ಸ್ಥಗಿತವಾಯ್ತು ಜನಪ್ರಿಯ ಮಾರುತಿ ಆಲ್ಟೋ ಕೆ10 ಕಾರು

ದೇಶದ ಅತಿ ದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ ತನ್ನ ಜನಪ್ರಿಯ ಮಾರುತಿ ಆಲ್ಟೋ ಕೆ10 ಕಾರನ್ನು ಅಧಿಕೃತವಾಗಿ ಸ್ಥಗಿತಗೊಳಿಸಿದೆ. ಈ ಎಂಟ್ರಿ ಲೆವೆಲ್ ಹ್ಯಾಚ್‍‍ಬ್ಯಾಕ್ ಕಂಪನಿಯ ಜನಪ್ರಿಯ ಮಾದರಿಗಳಲ್ಲಿ ಒಂದಾಗಿದೆ.

ಸ್ಥಗಿತವಾಯ್ತು ಜನಪ್ರಿಯ ಮಾರುತಿ ಆಲ್ಟೋ ಕೆ10 ಕಾರು

ಮಾರುತಿ ಸುಜುಕಿ ಕಂಪನಿಯು ತನ್ನ ಅಧಿಕೃತ ವೆಬ್‍‍ಸೈಟ್‍ನಿಂದ ಆಲ್ಟೋ ಕೆ10 ಕಾರಿನ ಹೆಸರನ್ನು ತೆಗೆದುಹಾಕಲಾಗಿದೆ. ಮಾರುತಿ ಆಲ್ಟೋ ಕೆ10 ಉತ್ಪಾದನೆಯನ್ನು ಸ್ಥಗಿತಗೊಳಿಸಲಾಗಿದೆ. ಬಿಎಸ್-4 ಆಲ್ಟೋ ಕೆ10 ಕಾರಿನ ಸಂಪೂರ್ಣ ಸ್ಟಾಕ್ ಅನ್ನು ಕಳೆದ ವರ್ಷದ ಡಿಸೆಂಬರ್ ತಿಂಗಳಲ್ಲಿ ಮಾರಾಟ ಮಾಡಲಾಗಿದೆ. ಈ ಅಲ್ಟೋ ಕೆ10 ಕಾರನ್ನು ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಲಾಗುವುದಿಲ್ಲ.

ಸ್ಥಗಿತವಾಯ್ತು ಜನಪ್ರಿಯ ಮಾರುತಿ ಆಲ್ಟೋ ಕೆ10 ಕಾರು

ಮಾರುತಿ ಅಲ್ಟೋ ಕೆ10 ಕಾರು 998 ಸಿಸಿ ಬಿಎಸ್-4 ಮೂರು ಸಿಲಿಂಡರ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 67 ಬಿ‍ಹೆಚ್‍‍ಪಿ ಪವರ್ ಮತ್ತು 90 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್‍‍ನೊಂದಿಗೆ 5 ಸ್ಪೀಡ್ ಮ್ಯಾನುವಲ್ ಮತ್ತು ಆಟೋ ಮ್ಯಾಟಿಕ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಾಗಿದೆ.

MOST READ: ಇತಿಹಾಸದ ಪುಟ ಸೇರಿದ ಫೋಕ್ಸ್‌ವ್ಯಾಗನ್ ಎಮಿಯೊ ಕಾರು

ಸ್ಥಗಿತವಾಯ್ತು ಜನಪ್ರಿಯ ಮಾರುತಿ ಆಲ್ಟೋ ಕೆ10 ಕಾರು

ಆಲ್ಟೋ ಕೆ10 ಕಾರಿನಲ್ಲಿರುವ ಎಂಜಿನ್ 998 ಸಿಸಿ ಮೂರು ಸಿಲಿಂಡರ್ ಸಿ‍ಎನ್‍ಜಿ ಎಂಜಿನ್‍‍ನೊಂದಿಗೆ ಲಭ್ಯವಿದೆ. ಈ ಎಂಜಿನ್ 58 ಬಿಹೆಚ್‍‍ಪಿ ಮತ್ತು 78 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‍‍ನೊಂದಿಗೆ 5 ಸ್ಪೀಡ್ ಮ್ಯಾನುವಲ್ ಗೇರ್‍‍‍ಬಾಕ್ಸ್ ಅಳವಡಿಸಲಾಗಿದೆ.

ಸ್ಥಗಿತವಾಯ್ತು ಜನಪ್ರಿಯ ಮಾರುತಿ ಆಲ್ಟೋ ಕೆ10 ಕಾರು

ಮೊದಲ ತಲೆಮಾರಿನ ಮಾರುತಿ ಆಲ್ಟೋ ಕೆ10 ಕಾರನ್ನು 2010ರಲ್ಲಿ ಬಿಡುಗಡೆಗೊಳಿಸಲಾಗಿತ್ತು. ನಂತರ 2014ರಲ್ಲಿ ಎರಡನೇ ತಲೆಮಾರಿನ ಮತ್ತು 2019ರಲ್ಲಿ ಫೇಸ್‍‍‍ಲಿಫ್ಟ್ ಮಾದರಿಯನ್ನು ಬಿಡುಗಡೆ ಮಾಡಲಾಯಿತು.

