ದಕ್ಷಿಣ ಆಫ್ರಿಕಾಗೂ ಲಗೆಯಿಟ್ಟ ಮೇಡ್ ಇನ್ ಇಂಡಿಯಾ ಎಸ್-ಪ್ರೆಸ್ಸೊ

2019ರಲ್ಲಿ ಬಿಡುಗಡೆಯಾದ ಮಾರುತಿ ಎಸ್-ಪ್ರೆಸ್ಸೊ ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟವಾಗುವ ಕಾರುಗಳಲ್ಲಿ ಒಂದಾಗಿದೆ. ಮಾರುತಿ ಸುಜುಕಿ ಎಸ್-ಪ್ರೆಸ್ಸೊ ಮಿನಿ ಎಸ್‍ಯುವಿಯು ಭಾರತದಲ್ಲಿ ಸಾಕಷ್ಟು ಜನಪ್ರಿಯತೆಯನ್ನು ಗಳಿಸಿದೆ.

ದಕ್ಷಿಣ ಆಫ್ರಿಕಾಗೂ ಲಗೆಯಿಟ್ಟ ಮೇಡ್ ಇನ್ ಇಂಡಿಯಾ ಎಸ್-ಪ್ರೆಸ್ಸೊ

ಮುಂದಿನ ಆರು ತಿಂಗಳುಗಳಲ್ಲಿ ಸುಜುಕಿ ಎಸ್-ಪ್ರೆಸ್ಸೊ ಲ್ಯಾಟಿನ್ ಅಮೆರಿಕ, ಫಿಲಿಪೈನ್ಸ್ ಮತ್ತು ಶ್ರೀಲಂಕಾದಂತಹ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಬಿಡುಗಡೆಯಾಗಲಿದೆ. ಇದೀಗ ಮೇಡ್ ಇನ್ ಇಂಡಿಯಾ ಎಸ್-ಪ್ರೆಸ್ಸೊ ಕಾರು ದಕ್ಷಿಣ ಆಫ್ರಿಕಾದಲಿ ಬಿಡುಗಡೆಗೊಳಿಸಿದೆ. ಈ ಕಾರನ್ನು ದಕ್ಷಿಣ ಆಫ್ರಿಕಾದಲ್ಲಿ ಆರಂಭಿಕ ಬೆಲೆ ರೂ.5.89 ಲಕ್ಷಗಳಿಗೆ ಬಿಡುಗಡೆಗೊಳಿಸಿದೆ. ಎಸ್-ಪ್ರೆಸ್ಸೊ ಕಾರಿನ 283 ಯುನಿಟ್‌ಗಳನ್ನು ಬಿಡುಗಡೆಗೊಳಿಸಿದೆ.

ದಕ್ಷಿಣ ಆಫ್ರಿಕಾಗೂ ಲಗೆಯಿಟ್ಟ ಮೇಡ್ ಇನ್ ಇಂಡಿಯಾ ಎಸ್-ಪ್ರೆಸ್ಸೊ

ಕಳೆದ ತಿಂಗಳಲ್ಲಿ ದೇಶದ ಅತಿ ಹೆಚ್ಚು ಮಾರಾಟವಾದ ಕಾರುಗಳ ಪಟ್ಟಿಯಲ್ಲಿ ಮಾರುತಿ ಎಸ್-ಪ್ರೆಸ್ಸೊ ಆರನೇ ಸ್ಥಾನವನ್ನು ಪಡೆದುಕೊಂಡಿದೆ. ತನ್ನ ಪ್ರತಿಸ್ಪರ್ಧಿ ರೆನಾಲ್ಟ್ ಕ್ವಿಡ್ ಗಿಂತ ಮುಂದಿದೆ.

