ಆಟೋ ಎಕ್ಸ್‌ಪೋ 2020: ಅನಾವರಣವಾಯ್ತು ಕಿಯಾ ಸೆಲ್ಟೋಸ್ ಎಕ್ಸ್-ಲೈನ್ ಕಾನ್ಸೆಪ್ಟ್ ಎಸ್‍‍ಯುವಿ

ಕಿಯಾ ಮೋಟಾರ್ಸ್ ಇಂಡಿಯಾ ತನ್ನ ಹೊಸ 14 ಮಾದರಿಗಳನ್ನು ಆಟೋ ಎಕ್ಸ್ ಪೋದಲ್ಲಿ ಅನಾವರಣಗೊಳಿಸುವ ಮೂಲಕ ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಸಂಚಲನವನ್ನು ಮೂಡಿಸಿದೆ. ಭಾರತೀಯ ಮಾರುಕಟ್ಟೆಯಲ್ಲಿ ಸಾಮಾನ್ಯ ಕಿಯಾ ಸೆಲ್ಟೋಸ್ ದಾಖಲೆಯ ಮಟ್ಟದಲ್ಲಿ ಮಾರಾಟವಾಗುತ್ತಿದೆ.

ಆಟೋ ಎಕ್ಸ್‌ಪೋ 2020: ಅನಾವರಣವಾಯ್ತು ಕಿಯಾ ಸೆಲ್ಟೋಸ್ ಎಕ್ಸ್-ಲೈನ್ ಕಾನ್ಸೆಪ್ಟ್ ಎಸ್‍‍ಯುವಿ

ಕಿಯಾ ಸೆಲ್ಟೋಸ್ ಮಾರಾಟದಲ್ಲಿ ಹೊಸ ದಾಖಲೆಗಳನ್ನು ನಿರ್ಮಿಸುತ್ತಿದೆ. ಕಿಯಾ ಸೆಲ್ಟೋಸ್ ಅಲ್ಪ ಅವಧಿಯಲ್ಲಿ ಭಾರತೀಯ ಗ್ರಾಹಕರನ್ನು ಸೆಳೆಯುವಲ್ಲಿ ಯಶ್ವಸಿಯಾಗಿದೆ. ಇದೀಗ 2020ರ ಆಟೋ ಎಕ್ಸ್ ಪೋದಲ್ಲಿ ಹೊಸ ಕಿಯಾ ಸೆಲ್ಟೋಸ್ ಎಕ್ಸ್-ಲೈನ್ ಕಾನ್ಸೆಪ್ಟ್ ಅನ್ನು ಅನಾವರಣಗೊಳಿಸಿದೆ. ಕಿಯಾ ಸೆಲ್ಟೋಸ್ ಎಕ್ಸ್-ಲೈನ್ ಆಫ್-ರೋಡ್ ಎಸ್‍‍ಯುವಿಯಾಗಿದೆ ಎಂದು ನಿರೀಕ್ಷಿಸುತ್ತೇವೆ. ಕಿಯಾ ಸೆಲ್ಟೋಸ್ ಎಕ್ಸ್-ಲೈನ್ ಕಾನ್ಸೆಪ್ಟ್ ನಲ್ಲಿ ಕಸ್ಟಮ್ ಕಿಟ್ ಅನ್ನು ಹೊಂದಿದೆ.

ಆಟೋ ಎಕ್ಸ್‌ಪೋ 2020: ಅನಾವರಣವಾಯ್ತು ಕಿಯಾ ಸೆಲ್ಟೋಸ್ ಎಕ್ಸ್-ಲೈನ್ ಕಾನ್ಸೆಪ್ಟ್ ಎಸ್‍‍ಯುವಿ

ಈ ಎಸ್‍ಯುವಿನಲ್ಲಿ ಎಲೆಕ್ಟ್ರಿಕ್ ಆಲ್-ವ್ಹೀಲ್ ಡ್ರೈವ್ ಸಿಸ್ಟಂ ಮತ್ತು ಸೆಂಟ್ರಲ್ ಡಿಫರೆನ್ಷಿಯಲ್ ಲಾಕಿಂಗ್, ಕಸ್ಟಮ್ ಅಲಾಯ್ ವ್ಹೀಲ್‍‍ಗಳೊಂದಿಗೆ ಆಫ್-ರೋಡಿಂಗ್ ಟಯರ್ ರೂಫ್ ರ‍್ಯಾಕ್‌ ಮತ್ತು ಬಣ್ಣದ ಆಯ್ಕೆಗಳನ್ನು ಹೊಂದಿದೆ.

ಆಟೋ ಎಕ್ಸ್‌ಪೋ 2020: ಅನಾವರಣವಾಯ್ತು ಕಿಯಾ ಸೆಲ್ಟೋಸ್ ಎಕ್ಸ್-ಲೈನ್ ಕಾನ್ಸೆಪ್ಟ್ ಎಸ್‍‍ಯುವಿ

ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಸಾಮಾನ್ಯ ಕಿಯಾ ಸೆಲ್ಟೋಸ್ ಎಸ್‍ಯುವಿಯಲ್ಲಿ ಸುರಕ್ಷತೆಗಾಗಿ 6 ಏರ್‌ಬ್ಯಾಗ್‌ಗಳು, ಎಬಿಎಸ್ ಜೊತೆ ಇಎಸ್‌ಸಿ, ಫ್ರಂಟ್ ಆ್ಯಂಡ್ ರೇರ್ ಪಾರ್ಕಿಂಗ್ ಸೆನ್ಸಾರ್, ಹಿಲ್ ಅಸಿಸ್ಟ್ ಕಂಟ್ರೋಲ್, ಸೆಫ್ಟಿ ಅಲರ್ಟ್ ಸಿಸ್ಟಂ, ಟ್ರಾಕ್ಷನ್ ಕಂಟ್ರೋಲ್ ಸಿಸ್ಟಂ, ಆಲ್ ವ್ಹೀಲ್ ಡಿಸ್ಕ್ ಬ್ರೇಕ್ ಸೇರಿದಂತೆ ಹಲವು ಆಧುನಿಕ ತಂತ್ರಜ್ಞಾನದ ಫೀಚರ್ಸ್‍‍ಗಳನ್ನು ಅಳವಡಿಸಲಾಗಿದೆ.

