ಐಷಾರಾಮಿ ಫೀಚರ್ಸ್‌ಗಳೊಂದಿಗೆ ಮಾಡಿಫೈಗೊಂಡ ಇನೋವಾ ಕ್ರಿಸ್ಟಾ

ಐಷಾರಾಮಿ ಮಾಡಿಫೈ ಫೀಚರ್ಸ್‌ಗಳನ್ನು ಪರಿಚಯಿಸುವುದರಲ್ಲಿ ಮುಂಚೂಣಿಯಲ್ಲಿರುವ ಡಿಸಿ ಡಿಸೈನ್ ಸಂಸ್ಥೆಯು ಈಗಾಗಲೇ ಹಲವಾರು ಕಾರು ಮಾದರಿಗಳಲ್ಲಿ ವಿನೂತನ ವಿನ್ಯಾಸದ ಮಾಡಿಫೈ ಆವೃತ್ತಿಗಳನ್ನು ಪರಿಚಯಿಸಿದ್ದು, ಇದೀಗ ಇನೋವಾ ಕ್ರಿಸ್ಟಾ ಕಾರಿನಲ್ಲೂ ಮೊದಲ ಬಾರಿಗೆ ಮಾಡಿಫೈ ಫೀಚರ್ಸ್‌ಗಳನ್ನು ಜೋಡಣೆ ಮಾಡಿದೆ.

ಐಷಾರಾಮಿ ಫೀಚರ್ಸ್‌ಗಳೊಂದಿಗೆ ಮಾಡಿಫೈಗೊಂಡ ಇನೋವಾ ಕ್ರಿಸ್ಟಾ

ಇತ್ತೀಚೆಗೆ ಇನೋವಾ ಕ್ರಿಸ್ಟಾ ಖರೀದಿಸಿದ್ದ ಬಾಲಿವುಡ್ ನಟಿ ಮಾಧುರಿ ದೀಕ್ಷಿತ್‌ ಅವರೇ ತಮ್ಮ ಹೊಸ ಕಾರನ್ನು ಇದೀಗ ಡಿಸಿ ಡಿಸೈನ್‌ನೊಂದಿಗೆ ಮಾಡಿಫೈಗೊಳಿಸಿದ್ದು, ಹೊಸ ಕಾರು ದುಬಾರಿ ಬೆಲೆಯ ಹಲವು ಹೊಸ ಫೀಚರ್ಸ್‌ಗಳನ್ನು ಪಡೆದುಕೊಂಡಿದೆ. ಲಿಮೊಲಿನ್ ಕಾರು ಮಾದರಿಯಲ್ಲಿ ಆಸನ ಸೌಲಭ್ಯಗಳು ಪ್ರಮುಖ ಆಕರ್ಷಣೆಯಾಗಿದ್ದು, ಬೆರಳ ತುದಿಯಲ್ಲೇ ಹಲವಾರು ಕಾರ್ ಕನೆಕ್ಟೆಡ್ ಫೀಚರ್ಸ್‌ಗಳನ್ನು ಜೋಡಣೆ ಮಾಡಿರುವುದು ಹೊಸ ಕಾರಿನ ಒಳಾಂಗಣ ಲುಕ್ ಬದಲಿಸಿದೆ.

ಐಷಾರಾಮಿ ಫೀಚರ್ಸ್‌ಗಳೊಂದಿಗೆ ಮಾಡಿಫೈಗೊಂಡ ಇನೋವಾ ಕ್ರಿಸ್ಟಾ

ಐಷಾರಾಮಿ ಫೀಚರ್ಸ್‌ಗಳನ್ನು ಒಳಗೊಂಡ ಕಾರುಗಳನ್ನು ಮಾಡಿಫೈ ಮಾಡುವಲ್ಲಿ ಡಿಸಿ ಡಿಸೈನ್ ಕಂಪನಿಯು ಈಗಾಗಲೇ ಸಾಕಷ್ಟು ಜನಪ್ರಿಯಗೊಂಡಿದ್ದು, ಹಲವಾರು ಕಂಪನಿಗಳ ವಿವಿಧ ಕಾರು ಮಾದರಿಗಳ ರೀಬ್ಯಾಡ್ಜ್ ಆವೃತ್ತಿಗಳನ್ನು ಮಾರಾಟ ಮಾಡುತ್ತಿದೆ.

