ಅಚ್ಚರಿಯ ಬೆಲೆಗೆ ಬಿಡುಗಡೆಯಾಗಲಿದೆ ಬಿಎಸ್-6 ಎಕ್ಸ್‌ಯುವಿ300 ಡೀಸೆಲ್ ವರ್ಷನ್

ಮಹೀಂದ್ರಾ ಸಂಸ್ಥೆಯು ಈಗಾಗಲೇ ತನ್ನ ಜನಪ್ರಿಯ ಕಂಪ್ಯಾಕ್ಟ್ ಎಸ್‌ಯುವಿ ಆವೃತ್ತಿಯಾದ ಎಕ್ಸ್‌ಯುವಿ300 ಕಾರಿನಲ್ಲಿ ಬಿಎಸ್-6 ಎಂಜಿನ್ ಪ್ರೇರಿತ ಪೆಟ್ರೋಲ್ ಮಾದರಿಯನ್ನು ಬಿಡುಗಡೆಗೊಳಿಸಿದ್ದು, ಇದೀಗ ಹೊಸ ಡೀಸೆಲ್ ಮಾದರಿಯ ಬಿಡುಗಡೆಗೆ ಸಿದ್ದತೆ ನಡೆಸಿದೆ.

ಅಚ್ಚರಿಯ ಬೆಲೆಗೆ ಬಿಡುಗಡೆಯಾಗಲಿದೆ ಬಿಎಸ್-6 ಎಕ್ಸ್‌ಯುವಿ300 ಡೀಸೆಲ್ ವರ್ಷನ್

ಎಪ್ರಿಲ್ 1ರಿಂದ ಜಾರಿಗೆ ಬರಲಿರುವ ಬಿಎಸ್-6 ಎಮಿಷನ್ ನಿಯಮದಂತೆ ಹೊಸ ಕಾರುಗಳನ್ನು ಅಭಿವೃದ್ದಿಗೊಳಿಸಿರುವ ಮಹೀಂದ್ರಾ ಕಂಪನಿಯು ಈ ತಿಂಗಳ ಕೊನೆಯಲ್ಲಿ ವಿವಿಧ ಕಾರು ಮಾದರಿಗಳ ಬಿಎಸ್-6 ಆವೃತ್ತಿಗಳನ್ನು ಮಾರುಕಟ್ಟೆಗೆ ಪರಿಚಯಿಸಲು ಸಿದ್ದತೆ ನಡೆಸಿತ್ತು. ಆದರೆ ಕರೋನಾ ಭೀತಿ ಹಿನ್ನಲೆಯಲ್ಲಿ ಹೊಸ ಕಾರುಗಳ ಬಿಡುಗಡೆಯನ್ನು ತಾತ್ಕಲಿಕವಾಗಿ ಮುಂದೂಡಿಕೆ ಮಾಡಿದ್ದು, ಇದರಲ್ಲಿ ಎಕ್ಸ್‌ಯುವಿ300 ಕಾರಿನ ಡೀಸೆಲ್ ಆವೃತ್ತಿಯು ಕೂಡಾ ಒಂದಾಗಿದೆ.

ಅಚ್ಚರಿಯ ಬೆಲೆಗೆ ಬಿಡುಗಡೆಯಾಗಲಿದೆ ಬಿಎಸ್-6 ಎಕ್ಸ್‌ಯುವಿ300 ಡೀಸೆಲ್ ವರ್ಷನ್

ಬಿಎಸ್-6 ಎಂಜಿನ್ ಹೊಂದಿರುವ ಎಕ್ಸ್‌ಯುವಿ300 ಡೀಸೆಲ್ ಮಾದರಿಯು ಬಿಎಸ್-4 ಆವೃತ್ತಿಗಿಂತಲೂ ಬೆಲೆಯಲ್ಲಿ ತುಸು ದುಬಾರಿಯಾಗಿದ್ದರೂ ಕೂಡಾ ಇತರೆ ಕಾರು ಮಾದರಿಗಳಿಂತಲೂ ಅತಿ ಕಡಿಮೆ ಬೆಲೆ ಏರಿಕೆಯನ್ನು ಪಡೆದುಕೊಂಡಿದೆ.

