ಹೊಸ ಫೀಚರ್‌‌ಗಳನ್ನು ಪಡೆದುಕೊಂಡ ಮಹೀಂದ್ರಾ ಸ್ಕಾರ್ಪಿಯೋ ಟಾಪ್-ಎಂಡ್ ವೆರಿಯೆಂಟ್‌ಗಳು

ಮಹೀಂದ್ರಾ ಕಂಪನಿಯು ತನ್ನ ಜನಪ್ರಿಯ ಸ್ಕಾರ್ಪಿಯೋ ಎಸ್‌ಯುವಿಯ ಟಾಪ್-ಎಂಡ್ ವೆರಿಯೆಂಟ್‌ಗಳಲ್ಲಿ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇ ಫೀಚರ್‌‌ಗಳನ್ನು ಪರಿಚಯಿಸಿದೆ. ಈ ಹೊಸ ಫೀಚರ್‌‌ಗಳು ಹೈ-ಸ್ಪೆಕ್ ಎಸ್9 ಮತ್ತು ಎಸ್11 ವೆರಿಯೆಂಟ್‌ಗಳಲ್ಲಿ ಮಾತ್ರ ಲಭ್ಯವಿರುತ್ತದೆ.

ಹೊಸ ಫೀಚರ್‌‌ಗಳನ್ನು ಪಡೆದುಕೊಂಡ ಮಹೀಂದ್ರಾ ಸ್ಕಾರ್ಪಿಯೋ ಟಾಪ್-ಎಂಡ್ ವೆರಿಯೆಂಟ್‌ಗಳು

ಯಾವುದೇ ಹೆಚ್ಚುವರಿ ಬೆಲೆ ಇಲ್ಲದೆ ನಿಯಮಿತವಾಗಿ ನವೀಕರಣದ ಭಾಗವಾಗಿ ಕಾರು ತಯಾರಕರು ಈ ಫೀಚರ್‌‌ಗಳನ್ನು ಗ್ರಾಹಕರಿಗೆ ನೀಡುತ್ತಿದ್ದಾರೆ. ಸ್ಕಾರ್ಪಿಯೋದಲ್ಲಿನ ಕನೆಕ್ಟಿವಿಟಿ ನವೀಕರಣವು ಆಧುನಿಕ ಸಂಪರ್ಕ ಆಯ್ಕೆಗಳನ್ನು ತರುತ್ತದೆ. ಇದು ಗ್ರಾಹಕರಿಗೆ ಸುರಕ್ಷಿತ ಮತ್ತು ಹೆಚ್ಚು ಅನುಕೂಲಕರ ಚಾಲನಾ ಅನುಭವವನ್ನು ನೀಡುತ್ತದೆ. ಸ್ಟೀಯರಿಂಗ್ ವ್ಹೀಲ್ ನಿಂದ ಕೈಗಳನ್ನು ತೆಗೆದುಕೊಳ್ಳುವ ಅಗತ್ಯವಿಲ್ಲದೆ ಬಳಕೆದಾರರು ಧ್ವನಿ ಅಥವಾ ಸ್ಟೀಯರಿಂಗ್ ಮೌಂಟಡ್ ಕಂಟ್ರೋಲ್ ಗಳನ್ನು ಬಳಸಬಹುದು.

ಹೊಸ ಫೀಚರ್‌‌ಗಳನ್ನು ಪಡೆದುಕೊಂಡ ಮಹೀಂದ್ರಾ ಸ್ಕಾರ್ಪಿಯೋ ಟಾಪ್-ಎಂಡ್ ವೆರಿಯೆಂಟ್‌ಗಳು

ಮಹೀಂದ್ರಾ ಸ್ಕಾರ್ಪಿಯೋ ಬಹಳ ದೀರ್ಘಕಾಲದಿಂದ ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ. ಭಾರತೀಯ ಮಾರುಕಟ್ಟೆಯ ಜನಪ್ರಿಯ ಎಸ್‍ಯುವಿಗಳಲ್ಲಿ ಮಹೀಂದ್ರಾ ಸ್ಕಾರ್ಪಿಯೋ ಕೂಡ ಒಂದಾಗಿದೆ. ಮಹೀಂದ್ರಾ ಕಂಪನಿಯ ಸರಣಿಯ ಕಾರು ಮಾರಾಟದಲ್ಲಿ ಸ್ಕಾರ್ಪಿಯೋ ಎಸ್‍‍ಯುವಿಯ ಕೊಡುಗೆಯು ದೊಡ್ಡದು.