ಐಷಾರಾಮಿ ಫೀಚರ್ಸ್‌ಗಳೊಂದಿಗೆ ಮಾಡಿಫೈಗೊಂಡ ಇನೋವಾ ಕ್ರಿಸ್ಟಾ

ಕಾರುಗಳ ಮೂಲಬೆಲೆಗಿಂತಲೂ ದುಬಾರಿ ಬೆಲೆಯನ್ನು ಹೊಂದಿರುವ ಡಿಸಿ ಡಿಸೈನ್ ಮಾಡಿಫೈ ಆವೃತ್ತಿಗಳು ಐಷಾರಾಮಿ ಫೀಚರ್ಸ್ ಬಯಸುವ ಗ್ರಾಹಕರ ಆಯ್ಕೆಗೆ ಸಹಕಾರಿಯಾಗಿದ್ದು, ಇದೀಗ ಮಾಡಿಫೈಗೊಳಿಸಲಾಗಿರುವ ಇನೋವಾ ಕ್ರಿಸ್ಟಾ ಕೂಡಾ ರೂ.10 ಲಕ್ಷದಷ್ಟು ಹೆಚ್ಚುವರಿ ಬೆಲೆ ಹೊಂದಿದೆ ಎನ್ನಲಾಗಿದೆ.

ಐಷಾರಾಮಿ ಫೀಚರ್ಸ್‌ಗಳೊಂದಿಗೆ ಮಾಡಿಫೈಗೊಂಡ ಇನೋವಾ ಕ್ರಿಸ್ಟಾ

ಕಾರಿನ ಒಳಾಂಗಣ ವಿನ್ಯಾಸಕ್ಕೆ ತಕ್ಕಂತೆ ಮಾಡಿಫೈಗೊಳಿಸಲಾದ ಆಸನ ಸೌಲಭ್ಯ, ಮಧ್ಯದಲ್ಲಿ ಆರಾಮದಾಯಕವಾದ ಕ್ಯಾಪ್ಟನ್ ಸೀಟು ಮತ್ತು ಮೂರನೇ ಸಾಲಿನಲ್ಲಿರುವ ಪ್ರಯಾಣಿಕರಿಗೂ ಅನುಕೂಲಕರವಾದ ಆಸನ ಸೌಲಭ್ಯದ ಜೊತೆ ಎಸಿ ಯುನಿಟ್ ನೀಡಲಾಗಿದೆ. ಜೊತೆಗೆ ಒಳಾಂಗಣ ವಿನ್ಯಾಸಕ್ಕೆ ಮತ್ತಷ್ಟು ಮೆರಗು ನೀಡುವುದಕ್ಕಾಗಿ ಆ್ಯಂಬಿಯೆಂಟ್ ಲೈಟಿಂಗ್ಸ್ ಸೌಲಭ್ಯವನ್ನು ಸಹ ನೀಡಲಾಗಿದ್ದು, ಮರ್ಸಿಡಿಸ್ ಬೆಂಝ್ ಎಸ್‌ಯುವಿ ಕಾರುಗಳ ರೀತಿಯಲ್ಲಿ ಜೋಡಣೆ ಮಾಡಲಾಗಿದೆ.

