ಲಾಕ್‌ಡೌನ್ ಸಂಕಷ್ಟ: ನವೆಂಬರ್‌ಗೆ ಮುಂದೂಡಿಕೆಯಾದ ನ್ಯೂ ಜನರೇಷನ್ ಥಾರ್ ಬಿಡುಗಡೆ
ಮಾಹಾಮಾರಿ ಕರೋನಾ ವೈರಸ್‌ನಿಂದಾಗಿ ಆಟೋ ಉದ್ಯಮವು ಭಾರೀ ಪ್ರಮಾಣದ ನಷ್ಟ ಅನುಭವಿಸುತ್ತಿದ್ದು, ನಿಯಂತ್ರಣಕ್ಕೆ ಬಾರದ ವೈರಸ್ ಅನ್ನು ಮಟ್ಟ ಹಾಕಲು ಇದೀಗ ಮತ್ತೊಮ್ಮೆ ಅನಿವಾರ್ಯವಾಗಿ ದೇಶಾದ್ಯಂತ ಲಾಕ್‌ಡೌನ್ ಮಾಡಲಾಗುತ್ತಿರುವುದು ಆಟೋ ಕಂಪನಿಗಳಿಗೆ ಭಾರೀ ಹೊಡೆತ ನೀಡಲಿದೆ.

ವೈರಸ್ ಭೀತಿಯು ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಪ್ರಸ್ತುತ ಮಾರುಕಟ್ಟೆಯಲ್ಲಿರುವ ವಾಹನ ಮಾದರಿಗಳನ್ನು ಹೊರತುಪಡಿಸಿ ಹೊಸ ವಾಹನ ಬಿಡುಗಡೆಯನ್ನು ಮುಂದೂಡಿಕೆ ಮಾಡಲಾಗುತ್ತಿದ್ದು, ಕೆಲ ಹೊಸ ವಾಹನ ಮಾದರಿಗಳ ಬಿಡುಗಡೆಯ ಯೋಜನೆಯನ್ನೇ ಕೈಬಿಡಲಾಗುತ್ತಿದೆ. ಮಹೀಂದ್ರಾ ಕೂಡಾ ಲಾಕ್‌ಡೌನ್ ಸಂಕಷ್ಟದಿಂದಾಗಿ ಕೆಲವು ಹೊಸ ವಾಹನಗಳ ಬಿಡುಗಡೆಯನ್ನು ಮುಂದೂಡಿಕೆ ಮಾಡಿದ್ದು, ಇದೇ ತಿಂಗಳು ಬಿಡುಗಡೆಯಾಗಬೇಕಿದ್ದ ನ್ಯೂ ಜನರೇಷನ್ ಥಾರ್ ಮತ್ತು ಎಕ್ಸ್‌ಯುವಿ500 ಕಾರುಗಳ ಬಿಡುಗಡೆಯನ್ನು ವರ್ಷಾಂತ್ಯಕ್ಕೆ ನಿಗದಿಮಾಡಿದೆ.

ಹೌದು, ಮುಂಬರುವ ಕೆಲವೇ ದಿನಗಳಲ್ಲಿ ಬಿಡುಗಡೆಯಾಗಬೇಕಿದ್ದ ನ್ಯೂ ಜನರೇಷನ್ ಎಕ್ಸ್‌ಯುವಿ500, ಥಾರ್ ಮತ್ತು ಸ್ಕಾರ್ಪಿಯೋ ಕಾರುಗಳ ಬಿಡುಗಡೆಯನ್ನು ಮುಂದೂಡಿಕೆ ಮಾಡಲಾಗಿದ್ದು, ಹೊಸ ಕಾರುಗಳು ಇದೇ ವರ್ಷ ನವೆಂಬರ್‌ನಲ್ಲಿ ಬಿಡುಗಡೆಗೊಳ್ಳುವ ಸಾಧ್ಯತೆಗಳಿವೆ.

ಸದ್ಯಕ್ಕೆ ಎಕ್ಸ್‌ಯುವಿ500, ಸ್ಕಾರ್ಪಿಯೋ ಕಾರುಗಳ 2020ರ ಮಾದರಿಗಳನ್ನು ಬಿಎಸ್-6 ಎಂಜಿನ್‌ನೊಂದಿಗೆ ಮಾತ್ರವೇ ಬಿಡುಗಡೆ ಮಾಡಲಾಗಿದ್ದು, ಹೊಸ ವಿನ್ಯಾಸ ಮತ್ತು ವಿವಿಧ ಎಂಜಿನ್ ಆಯ್ಕೆ ಹೊಂದಿದ್ದ ನ್ಯೂ ಜನರೇಷನ್ ಮಾದರಿಗಳ ಬಿಡುಗಡೆಯನ್ನು ಮುಂದೂಡಲಾಗಿದೆ.

