ಶೀಘ್ರದಲ್ಲೇ ಪ್ರಾರಂಭವಾಗಲಿದೆ ಬಿಎಸ್-6 ಮಹೀಂದ್ರಾ ಅಲ್ಟುರಾಸ್ ಜಿ4 ಎಸ್‍ಯುವಿಯ ವಿತರಣೆ

ಮಹೀಂದ್ರಾ ಕಂಪನಿಯು ತನ್ನ ಬಿಎಸ್-6 ಅಲ್ಟುರಾಸ್ ಜಿ4 ಎಸ್‍ಯುವಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಈ ವರ್ಷದ ಏಪ್ರಿಲ್ ತಿಂಗಳಲ್ಲಿ ಬಿಡುಗಡೆಗೊಳಿಸಿತ್ತು. ಹೊಸ ಮಹೀಂದ್ರಾ ಅಲ್ಟುರಾಸ್ ಜಿ4 ಎಸ್‍ಯುವಿಯ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.28.69 ಲಕ್ಷಗಳಾಗಿದೆ.

ಶೀಘ್ರದಲ್ಲೇ ಪ್ರಾರಂಭವಾಗಲಿದೆ ಬಿಎಸ್-6 ಮಹೀಂದ್ರಾ ಅಲ್ಟುರಾಸ್ ಜಿ4 ಎಸ್‍ಯುವಿಯ ವಿತರಣೆ

ಮಹೀಂದ್ರಾ ಅಲ್ಟುರಾಸ್ ಜಿ4 ಎಸ್‍ಯುವಿಯನ್ನು ಬಿಎಸ್-6 ಮಾಲಿನ್ಯ ನಿಯಮಕ್ಕೆ ಹೊರತುಪಡಿಸಿ ಇತರ ಯಾವುದೇ ಬದಲಾವಣೆಯನ್ನು ಮಾಡಲಾಗಿಲ್ಲ. ಈ ಬಿಎಸ್-6 ಅಲ್ಟುರಾಸ್ ಜಿ4 ಎಸ್‍ಯುವಿಯ ವಿತರಣೆಯನ್ನು ಇದೇ ತಿಂಗಳಲ್ಲಿ ಆರಂಭಿಸಬಹುದು ಎಂದು ನಿರೀಕ್ಷಿಸುತ್ತೇವೆ. ಮಹೀಂದ್ರಾ ಅಲ್ಟುರಾಸ್ ಜಿ4 ಎಸ್‍ಯುವಿಯಲ್ಲಿ 2.2 ಲೀಟರ್ ಇ-ಎಕ್ಸ್‌ಡಿ 220 ಟರ್ಬೋಚಾರ್ಜ್ಡ್ ನಾಲ್ಕು ಸಿಲಿಂಡರ್ ಡೀಸೆಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 180-ಬಿಹೆಚ್‍ಪಿ ಪವರ್ ಮತ್ತು 420-ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 7-ಸ್ಪೀಡ್ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಅನ್ನು ಜೋಡಿಸಲಾಗಿದೆ.

ಶೀಘ್ರದಲ್ಲೇ ಪ್ರಾರಂಭವಾಗಲಿದೆ ಬಿಎಸ್-6 ಮಹೀಂದ್ರಾ ಅಲ್ಟುರಾಸ್ ಜಿ4 ಎಸ್‍ಯುವಿಯ ವಿತರಣೆ

ಬಿಎಸ್-6 ಮಾಲಿನ್ಯ ನಿಯಮಕ್ಕೆ ನವೀಕರಿಸಿದರೂ ಪವರ್ ಮತ್ತು ಟಾರ್ಕ್ ಅಂಕಿ ಅಂಶಗಳಲ್ಲಿ ಬದಲಾವಣೆಯಾಗಿಲ್ಲ. ಬಿಎಸ್-6 ಮಹೀಂದ್ರಾ ಅಲ್ಟುರಾಸ್ ಜಿ4 ಎಸ್‍ಯುವಿಯಲ್ಲಿ ಎಂಜಿನ್ ನವೀಕರಣ ಹೊರತುಪಡಿಸಿ ಹೊಸ ಅಲಾಯ್ ವ್ಹೀಲ್ ಗಳನ್ನು ಒಳಗೊಂಡಿರಬಹುದು.

