ಲಾಕ್‌ಡೌನ್ ಸಂಕಷ್ಟದಲ್ಲೂ ಬೆಳವಣಿಗೆ ಹಾದಿಯಲ್ಲಿ ಮಹೀಂದ್ರಾ ಟ್ರ್ಯಾಕ್ಟರ್ ಮಾರಾಟ

ಮಹಾಮಾರಿ ಕರೋನಾ ವೈರಸ್‌ನಿಂದಾಗಿ ಆಟೋ ಉದ್ಯಮವು ಭಾರೀ ನಷ್ಟ ಅನುಭವಿಸಿದ್ದು, ಪ್ರಯಾಣಿಕರ ಬಳಕೆಯ ವಾಹನ ಮಾರಾಟವು ಗಣನೀಯವಾಗಿ ಕುಸಿತ ಕಂಡಿದೆ. ಆದರೆ ಆರ್ಥಿಕ ಸಂಕಷ್ಟದ ನಡುವೆಯೂ ಕೃಷಿ ಚಟುವಟಿಕೆಯ ವಾಹನ ಮಾರಾಟ ಮಾತ್ರ ಕಳೆದ ವರ್ಷಕ್ಕಿಂತಲೂ ಈ ವರ್ಷ ಹೆಚ್ಚಳವಾಗಿದೆ.

ಬೆಳವಣಿಗೆ ಹಾದಿಯಲ್ಲಿ ಮಹೀಂದ್ರಾ ಟ್ರ್ಯಾಕ್ಟರ್ ಮಾರಾಟ

ಹೌದು, ಆಧುನಿಕ ಕೃಷಿ ಚಟುವಟಿಕೆಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ವಿವಿಧ ಟ್ರ್ಯಾಕ್ಟರ್ ಮಾದರಿಗಳು ಕಳೆದ ಒಂದು ದಶಕದಲ್ಲಿ ಭಾರೀ ಪ್ರಮಾಣದ ಬೇಡಿಕೆಯನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದು, ಬಹುತೇಕ ಕೃಷಿ ಚಟುವಟಿಕೆಗಳನ್ನು ಯಾಂತ್ರಿಕರಣಗೊಳಿಸುತ್ತಿರುವುದು ಟ್ರ್ಯಾಕ್ಟರ್ ಬೇಡಿಕೆಯಲ್ಲಿ ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿದೆ. ಅದರಲ್ಲೂ ಮಹೀಂದ್ರಾ ನಿರ್ಮಾಣದ ವಿವಿಧ ಟ್ರ್ಯಾಕ್ಟರ್ ಮಾದರಿಗಳು ಗ್ರಾಹಕರ ಪ್ರಮುಖ ಆಕರ್ಷಣೆಯಾಗಿದ್ದು, 2020ರ ಮೇ, ಜೂನ್ ಮತ್ತು ಜುಲೈ ಅವಧಿಯಲ್ಲಿ ಕಳೆದ ವರ್ಷಕ್ಕಿಂತಲೂ ಹೆಚ್ಚಿನ ಪ್ರಮಾಣದ ಮಾರಾಟ ಪ್ರಮಾಣವನ್ನು ದಾಖಲಿಸಿದೆ.

ಬೆಳವಣಿಗೆ ಹಾದಿಯಲ್ಲಿ ಮಹೀಂದ್ರಾ ಟ್ರ್ಯಾಕ್ಟರ್ ಮಾರಾಟ

ಕಳೆದ ವರ್ಷಕ್ಕಿಂತ ಈ ವರ್ಷದ ಮೇ ಅವಧಿಯಲ್ಲಿ ಶೇ.2ರಷ್ಟು, ಜೂನ್ ಅವಧಿಯಲ್ಲಿ ಶೇ.10 ರಷ್ಟು ಮತ್ತು ಜುಲೈ ಅವಧಿಯಲ್ಲಿ ಶೇ.28ರಷ್ಟು ಹೆಚ್ಚುವರಿ ಬೆಳವಣಿಗೆಯೊಂದಿಗೆ ಟ್ರ್ಯಾಕ್ಟರ್ ಮಾರಾಟದಲ್ಲಿ ಮುಂಚೂಣಿ ಸಾಧಿಸುತ್ತಿರುವ ಮಹೀಂದ್ರಾ ಫಾರ್ಮಾ ಟೆಕ್ ಕಂಪನಿಯು ಜುಲೈ ಅವಧಿಯಲ್ಲಿ ಒಟ್ಟು 24,463 ಯುನಿಟ್ ಮಾರಾಟ ಮಾಡಿದೆ.