MOST READ: ದಾಖಲೆ ಪ್ರಮಾಣದಲ್ಲಿ ಮಾರಾಟವಾಗುತ್ತಿವೆ ಮಾರುತಿ ಸುಜುಕಿ ಎಕ್ಸ್‌ಎಲ್6

ಸ್ಥಗಿತವಾಯ್ತು ಜನಪ್ರಿಯ ಮಾರುತಿ ಆಲ್ಟೋ ಕೆ10 ಕಾರು

ಈ ಕಾರಿನ ಫೀಚರ್‍‍‍ಗಳಲ್ಲಿ ಡ್ರೈವರ್ ಸೈಡ್ ಏರ್‌ಬ್ಯಾಗ್, ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ (ಎಬಿಎಸ್), ಎಲೆಕ್ಟ್ರಾನಿಕ್ ಫೋರ್ಸ್ ಡಿಸ್ಟ್ರಿಬ್ಯೂಷನ್ (ಇಬಿಡಿ ), ರೇರ್ ಪಾರ್ಕಿಂಗ್ ಸೆನ್ಸಾರ್‌, ಸ್ಪೀಡ್ ಅಲರ್ಟ್ ಸಿಸ್ಟಂ ಹಾಗೂ ಸೀಟ್‌ಬೆಲ್ಟ್ ರಿಮ್ಯಾಂಡರ್‍‍ಗಳಿವೆ.

ಸ್ಥಗಿತವಾಯ್ತು ಜನಪ್ರಿಯ ಮಾರುತಿ ಆಲ್ಟೋ ಕೆ10 ಕಾರು

ಈಗ ಸ್ಥಗಿತಗೊಂಡಿರುವ ಆಲ್ಟೋ ಕೆ10 ಕಾರಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರರೂ.3.72 ದಿಂದ 4.51 ಲಕ್ಷಗಳಾಗಿದೆ. ಆಲ್ಟೋ ಕೆ10 ಕಾರನ್ನು ಸ್ಥಗಿತಗೊಳಿಸಿ ಮಾರುತಿ ಸುಜುಕಿ ಕಂಪನಿಯ ಹೊಸ ಎಸ್-ಪ್ರೆಸ್ಸೊ ಹ್ಯಾಚ್‍‍ಬ್ಯಾಕ್‍ಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಿದೆ.

MOST READ: ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಟೊಯೊಟಾ ಫಾರ್ಚೂನರ್ ಫೇಸ್‌ಲಿಫ್ಟ್‌

ಸ್ಥಗಿತವಾಯ್ತು ಜನಪ್ರಿಯ ಮಾರುತಿ ಆಲ್ಟೋ ಕೆ10 ಕಾರು

ಮಾರುತಿ ಎಸ್-ಪ್ರೆಸ್ಸೊ ಕಾರು ಮಾರುತಿ ಆಲ್ಟೋ ಕೆ10 ಕಾರಿನ ಸ್ಥಾನವನ್ನು ತುಂಬಲಿದೆ ಎಂದು ಹೇಳಬಹುದು. ದೇಶಿಯ ಮಾರುಕಟ್ಟೆಯಲ್ಲಿ ಮಾರುತಿ-ಎಸ್-ಪ್ರೆಸ್ಸೊ ಉತ್ತಮವಾಗಿ ಮಾರಾಟವಾಗುತ್ತಿದೆ.

ಸ್ಥಗಿತವಾಯ್ತು ಜನಪ್ರಿಯ ಮಾರುತಿ ಆಲ್ಟೋ ಕೆ10 ಕಾರು

ಅಲ್ಟೋ ಕೆ10 ಮಾರುತಿ ಸುಜುಕಿ ಕಂಪನಿಯ ಕಾರುಗಳ ಸರಣಿಯಲ್ಲಿ ಅತಿ ಹೆಚ್ಚು ಮಾರಾಟವಾಗುತ್ತಿರುವ ಕಾರುಗಳಲ್ಲಿ ಒಂದಾಗಿದೆ. ಆಲ್ಟೋ ಕೆ10 ಆಹ್ಲಾದಕರ ಡ್ರೈವಿಂಗ್ ಅನುಭವ ಮತ್ತು ಇಂಟಿರಿಯರ್‍‍ನಲ್ಲಿ ಉತ್ತಮ ಸ್ಪೇಸ್‍ನಿಂದ ಕೊಡಿದ ಕಾರು ಆಗಿದೆ. ಮಾರುತಿ ಸುಜುಕಿ ಕಂಪನಿಯು ಇಷ್ಟು ಜನಪ್ರಿಯ ಕಾರನ್ನು ಸ್ಥಗಿತಗೊಳಿಸುವುದು ಆಶ್ಚರ್ಯಕರ ಸಂಗತಿಯಾಗಿದೆ.

Article Published On: Friday, April 24, 2020, 13:34 [IST]
English summary
Maruti Suzuki Alto K10 Discontinued. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+