ಬಿಎಸ್-6 ಎಂಜಿನ್‍‍ನಲ್ಲಿ ಬಿಡುಗಡೆಯಾಯ್ತು ಮಹೀಂದ್ರಾ ಕೆಯುವಿ 100 ಎನ್‌ಎಕ್ಸ್‌ಟಿ

ಮಹೀಂದ್ರಾ ಕಂಪನಿಯು ತನ್ನ ಬಿಎಸ್-6 ಕೆಯುವಿ 100 ಎನ್‌ಎಕ್ಸ್‌ಟಿ ಮೈಕ್ರೊ ಎಸ್‍ಯುವಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಹೊಸ ಮಹೀಂದ್ರಾ ಕೆಯುವಿ 100 ಎನ್‌ಎಕ್ಸ್‌ಟಿ ಮಾದರಿಯ ಪ್ರಾರಂಭಿಕ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.5.54 ಲಕ್ಷಗಳಾಗಿದೆ.

ಬಿಎಸ್-6 ಎಂಜಿನ್‍‍ನಲ್ಲಿ ಬಿಡುಗಡೆಯಾಯ್ತು ಮಹೀಂದ್ರಾ ಕೆಯುವಿ 100 ಎನ್‌ಎಕ್ಸ್‌ಟಿ

ಹೊಸ ಮಹೀಂದ್ರಾ ಕೆಯುವಿ 100 ಎನ್‌ಎಕ್ಸ್‌ಟಿ ಮೈಕ್ರೊ ಎಸ್‍ಯುವಿಯು ಕೆ2, ಕೆ4, ಕೆ6 ಮತ್ತು ಕೆ8 ಎಂಬ ನಾಲ್ಕು ರೂಪಾಂತರಗಳಲ್ಲಿ ಲಭ್ಯವಿರಲಿದೆ. ಎಲ್ಲಾ ರೂಪಾಂತರಗಳನ್ನು ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಲಾಗಿದೆ. ಟಾಪ್ ಸ್ಪೆಕ್ ಮಹೀಂದ್ರಾ ಕೆಯುವಿ 100 ಎನ್‌ಎಕ್ಸ್‌ಟಿ ಮಾದರಿಯ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.7.16 ಲಕ್ಷಗಳಾಗಿದೆ. ಇನ್ನು ಮಿಡ್ ಸ್ಪೆಕ್ ಕೆ4 ಮತ್ತು ಕೆ6 ಮಾದರಿಗಳ ಬೆಲೆ ಕ್ರಮವಾಗಿ ರೂ.6.02 ಲಕ್ಷ ಮತ್ತು ರೂ.6.23 ಲಕ್ಷಗಳಾಗಿದೆ.

ಬಿಎಸ್-6 ಎಂಜಿನ್‍‍ನಲ್ಲಿ ಬಿಡುಗಡೆಯಾಯ್ತು ಮಹೀಂದ್ರಾ ಕೆಯುವಿ 100 ಎನ್‌ಎಕ್ಸ್‌ಟಿ

ಹೊಸ ಮಹೀಂದ್ರಾ ಕೆಯುವಿ 100 ಎನ್‌ಎಕ್ಸ್‌ಟಿ ಮೈಕ್ರೊ ಎಸ್‍ಯುವಿಯಲ್ಲಿ ಆರು ಸೀಟ್‍ ಗಳ ವ್ಯವಸ್ಥೆಯನ್ನು ಒದಗಿಸಲಾಗಿದೆ. ಕಂಪನಿಯು ಕೆಯುವಿ 100 ಕಾರಿನ ಡೀಸೆಲ್ ಎಂಜಿನ್ ಅನ್ನು ಸ್ಥಗಿತಗೊಳಿಸಲಾಗಿದೆ.