MOST READ: ಭರ್ಜರಿಯಾಗಿ ಮಾರಾಟವಾಯ್ತು ಫೋಕ್ಸ್‌ವ್ಯಾಗನ್ ಟಿ-ರಾಕ್ ಎಸ್‍ಯುವಿ

ದಕ್ಷಿಣ ಆಫ್ರಿಕಾಗೂ ಲಗೆಯಿಟ್ಟ ಮೇಡ್ ಇನ್ ಇಂಡಿಯಾ ಎಸ್-ಪ್ರೆಸ್ಸೊ

ದಕ್ಷಿಣ ಆಫ್ರಿಕಾದಲ್ಲಿ ಬಿಡುಗಡೆಗೊಳಿಸಿದ ಸುಜುಕಿ ಎಸ್-ಪ್ರೆಸ್ಸೊ ಕಾರಿನಲ್ಲಿ 1.0-ಲೀಟರ್ ಮೂರು ಸಿಲಿಂಡರ್ ಪೆಟ್ರೋಲ್ ಎಂಜಿನ್‌ ಅನ್ನು ಅಳವಡಿಸಿದೆ. ಈ ಎಂಜಿನ್ 67 ಬಿಎಚ್‌ಪಿ ಪವರ್ ಮತ್ತು 90 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಆರಂಭಿಕ ಕಾರು ಮಾದರಿಯಲ್ಲಿ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಮತ್ತು ಹೈ ಎಂಡ್ ಮಾದರಿಯಲ್ಲಿ 5-ಸ್ಪೀಡ್ ಎಎಂಟಿ ಗೇರ್ ಬಾಕ್ಸ್ ಆಯ್ಕೆಯನ್ನು ಹೊಂದಿದೆ.

ದಕ್ಷಿಣ ಆಫ್ರಿಕಾಗೂ ಲಗೆಯಿಟ್ಟ ಮೇಡ್ ಇನ್ ಇಂಡಿಯಾ ಎಸ್-ಪ್ರೆಸ್ಸೊ

ಎಸ್-ಪ್ರೆಸ್ಸೊ ಕಾರಿನಲ್ಲಿ ಮೈಕ್ರೋ ಎಸ್‌ಯುವಿ ವಿನ್ಯಾಸದೊಂದಿಗೆ ಆಕರ್ಷಕ ಗ್ರೌಂಡ್ ಕ್ಲಿಯೆರೆನ್ಸ್, 14-ಇಂಚಿನ ಸ್ಟೀಲ್ ವೀಲ್ಹ್, ಸ್ಲಿಕ್ ಫ್ರಂಟ್ ಗ್ರಿಲ್, ಕ್ರೋಮ್ ಇನ್ಸರ್ಟ್, ಹೆಡ್‌ಲ್ಯಾಂಪ್, ವಿಸ್ತರಿತ ಸೆಂಟರ್ ಏರ್ ಇನ್‌ಟೆಕ್, ಸಿ ಶೇಫ್ ಟೈಲ್‌ಗೆಟ್ ಸೌಲಭ್ಯವು ಕಾರಿನ ಅಂದಕ್ಕೆ ಮತ್ತಷ್ಟು ಮೆರಗು ನೀಡುತ್ತವೆ.

MOST READ: ಕರೋನಾ ಭೀತಿಯಿಂದ ಪಾತಾಳಕ್ಕೆ ಕುಸಿತ ಮಾರುತಿ ಸುಜುಕಿ ಕಾರುಗಳ ಮಾರಾಟ

ದಕ್ಷಿಣ ಆಫ್ರಿಕಾಗೂ ಲಗೆಯಿಟ್ಟ ಮೇಡ್ ಇನ್ ಇಂಡಿಯಾ ಎಸ್-ಪ್ರೆಸ್ಸೊ

ಎಸ್-ಪ್ರೆಸ್ಸೊ ಕಾರಿನ ಇಂಟಿರಿಯರ್ ನಲ್ಲಿ ಹಲವಾರು ಪ್ರೀಮಿಯಂ ಫೀಚರ್ಸ್‌ಗಳಿದ್ದು, ಬಾಡಿ ಕಲರ್ ಡ್ಯಾಶ್‌ಬೋರ್ಡ್, ಸೆಂಟರ್ ಕನ್ಸೊಲ್‌ನಲ್ಲಿ ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ಟ್ಯಾಕೊ ಮೀಟರ್, ಇನ್‌ಸ್ಟ್ರುಮೆಂಟ್ ಡಿಸ್‌ಪ್ಲೇ, ಟಚ್ ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ, ಸ್ಮಾರ್ಟ್‌ಪ್ಲೇ ಸ್ಟುಡಿಯೋ ಸಿಸ್ಟಂ,ಆ್ಯಪಲ್ ಕಾರ್ ಪ್ಲೇ/ಆಂಡ್ರಾಯ್ಡ್ ಆಟೋ, ಆರೇಂಜ್ ಕಲರ್ ಆಕ್ಸೆಂಟ್ ಸೌಲಭ್ಯವಿದೆ.

