ವೈರಸ್ ಭೀತಿ: ಹೈ-ಸ್ಪೆಕ್ ವೆಂಟಿಲೇಟರ್ ತಯಾರಿಕೆಗೆ ಸಿದ್ದವಾದ ಮಹೀಂದ್ರಾ

ಮಹೀಂದ್ರಾ ಕಂಪನಿಯು ಅಗ್ಗದ ಬೆಲೆಯ ವೆಂಟಿಲೇಟರ್‌ ಮತ್ತು ಫೇಸ್‌ಶೀಲ್ಡ್‌ಗಳನ್ನು ಉತ್ಪಾದನೆ ಮಾಡುವ ಮೂಲಕ ವೈರಸ್ ವಿರುದ್ಧದ ಹೋರಾಟಕ್ಕೆ ಬಹುದೊಡ್ಡ ಶಕ್ತಿ ತುಂಬಿದ್ದು, ವೈರಸ್ ವಿರುದ್ಧ ನಿರಂತರವಾಗಿ ಹೋರಾಡುತ್ತಿರುವ ಫ್ರಂಟ್ ಲೈನ್ ಕರೋನಾ ವಾರಿಯರ್ಸ್‌ಗೆ ಗರಿಷ್ಠ ಸುರಕ್ಷತೆ ಒದಗಿಸುವ ಕಾರ್ಯದಲ್ಲಿ ತೊಡಗಿಕೊಂಡಿದೆ.

ವೈರಸ್ ಭೀತಿ: ಹೈ-ಸ್ಪೆಕ್ ವೆಂಟಿಲೇಟರ್ ತಯಾರಿಕೆಗೆ ಸಿದ್ದವಾದ ಮಹೀಂದ್ರಾ

ಮಹಾಮಾರಿ ಕರೋನಾ ವೈರಸ್ ವಿರುದ್ಧ ಹೋರಾಟಕ್ಕಾಗಿ ಈಗಾಗಲೇ ಹಲವು ಆಟೋ ಉತ್ಪಾದನಾ ಕಂಪನಿಗಳು ತಮ್ಮದೆ ಆದ ರೀತಿಯಲ್ಲಿ ಸರ್ಕಾರದ ಜೊತೆ ಕೈಜೋಡಿಸಿ ನೆರವು ನೀಡುತ್ತಿದ್ದು, ಮಹೀಂದ್ರಾ ಕಂಪನಿಯು ಕೂಡಾ ಸಹ ಹಣಕಾಸಿನ ಸಹಾಯ ಮಾತ್ರವಲ್ಲದೆ ವೈರಸ್ ಹರಡುವಿಕೆಯನ್ನು ತಡೆಗಟ್ಟಲು ಹಲವು ಸುಧಾರಿತ ತಂತ್ರಜ್ಞಾನ ಪ್ರೇರಿತ ವೈದ್ಯಕೀಯ ಉಪಕರಣಗಳನ್ನು ಸಿದ್ದಪಡಿಸಿ ಸರ್ಕಾರಕ್ಕೆ ಹಸ್ತಾಂತರ ಮಾಡಿದೆ.

ವೈರಸ್ ಭೀತಿ: ಹೈ-ಸ್ಪೆಕ್ ವೆಂಟಿಲೇಟರ್ ತಯಾರಿಕೆಗೆ ಸಿದ್ದವಾದ ಮಹೀಂದ್ರಾ

ಮಹೀಂದ್ರಾ ಕಂಪನಿಯು ಕರೋನಾ ವೈರಸ್ ವಿರುದ್ಧ ಹೋರಾಟಕ್ಕೆ ಅಗತ್ಯವಿರುವ ಹ್ಯಾಂಡ್ ಸ್ಯಾನಿಟೈಜರ್ ಉತ್ಪನ್ನದಿಂದ ಹಿಡಿದು ಕೈಗೆಟುಕುವ ಬೆಲೆಯ ವೆಂಟಿಲೇಟರ್ ತನಕವು ಎಲ್ಲಾ ಮಾದರಿಯ ವೈದ್ಯಕೀಯ ಉಪಕರಣಗಳನ್ನು ಸಿದ್ದಪಡಿಸಿ ವಿತರಣೆ ಮಾಡಿದ್ದು, ಇದೀಗ ಬೇಡಿಕೆ ಆಧಾರದ ಮೇಲೆ ಸುಧಾರಿತ ತಂತ್ರಜ್ಞಾನ ಪ್ರೇರಿತ ಹೈ-ಸ್ಪೆಕ್ ವೆಂಟಿಲೇಟರ್ ಉತ್ಪಾದನೆಗೂ ಸಿದ್ದವಾಗಿದೆ.

