ಆಟೋ ಎಕ್ಸ್‌ಪೋ 2020: ನಾಲ್ಕು ಹೊಸ ಎಲೆಕ್ಟ್ರಿಕ್ ವಾಹನಗಳನ್ನು ಪ್ರದರ್ಶನಗೊಳಿಸಲಿದೆ ಮಹೀಂದ್ರಾ

ಬಹುನೀರಿಕ್ಷಿತ ದೆಹಲಿ ಆಟೋ ಎಕ್ಸ್‌ಪೋ ಮುಂದಿನ ತಿಂಗಳು ಫೆಬ್ರುವರಿ 7ರಿಂದ ಆರಂಭವಾಗುತ್ತಿದ್ದು, ಮಹೀಂದ್ರಾ ಸಂಸ್ಥೆಯು ತನ್ನ ಹೊಸ ವಾಹನಗಳ ಮಾದರಿಗಳನ್ನು ಪ್ರದರ್ಶನಗೊಳಿಸಲು ಭರ್ಜರಿ ಸಿದ್ದತೆ ನಡೆಸಿದೆ.

ಆಟೋ ಎಕ್ಸ್‌ಪೋ 2020: ನಾಲ್ಕು ಹೊಸ ಎಲೆಕ್ಟ್ರಿಕ್ ವಾಹನಗಳನ್ನು ಪ್ರದರ್ಶನಗೊಳಿಸಲಿದೆ ಮಹೀಂದ್ರಾ

ಮಹೀಂದ್ರಾ ಸಂಸ್ಥೆಯು ಸದ್ಯ ಹೊಸ ವಾಹನಗಳ ಉತ್ಪಾದನೆಯಲ್ಲಿ ಮಹತ್ವದ ಬದಲಾವಣೆ ತರುತ್ತಿದ್ದು, ಬಿಎಸ್-6 ಮಾದರಿಗಳ ಜೊತೆಗೆ ವಿನೂತನ ಮಾದರಿಯ ಎಲೆಕ್ಟ್ರಿಕ್ ವಾಹನಗಳನ್ನು ಸಹ ಈ ಬಾರಿಯ ಆಟೋ ಎಕ್ಸ್ ‌ಪೋದಲ್ಲಿ ಪ್ರದರ್ಶನಗೊಳಿಸಲಿದೆ. ಮಾಹಿತಿಗಳ ಪ್ರಕಾರ ಮಹೀಂದ್ರಾ ಸಂಸ್ಥೆಯು ಒಟ್ಟು 18 ವಾಹನಗಳನ್ನು ಪ್ರದರ್ಶನಗೊಳಿಸಲಿದ್ದು, ಇದರಲ್ಲಿ ಪ್ರಯಾಣಿಕರ ವಾಹನಗಳು ಮಾತ್ರವಲ್ಲದೇ ಕೆಲವು ವಾಣಿಜ್ಯ ಬಳಕೆಯ ವಾಹನಗಳು ಸಹ ಸೇರ್ಪಡೆಯಾಗಿವೆ.

ಆಟೋ ಎಕ್ಸ್‌ಪೋ 2020: ನಾಲ್ಕು ಹೊಸ ಎಲೆಕ್ಟ್ರಿಕ್ ವಾಹನಗಳನ್ನು ಪ್ರದರ್ಶನಗೊಳಿಸಲಿದೆ ಮಹೀಂದ್ರಾ

ಆಟೋ ಎಕ್ಸ್‌ಪೋದಲ್ಲಿ ಭಾಗಿಯಾಗಲಿರುವ ಎಲೆಕ್ಟ್ರಿಕ್ ವಾಹನ ಮಾಹಿತಿ ಹಂಚಿಕೊಂಡಿರುವ ಮಹೀಂದ್ರಾ ಸಂಸ್ಥೆಯು ಮೂರು ವಿವಿಧ ಮಾದರಿಯ ಇವಿ ಕಾರು ಮಾದರಿಗಳನ್ನು ಮತ್ತು ಒಂದು ವಾಣಿಜ್ಯ ಬಳಕೆಯ ಎಲೆಕ್ಟ್ರಿಕ್ ವಾಹನವನ್ನು ಅನಾವರಣಗೊಳಿಸುವುದಾಗಿ ಮಾಹಿತಿ ನೀಡಿದೆ.

