ಬಿಎಸ್-6 ಜಾರಿಗೆ ದಿನಗಣನೆ- ನಿಯಮ ಜಾರಿಗೂ ಮುನ್ನವೇ ಮಾರುತಿ ಸುಜುಕಿಯಿಂದ ಹೊಸ ದಾಖಲೆ

ಏಪ್ರಿಲ್ 1ರಿಂದ ಕಡ್ಡಾಯವಾಗಿ ಜಾರಿಗೆ ಬರಲಿರುವ ಬಿಎಸ್-6 ನಿಯಮಕ್ಕೆ ಅನುಗುಣವಾಗಿ ಮಾರುತಿ ಸುಜುಕಿಯು ತನ್ನ ಜನಪ್ರಿಯ ಕಾರುಗಳನ್ನು ಉನ್ನತೀಕರಿಸಿ ಮಾರಾಟ ಮಾಡುತ್ತಿದ್ದು, ಹೊಸ ನಿಯಮ ಜಾರಿಗೂ ಮುನ್ನವೇ 10 ತಿಂಗಳ ಅವಧಿಯಲ್ಲಿ ಬಿಎಸ್-6 ಎಂಜಿನ್ ಪ್ರೇರಿತ 5 ಲಕ್ಷಕ್ಕೂ ಹೆಚ್ಚು ಪೆಟ್ರೋಲ್ ಕಾರುಗಳನ್ನು ಮಾರಾಟ ಮಾಡುವ ಮೂಲಕ ಹೊಸ ದಾಖಲೆಗೆ ಕಾರಣವಾಗಿದೆ.

ಬಿಎಸ್-6 ಜಾರಿಗೆ ದಿನಗಣನೆ- ನಿಯಮ ಜಾರಿಗೂ ಮುನ್ನವೇ ಮಾರುತಿ ಸುಜುಕಿಯಿಂದ ಹೊಸ ದಾಖಲೆ

ಮಾರುತಿ ಸುಜುಕಿ ಸಂಸ್ಥೆಯು ಬಿಎಸ್-6 ನಿಯಮ ಜಾರಿಗೂ ಮುನ್ನವೇ ಹೊಸ ಕಾರುಗಳ ಮಾರಾಟದಲ್ಲಿ ಮಹತ್ವದ ಬದಲಾವಣೆಗೆ ಕಾರಣವಾಗಿದ್ದು, ಪ್ರಸ್ತುತ ಮಾರುಕಟ್ಟೆಯಲ್ಲಿರುವ ಬಹುತೇಕ ಕಾರು ಮಾದರಿಗಳ ಪೆಟ್ರೋಲ್ ಎಂಜಿನ್ ಆವೃತ್ತಿಗಳನ್ನು ಹೊಸ ನಿಯಮ ಅನುಸಾರ ಉನ್ನತೀಕರಿಸಿದೆ. ಆದರೆ ಡೀಸೆಲ್ ಎಂಜಿನ್‌ಗಳನ್ನು ಮಾತ್ರವೇ ಬಿಎಸ್-4 ನಿಯಮದಂತೆಯೇ ಮಾರಾಟ ಮಾಡುತ್ತಿದ್ದು, ಡೀಸೆಲ್ ಕಾರುಗಳನ್ನು ಸಹ ಮಾರ್ಚ್ ಅಂತ್ಯದೊಳಗೆ ಹೊಸ ಎಂಜಿನ್‌ನೊಂದಿಗೆ ಉನ್ನತೀಕರಿಸಲು ಸಿದ್ದತೆ ನಡೆಸಿದೆ.

ಬಿಎಸ್-6 ಜಾರಿಗೆ ದಿನಗಣನೆ- ನಿಯಮ ಜಾರಿಗೂ ಮುನ್ನವೇ ಮಾರುತಿ ಸುಜುಕಿಯಿಂದ ಹೊಸ ದಾಖಲೆ

ಸದ್ಯ ಮಾರುಕಟ್ಟೆಯಲ್ಲಿ ಬಲೆನೊ, ಆಲ್ಟೋ 800, ಸೆಲೆರಿಯೊ, ಇಕೋ, ವ್ಯಾಗನ್‌ಆರ್, ಸ್ವಿಫ್ಟ್, ಡಿಜೈರ್, ಎರ್ಟಿಗಾ, ಎಕ್ಸ್ಎಲ್ 6 ಮತ್ತು ಎಸ್-ಪ್ರೆಸ್ಸೊ ಕಾರುಗಳ ಪೆಟ್ರೋಲ್ ಮಾದರಿಗಳನ್ನು ಬಿಎಸ್-6 ನಿಯಮದಂತೆ ಉನ್ನತೀಕರಿಸಲಾಗಿದ್ದು, ಬಿಎಸ್-4 ಕಾರುಗಳಿಂತೂ ತುಸು ಭಿನ್ನವಾಗಿರುವ ಹೊಸ ಕಾರುಗಳು ಮಾಲಿನ್ಯ ಹೊರಸೂಸುವಿಕೆ ಮತ್ತು ಮೈಲೇಜ್ ಪ್ರಮಾಣದಲ್ಲಿ ಸಾಕಷ್ಟು ಸುಧಾರಣೆ ಕಂಡಿವೆ.

