿ ಶೇ.80 ರಷ್ಟು ಚಾರ್ಜ್ ಮಾಡಿಕೊಳ್ಳಬಹುದಾದ ಡಿಸಿ ಫಾಸ್ಟ್ ಚಾರ್ಜಿಂಗ್ ಸೌಲಭ್ಯವು ಈ ಕಾರಿನಲ್ಲಿದೆ.

ಆಟೋ ಎಕ್ಸ್‌ಪೋ 2020: ಪ್ರತಿ ಚಾರ್ಜ್‌ಗೆ 450ಕಿ.ಮೀ ಮೈಲೇಜ್ ನೀಡುವ ಕಿಯಾ ನಿರೋ ಇವಿ ಅನಾವರಣ

ಕಾರಿನಲ್ಲಿ ಸುಧಾರಿತ ತಂತ್ರಜ್ಞಾನ ಪ್ರೇರಿತ ಫೀಚರ್ಸ್‌ಗಳಿಂದಾಗಿ ನಿರೋ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ.25 ಲಕ್ಷದಿಂದ ರೂ.30 ಲಕ್ಷ ಬೆಲೆ ಪಡೆದುಕೊಳ್ಳುವ ಸಾಧ್ಯತೆಗಳಿದ್ದು, ಭಾರತೀಯ ಮಾರುಕಟ್ಟೆಗಾಗಿ ಕೆಲವು ತಾಂತ್ರಿಕ ಅಂಶಗಳನ್ನು ಬದಲಾವಣೆ ಮಾಡುವ ಸಾಧ್ಯತೆಗಳಿವೆ.

ಆಟೋ ಎಕ್ಸ್‌ಪೋ 2020: ಪ್ರತಿ ಚಾರ್ಜ್‌ಗೆ 450ಕಿ.ಮೀ ಮೈಲೇಜ್ ನೀಡುವ ಕಿಯಾ ನಿರೋ ಇವಿ ಅನಾವರಣ

ಇನ್ನು ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳ ಅಭಿವೃದ್ದಿಗಾಗಿ ಹ್ಯುಂಡೈ ಜೊತೆಗೂಡಿರುವ ಕಿಯಾ ಸಂಸ್ಥೆಯು ಸ್ವತಂತ್ರವಾಗಿ ಎಲೆಕ್ಟ್ರಿಕ್ ಕಾರುಗಳನ್ನು ಅಭಿವೃದ್ದಿಗೊಳಿಸಿ ಮಾರಾಟ ಮಾಡಲಿದ್ದರೂ, ಕೆಲವು ತಂತ್ರಜ್ಞಾನಗಳನ್ನು ಎರವಲು ಪಡೆದುಕೊಳ್ಳಲಿವೆ.

More from DriveSpark

Article Published On: Wednesday, February 5, 2020, 17:30 [IST]
English summary
Kia Motors revealed Niro EV at Auto Expo 2020 details. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+