MOST READ: ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಟೊಯೊಟಾ ಫಾರ್ಚೂನರ್ ಫೇಸ್‌ಲಿಫ್ಟ್‌

ಹೊಸ ಫೀಚರ್‌‌ಗಳನ್ನು ಪಡೆದುಕೊಂಡ ಮಹೀಂದ್ರಾ ಸ್ಕಾರ್ಪಿಯೋ ಟಾಪ್-ಎಂಡ್ ವೆರಿಯೆಂಟ್‌ಗಳು

2002ರಲ್ಲಿ ಮಹೀಂದ್ರಾ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ಮೊದಲ ಬಾರಿಗೆ ಸ್ಕಾರ್ಪಿಯೋ ಬಿಡುಗಡೆಗೊಳಿಸಿದ ನಂತರ ಎರಡು ಬಾರಿ ನವೀಕರಣಗೊಳಿಸಿದೆ. ಕಂಪನಿಯು ಸ್ಕಾರ್ಪಿಯೋ ಎಸ್‍‍ಯುವಿಯನ್ನು 2006ರಲ್ಲಿ ಮತ್ತು 2014ರಲ್ಲಿ ನವೀಕರಣಗೊಳಿಸಿತ್ತು.

ಹೊಸ ಫೀಚರ್‌‌ಗಳನ್ನು ಪಡೆದುಕೊಂಡ ಮಹೀಂದ್ರಾ ಸ್ಕಾರ್ಪಿಯೋ ಟಾಪ್-ಎಂಡ್ ವೆರಿಯೆಂಟ್‌ಗಳು

ಬಿಎಸ್-6 ಸ್ಕಾರ್ಪಿಯೋ ಎಸ್‍ಯುವಿಯು ಎಸ್5, ಎಸ್7, ಎಸ್9 ಮತ್ತು ಎಸ್11 ಎಂಬ ನಾಲ್ಕು ರೂಪಾಂತರಗಳಲ್ಲಿ ಬಿಡುಗಡೆಯಾಗಿದೆ.ಇದರಲ್ಲಿ ಎಸ್3 ರೂಪಾಂತರವು ಎಂಟ್ರಿ-ಲೆವೆಲ್ ಆದರೆ ಎಸ್11 ಟಾಪ್-ಎಂಡ್ ಎಡಬ್ಲ್ಯೂಡಿ ರೂಪಾಂತರವಾಗಿದೆ.

MOST READ: ಗ್ಲೋಬಲ್ ಎನ್‌ಸಿಎಪಿಯ ಸುರಕ್ಷತಾ ಟೆಸ್ಟ್​ನಲ್ಲಿ ಅಗ್ರಸ್ಥಾನಗಳಿಸಿದ ಮಹೀಂದ್ರಾ ಕಾರು

ಹೊಸ ಫೀಚರ್‌‌ಗಳನ್ನು ಪಡೆದುಕೊಂಡ ಮಹೀಂದ್ರಾ ಸ್ಕಾರ್ಪಿಯೋ ಟಾಪ್-ಎಂಡ್ ವೆರಿಯೆಂಟ್‌ಗಳು

ಹೊಸ ಸ್ಕಾರ್ಪಿಯೋ 2.2 ನಾಲ್ಕು ಸಿಲಿಂಡರ್ ಡೀಸೆಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 140 ಬಿಹೆಚ್‍ಪಿ ಪವರ್ ಮತ್ತು 320 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 6-ಸ್ಪೀಡ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ.