MOST READ: ಲಾಕ್‌ಡೌನ್‌ನಿಂದ ತತ್ತರಿಸಿರುವ ಆಟೋ ಕಂಪನಿಗಳಿಗೆ ಇದೀಗ ಮತ್ತೊಂದು ಸಂಕಷ್ಟ

ವೈರಸ್ ಭೀತಿ: ಹೈ-ಸ್ಪೆಕ್ ವೆಂಟಿಲೇಟರ್ ತಯಾರಿಕೆಗೆ ಸಿದ್ದವಾದ ಮಹೀಂದ್ರಾ

ಬೆಂಗಳೂರು ಮೂಲದ ವೈದ್ಯಕೀಯ ಉಪಕರಣಗಳ ತಯಾರಿಕಾ ಕಂಪನಿ ಸ್ಕ್ಯಾನ್‌ರೇ ಪಾಲುದಾರಿಕೆಯೊಂದಿಗೆ ಹೈ-ಸ್ಪೆಕ್ ವೆಂಟಿಲೇಟರ್ ಸಿದ್ದಪಡಿಸಿದ್ದು, ಹೊಸ ವೆಂಟಿಲೇಟರ್ ಉತ್ಪಾದನೆ ಅಗತ್ಯವಾದ ಅನುಮೋದನೆ ಕೂಡಾ ದೊರೆತಿದೆ.

ವೈರಸ್ ಭೀತಿ: ಹೈ-ಸ್ಪೆಕ್ ವೆಂಟಿಲೇಟರ್ ತಯಾರಿಕೆಗೆ ಸಿದ್ದವಾದ ಮಹೀಂದ್ರಾ

ಮಹೀಂದ್ರಾ ಕಂಪನಿಯು ಕಳೆದ ವಾರವಷ್ಟೇ ಮಾರುಕಟ್ಟೆಗೆ ಪರಿಚಯಿಸಿರುವ ಅಗ್ಗದ ಬೆಲೆ ಏರ್100 ವೆಂಟಿಲೇಟರ್‌ಗಿಂತಲೂ ಇದೀಗ ಉತ್ಪಾದನೆಗೊಳ್ಳಲಿರುವ ಹೊಸ ವೆಂಟಿಲೇಟರ್ ತುಸು ದುಬಾರಿ ಬೆಲೆ ಹೊಂದಿದ್ದು, ರೂ.3 ಲಕ್ಷದಿಂದ ರೂ.4.50 ಲಕ್ಷ ಬೆಲೆ ಅಂತರದಲ್ಲಿ ನಿರ್ಮಾಣಗೊಳ್ಳಲಿವೆ.

ವೈರಸ್ ಭೀತಿ: ಹೈ-ಸ್ಪೆಕ್ ವೆಂಟಿಲೇಟರ್ ತಯಾರಿಕೆಗೆ ಸಿದ್ದವಾದ ಮಹೀಂದ್ರಾ

ಇದರ ಜೊತೆಗೆ ಮತ್ತೊಂದು ಸಿಹಿಸುದ್ದಿ ನೀಡಿರುವ ಮಹೀಂದ್ರಾ ಕಂಪನಿಯು ಇದೇ ಮೊದಲ ಬಾರಿಗೆ ಕರೋನಾ ವೈರಸ್ ಸೋಂಕು ಪಿಡಿತರ ಪ್ರಾಣ ಉಳಿಸಲು ಹಗಲು-ರಾತ್ರಿ ಶ್ರಮಿಸುತ್ತಿರುವ ವೈದ್ಯರ ಜೀವ ಹಾನಿ ತಡೆಯುವುದಕ್ಕೆ ಹೊಸ ತಂತ್ರಜ್ಞಾನ ಪ್ರೇರಿತ ಉಪಕರಣವೊಂದನ್ನು ನಿರ್ಮಾಣ ಮಾಡಿದೆ.