ಬೆಳವಣಿಗೆ ಹಾದಿಯಲ್ಲಿ ಮಹೀಂದ್ರಾ ಟ್ರ್ಯಾಕ್ಟರ್ ಮಾರಾಟ

ಕಳೆದ ವರ್ಷದ ಜುಲೈ ಅವಧಿಯಲ್ಲಿ 19,174 ಯುನಿಟ್ ಮಾರಾಟ ಮಾಡಿದ್ದ ಮಹೀಂದ್ರಾ ಕಂಪನಿಯು ಇದೀಗ ಕರೋನಾ ಸಂಕಷ್ಟದ ನಡುವೆಯೂ ಭರ್ಜರಿ ಬೇಡಿಕೆ ಪಡೆದುಕೊಂಡಿದ್ದು, 939 ಯುನಿಟ್ ಹೈ ಎಂಡ್ ಮಾದರಿಗಳನ್ನು ವಿದೇಶಿ ಮಾರುಕಟ್ಟೆಗಳಿಗೆ ರಫ್ತು ಮಾಡಿದೆ.

ಬೆಳವಣಿಗೆ ಹಾದಿಯಲ್ಲಿ ಮಹೀಂದ್ರಾ ಟ್ರ್ಯಾಕ್ಟರ್ ಮಾರಾಟ

ಇನ್ನು ಕೃಷಿ ಕಾರ್ಮಿಕರ ಕೊರತೆ ನೀಗಿಸುವುದು ಹಾಗೂ ಕಾರ್ಮಿಕರ ಮೇಲಿನ ಅವಲಂಬನೆ ಕಡಿಮೆಗೊಳಿಸುವುದರ ಜೊತೆಗೆ ಉತ್ಪಾದನಾ ಸಾಮಾರ್ಥ್ಯ ಹೆಚ್ಚಿಸಲು ಯಾಂತ್ರಿಕರಣ ಯೋಜನೆಗಳು ಕೃಷಿ ಚಟುವಟಿಕೆಯಲ್ಲಿ ಭಾರೀ ಬದಲಾವಣೆಗೆ ಕಾರಣವಾಗಿದ್ದು, ಇದೇ ಕಾರಣಕ್ಕೆ ಟ್ರ್ಯಾಕ್ಟರ್ ಮಾರಾಟ ಪ್ರಮಾಣದಲ್ಲಿ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಲೇ ಇದೆ.

ಬೆಳವಣಿಗೆ ಹಾದಿಯಲ್ಲಿ ಮಹೀಂದ್ರಾ ಟ್ರ್ಯಾಕ್ಟರ್ ಮಾರಾಟ

ಭಾರತದಲ್ಲಿ ಸುಮಾರು 50ಕ್ಕೂ ಹೆಚ್ಚು ಕೃಷಿ ಚಟುವಟಿಕೆಗೆ ಸಂಬಂಧಿತದಂತೆ ವಿವಿಧ ಮಾದರಿಯ ಯಂತ್ರೊಪಕರಣರಗಳನ್ನು ಸಿದ್ದಪಡಿಸುವ ಕಂಪನಿಗಳು ಕಾರ್ಯನಿರ್ವಹಿಸುತ್ತಿದ್ದು, ಇದರಲ್ಲಿ ಕೆಲವೇ ಕೆಲವು ಕಂಪನಿಗಳು ಮಾತ್ರವೇ ಟ್ರ್ಯಾಕ್ಟರ್ ಉತ್ಪಾದನೆ ಮಾಡುತ್ತಿವೆ.

ಬೆಳವಣಿಗೆ ಹಾದಿಯಲ್ಲಿ ಮಹೀಂದ್ರಾ ಟ್ರ್ಯಾಕ್ಟರ್ ಮಾರಾಟ

ಮಹೀಂದ್ರಾ, ಸ್ವರಾಜ್, ಟಫೆ, ಸೊನಾಲಿಕಾ, ಎಸ್ಕಾರ್ಟ್ಸ್, ಜಾನ್ ಡಿಯರ್, ನ್ಯೂ ಹೊಲಾಂಡ್ ಕಂಪನಿಗಳು ಭಾರತದಲ್ಲಿ ಟ್ರ್ಯಾಕ್ಟರ್ ಮಾರಾಟ ಮಾಡುವ ಪ್ರಮುಖ ಕಂಪನಿಗಳಾಗಿದ್ದು, 2019-20ರ ಹಣಕಾಸು ವರ್ಷದಲ್ಲಿ ಮಹೀಂದ್ರಾ ಆ್ಯಂಡ್ ಮಹೀಂದ್ರಾ ಲಿಮಿಟೆಡ್ ಫಾರ್ಮಾ ಇಕ್ವಿಪ್‌ಮೆಂಟ್ ವಿಭಾಗವು ಸುಮಾರು 2,91,901 ಟ್ರ್ಯಾಕ್ಟರ್ ಯುನಿಟ್ ಮಾರಾಟ ಮಾಡಿದೆ.