ಐಷಾರಾಮಿ ಫೀಚರ್ಸ್‌ಗಳೊಂದಿಗೆ ಮಾಡಿಫೈಗೊಂಡ ಇನೋವಾ ಕ್ರಿಸ್ಟಾ

ಈ ಮೂಲಕ ಮಧ್ಯಮ ಗಾತ್ರದ ಕಾರುಗಳಲ್ಲೇ ಐಷಾರಾಮಿ ಫೀಚರ್ಸ್ ಬಯಸುವ ಗ್ರಾಹಕರಿಗೆ ಇದು ಸಾಕಷ್ಟು ಅನುಕೂಲಕವಾಗಲಿದ್ದು, ಹೊಸ ಇನೋವಾ ಕ್ರಿಸ್ಟಾದಲ್ಲಿ ನೀಡಲಾಗಿರುವ ಫೀಚರ್ಸ್‌ಗಳನ್ನು ಬೆಂಝ್ ನಿರ್ಮಾಣದ ಕಾರುಗಳಲ್ಲಿ ಪಡೆಯಲು ಕನಿಷ್ಠ 1 ಕೋಟಿ ಮೇಲ್ಪಟ್ಟ ಕಾರುಗಳಲ್ಲಿ ಮಾತ್ರ ಸಾಧ್ಯ ಅಂದ್ರೆ ತಪ್ಪಾಗಲಾರದು.

ಐಷಾರಾಮಿ ಫೀಚರ್ಸ್‌ಗಳೊಂದಿಗೆ ಮಾಡಿಫೈಗೊಂಡ ಇನೋವಾ ಕ್ರಿಸ್ಟಾ

ಇನ್ನು ಮುಂಬೈ ಮೂಲದ ಜನಪ್ರಿಯ ಮಾಡಿಫೈ ಕಂಪನಿಯಾದ ಡಿಸಿ ಡಿಸೈನ್ ತನ್ನ ವಿನೂತನ ವಿನ್ಯಾಸ ತಂತ್ರಜ್ಞಾನದ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿ ಬೇಡಿಕೆ ಪಡೆದುಕೊಳ್ಳತ್ತಿದ್ದು, ಮಾರುಕಟ್ಟೆಗೆ ಪ್ರವೇಶಿಸುವ ಬಹುತೇಕ ಹೊಸ ಕಾರುಗಳಲ್ಲಿ ತನ್ನದೆ ವಿಶಿಷ್ಟ್ಯ ಶೈಲಿಯ ಮಾಡಿಫೈ ವಿನ್ಯಾಸವನ್ನು ಪರಿಚಯಿಸುವ ಮೂಲಕ ಮಾಡಿಫೈ ಪ್ರಿಯರ ಆಕರ್ಷಣೆಗೆ ಕಾರಣವಾಗಿದೆ.

ಐಷಾರಾಮಿ ಫೀಚರ್ಸ್‌ಗಳೊಂದಿಗೆ ಮಾಡಿಫೈಗೊಂಡ ಇನೋವಾ ಕ್ರಿಸ್ಟಾ

ಈಗಾಗಲೇ ಸಾವಿರಾರು ವಾಹನಗಳನ್ನು ವಿಶೇಷ ಡಿಸೈನ್‌ನೊಂದಿಗೆ ಮಾಡಿಫೈ ಮಾಡುವ ಮೂಲಕ ಭಾರೀ ಬೇಡಿಕೆ ಪಡೆದುಕೊಳ್ಳುತ್ತಿರುವ ಡಿಸಿ ಡಿಸೈನ್ ಕಂಪನಿಯು ಅಧಿಕೃತವಾಗಿಯೇ ಉತ್ಪಾದನಾ ಕಂಪನಿಗಳ ಜೊತೆಗೂಡಿ ಗ್ರಾಹಕರ ಬೇಡಿಕೆಯೆಂತೆ ಮಾಡಿಫೈ ವಿನ್ಯಾಸವನ್ನು ಸಿದ್ದಪಡಿಸುತ್ತದೆ