ದಕ್ಷಿಣ ಆಫ್ರಿಕಾಗೂ ಲಗೆಯಿಟ್ಟ ಮೇಡ್ ಇನ್ ಇಂಡಿಯಾ ಎಸ್-ಪ್ರೆಸ್ಸೊ

ಇದರೊಂದಿಗೆ ಈ ಕಾರಿನಲ್ಲಿ ಎಸಿ ವೆಂಟ್ಸ್, ಸ್ಟಿಯರಿಂಗ್ ಮೌಟೆಂಡ್ ಕಂಟ್ರೋಲ್, ಮ್ಯಾನುವಲ್ ಹೊಂದಾಣಿಕೆಯ ರೇರ್ ವ್ಯೂ ಮಿರರ್, 12ವೊಲ್ಟ್ ಚಾರ್ಜಿಂಗ್ ಸ್ಯಾಕೆಟ್ ಮತ್ತು ಯುಎಸ್‌ಬಿ ಕನೆಕ್ಟ್ ಸಹ ಹೊಂದಿದೆ. ಹಲವಾರು ಸುರಕ್ಷಾ ಸೌಲಭ್ಯಗಳನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗಿದೆ.

MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್‍ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

ದಕ್ಷಿಣ ಆಫ್ರಿಕಾಗೂ ಲಗೆಯಿಟ್ಟ ಮೇಡ್ ಇನ್ ಇಂಡಿಯಾ ಎಸ್-ಪ್ರೆಸ್ಸೊ

ಈ ಕಾರಿನಲ್ಲಿ ಕೀ ಲೆಸ್ ಎಂಟ್ರಿ, ಬ್ಲೂ‌ಥೂತ್ ಕನೆಕ್ಟಿವಿಟಿ, ಪವರ್ ವಿಂಡೋ, ಡ್ಯುಯಲ್ ಏರ್‌ಬ್ಯಾಗ್, ಎಬಿಎಸ್ ಜೊತೆ ಇಬಿಡಿ, ಸ್ಪೀಡ್ ವಾರ್ನಿಂಗ್ ಸಿಸ್ಟಂ, ರೇರ್ ಪಾರ್ಕಿಂಗ್ ಸೆನ್ಸಾರ್ ಸೇರಿದಂತೆ ಹಲವು ಫೀಚರ್ಸ್‌ಗಳನ್ನು ನೀಡಲಾಗಿದೆ.

ದಕ್ಷಿಣ ಆಫ್ರಿಕಾಗೂ ಲಗೆಯಿಟ್ಟ ಮೇಡ್ ಇನ್ ಇಂಡಿಯಾ ಎಸ್-ಪ್ರೆಸ್ಸೊ

ದಕ್ಷಿಣ ಆಪ್ರಿಕಾದಲ್ಲಿ ಬಿಡುಗಡೆಗೊಳಿಸಿದ ಸುಜುಕಿ ಎಸ್-ಪ್ರೆಸ್ಸೊ ಕಾರಿಗೆ ಐದು ವರ್ಷ/ಎರಡು ಲಕ್ಷ ಕಿ.ಮೀ ವಾರಂಟಿಯನ್ನು ನೀಡಿದೆ. ಇದರೊಂದಿಗೆ 30,000 ಕಿ.ಮೀ ಸರ್ವಿಸ್ ಪ್ಲಾನ್ ಮತ್ತು ಒಂದು ವರ್ಷದ ವಿಮಾ ಸೌಲಭ್ಯವನ್ನು ಒಳಗೊಂಡಿದೆ.

Most Read Articles

Kannada
English summary
Made-In-India Suzuki S-Presso Launched In South Africa. Read In Kannada.
Story first published: Friday, June 19, 2020, 18:13 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X