MOST READ: ಹೊಸ ಹ್ಯುಂಡೈ ವೆರ್ನಾ ಫೇಸ್‌ಲಿಫ್ಟ್ ಕಾರಿನ ಮೈಲೇಜ್ ಮಾಹಿತಿ ಬಹಿರಂಗ

ಬಿಎಸ್-6 ಎಂಜಿನ್‍‍ನಲ್ಲಿ ಬಿಡುಗಡೆಯಾಯ್ತು ಮಹೀಂದ್ರಾ ಕೆಯುವಿ 100 ಎನ್‌ಎಕ್ಸ್‌ಟಿ

ಈ ಹೊಸ ಮಹೀಂದ್ರಾ ಕೆಯುವಿ 100 ಎನ್‌ಎಕ್ಸ್‌ಟಿ 1.2-ಲೀಟರ್ ಎಮ್‌ಫಾಲ್ಕನ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 82 ಬಿಹೆಚ್‍ಪಿ ಪವರ್ ಮತ್ತು 115 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ ಐದು-ಸ್ಪೀಡ್ ಗೇರ್‌ಬಾಕ್ಸ್‌ ಅನ್ನು ಜೋಡಿಸಲಾಗಿದೆ.

ಬಿಎಸ್-6 ಎಂಜಿನ್‍‍ನಲ್ಲಿ ಬಿಡುಗಡೆಯಾಯ್ತು ಮಹೀಂದ್ರಾ ಕೆಯುವಿ 100 ಎನ್‌ಎಕ್ಸ್‌ಟಿ

ಹೊಸ ಮಹೀಂದ್ರಾ ಕೆಯುವಿ 100 ಎನ್‌ಎಕ್ಸ್‌ಟಿ ಮೈಕ್ರೊ ಎಸ್‍ಯುವಿಯಲ್ಲಿ ಹಿಂದಿನ ಮಾದರಿಯ ಅದೇ ಫೀಚರ್ಸ್‍ಗಳನ್ನು ಮುಂದುವರೆಸಿದೆ. ಇದರಲ್ಲಿ ಏಳು ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ, ಕೀಲೆಸ್ ಎಂಟ್ರಿ, ಸ್ಟೀಯರಿಂಗ್-ಮೌಂಟೆಡ್ ಕಂಟ್ರೋಲ್, 15 ಇಂಚಿನ ಡ್ಯುಯಲ್ ಟೋನ್ ಅಲಾಯ್ ವ್ಹೀಲ್ ಮತ್ತು ಹೊಂದಾಣಿಕೆ ಮಾಡಬಹುದುದಾ ಡ್ರೈವರ್ ಸೀಟ್ ಅನ್ನು ಹೊಂದಿದೆ.

MOST READ: ಇತಿಹಾಸದ ಪುಟ ಸೇರಿದ ಫೋಕ್ಸ್‌ವ್ಯಾಗನ್ ಎಮಿಯೊ ಕಾರು

ಬಿಎಸ್-6 ಎಂಜಿನ್‍‍ನಲ್ಲಿ ಬಿಡುಗಡೆಯಾಯ್ತು ಮಹೀಂದ್ರಾ ಕೆಯುವಿ 100 ಎನ್‌ಎಕ್ಸ್‌ಟಿ

ಇನ್ನು ಈ ಮೈಕ್ರೊ ಎಸ್‍ಯುವಿಯನ್ನು ಸುರಕ್ಷತೆ ಹೆಚ್ಚುನ ಪ್ರಾಮುಖ್ಯತೆಯನ್ನು ನೀಡಿದ್ದಾರೆ. ಸುರಕ್ಷತೆಗಾಗಿ ಎಬಿಎಸ್ ಜೊತೆ ಇಬಿಡಿ, ರಿವರ್ಸ್ ಪಾರ್ಕಿಂಗ್ ಸೆನ್ಸರ್‌ಗಳು, ಹೈಸ್ಪೀಡ್ ಅಲರ್ಟ್, ಸೀಟ್-ಬೆಲ್ಟ್ ರಿಮೈಂಡರ್, ಡ್ಯುಯಲ್ ಏರ್‌ಬ್ಯಾಗ್‌ಗಳನ್ನು ಹೊಂದಿವೆ.