ಅಚ್ಚರಿಯ ಬೆಲೆಗೆ ಬಿಡುಗಡೆಯಾಗಲಿದೆ ಬಿಎಸ್-6 ಎಕ್ಸ್‌ಯುವಿ300 ಡೀಸೆಲ್ ವರ್ಷನ್

ಮಾಹಿತಿಗಳ ಪ್ರಕಾರ ಹೊಸ ಎಕ್ಸ್‌ಯುವಿ300 ಡೀಸೆಲ್ ಎಂಜಿನ್ ಮಾದರಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ.8,69,130 ಬೆಲೆ ಹೊಂದಿದ್ದು, ಟಾಪ್ ಎಂಡ್ ಮಾದರಿಯು ರೂ.12,69,001 ಬೆಲೆ ಪಡೆದುಕೊಂಡಿದೆ.

ಅಚ್ಚರಿಯ ಬೆಲೆಗೆ ಬಿಡುಗಡೆಯಾಗಲಿದೆ ಬಿಎಸ್-6 ಎಕ್ಸ್‌ಯುವಿ300 ಡೀಸೆಲ್ ವರ್ಷನ್

ಬಿಎಸ್-6 ಆವೃತ್ತಿಯ ಬೆಲೆಯು ಬಿಎಸ್-4 ಗಿಂತ ಕೇವಲ ರೂ.901 ಅಷ್ಟು ಮಾತ್ರ ಹೆಚ್ಚಳವಾಗಿದ್ದು, ಪೆಟ್ರೋಲ್ ಮಾದರಿ ಮಾತ್ರ ಈ ಹಿಂದೆ ಹಳೆಯ ಎಂಜಿನ್‌ಗಿಂತ ರೂ.20 ಸಾವಿರ ಹೆಚ್ಚುವರಿ ಬೆಲೆ ಪಡೆದುಕೊಂಡಿತ್ತು. ಹೊಸ ಡೀಸೆಲ್ ಎಂಜಿನ್ ಬೆಲೆಯಲ್ಲಿ ಹಳೆಯ ಮಾದರಿಗಿಂತ ರೂ.40 ಸಾವಿರದಿಂದ ರೂ.60 ಸಾವಿರ ದುಬಾರಿಯಾಗುವ ನೀರಿಕ್ಷೆಯಲ್ಲಿದ್ದ ಗ್ರಾಹಕರಿಗೆ ಅಚ್ಚರಿ ಉಂಟು ಮಾಡಿರುವ ಮಹೀಂದ್ರಾ ಸಂಸ್ಥೆಯು ಅತಿ ಕಡಿಮೆ ಬೆಲೆ ಹೆಚ್ಚಳದೊಂದಿಗೆ ಹೊಸ ಎಂಜಿನ್ ಅನ್ನು ಉನ್ನತೀಕರಿಸಿದೆ.

ಅಚ್ಚರಿಯ ಬೆಲೆಗೆ ಬಿಡುಗಡೆಯಾಗಲಿದೆ ಬಿಎಸ್-6 ಎಕ್ಸ್‌ಯುವಿ300 ಡೀಸೆಲ್ ವರ್ಷನ್

ಇನ್ನು ಎಕ್ಸ್‌ಯುವಿ300 ಕಾರು ಮಾದರಿಯು ಪೆಟ್ರೋಲ್ ಮತ್ತು ಡೀಸೆಲ್ ಆವೃತ್ತಿಗಳಲ್ಲಿ ಡಬ್ಲ್ಯು4, ಡಬ್ಲ್ಯು6, ಡಬ್ಲ್ಯು8 ಮತ್ತು ಡಬ್ಲ್ಯು8 ಆಪ್ಷನ್ ಎನ್ನುವ ಪ್ರಮುಖ ಐದು ವೆರಿಯೆಂಟ್‌ಗಳನ್ನು ಹೊಂದಿದ್ದು, ಆರಂಭಿಕವಾಗಿ ಎಕ್ಸ್‌ಶೋರೂಂ ಪ್ರಕಾರ ರೂ. 8.10 ಲಕ್ಷದಿಂದ ಟಾಪ್ ಎಂಡ್ ಮಾದರಿಯು 12.69 ಲಕ್ಷ ಬೆಲೆ ಪಡೆದುಕೊಂಡಿದೆ.

ಅಚ್ಚರಿಯ ಬೆಲೆಗೆ ಬಿಡುಗಡೆಯಾಗಲಿದೆ ಬಿಎಸ್-6 ಎಕ್ಸ್‌ಯುವಿ300 ಡೀಸೆಲ್ ವರ್ಷನ್

ಎಕ್ಸ್‌ಯುವಿ300 ಡಿಸೇಲ್ ಕಾರಿನಲ್ಲಿ 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ ಆಯ್ಕೆಗಳನ್ನು ನೀಡಲಾಗಿದ್ದು, 1.5-ಲೀಟರ್ ಡೀಸೆಲ್ ಮತ್ತು 1.2-ಲೀಟರ್ ಪೆಟ್ರೋಲ್ ಎಂಜಿನ್‌ ಮೂಲಕ ಅತ್ಯುತ್ತಮ ಇಂಧನ ಕಾರ್ಯಕ್ಷಮತೆ ಹೊಂದಿದೆ.

ಅಚ್ಚರಿಯ ಬೆಲೆಗೆ ಬಿಡುಗಡೆಯಾಗಲಿದೆ ಬಿಎಸ್-6 ಎಕ್ಸ್‌ಯುವಿ300 ಡೀಸೆಲ್ ವರ್ಷನ್

ಈ ಮೂಲಕ ಕಂಪ್ಯಾಕ್ಟ್ ಎಸ್‌ಯುವಿಗಳಲ್ಲಿ ವಿಶೇಷ ಎನ್ನಿಸುವ ಎಕ್ಸ್‌ಯುವಿ300 ಮಾದರಿಯು ಪ್ರೊಜೆಕ್ಟರ್ ಹೆಡ್‌ಲ್ಯಾಂಪ್, ಫಾಗ್ ಲ್ಯಾಂಪ್, ಕ್ರೋಮ್ ಬಳಕೆ, ಬೂಟ್ ಲಿಡ್, ಡ್ಯುಯಲ್ ಟೋನ್ ಇಂಟಿರಿಯರ್, ಎಸಿ ವೆಂಟ್ಸ್, ಲೆದರ್ ವ್ಯಾರ್ಪ್ ಸ್ಟಿರಿಂಗ್ ವೀಲ್ಹ್, ರಿಯರ್ ಪಾರ್ಕಿಂಗ್ ಕ್ಯಾಮೆರಾ ಹೊಂದಿದೆ.

ಅಚ್ಚರಿಯ ಬೆಲೆಗೆ ಬಿಡುಗಡೆಯಾಗಲಿದೆ ಬಿಎಸ್-6 ಎಕ್ಸ್‌ಯುವಿ300 ಡೀಸೆಲ್ ವರ್ಷನ್

ಜೊತೆಗೆ ಫ್ರಂಟ್ ಪಾರ್ಕಿಂಗ್ ಸೆನ್ಸಾರ್‍, ದೊಡ್ಡದಾದ ಇನ್ಪೋಟೈನ್‌ಮೆಂಟ್ ಸಿಸ್ಟಂ ಹೊಂದಿರಲಿದೆ. ಜೊತೆಗೆ ಮಲ್ಟಿ ಇನ್ಫಾರ್ಮೆಷನ್ ಡಿಸ್‌ಪ್ಲೇ, ಸ್ಟಾಪ್/ಸ್ಟಾರ್ಟ್ ಬಟನ್, ರಿಯರ್ ಸೀಟ್ ಆರ್ಮ್‌ ರೆಸ್ಟ್, ಕ್ರೂಸ್ ಕಂಟ್ರೋಲ್, 17-ಇಂಚಿನ ಡೈಮೆಂಡ್ ಕಟ್ ಅಲಾಯ್ ವೀಲ್ಹ್, ಸನ್‌ರೂಫ್, ಸ್ಮಾರ್ಟ್ ವಾಚ್ ಕನೆಕ್ಟಿವಿಟಿ ಸೇರಿದಂತೆ ಹಲವು ಫೀಚರ್ಸ್‌ಗಳು ಇದರಲ್ಲಿವೆ.

ಅಚ್ಚರಿಯ ಬೆಲೆಗೆ ಬಿಡುಗಡೆಯಾಗಲಿದೆ ಬಿಎಸ್-6 ಎಕ್ಸ್‌ಯುವಿ300 ಡೀಸೆಲ್ ವರ್ಷನ್

ಸುರಕ್ಷತೆಗಾಗಿ ಆಲ್ ವೀಲ್ಹ್ ಡಿಸ್ಕ್ ಬ್ರೇಕ್, ಎಬಿಎಸ್, ಇಬಿಡಿ, ಸೀಟ್ ಬೆಲ್ಟ್ ಸೆನ್ಸಾರ್, ಪವರ್ ಫೋರ್ಡ್ ರಿಯರ್ ವ್ಯೂ ಒಆರ್‌ವಿಎಂಎಸ್, ಹಿಲ್ ಹೋಲ್ಡ್ ಅಸಿಸ್ಟ್, 7 ಏರ್‌ಬ್ಯಾಗ್, ಟು ಜೋನ್ ಕ್ಲೈಮೆಟ್ ಕಂಟ್ರೋಲ್, ಹೈಟ್ ಅಡ್ಜೆಸ್ಟ್ ಸೀಟ್ ಬೆಲ್ಟ್, ಪ್ರತಿ ಸೀಟುಗಳಲ್ಲೂ ಸೀಟ್ ಬೆಲ್ಟ್ ಸೆನ್ಸಾರ್, ISOFIX ಚೈಲ್ಡ್ ಸೀಟ್ ಮೌಂಟ್ ಸೌಲಭ್ಯವು ಎಕ್ಸ್‌ಯುವಿ300 ಕಾರಿನಲ್ಲಿರಲಿವೆ.

ಅಚ್ಚರಿಯ ಬೆಲೆಗೆ ಬಿಡುಗಡೆಯಾಗಲಿದೆ ಬಿಎಸ್-6 ಎಕ್ಸ್‌ಯುವಿ300 ಡೀಸೆಲ್ ವರ್ಷನ್

ಈ ಮೂಲಕ ಟಾಟಾ ನೆಕ್ಸಾನ್ ಮತ್ತು ಮಾರುತಿ ಸುಜುಕಿ ಬ್ರೆಝಾ ಕಾರುಗಳಿಗೆ ಉತ್ತಮ ಪೈಪೋಟಿ ನೀಡುತ್ತಿರುವ ಎಕ್ಸ್‌ಯುವಿ300 ಮಾದರಿಯು ಬಿಎಸ್-6 ನಂತರ ಮತ್ತಷ್ಟು ಬಲಿಷ್ಠ ಎಂಜಿನ್‌ನೊಂದಿಗೆ ರಸ್ತೆಗಿಳಿಯಲಿದೆ.

Source: Team BHP

More from DriveSpark

Article Published On: Tuesday, March 24, 2020, 16:32 [IST]
English summary
Mahindra XUV300 BS6 diesel engine prices leaked online ahead of its launch. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+