ಹೊಸ ಫೀಚರ್‌‌ಗಳನ್ನು ಪಡೆದುಕೊಂಡ ಮಹೀಂದ್ರಾ ಸ್ಕಾರ್ಪಿಯೋ ಟಾಪ್-ಎಂಡ್ ವೆರಿಯೆಂಟ್‌ಗಳು

ಈ ಎಸ್‍ಯುವಿಯಲ್ಲಿ 6 ಏರ್‌ಬ್ಯಾಗ್‌ಗಳು, ಫ್ರಂಟ್ ಪಾರ್ಕಿಂಗ್ ಸೆನ್ಸಾರ್, ರೇರ್ ಪಾರ್ಕಿಂಗ್ ಕ್ಯಾಮೆರಾ, ರೂಫ್ ರೈಲ್ಸ್, ಎಲ್‌ಇಡಿ ಹೆಡ್‌ಲ್ಯಾಂಪ್, ಎಲ್‌ಇಡಿ ಫಾಗ್ ಲ್ಯಾಂಪ್, ಟರ್ನ್ ಇಂಡಿಕೇಟರ್ ಲೈಟ್, ಸಿಲ್ವರ್ ಸ್ಕೀಡ್ ಪ್ಲೇಟ್, ರೇರ್ ಎಸಿ ವೆಂಟ್ಸ್ ಗಳನ್ನು ಹೊಂದಿದೆ.

MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್‍ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

ಹೊಸ ಫೀಚರ್‌‌ಗಳನ್ನು ಪಡೆದುಕೊಂಡ ಮಹೀಂದ್ರಾ ಸ್ಕಾರ್ಪಿಯೋ ಟಾಪ್-ಎಂಡ್ ವೆರಿಯೆಂಟ್‌ಗಳು

ಇದರೊಂದಿಗೆ ಎಮರ್ಜೆನ್ಸಿ ಕಾಲ್, ಫ್ರಂಟ್ ಫಾಗ್ ಲ್ಯಾಂಪ್, ಇಂಟಿಗ್ರೇಟಡ್ ಇಂಡೀಕೆಟರ್ ಸಿಗ್ನಲ್, ಸ್ಟೀಯರಿಂಗ್ ಮೌಂಟಡ್ ಕಂಟ್ರೋಲ್, ಆಂಟಿ-ಪಿಂಚ್ ಮತ್ತು ಒನ್-ಪ್ರೆಸ್ ರೈಸಿಂಗ್ ಡ್ರೈವರ್ ವಿಂಡೋ, ಬ್ಲೂಟೂತ್, ಯುಎಸ್‌ಬಿ ಮತ್ತು ಎಯುಎಕ್ಸ್‌ನೊಂದಿಗೆ 7.0-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ, ಗೇರ್-ಶಿಫ್ಟ್ ಇಂಡೀಕೆಟರ್ಮತ್ತು ಇತರ ಫೀಚರ್ ಗಳನ್ನು ಹೊಂದಿದೆ.

ಹೊಸ ಫೀಚರ್‌‌ಗಳನ್ನು ಪಡೆದುಕೊಂಡ ಮಹೀಂದ್ರಾ ಸ್ಕಾರ್ಪಿಯೋ ಟಾಪ್-ಎಂಡ್ ವೆರಿಯೆಂಟ್‌ಗಳು

ಮಹೀಂದ್ರಾ ಕಂಪನಿಯು ಬಿಎಸ್ 6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಿ ಈ ವರ್ಷದ ಆರಂಭದಲ್ಲಿ ಬಿಡುಗಡೆಗೊಳಿಸಿತ್ತು. ಮಹೀಂದ್ರಾ ಸ್ಕಾರ್ಪಿಯೋ ಭಾರತೀಯ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಮಾರಾಟವಾಗುವ ಎಸ್‍ಯುವಿಗಳಲ್ಲಿ ಒಂದಾಗಿದೆ.

Article Published On: Wednesday, October 14, 2020, 20:55 [IST]
English summary
Higher-Spec Mahindra Scorpio Variants Get Android Auto And Apple CarPlay Upgrade. Read In Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+