ಆಟೋ ಎಕ್ಸ್‌ಪೋ 2020: ನಾಲ್ಕು ಹೊಸ ಎಲೆಕ್ಟ್ರಿಕ್ ವಾಹನಗಳನ್ನು ಪ್ರದರ್ಶನಗೊಳಿಸಲಿದೆ ಮಹೀಂದ್ರಾ

ಆದರೆ ಅನಾವರಣಗೊಳ್ಳುವ ಕಾರುಗಳು ಯಾವುವು ಎನ್ನುವ ಬಗೆಗೆ ಖಚಿತ ಮಾಹಿತಿ ಇಲ್ಲವಾದರೂ ಕೆಯುವಿ100 ಎಲೆಕ್ಟ್ರಿಕ್ ಮತ್ತು ಎಕ್ಸ್‌ಯುವಿ300 ಎಲೆಕ್ಟ್ರಿಕ್ ಅನಾವರಣಗೊಳ್ಳುವುದು ಬಹುತೇಕ ಖಚಿತವಾಗಿದ್ದು, ಇನ್ನೇರಡು ಎಲೆಕ್ಟ್ರಿಕ್ ಮಾದರಿಗಳ ಮಾಹಿತಿ ಲಭ್ಯವಾಗಿಲ್ಲ.

ಆಟೋ ಎಕ್ಸ್‌ಪೋ 2020: ನಾಲ್ಕು ಹೊಸ ಎಲೆಕ್ಟ್ರಿಕ್ ವಾಹನಗಳನ್ನು ಪ್ರದರ್ಶನಗೊಳಿಸಲಿದೆ ಮಹೀಂದ್ರಾ

ಮಾಹಿತಿಗಳ ಪ್ರಕಾರ, ಮಹೀಂದ್ರಾ ಸಂಸ್ಥೆಯು ಎಕ್ಸ್‌ಯುವಿ500 ಆವೃತ್ತಿಯ ಎಲೆಕ್ಟ್ರಿಕ್ ಕಾನ್ಸೆಪ್ಟ್ ಮಾದರಿಯನ್ನು ಸಹ ಅನಾವರಣಗೊಳಿಸುವ ಸಾಧ್ಯತೆಗಳಿದ್ದು, ಆಟೋ ಎಕ್ಸ್‌ಪೋದಲ್ಲಿಯೇ ಹೊಸ ಕಾರುಗಳ ಸಂಪೂರ್ಣ ಮಾಹಿತಿ ಲಭ್ಯವಾಗಲಿದೆ. ಇನ್ನು ಪ್ರದರ್ಶನಗೊಳ್ಳುವ ಮಹೀಂದ್ರಾ ವಾಹನಗಳಲ್ಲಿ ಪ್ರಮುಖ ಎಸ್‌ಯುವಿ ಕಾರುಗಳ ನ್ಯೂ ಜನರೇಷನ್ ಮಾದರಿಗಳು ಅನಾವರಣಗೊಳ್ಳಲಿದ್ದು, ಹೊಸ ಕಾರುಗಳು ಎಂಜಿನ್ ಮತ್ತು ಪ್ರೀಮಿಯಂ ಫೀಚರ್ಸ್‌ಗಳಲ್ಲಿ ಮಾತ್ರವಲ್ಲದೇ ಪ್ರಮಾಣಿಕರ ಸುರಕ್ಷತೆಯಲ್ಲೂ ಗಮರ್ನಾಹ ಬದಲಾವಣೆ ಪಡೆದುಕೊಂಡಿವೆ.

ಆಟೋ ಎಕ್ಸ್‌ಪೋ 2020: ನಾಲ್ಕು ಹೊಸ ಎಲೆಕ್ಟ್ರಿಕ್ ವಾಹನಗಳನ್ನು ಪ್ರದರ್ಶನಗೊಳಿಸಲಿದೆ ಮಹೀಂದ್ರಾ

ಭಾರತದಲ್ಲಿ ಸದ್ಯ ಬಿಎಸ್-4(ಭಾರತ್ ಸ್ಟೇಜ್) ವೈಶಿಷ್ಟ್ಯತೆಯುಳ್ಳ ವಾಹನಗಳು ಮಾತ್ರ ಮಾರಾಟಗೊಳ್ಳುತ್ತಿದ್ದು, ಇದು ಕೂಡಾ ಮುಂಬರುವ ಏಪ್ರಿಲ್ 1ರಿಂದ ನಿಷೇಧಗೊಂಡು ಬಿಎಸ್-6 ನಿಯಮವು ಜಾರಿಗೆ ಬರಲಿದೆ.