ಆಟೋ ಎಕ್ಸ್‌ಪೋ 2020: ಅನಾವರಣವಾಯ್ತು ಕಿಯಾ ಸೆಲ್ಟೋಸ್ ಎಕ್ಸ್-ಲೈನ್ ಕಾನ್ಸೆಪ್ಟ್ ಎಸ್‍‍ಯುವಿ

ಸಾಮಾನ್ಯ ಸೆಲ್ಟೋಸ್‍‍ನಲ್ಲಿ ಹೈ ಎಂಡ್ ವೆರಿಯೆಂಟ್‌ಗಳಲ್ಲಿ ವಾಯ್ಸ್ ಕಮಾಂಡ್, ರಿಮೋಟ್ ಎಂಜಿನ್ ಸ್ಟಾರ್ಟ್/ಸ್ಟಾಪ್ ಬಟನ್, ಆಟೋ ಎಸಿ ಸೌಲಭ್ಯ, 6 ಹಂತಗಳಲ್ಲಿ ಅಡ್ಜಸ್ಟ್ ಮಾಡಬಹುದಾದ ಚಾಲಕನ ಸೀಟು, ರೇರ್ ಎಸಿ ವೆಂಟ್ಸ್ ಮತ್ತು 37 ಫೀಚರ್ಸ್ ಒಳಗೊಂಡಿರುವ ಬ್ಲ್ಯೂ ಲಿಂಕ್ ಸೂಟ್ಸ್‌ ಹೊಂದಿರುವ ಯುವಿಒ ಕನೆಕ್ಟ್ ಟೆಕ್ನಾಲಜಿ ಅನ್ನು ಅಳವಡಿಸಲಾಗಿದೆ.

ಆಟೋ ಎಕ್ಸ್‌ಪೋ 2020: ಅನಾವರಣವಾಯ್ತು ಕಿಯಾ ಸೆಲ್ಟೋಸ್ ಎಕ್ಸ್-ಲೈನ್ ಕಾನ್ಸೆಪ್ಟ್ ಎಸ್‍‍ಯುವಿ

ಕಿಯಾ ಸೆಲ್ಟೋಸ್ ಎಕ್ಸ್-ಲೈನ್ ಕಾನ್ಸೆಪ್ಟ್ ಎಸ್‍‍ಯುವಿಯಲ್ಲಿ 1.6 ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್‍ 175 ಬಿ‍‍ಹೆಚ್‍‍ಪಿ ಪವರ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್‍‍ನೊಂದಿಗೆ 7 ಸ್ಪೀಡ್ ಡ್ಯುಯಲ್ ಕ್ಲಚ್ ಟ್ರಾನ್ಸ್ ಮಿಷನ್ ಅನ್ನು ಜೋಡಿಸಲಾಗಿದೆ.

ಆಟೋ ಎಕ್ಸ್‌ಪೋ 2020: ಅನಾವರಣವಾಯ್ತು ಕಿಯಾ ಸೆಲ್ಟೋಸ್ ಎಕ್ಸ್-ಲೈನ್ ಕಾನ್ಸೆಪ್ಟ್ ಎಸ್‍‍ಯುವಿ

ಕಿಯಾ ಸೆಲ್ಟೋಸ್ ಎಕ್ಸ್-ಲೈನ್ ಎಸ್‍‍ಯುವಿಯು ಆಗ್ರೆಸಿವ್ ಲುಕ್ ಅನ್ನು ಹೊಂದಿದೆ. ಈ ಎಸ್‍ಯುವಿಯು ಡ್ಯುಯಲ್ ಟೋನ್ ಬಣ್ಣದ ಆಯ್ಕೆಯನ್ನು ಹೊಂದಿದೆ. ಸಾಮಾನ್ಯ ಕಿಯಾ ಸೆಲ್ಟೋಸ್ ಎಸ್‍‍ಯುವಿಯಂತೆ ಈ ಕಾನ್ಸೆಪ್ಟ್ ಎಸ್‍‍ಯುವಿಯು ಕೂಡ ಗ್ರಾಹಕರನ್ನು ಸೆಳೆಯಬಹುದು.

ಆಟೋ ಎಕ್ಸ್‌ಪೋ 2020: ಅನಾವರಣವಾಯ್ತು ಕಿಯಾ ಸೆಲ್ಟೋಸ್ ಎಕ್ಸ್-ಲೈನ್ ಕಾನ್ಸೆಪ್ಟ್ ಎಸ್‍‍ಯುವಿ

2019ರ ಲಾಸ್ ಏಂಜಲೀಸ್ ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಂಡಿದ್ದ ಈ ಕಾರು ಇದೀಗ ದೆಹಲಿ ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಳಿಸಿದೆ. ಅಲ್ಲದೇ ಈ ಎಸ್‍‍ಯುವಿಯು ಹೆಚ್ಚಾಗಿ ಆಫ್-ರೋಡ್ ವಾಹನ ಪ್ರಿಯರನ್ನು ಸೆಳೆಯಬಹುದು.

More from DriveSpark

Article Published On: Wednesday, February 5, 2020, 22:27 [IST]
English summary
India-Specific Kia Seltos X-Line Concept Appears At Auto Expo. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+