MOST READ: ರೂ.5 ಲಕ್ಷಕ್ಕಿಂತ ಕಡಿಮೆ ಬೆಲೆಯ ಜನಪ್ರಿಯ ಕಾರುಗಳಿವು

ಬೆಳವಣಿಗೆ ಹಾದಿಯಲ್ಲಿ ಮಹೀಂದ್ರಾ ಟ್ರ್ಯಾಕ್ಟರ್ ಮಾರಾಟ

ಆದರೆ ಕಳೆದ ವರ್ಷ ಉಂಟಾದ ಆರ್ಥಿಕ ಹಿಂಜರಿತವೂ ಕೃಷಿ ವಲಯದ ಭಾರೀ ಪರಿಣಾಮದಿಂದಾಗಿ ಕೃಷಿ ಉಪಕರಣ ಮಾರಾಟವು ಸಹ ಕುಸಿತ ಕಂಡಿತ್ತು. ಆದರೂ 2,91,901 ಯುನಿಟ್ ಮಾರಾಟ ಮಾಡಿದ್ದ ಮಹೀಂದ್ರಾ ಕಂಪನಿಯು ಟ್ರ್ಯಾಕ್ಟರ್ ಮಾರಾಟದಲ್ಲಿ ಮೊದಲ ಸ್ಥಾನದಲ್ಲೇ ಮುಂದುವರಿದ್ದು, ಯುವೊ 40ಹೆಚ್‌ಪಿ, ಯುವೊ 50ಹೆಚ್‌ಪಿ ಮತ್ತು ಅರ್ಜುನ ನೊವೊ ಮಾದರಿಗಳ ಮಾರಾಟದಲ್ಲಿ ಉತ್ತಮ ಬೇಡಿಕೆ ಹೊಂದಿದೆ.

ಬೆಳವಣಿಗೆ ಹಾದಿಯಲ್ಲಿ ಮಹೀಂದ್ರಾ ಟ್ರ್ಯಾಕ್ಟರ್ ಮಾರಾಟ

ಇತ್ತೀಚೆಗೆ ಮಹೀಂದ್ರಾ ಕಂಪನಿಯು ಹೊಸ ಸರಣಿಯ ಸರ್‌ಪಂಚ್ ಪ್ಲಸ್ ಟ್ರಾಕ್ಟರ್ ಬಿಡುಗಡೆ ಮಾಡಿದ್ದು , ಹೊಸ ಸರ್‌ಪಂಚ್ ಸರಣಿಯ ಟ್ರ್ಯಾಕ್ಟರ್‌ಗಳನ್ನು 30 ಹೆಚ್‌ಪಿಯಿಂದ 50 ಹೆಚ್‌ಪಿ ವ್ಯಾಪ್ತಿಯಲ್ಲಿ ಬಿಡುಗಡೆಗೊಳಿಸಲಾಗಿದೆ.

MOST READ: ಪ್ರತಿ ಚಾರ್ಜ್‌ಗೆ 480 ಕಿ.ಮೀ ಮೈಲೇಜ್ ನೀಡುವ ಎಲೆಕ್ಟ್ರಿಕ್ ಎಸ್‌ಯುವಿ ಬಿಡುಗಡೆ ಮಾಡಲಿದೆ ನಿಸ್ಸಾನ್

ಬೆಳವಣಿಗೆ ಹಾದಿಯಲ್ಲಿ ಮಹೀಂದ್ರಾ ಟ್ರ್ಯಾಕ್ಟರ್ ಮಾರಾಟ

ಹೊಸ ಸರ್‌ಪಂಚ್ ಸರಣಿಯ ಟ್ರ್ಯಾಕ್ಟರ್‌ಗಳು ಹಳೆ ಮಾದರಿಯ ಟ್ರ್ಯಾಕ್ಟರ್‌ಗಳಿಗಿಂತಲೂ 2 ಹೆಚ್‌ಪಿ ಹೆಚ್ಚು ಪವರ್ ಉತ್ಪಾದಿಸುತ್ತವೆ. ಹೊಸ ಟ್ರ್ಯಾಕ್ಟರ್‌ಗಳು ಹೆಚ್ಚಿನ ಪವರ್ ಹಾಗೂ ಟಾರ್ಕ್ ಉತ್ಪಾದಿಸಲಿದ್ದು, ಕೃಷಿ ಕೆಲಸವನ್ನು ಸುಲಭಗೊಳಿಸುತ್ತವೆ ಎಂದು ಮಹೀಂದ್ರಾ ಕಂಪನಿಯು ಹೇಳಿದೆ.

More from DriveSpark

Article Published On: Saturday, August 1, 2020, 20:10 [IST]
English summary
Mahindra’s Farm Equipment Sector Sells 24,463 Units in India during July 2020. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+