ಹೊಸ ಥಾರ್ ಮಾದರಿಯು ಈ ಬಾರಿ ಹಲವಾರು ಹೊಸ ಬದಲಾವಣೆಗಳನ್ನು ಪಡೆದುಕೊಂಡಿದ್ದು, ಡೀಸೆಲ್ ಮತ್ತು ಪೆಟ್ರೋಲ್ ಎರಡು ಆವೃತ್ತಿಗಳಲ್ಲೂ ಖರೀದಿಗೆ ಲಭ್ಯವಿಲಿರುವ ಹೊಸ ಕಾರು ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ವರ್ಷನ್ ಪಡೆದುಕೊಳ್ಳಲಿವೆ.

ಹೊಸ ಥಾರ್ ಕಾರು ಈ ಬಾರಿ ನವೀಕರಿಸಿದ 2.2-ಡೀಸೆಲ್ ಎಂಜಿನ್ ಜೊತೆಗೆ ಹೊಸದಾಗಿ 2.0-ಲೀಟರ್ ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ಸಹ ಹೊಂದಿಲಿದ್ದು, ಮಾಲಿನ್ಯ ಹೊರಸೂಸುವಿಕೆ ಪ್ರಮಾಣದಲ್ಲಿ ಸಾಕಷ್ಟು ಸುಧಾರಣೆ ಕಂಡಿದೆ.
MOST READ: ಪ್ರತಿ ಚಾರ್ಜ್‌ಗೆ 480 ಕಿ.ಮೀ ಮೈಲೇಜ್ ನೀಡುವ ಎಲೆಕ್ಟ್ರಿಕ್ ಎಸ್‌ಯುವಿ ಬಿಡುಗಡೆ ಮಾಡಲಿದೆ ನಿಸ್ಸಾನ್

ಭಾರತದಲ್ಲಿ ಸದ್ಯ ಬಿಎಸ್-6 ನಿಯಮವು ಏಪ್ರಿಲ್ 1ರಿಂದ ಕಡ್ಡಾಯವಾಗಿ ಜಾರಿಗೆ ಬಂದಿದ್ದು, ಕೇಂದ್ರ ಸರ್ಕಾರದ ಹೊಸ ನಿಯಮದಂತೆ ಮಹೀಂದ್ರಾ ಸೇರಿದಂತೆ ಬಹುತೇಕ ಆಟೋ ಕಂಪನಿಗಳು ಬಿಎಸ್-6 ಎಂಜಿನ್ ಪ್ರೇರಿತ ಡೀಸೆಲ್ ವಾಹನಗಳನ್ನು ಬಿಡುಗಡೆಗೊಳಿಸಿವೆ.

ಹೊಸ ಎಂಜಿನ್‌ನಿಂದಾಗಿ ಥಾರ್ ಕಾರು ಈ ಬಾರಿ ಆಫ್-ರೋಡ್ ಪ್ರಿಯರನ್ನು ಮತ್ತಷ್ಟು ಸೆಳೆಯಲಿದ್ದು, ಹೊಸ ಕಾರಿನ ಡೀಸೆಲ್ ಮತ್ತು ಪೆಟ್ರೋಲ್ ಎರಡು ಮಾದರಿಯಲ್ಲೂ ಆಟೋಮ್ಯಾಟಿಕ್ ಮತ್ತು ಮ್ಯಾನುವಲ್ ಗೇರ್‌ಬಾಕ್ಸ್ ಆಯ್ಕೆ ನೀಡಲಾಗಿದೆ.
MOST READ: ರೂ.5 ಲಕ್ಷಕ್ಕಿಂತ ಕಡಿಮೆ ಬೆಲೆಯ ಜನಪ್ರಿಯ ಕಾರುಗಳಿವು

ಜೊತೆಗೆ ಬಿಎಸ್-6 ವೈಶಿಷ್ಟ್ಯತೆಗಳಿಂದಾಗಿ ಮಹೀಂದ್ರಾ ಹೊಸ ಕಾರುಗಳಲ್ಲಿ ಈ ಬಾರಿ ಹಲವಾರು ಬದಲಾವಣೆಗಳಾಗಿದ್ದು, ಹಲವಾರು ಹೊಸ ಸುರಕ್ಷಾ ಸೌಲಭ್ಯಗಳನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗಿದೆ.


Click it and Unblock the Notifications