ಐಷಾರಾಮಿ ಫೀಚರ್ಸ್‌ಗಳೊಂದಿಗೆ ಮಾಡಿಫೈಗೊಂಡ ಇನೋವಾ ಕ್ರಿಸ್ಟಾ

ಮುಂಬೈ, ಬೆಂಗಳೂರು, ಹೈದ್ರಾಬಾದ್, ಚೆನ್ನೈ ಮತ್ತು ದೆಹಲಿ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ತನ್ನ ಮಾಡಿಫೈ ಕೇಂದ್ರಗಳ ಮೂಲಕ ಬೇಡಿಕೆ ಸಲ್ಲಿಸುವ ಗ್ರಾಹಕರಿಗೆ ಮಾಡಿಫೈ ಕಾರುಗಳನ್ನು ಮಾರಾಟ ಮಾಡುವ ಡಿಸಿ ಡಿಸೈನ್ ಕಂಪನಿಯು ಬೇಡಿಕೆ ಸಲ್ಲಿಸಿದ ಒಂದು ವಾರದಲ್ಲಿ ಹೊಸ ಮಾಡಿಫೈ ಆವೃತ್ತಿಯನ್ನು ಸಿದ್ದಪಡಿಸುತ್ತದೆ.

ಐಷಾರಾಮಿ ಫೀಚರ್ಸ್‌ಗಳೊಂದಿಗೆ ಮಾಡಿಫೈಗೊಂಡ ಇನೋವಾ ಕ್ರಿಸ್ಟಾ

ಕೊನೆದಾಗಿ ಹೊಸ ಕಾರಿನ ಎಂಜಿನ್ ಕುರಿತು ಹೇಳುವುದಾದರೇ, ಡಿಸಿ ಡಿಸೈನ್ ಕಂಪನಿಯು ಹೊರಭಾಗದ ಫೀಚರ್ಸ್‌ಗಳನ್ನು ಹೊರತುಪಡಿಸಿ ಎಂಜಿನ್ ವಿಭಾಗದಲ್ಲಿ ಯಾವುದೇ ರೀತಿ ಬದಲಾವಣೆಗಳನ್ನು ತರವುದಿಲ್ಲ. ಇನೋವಾ ಕ್ರಿಸ್ಟಾ ಕಾರು ಬಿಎಸ್-6 ಎಂಜಿನ್‌ನೊಂದಿಗೆ ಮಾರಾಟಕ್ಕೆ ಲಭ್ಯವಿದ್ದು, ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕ ಆವೃತ್ತಿಯು ರೂ.15.36 ಲಕ್ಷ ಮತ್ತು ಟಾಪ್ ಎಂಡ್ ಮಾದರಿಯು ರೂ.24.06 ಲಕ್ಷ ಬೆಲೆ ಹೊಂದಿದೆ.

ಐಷಾರಾಮಿ ಫೀಚರ್ಸ್‌ಗಳೊಂದಿಗೆ ಮಾಡಿಫೈಗೊಂಡ ಇನೋವಾ ಕ್ರಿಸ್ಟಾ

ಬಿಎಸ್-6 ಎಮಿಷನ್ ಜಾರಿ ನಂತರ ಇನೋವಾ ಕ್ರಿಸ್ಟಾದಲ್ಲಿ 2.7-ಲೀಟರ್ ಪೆಟ್ರೋಲ್ ಮತ್ತು 2.4-ಲೀಟರ್ ಡೀಸೆಲ್ ಎಂಜಿನ್ ಮಾತ್ರವೇ ಮಾರಾಟ ಮಾಡಲಾಗುತ್ತಿದ್ದು, ಈ ಹಿಂದಿನ 2.8-ಲೀಟರ್ ಡೀಸೆಲ್ ಆಟೋಮ್ಯಾಟಿಕ್ ಆವೃತ್ತಿಯನ್ನು ಹೊಸ ಎಮಿಷನ್ ಪ್ರಕಾರ ಸ್ಥಗಿತಗೊಳಿಸಲಾಗಿದೆ.

More from DriveSpark

Article Published On: Thursday, April 2, 2020, 16:58 [IST]
English summary
Madhuri Dixit’s Innova Crysta Modified By DC Designs With Ultra Luxury Interiors. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+