ಆಟೋ ಎಕ್ಸ್‌ಪೋ 2020: ನಾಲ್ಕು ಹೊಸ ಎಲೆಕ್ಟ್ರಿಕ್ ವಾಹನಗಳನ್ನು ಪ್ರದರ್ಶನಗೊಳಿಸಲಿದೆ ಮಹೀಂದ್ರಾ

ಹೀಗಾಗಿ ಕೇಂದ್ರ ಸರ್ಕಾರದ ಹೊಸ ನಿಯಮದಂತೆ ಮಹೀಂದ್ರಾ ಸೇರಿದಂತೆ ಬಹುತೇಕ ವಾಹನ ಉತ್ಪಾದನಾ ಸಂಸ್ಥೆಗಳು ಬಿಎಸ್-6 ಎಂಜಿನ್ ಪ್ರೇರಿತ ವಾಹನಗಳನ್ನು ಬಿಡುಗಡೆಗೊಳಿಸುತ್ತಿದ್ದು, ಮಹೀಂದ್ರಾ ಕೂಡಾ ತನ್ನ ವಾಹನ ಮಾದರಿಗಳನ್ನು ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಳಿಸಿ ಬಿಡುಗಡೆ ಮಾಡಲಿದೆ.

ಆಟೋ ಎಕ್ಸ್‌ಪೋ 2020: ನಾಲ್ಕು ಹೊಸ ಎಲೆಕ್ಟ್ರಿಕ್ ವಾಹನಗಳನ್ನು ಪ್ರದರ್ಶನಗೊಳಿಸಲಿದೆ ಮಹೀಂದ್ರಾ

ಪ್ರದರ್ಶನಗೊಳ್ಳುವ ಕಾರುಗಳಲ್ಲಿ ಬಿಎಸ್-6 ಎಂಜಿನ್ ಪ್ರೇರಿತ ಮರಾಜೋ, ಟಿಯುವಿ300 ಪ್ಲಸ್, ಟಿಯುವಿ300, ಎಕ್ಸ್‌ಯುವಿ500, ಎಕ್ಸ್‌ಯುವಿ300 ಮತ್ತು ನೆಕ್ಸ್ಟ್ ಜನರೇಷನ್ ಸ್ಕಾರ್ಪಿಯೋ, ಬೊಲೆರೊ ಪ್ರಮುಖವಾಗಿದ್ದು, ಇದರೊಂದಿಗೆ ಎಲೆಕ್ಟ್ರಿಕ್ ಆವೃತ್ತಿಗಳಾದ ಕೆಯುವಿ100 ಇವಿ, ಎಕ್ಸ್‌ಯುವಿ300 ಇವಿ ಸೇರಿದಂತೆ ಮತ್ತೆರಡು ಹೊಸ ಎಲೆಕ್ಟ್ರಿಕ್ ಕಾನ್ಸೆಪ್ಟ್‌ಗಳು ಭಾಗಿಯಾಗಲಿವೆ.

ಆಟೋ ಎಕ್ಸ್‌ಪೋ 2020: ನಾಲ್ಕು ಹೊಸ ಎಲೆಕ್ಟ್ರಿಕ್ ವಾಹನಗಳನ್ನು ಪ್ರದರ್ಶನಗೊಳಿಸಲಿದೆ ಮಹೀಂದ್ರಾ

ಈ ಮೂಲಕ ಹೊಸ ಕಾರುಗಳ ಉತ್ಪಾದನೆಯಲ್ಲಿ ಮಹತ್ವದ ಬದಲಾವಣೆಗೆ ಕಾರಣವಾಗಿರುವ ಮಹೀಂದ್ರಾ ಸಂಸ್ಥೆಯು ಸದ್ಯದಲ್ಲೇ ಎಲೆಕ್ಟ್ರಿಕ್ ವಾಹನ ಮಾರಾಟದಲ್ಲೂ ಹೊಸ ಸಂಚಲನ ಸೃಷ್ಠಿಸಲಿದ್ದು, ಮಾಲಿನ್ಯ ತಡೆಯುವ ನಿಟ್ಟಿನಲ್ಲಿ ಹೊಸ ವಾಹನಗಳ ಮೋಟಾರ್ ತಂತ್ರಜ್ಞಾನವನ್ನು ಉನ್ನತೀಕರಿಸುತ್ತಿರುವುದು ಹೊಸ ಬದಲಾವಣೆಗೆ ಕಾರಣವಾಗಿದೆ.

More from DriveSpark

Article Published On: Wednesday, January 29, 2020, 8:45 [IST]
English summary
Mahindra has revealed that it will showcase four new electric car models at the upcoming 2020 Auto Expo. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+