MOST READ: ಬಿಡುಗಡೆಗೆ ಮುನ್ನ ಸ್ಪಾಟ್ ಟೆಸ್ಟ್ ನಡೆಸಿದ ಹೊಸ ಮಹೀಂದ್ರಾ ಥಾರ್

ಶೀಘ್ರದಲ್ಲೇ ಪ್ರಾರಂಭವಾಗಲಿದೆ ಬಿಎಸ್-6 ಮಹೀಂದ್ರಾ ಅಲ್ಟುರಾಸ್ ಜಿ4 ಎಸ್‍ಯುವಿಯ ವಿತರಣೆ

ಮಹೀಂದ್ರಾ ಅಲ್ಟುರಾಸ್ ಜಿ4 ಎಸ್‍ಯುವಿಯ ಬೇಸ್ ಮಾದರಿಯು 2ಡಬ್ಲ್ಯೂಡಿ ಮತ್ತು ಹೈ ಮಾದರಿಯಲ್ಲಿ 4ಡಬ್ಲೂಡಿ ಸಿಸ್ಟಂ ಅನ್ನು ಹೊಂದಿದೆ. ಹಿಂದಿನ ಮಾದರಿಗಳಿಗೆ ಹೋಲಿಸಿದರೆ ಹೊಸ ಮಾದರಿಗಳಿಗೆ ರೂ.1 ಲಕ್ಷದಷ್ಟು ದರವನ್ನು ಹೆಚ್ಚಿಸಿದೆ.

ಶೀಘ್ರದಲ್ಲೇ ಪ್ರಾರಂಭವಾಗಲಿದೆ ಬಿಎಸ್-6 ಮಹೀಂದ್ರಾ ಅಲ್ಟುರಾಸ್ ಜಿ4 ಎಸ್‍ಯುವಿಯ ವಿತರಣೆ

ಹೊಸ ಮಹೀಂದ್ರಾ ಅಲ್ಟುರಾಸ್ ಜಿ4 ಎಸ್‍ಯುವಿಯಲ್ಲಿ ಹಿಂದಿನ ಮಾದರಿಯ ರೀತಿಯ ಫೀಚರ್ ಗಳನ್ನು ಹೊಂದಿದೆ. ಇಂಡಿಯಾನ್ ಬ್ರ್ಯಾಂಡ್ ನ ಈ ಪೂರ್ಣ ಪ್ರಮಾಣದ ಎಸ್‍ಯುವಿಯು ಹಲವಾರು ಪ್ರೀಮಿಯಂ ಮತ್ತು ಐಷಾರಾಮಿ ಫೀಚರ್ ಗಳನ್ನು ಹೊಂದಿದೆ.

MOST READ: ಭರ್ಜರಿಯಾಗಿ ಮಾರಾಟವಾಯ್ತು ಬಿಎಸ್-6 ಮಹೀಂದ್ರಾ ಬೊಲೆರೊ

ಶೀಘ್ರದಲ್ಲೇ ಪ್ರಾರಂಭವಾಗಲಿದೆ ಬಿಎಸ್-6 ಮಹೀಂದ್ರಾ ಅಲ್ಟುರಾಸ್ ಜಿ4 ಎಸ್‍ಯುವಿಯ ವಿತರಣೆ

ಬಿಎಸ್-6 ಮಹೀಂದ್ರಾ ಅಲ್ಟುರಾಸ್ ಜಿ4 ಎಸ್‍ಯುವಿಯ ಇಂಟಿರಿಯರ್ ನಲ್ಲಿ ಆಪಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಹೊಂದಿರುವ ಟಚ್‌ಸ್ಕ್ರೀನ್ ಇನ್ಪೋಟೇನ್‍ಮೆಂಟ್ ಸಿಸ್ಟಂ ಅನ್ನು ಹೊಂದಿದೆ.

