ಸ್ಥಗಿತವಾಯ್ತು ಮಾರುತಿ ಸುಜುಕಿ ಕಂಪನಿಯ ಬಲೆನೊ ಆರ್‍ಎಸ್
ಮಾರುತಿ ಸುಜುಕಿ ಕಂಪನಿಯು ತನ್ನ ಬಲೆನೊ ಆರ್‍ಎಸ್ ಮಾದರಿಯನ್ನು ಅಧಿಕೃತವಾಗಿ ಸ್ಥಗಿತಗೊಳಿಸಿದೆ. ಈ ಕಾರ್ ಅನ್ನು ತನ್ನ ವೆಬ್‍ಸೈಟಿನಿಂದ ಕೈಬಿಟ್ಟಿದೆ. ಮಾರುತಿ ಸುಜುಕಿ ಕಂಪನಿಯು ಬಲೆನೊ ಪ್ರೀಮಿಯಂ ಹ್ಯಾಚ್‍ಬ್ಯಾಕ್ ಕಾರ್ ಅನ್ನು 2015ರಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತ್ತು.

ಬಲೆನೊ ಹ್ಯಾಚ್‍ಬ್ಯಾಕ್ ಕಾರು ಸಾಕಷ್ಟು ಜನಪ್ರಿಯವಾದ ಹಿನ್ನೆಲೆಯಲ್ಲಿ 2017ರಲ್ಲಿ ಬಲೆನೊ ಆರ್‍ಎಸ್ ಕಾರ್ ಅನ್ನು ಬಿಡುಗಡೆಗೊಳಿಸಿತ್ತು. ಈ ಕಾರು ಬಲೆನೊ ಕಾರಿಗಿಂತ ಹೆಚ್ಚು ಬಲಶಾಲಿಯಾಗಿತ್ತು. ಬಲೆನೊ ಆರ್‍ಎಸ್ ಕಾರಿಗೆ ಬೇಡಿಕೆ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಈ ಕಾರ್ ಅನ್ನು ಸ್ಥಗಿತಗೊಳಿಸಲಾಗುತ್ತಿದೆ.

ದೇಶಾದ್ಯಂತವಿರುವ ಅನೇಕ ಡೀಲರ್‍ಶಿಪ್‍ಗಳಲ್ಲಿ ಬಲೆನೊ ಆರ್‍ಎಸ್ ಕಾರುಗಳು ಮಾರಾಟವಾಗದೇ ಹಾಗೆಯೇ ಉಳಿದಿವೆ. ಮಾರಾಟವಾಗದೇ ಉಳಿದಿರುವ ಕಾರುಗಳನ್ನು ಮಾರಾಟ ಮಾಡಲು ಈ ಕಾರುಗಳ ಬೆಲೆಯನ್ನು ಕಡಿಮೆಗೊಳಿಸಿ ಮಾರಾಟ ಮಾಡಲಾಗುವುದು.

ಬಿಡುಗಡೆಯಾದಾಗ ಬಲೆನೊ ಆರ್‍ಎಸ್ ಕಾರಿನ ಬೆಲೆಯು ರೂ.8.69 ಲಕ್ಷಗಳಾಗಿತ್ತು. ಕಳೆದ ವರ್ಷ ಫೇಸ್‍ಲಿಫ್ಟ್ ಕಾರ್ ಅನ್ನು ಬಿಡುಗಡೆಗೊಳಿಸಿದಾಗ ಫೇಸ್‍ಲಿಫ್ಟ್ ಕಾರಿನ ಬೆಲೆಯು ರೂ.8.76 ಲಕ್ಷಗಳಾಗಿತ್ತು. ಈ ಕಾರು ಈ ಸೆಗ್‍ಮೆಂಟಿನಲ್ಲಿರುವ ಬೇರೆ ಕಾರುಗಳಿಗಿಂತ ಹೆಚ್ಚು ಬೆಲೆಯನ್ನು ಹೊಂದಿದೆ.

ಹೆಚ್ಚು ಬೆಲೆಯ ಕಾರಣಕ್ಕೆ ಈ ಕಾರಿನ ಬೇಡಿಕೆ ಕಡಿಮೆಯಾದ ಹಿನ್ನೆಲೆಯಲ್ಲಿ ಮಾರುತಿ ಸುಜುಕಿ ಕಂಪನಿಯು ಕಾರಿನ ಬೆಲೆಯನ್ನು ರೂ.7.89 ಲಕ್ಷಗಳಿಗೆ ಇಳಿಸಿತ್ತು. ಬಲೆನೊ ಆರ್‍ಎಸ್ ರೆಗ್ಯುಲರ್ ಬಲೆನೊ ಕಾರಿಗಿಂತ ಭಿನ್ನವಾದ ಮುಂಭಾಗವನ್ನು ಹೊಂದಿದೆ.