MOST READ: ಸ್ಕ್ರ್ಯಾಪಿಂಗ್ ನೀತಿ ಜಾರಿಗೆ ಅಂತಿಮ ಸಿದ್ದತೆ- ಆಟೋ ಉದ್ಯಮದಲ್ಲಿ ಹೊಸ ಸಂಚಲನ..

ವೈರಸ್ ಭೀತಿ: ಹೈ-ಸ್ಪೆಕ್ ವೆಂಟಿಲೇಟರ್ ತಯಾರಿಕೆಗೆ ಸಿದ್ದವಾದ ಮಹೀಂದ್ರಾ

ಉತ್ತರ ಅಮೆರಿಕದಲ್ಲಿರುವ ಮಹೀಂದ್ರಾ ಡೆಟ್ರಾಯಿಟ್ ಡಿಸೈನ್ ತಂಡವು ವೈದ್ಯರು ಮತ್ತು ಆಸ್ಪತ್ರೆಯ ಸಿಬ್ಬಂದಿಗೆ ಯಾವುದೇ ರೀತಿ ಸೋಂಕು ತಗುಲದಂತೆ ತಡೆಯಲು ಏರೋಸೊಲ್ ಬಾಕ್ಸ್ ಅನ್ನು ಸಿದ್ದಪಡಿಸಿ ಉತ್ಪಾದನೆಗೆ ಚಾಲನೆ ನೀಡಿದ್ದು, ಭಾರತದಲ್ಲೂ ಇದೀಗ ಹೊಸ ಮಾದರಿಯ ಉಪಕರಣ ನಿರ್ಮಾಣಕ್ಕೆ ಚಾಲನೆ ನೀಡಿದೆ.

ವೈರಸ್ ಭೀತಿ: ಹೈ-ಸ್ಪೆಕ್ ವೆಂಟಿಲೇಟರ್ ತಯಾರಿಕೆಗೆ ಸಿದ್ದವಾದ ಮಹೀಂದ್ರಾ

ಸೋಂಕು ಪಿಡಿತರಿಗೆ ಚಿಕಿತ್ಸೆ ನೀಡುವಾಗ ಯಾವುದೇ ರೀತಿಯ ವೈರಸ್ ವೈದ್ಯರಿಗೆ ಹರಡದಂತೆ ತಡೆಯಲು ಇದು ಸಾಕಷ್ಟು ಸಹಕಾರಿಯಾಗಲಿದ್ದು, ಮೊದಲ ಹಂತವಾಗಿ ತೆಲಂಗಾಣ ಸರ್ಕಾರಕ್ಕೆ 75 ಏರೋಸೊಲ್ ಬಾಕ್ಸ್‌ಗಳನ್ನು ವಿತರಣೆ ಮಾಡಲಾಗಿದೆ.

MOST READ: ಕರೋನಾ ಸಂಕಷ್ಟ: ಟ್ಯಾಕ್ಸಿ ಮತ್ತು ಆಟೋ ಚಾಲಕರಿಗೆ ವಿಶೇಷ ಪ್ಯಾಕೇಜ್ ಘೋಷಣೆ

ವೈರಸ್ ಭೀತಿ: ಹೈ-ಸ್ಪೆಕ್ ವೆಂಟಿಲೇಟರ್ ತಯಾರಿಕೆಗೆ ಸಿದ್ದವಾದ ಮಹೀಂದ್ರಾ

ಜೊತೆಗೆ ವಿವಿಧ ರಾಜ್ಯಗಳಿಗೆ 2.80 ಲಕ್ಷ ಫೇಸ್‌ಶೀಲ್ಡ್‌ಗಳನ್ನು ವಿತರಣೆ ಮಾಡಿರುವ ಮಹೀಂದ್ರಾ ಕಂಪನಿಯು ಶೀಘ್ರದಲ್ಲೇ ಏರೋಸೊಲ್ ಬಾಕ್ಸ್‌ಗಳನ್ನು ಸಹ ಪೂರೈಕೆ ಮಾಡಲಿದ್ದು, ವೈದ್ಯರಿಗೆ ಇದರಿಂದ ಶೇ.100 ರಷ್ಟು ಸುರಕ್ಷತೆಯ ದೊರೆಯಲಿದೆ.

Article Published On: Friday, May 15, 2020, 16:26 [IST]
English summary
Mahindra high-spec ventilators ready to enter production to support COVID-19 fight details. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+