ಬಿಎಸ್-6 ಜಾರಿಗೆ ದಿನಗಣನೆ- ನಿಯಮ ಜಾರಿಗೂ ಮುನ್ನವೇ ಮಾರುತಿ ಸುಜುಕಿಯಿಂದ ಹೊಸ ದಾಖಲೆ

ಇದೀಗ ಡೀಸೆಲ್ ಕಾರುಗಳ ಉನ್ನತೀಕರಣವು ತುಸು ಸವಾಲಾಗಿದ್ದು, ಬಿಎಸ್-6 ಡೀಸೆಲ್ ಎಂಜಿನ್‌ಗಳು ಪ್ರಸ್ತುತ ಮಾರುಕಟ್ಟೆಯಲ್ಲಿರುವ ಬಿಎಸ್-4 ಡೀಸೆಲ್ ಎಂಜಿನ್‌ಗಿಂತಲೂ ಸಾಕಷ್ಟು ಸುಧಾರಣೆಯೊಂದಿಗೆ ಮಾಲಿನ್ಯ ಹೊರಸೂಸುವಿಕೆಯಲ್ಲಿ ಮಹತ್ವದ ಬದಲಾವಣೆ ಪಡೆದುಕೊಳ್ಳುತ್ತಿವೆ.

ಬಿಎಸ್-6 ಜಾರಿಗೆ ದಿನಗಣನೆ- ನಿಯಮ ಜಾರಿಗೂ ಮುನ್ನವೇ ಮಾರುತಿ ಸುಜುಕಿಯಿಂದ ಹೊಸ ದಾಖಲೆ

ಪೆಟ್ರೋಲ್ ಎಂಜಿನ್‌ಗಿಂತಲೂ ಡೀಸೆಲ್ ಎಂಜಿನ್‌ಗಳನ್ನು ಬಿಎಸ್-6 ನಿಯಮಕ್ಕೆ ಉನ್ನತೀಕರಿಸುವುದು ತುಸು ದುಬಾರಿಯಾಗಿದ್ದು, ಇದೇ ಕಾರಣಕ್ಕೆ ಮಾರುತಿ ಸುಜುಕಿ ಸೇರಿದಂತೆ ಹಲವು ಕಾರು ಉತ್ಪಾದನಾ ಸಂಸ್ಥೆಗಳು ಸದ್ಯಕ್ಕೆ ಪೆಟ್ರೋಲ್ ಎಂಜಿನ್ ಕಾರುಗಳನ್ನು ಮಾತ್ರವೇ ಬಿಎಸ್-6 ನಿಯಮಕ್ಕೆ ಉನ್ನತೀಕರಿಸಿ ಮಾರಾಟ ಮಾಡುತ್ತಿವೆ. ಮುಂಬರುವ ಏಪ್ರಿಲ್ ನಂತರವಷ್ಟೇ ಡೀಸೆಲ್ ಕಾರುಗಳನ್ನು ಹೊಸ ನಿಯಮದಂತೆ ಬಿಡುಗಡೆ ಮಾಡಲಿದ್ದು, ಹೊಸ ಕಾರುಗಳು ತುಸು ದುಬಾರಿ ಬೆಲೆ ಪಡೆದುಕೊಳ್ಳಲಿವೆ.

ಬಿಎಸ್-6 ಜಾರಿಗೆ ದಿನಗಣನೆ- ನಿಯಮ ಜಾರಿಗೂ ಮುನ್ನವೇ ಮಾರುತಿ ಸುಜುಕಿಯಿಂದ ಹೊಸ ದಾಖಲೆ

ಬಿಎಸ್-6 ಪೆಟ್ರೋಲ್ ಕಾರುಗಳು ಬಿಎಸ್-4 ಕಾರುಗಳಿಂತಲೂ ರೂ.15 ಸಾವಿರದಿಂದ ರೂ.20 ಸಾವಿರದಷ್ಟು ದುಬಾರಿಯಾಗಿದ್ದರೆ ಡೀಸೆಲ್ ಎಂಜಿನ್ ಮಾತ್ರ ಪ್ರಸ್ತುತ ಮಾರುಕಟ್ಟೆಯಲ್ಲಿನ ಬಿಎಸ್-4 ಕಾರುಗಳಿಂತಲೂ ರೂ.90 ಸಾವಿರದಿಂದ ರೂ.1.50 ಲಕ್ಷದಷ್ಟು ದುಬಾರಿಯಾಗಲಿವೆ.