ಆರ್‍ಎಸ್ ಕಾರಿನಲ್ಲಿ ವಿಭಿನ್ನವಾದ ಮೆಶ್ ಗ್ರಿಲ್ ಅಳವಡಿಸಲಾಗಿದ್ದು, ಮುಂಭಾಗದಲ್ಲಿರುವ ಬಂಪರ್ ಕಾರಿಗೆ ಸ್ಪೋರ್ಟಿ ಲುಕ್ ನೀಡುತ್ತದೆ. ಬಲೆನೊ ಆರ್‍ಎಸ್ ಫಾಗ್ ಲ್ಯಾಂಪ್ ಕ್ಲಸ್ಟರ್, ಅಂಡರ್‍ಬಾಡಿ ಸ್ಪಾಯಿಲರ್ ಹಾಗೂ ಕಪ್ಪುಬಣ್ಣದ ಇಂಟಿರಿಯರ್‍ಗಳನ್ನು ಹೊಂದಿದೆ.

ಈ ಬದಲಾವಣೆಗಳನ್ನು ಹೊರತುಪಡಿಸಿ ಬಲೆನೊ ಆರ್‍ಎಸ್ ಹ್ಯಾಚ್‍ಬ್ಯಾಕ್ ಹೆಚ್ಚು ಕಡಿಮೆ ರೆಗ್ಯುಲರ್ ಬಲೆನೊದಂತೆಯೇ ಇದೆ. ಬಲೆನೊ ಆರ್‍ಎಸ್ ಕಾರಿನಲ್ಲಿ ಮಾರುತಿ ಕಂಪನಿಯ 1.0 ಲೀಟರಿನ 3 ಸಿಲಿಂಡರ್ ಬೂಸ್ಟರ್ ಜೆಟ್ ಎಂಜಿನ್ ಅಳವಡಿಸಲಾಗಿದೆ.

ಈ ಎಂಜಿನ್ ಅನ್ನು ಜಪಾನ್‍ನಿಂದ ಆಮದು ಮಾಡಿಕೊಳ್ಳಲಾಗಿದೆ. ಈ ಎಂಜಿನ್ 100 ಬಿಹೆಚ್‍ಪಿ ಪವರ್ ಹಾಗೂ 150 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‍ನಲ್ಲಿ 5 ಸ್ಪೀಡಿನ ಮ್ಯಾನುವಲ್ ಗೇರ್‍ಬಾಕ್ಸ್ ಅನ್ನು ಸ್ಟಾಂಡರ್ಡ್ ಆಗಿ ಜೋಡಿಸಲಾಗಿದೆ.

ಈ ಕಾರು 0 - 100 ಕಿ.ಮೀ ವೇಗವನ್ನು 11.4 ಸೆಕೆಂಡುಗಳಲ್ಲಿ ಕ್ರಮಿಸುತ್ತದೆ. ಇದು ಈ ಸೆಗ್‍ಮೆಂಟಿನಲ್ಲಿರುವ ಕಾರುಗಳಲ್ಲಿಯೇ ಹೆಚ್ಚಿನ ಪ್ರಮಾಣದ್ದಾಗಿದೆ. ಈ ಕಾರಿನ ಟಾಪ್ ಸ್ಪೀಡ್ ಪ್ರತಿ ಗಂಟೆಗೆ 199 ಕಿ.ಮೀಗಳಾಗಿದೆ.

ಡ್ರೈವ್‍ಸ್ಪಾರ್ಕ್ ಅಭಿಪ್ರಾಯ
ಬಲೆನೊ ಆರ್‍ಎಸ್ ಆಕ್ಸೆಲರೇಷನ್ ಹಾಗೂ ಹ್ಯಾಂಡ್ಲಿಂಗ್‍ನಲ್ಲಿ ಅತ್ಯುತ್ತಮವಾದ ಪರ್ಫಾಮೆನ್ಸ್ ನೀಡುತ್ತದೆ. ಈ ಕಾರ್ ಕಡಿಮೆ ಬೆಲೆಯಲ್ಲಿ ದೊರೆಯುವುದಾದರೆ ಅದನ್ನು ಖರೀದಿಸಿ. ಡೀಲರ್‍ಗಳ ಜೊತೆಗೆ ಮಾರುತಿ ಕಂಪನಿಯು ಸಹ ಈ ಕಾರಿನ ಮೇಲೆ ಮತ್ತಷ್ಟು ರಿಯಾಯಿತಿ ನೀಡುವ ಸಾಧ್ಯತೆಗಳಿವೆ.


Click it and Unblock the Notifications