ಬಿಎಸ್-6 ಎಂಜಿನ್‍‍ನಲ್ಲಿ ಬಿಡುಗಡೆಯಾಯ್ತು ಮಹೀಂದ್ರಾ ಕೆಯುವಿ 100 ಎನ್‌ಎಕ್ಸ್‌ಟಿ

ಹೊಸ ಮಹೀಂದ್ರಾ ಕೆಯುವಿ 100 ಎನ್‌ಎಕ್ಸ್‌ಟಿ ಮೈಕ್ರೊ ಎಸ್‍ಯುವಿ ಆರು ಸಿಂಗಲ್ ಟೋನ್ ಬಣ್ಣಗಳು ಮತ್ತು ಎರಡು ಡ್ಯುಯಲ್ ಟೋನ್ ಬಣ್ಣಗಳ ಆಯ್ಕೆಯನ್ನು ಹೊಂದಿದೆ. ಇದರಲ್ಲಿ ಫೈರಿ ಆರೆಂಜ್, ಪರ್ಲ್ ವೈಟ್, ಬೆರಗುಗೊಳಿಸುವ ಸಿಲ್ವರ್, ಫ್ಲಂಬೊಯಂಟ್ ರೆಡ್, ಡಿಸೈನರ್ ಗ್ರೇ, ಮಿಡ್ನೈಟ್ ಬ್ಲ್ಯಾಕ್, ಫ್ಲಂಬೊಯಂಟ್ ರೆಡ್ / ಮೆಟಾಲಿಕ್ ಬ್ಲ್ಯಾಕ್ ಮತ್ತು ಗ್ರೇ / ಮೆಟಾಲಿಕ್ ಬ್ಲ್ಯಾಕ್ ಎಂಬ ಬಣ್ಣಗಳು ಒಳಗೊಂಡಿದೆ.

MOST READ: ಬಿಡುಗಡೆಯಾಗಲಿದೆ ಹೊಸ ಸ್ಕೋಡಾ ಕರೋಕ್ ಎಸ್‍‍‍ಯುವಿ

ಬಿಎಸ್-6 ಎಂಜಿನ್‍‍ನಲ್ಲಿ ಬಿಡುಗಡೆಯಾಯ್ತು ಮಹೀಂದ್ರಾ ಕೆಯುವಿ 100 ಎನ್‌ಎಕ್ಸ್‌ಟಿ

ಮೈಕ್ರೊ ಎಸ್‍ಯುವಿಗಾಗಿ ಮಹೀಂದ್ರಾ ಕಂಪನಿಯ ಅಧಿಕೃತ ವೆಬ್‌ಸೈಟ್ ಮೂಲಕ ಆನ್‌ಲೈನ್ ನಲ್ಲಿ ಬುಕ್ಕಿಂಗ್ ಮಾಡಬಹುದು. ಹೊಸ ಮಹೀಂದ್ರಾ ಕೆಯುವಿ 100 ಎನ್‌ಎಕ್ಸ್‌ಟಿ ಮೈಕ್ರೊ ಎಸ್‍ಯುವಿಯ ಬುಕ್ಕಿಂಗ್ ಮೊತ್ತವು ರೂ.5,000 ಗಳಾಗಿದೆ. ಲಾಕ್‌ಡೌನ್ ಮುಗಿದ ಬಳಿಕ ವಿತರಣೆಯನ್ನು ಪ್ರಾರಂಭಿಸಬಹುದು,

ಬಿಎಸ್-6 ಎಂಜಿನ್‍‍ನಲ್ಲಿ ಬಿಡುಗಡೆಯಾಯ್ತು ಮಹೀಂದ್ರಾ ಕೆಯುವಿ 100 ಎನ್‌ಎಕ್ಸ್‌ಟಿ

ಹೊಸ ಮಹೀಂದ್ರಾ ಕೆಯುವಿ 100 ಎನ್‌ಎಕ್ಸ್‌ಟಿ ಮೈಕ್ರೊ ಎಸ್‍ಯುವಿಗೆ ಭಾರತೀಯ ಮಾರುಕಟ್ಟೆಯಲ್ಲಿ ಸಧ್ಯ ಯಾವುದೇ ನೇರ ಪ್ರತಿಸ್ಪರ್ಧಿಗಳನ್ನು ಹೊಂದಿಲ್ಲ. ಆದರೆ ಈ ವರ್ಷದ ಕೊನೆಯಲ್ಲಿ ಭಾರತದಲ್ಲಿ ಬಿಡುಗಡೆಯಾಗಲಿರುವ ಟಾಟಾ ಹೆಚ್‍ಬಿಎಕ್ಸ್ ಎಸ್‍ಯುವಿಗೆ ಪೈಪೋಟಿಯನ್ನು ನೀಡುತ್ತದೆ.

More from DriveSpark

Article Published On: Tuesday, April 21, 2020, 17:29 [IST]
English summary
Mahindra KUV100 NXT BS6 Launched In India. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+