ಬಿಎಸ್-6 ಜಾರಿಗೆ ದಿನಗಣನೆ- ನಿಯಮ ಜಾರಿಗೂ ಮುನ್ನವೇ ಮಾರುತಿ ಸುಜುಕಿಯಿಂದ ಹೊಸ ದಾಖಲೆ

ಇದೇ ಕಾರಣಕ್ಕೆ ಮಾರುತಿ ಸುಜುಕಿ ಸಂಸ್ಥೆಯು ಅಗ್ಗದ ಬೆಲೆಯ ಕಾರುಗಳಲ್ಲಿ ಡೀಸೆಲ್ ಎಂಜಿನ್‌ಗಳನ್ನು ಉನ್ನತೀಕರಿಸುವ ಯೋಜನೆಯನ್ನು ಕೈಬಿಟ್ಟಿದ್ದು, ಕೇವಲ ಪೆಟ್ರೋಲ್, ಪೆಟ್ರೋಲ್ ಹೈಬ್ರಿಡ್, ಸಿಎನ್‌ಜಿ ಮತ್ತು ಎಲೆಕ್ಟ್ರಿಕ್ ಕಾರುಗಳ ಮೇಲೆ ಹೆಚ್ಚು ಒತ್ತು ನೀಡುತ್ತಿದೆ.

ಬಿಎಸ್-6 ಜಾರಿಗೆ ದಿನಗಣನೆ- ನಿಯಮ ಜಾರಿಗೂ ಮುನ್ನವೇ ಮಾರುತಿ ಸುಜುಕಿಯಿಂದ ಹೊಸ ದಾಖಲೆ

ಹೀಗಾಗಿಯೇ ರೂ.10 ಲಕ್ಷದೊಳಗಿನ ಕಾರುಗಳಲ್ಲಿ ಡೀಸೆಲ್ ಎಂಜಿನ್ ಆಯ್ಕೆಯ ಬಗೆಗೆ ಹೆಚ್ಚು ತೆಲೆಕೆಡಿಸಿಕೊಳ್ಳದೇ ಪೆಟ್ರೋಲ್, ಪೆಟ್ರೋಲ್ ಹೈಬ್ರಿಡ್ ಮತ್ತು ಸಿಎನ್‌ಜಿ ಆವೃತ್ತಿಗಳಿಗೆ ವಿಶೇಷ ಗಮನಹರಿಸಿದ್ದು, ಎಂಟ್ರಿ ಲೆವೆಲ್ ಕಾರುಗಳಲ್ಲಿ 1.0-ಲೀಟರ್, 1.2-ಲೀಟರ್ ಮತ್ತು 1.5-ಲೀಟರ್ ಪೆಟ್ರೋಲ್ ಎಂಜಿನ್ ಮತ್ತು ಹೈ ಎಂಡ್ ಮಾದರಿಗಳಲ್ಲಿ ಮಾತ್ರವೇ 1.5-ಲೀಟರ್ ಮತ್ತು 1.6-ಲೀಟರ್ ಸಾಮರ್ಥ್ಯದ ಡೀಸೆಲ್ ಎಂಜಿನ್ ಬಿಡುಗಡೆ ಮಾಡಲಿದೆ.

ಬಿಎಸ್-6 ಜಾರಿಗೆ ದಿನಗಣನೆ- ನಿಯಮ ಜಾರಿಗೂ ಮುನ್ನವೇ ಮಾರುತಿ ಸುಜುಕಿಯಿಂದ ಹೊಸ ದಾಖಲೆ

ಒಂದು ವೇಳೆ ಮಾರುತಿ ಸುಜುಕಿ ಸಂಸ್ಥೆಯು ಬಿಎಸ್-6 ನಿಯಮ ಅನುಸಾರವಾಗಿ ಪ್ರಸ್ತುತ ಮಾರುಕಟ್ಟೆಯಲ್ಲಿರುವ 1.3-ಲೀಟರ್ ಡೀಸೆಲ್ ಎಂಜಿನ್ ಮಾದರಿಯನ್ನು ಉನ್ನತೀಕರಣ ಮಾಡಿದರೂ ಸಹ ಬೆಲೆಯಲ್ಲಿ ಭಾರೀ ಏರಿಕೆಯಾಗಲಿದ್ದು, ಇದರಿಂದ ಗ್ರಾಹಕರನ್ನು ಕಳೆದುಕೊಳ್ಳಬೇಕಾಗುತ್ತದೆ.

ಬಿಎಸ್-6 ಜಾರಿಗೆ ದಿನಗಣನೆ- ನಿಯಮ ಜಾರಿಗೂ ಮುನ್ನವೇ ಮಾರುತಿ ಸುಜುಕಿಯಿಂದ ಹೊಸ ದಾಖಲೆ

ಮಾರುತಿ ಸುಜುಕಿ ಮಾತ್ರವಲ್ಲದೇ ಇನ್ನು ಹಲವು ಕಾರು ಉತ್ಪಾದನಾ ಸಂಸ್ಥೆಗಳು ಸಣ್ಣ ಗಾತ್ರದ ಕಾರುಗಳಲ್ಲಿ ಡೀಸೆಲ್ ಎಂಜಿನ್ ