ಎಕ್ಸ್‌ಯುವಿ500 ಡೀಸೆಲ್ ಆಟೋಮ್ಯಾಟಿಕ್ ವರ್ಷನ್ ಬಿಡುಗಡೆ ಮಾಡಿದ ಮಹೀಂದ್ರಾ

ಮಹೀಂದ್ರಾ ಕಂಪನಿಯು ಈಗಾಗಲೇ ತನ್ನ ಬಹುತೇಕ ಕಾರು ಮಾದರಿಗಳನ್ನು ಬಿಎಸ್-6 ಎಂಜಿನ್‌ನೊಂದಿಗೆ ಬಿಡುಗಡೆ ಮಾಡಿದ್ದು, ಇದೀಗ ಎಕ್ಸ್‌ಯುವಿ500 ಡೀಸೆಲ್ ಆಟೋಮ್ಯಾಟಿಕ್ ಮಾದರಿಯನ್ನು ಸಹ ಮಾರುಕಟ್ಟೆಗೆ ಪರಿಚಯಿಸಿದೆ.

ಎಕ್ಸ್‌ಯುವಿ500 ಡೀಸೆಲ್ ಆಟೋಮ್ಯಾಟಿಕ್ ವರ್ಷನ್ ಬಿಡುಗಡೆ ಮಾಡಿದ ಮಹೀಂದ್ರಾ

ಎಕ್ಸ್‌ಯುವಿ500 ಡೀಸೆಲ್ ಮ್ಯಾನುವಲ್ ಮಾದರಿಯು ಈಗಾಗಲೇ ಮಾರುಕಟ್ಟೆಗೆ ಖರೀದಿ ಲಭ್ಯವಿದ್ದು, ಇದೀಗ ಆಟೋಮ್ಯಾಟಿಕ್ ಆವೃತ್ತಿಯು ಸಹ ಬಿಡುಗಡೆಗೊಂಡಿದೆ. ಆಟೋಮ್ಯಾಟಿಕ್ ಆವೃತ್ತಿಯು ಪುಣೆ ಎಕ್ಸ್‌ಶೋರೂಂ ಪ್ರಕಾರ ರೂ. 15.65 ಲಕ್ಷ ಬೆಲೆ ಪಡೆದುಕೊಂಡಿದ್ದು, ಡಬ್ಲ್ಯು7, ಡಬ್ಲ್ಯು9 ಮತ್ತು ಡಬ್ಲ್ಯು9(ಆಪ್ಷನ್) ಆವೃತ್ತಿಗಳಲ್ಲಿ ಆಟೋಮ್ಯಾಟಿಕ್ ಆವೃತ್ತಿಯು ಖರೀದಿಗೆ ಲಭ್ಯವಿರಲಿದೆ.

ಎಕ್ಸ್‌ಯುವಿ500 ಡೀಸೆಲ್ ಆಟೋಮ್ಯಾಟಿಕ್ ವರ್ಷನ್ ಬಿಡುಗಡೆ ಮಾಡಿದ ಮಹೀಂದ್ರಾ

ಡಬ್ಲ್ಯು7 ಆಟೋಮ್ಯಾಟಿಕ್ ಆವೃತ್ತಿಯು ಪುಣೆ ಎಕ್ಸ್‌ಶೋರೂಂ ಪ್ರಕಾರ ರೂ. 15.65 ಲಕ್ಷಕ್ಕೆ, ಡಬ್ಲ್ಯು9 ಆಟೋಮ್ಯಾಟಿಕ್ ಮಾದರಿಯು ರೂ. 17.36 ಲಕ್ಷ ಮತ್ತು ಡಬ್ಲ್ಯು9(ಆಪ್ಷನ್) ಆಟೋಮ್ಯಾಟಿಕ್ ಆವೃತ್ತಿಯು ರೂ. 18.88 ಲಕ್ಷ ಬೆಲೆ ಹೊಂದಿದೆ.

ಎಕ್ಸ್‌ಯುವಿ500 ಡೀಸೆಲ್ ಆಟೋಮ್ಯಾಟಿಕ್ ವರ್ಷನ್ ಬಿಡುಗಡೆ ಮಾಡಿದ ಮಹೀಂದ್ರಾ

ಎಕ್ಸ್‌ಯುವಿ500 ಡೀಸೆಲ್ ಮ್ಯಾನುವಲ್ ಆವೃತ್ತಿಯು ಎಕ್ಸ್‌ಶೋರೂಂ ಪ್ರಕಾರ ರೂ. 13.18 ಲಕ್ಷ ಬೆಲೆ ಹೊಂದಿದ್ದು, ಟಾಪ್ ಎಂಡ್ ಮಾದರಿಯು ರೂ. 17.68 ಲಕ್ಷ ಬೆಲೆ ಹೊಂದಿದೆ. ಬಿಎಸ್-4 ಮಾದರಿಗಿಂತ ಬಿಎಸ್-6 ಮಾದರಿಯು ವಿವಿಧ ಆವೃತ್ತಿಗಳಿಗೆ ಅನುಗುಣವಾಗಿ ರೂ.80 ಸಾವಿರದಿಂದ ರೂ. 1.21 ಲಕ್ಷದಷ್ಟು ದುಬಾರಿಯಾಗಿದೆ.

ಎಕ್ಸ್‌ಯುವಿ500 ಡೀಸೆಲ್ ಆಟೋಮ್ಯಾಟಿಕ್ ವರ್ಷನ್ ಬಿಡುಗಡೆ ಮಾಡಿದ ಮಹೀಂದ್ರಾ

ಬಿಎಸ್-6 ಎಕ್ಸ್‌ಯುವಿ500 ಮಾದರಿಯು ಡೀಸೆಲ್ ಎಂಜಿನ್‌ನಲ್ಲಿ ಮಾತ್ರವೇ ಖರೀದಿಗೆ ಲಭ್ಯವಿದ್ದು, 2.2-ಲೀಟರ್ ಎಂ-ಹ್ವಾಕ್ ಡೀಸೆಲ್ ಎಂಜಿನ್‌ನೊಂದಿಗೆ 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಹೊಂದಿದೆ. ಈ ಮೂಲಕ 153-ಬಿಎಚ್‌ಪಿ ಮತ್ತು 360-ಎನ್ಎಂ ಟಾರ್ಕ್ ಉತ್ಪಾದನೆಯೊಂದಿಗೆ ಇಂಧನ ದಕ್ಷತೆಯಲ್ಲೂ ಗ್ರಾಹಕರನ್ನು ಗಮನಸೆಳೆಯಲಿದೆ.

MOST READ: ಪ್ರತಿ ಚಾರ್ಜ್‌ಗೆ 480 ಕಿ.ಮೀ ಮೈಲೇಜ್ ನೀಡುವ ಎಲೆಕ್ಟ್ರಿಕ್ ಎಸ್‌ಯುವಿ ಬಿಡುಗಡೆ ಮಾಡಲಿದೆ ನಿಸ್ಸಾನ್

ಎಕ್ಸ್‌ಯುವಿ500 ಡೀಸೆಲ್ ಆಟೋಮ್ಯಾಟಿಕ್ ವರ್ಷನ್ ಬಿಡುಗಡೆ ಮಾಡಿದ ಮಹೀಂದ್ರಾ

ಇನ್ನು ಇದೇ ವರ್ಷಾಂತ್ಯದೊಳಗೆ ಬಿಡುಗಡೆಯಾಗಬೇಕಿದ್ದ ಹೊಸ ತಲೆಮಾರಿನ ಮಹೀಂದ್ರಾ ಎಕ್ಸ್‌ಯುವಿ500 ಕಾರು ಕರೋನಾ ವೈರಸ್ ಪರಿಣಾಮ ಮುಂದಿನ ವರ್ಷ ಮಾರುಕಟ್ಟೆಗೆ ಪ್ರವೇಶಿಸಲಿದ್ದು, ಸದ್ಯ ಬಿಎಸ್-6 ಎಂಜಿನ್‌ನೊಂದಿಗೆ ಮಾತ್ರವೇ ಖರೀದಿಗೆ ಲಭ್ಯವಿರುತ್ತದೆ.

ಎಕ್ಸ್‌ಯುವಿ500 ಡೀಸೆಲ್ ಆಟೋಮ್ಯಾಟಿಕ್ ವರ್ಷನ್ ಬಿಡುಗಡೆ ಮಾಡಿದ ಮಹೀಂದ್ರಾ

ನ್ಯೂ ಜನರೇಷನ್ ಮಾದರಿಯು ಪೆಟ್ರೋಲ್ ಎಂಜಿನ್ ಸೇರಿದಂತೆ ಹಲವು ಹೊಸ ಬದಲಾವಣೆಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಲಿದ್ದು, ನ್ಯೂ ಜನರೇಷನ್ ಮಾದರಿಯಲ್ಲಿ ನವೀಕರಿಸಲಾದ ಮುಂಭಾಗದ ಗ್ರಿಲ್, ಹೊಸ ವಿನ್ಯಾಸದ ಎಲ್ಇಡಿ ಹೆಡ್‌ಲ್ಯಾಂಪ್ ಮತ್ತು ಹಿಂಭಾಗದಲ್ಲಿ ನವೀಕರಿಸಲಾದ ಬಂಪರ್ ಪ್ರಮುಖ ಆಕರ್ಷಣೆಯಾಗಲಿದೆ.

MOST READ: ಭಾರತದಲ್ಲಿ ಎರಡು ಹೊಸ ಎಸ್‌ಯುವಿ ಕಾರು ಮಾದರಿಗಳನ್ನು ಬಿಡುಗಡೆ ಮಾಡಲಿದೆ ಹ್ಯುಂಡೈ

ಎಕ್ಸ್‌ಯುವಿ500 ಡೀಸೆಲ್ ಆಟೋಮ್ಯಾಟಿಕ್ ವರ್ಷನ್ ಬಿಡುಗಡೆ ಮಾಡಿದ ಮಹೀಂದ್ರಾ

ನ್ಯೂ ಜನರೇಷನ್ ಕಾರು ಮಾದರಿಯನ್ನು ಇದೇ ವರ್ಷಾಂತ್ಯಕ್ಕೆ ಬಿಡುಗಡೆ ಮಾಡುವ ತವಕದಲ್ಲಿದ್ದ ಮಹೀಂದ್ರಾ ಯೋಜನೆಗೆ ಕರೋನಾ ವೈರಸ್ ಬ್ರೇಕ್ ಹಾಕಿದ್ದು, 2021ರ ಆರಂಭದಲ್ಲಿ ಎಕ್ಸ್‌ಯುವಿ500 ಸೇರಿದಂತೆ ಸ್ಕಾರ್ಪಿಯೋ ಕೂಡಾ ಭಾರೀ ಬದಲಾವಣೆಯೊಂದಿಗೆ ಬಿಡುಗಡೆಯಾಗುವ ನೀರಿಕ್ಷೆಯಲ್ಲಿದೆ.

Article Published On: Saturday, August 29, 2020, 13:15 [IST]
English summary
Mahindra XUV500 Diesel AT Launched. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+