ಶೀಘ್ರದಲ್ಲೇ ಪ್ರಾರಂಭವಾಗಲಿದೆ ಬಿಎಸ್-6 ಮಹೀಂದ್ರಾ ಅಲ್ಟುರಾಸ್ ಜಿ4 ಎಸ್‍ಯುವಿಯ ವಿತರಣೆ

ಇದರೊಂದಿಗೆ ಎಲೆಕ್ಟ್ರಾನಿಕಲ್ ಆಗಿ ಹೊಂದಾಣಿಕೆ ಮಾಡಬಹುದಾದ ಮುಂಭಾಗದ ಸೀಟುಗಳು, ಟೇಲ್ ಗೇಡ್, ಡ್ಯುಯಲ್-ಜೋನ್ ಕ್ಲೈಮೇಟ್ ಕಂಟ್ರೋಲ್, ವೈರ್‌ಲೆಸ್ ಚಾರ್ಜಿಂಗ್ ಮತ್ತು ಮಲ್ಟಿ-ಫಂಕ್ಷನ್ ಸ್ಟೀರಿಂಗ್ ವ್ಹೀಲ್ ಅನ್ನು ಹೊಂದಿದೆ.

MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್‍ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

ಶೀಘ್ರದಲ್ಲೇ ಪ್ರಾರಂಭವಾಗಲಿದೆ ಬಿಎಸ್-6 ಮಹೀಂದ್ರಾ ಅಲ್ಟುರಾಸ್ ಜಿ4 ಎಸ್‍ಯುವಿಯ ವಿತರಣೆ

ಬಿಎಸ್-6 ಮಹೀಂದ್ರಾ ಅಲ್ಟುರಾಸ್ ಜಿ4 ಎಸ್‍ಯುವಿಯಲ್ಲಿ ಸುರಕ್ಷತೆಗಾಗಿ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಿದೆ. ಸುರಕ್ಷತೆಗಾಗಿ ಒಂಬತ್ತು ಏರ್‌ಬ್ಯಾಗ್, ಫ್ರಂಟ್ ಮತ್ತು ರೇರ್ ಪಾರ್ಕಿಂಗ್ ಸೆನ್ಸರ್‌ಗಳು, 360 ಡಿಗ್ರಿ ಕ್ಯಾಮೆರಾ, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ, ಹಿಲ್ ಸ್ಟಾರ್ಟ್ ಅಸಿಸ್ಟ್, ಹಿಲ್ ಡಿಸೆಂಟ್ ಕಂಟ್ರೋಲ್, ಎಬಿಎಸ್ ಜೊತೆ ಇಬಿಡಿ, ಕ್ರೂಸ್ ಕಂಟ್ರೋಲ್, ಹೈಸ್ಪೀಡ್ ಅಲರ್ಟ್ ಮತ್ತು ಸೀಟ್‌ಬೆಲ್ಟ್ ರಿಮೈಂಡರ್ ಅನ್ನು ಕೂಡ ಹೊಂದಿದೆ.

ಶೀಘ್ರದಲ್ಲೇ ಪ್ರಾರಂಭವಾಗಲಿದೆ ಬಿಎಸ್-6 ಮಹೀಂದ್ರಾ ಅಲ್ಟುರಾಸ್ ಜಿ4 ಎಸ್‍ಯುವಿಯ ವಿತರಣೆ

ಬಿಎಸ್-6 ಮಹೀಂದ್ರಾ ಅಲ್ಟುರಾಸ್ ಜಿ4 ದೇಶಿಯ ಮಾರುಕಟ್ಟೆಯಲ್ಲಿ ಟೊಯೊಟಾ ಫಾರ್ಚೂನರ್, ಫೋರ್ಡ್ ಎಂಡೀವರ್, ಸ್ಕೋಡಾ ಕೊಡಿಯಾಕ್ ಮತ್ತು ಫೋಕ್ಸ್‌ವ್ಯಾಗನ್ ಟಿಗುವಾನ್ ಆಲ್‌ಸ್ಪೇಸ್ ಎಸ್‍ಯುವಿಗಳಿಗೆ ಪೈಪೋಟಿ ನೀಡುತ್ತದೆ.

More from DriveSpark

Article Published On: Tuesday, July 7, 2020, 13:28 [IST]
English summary
BS6 Mahindra Alturas Deliveries To Begin From This Month Details. Read In Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+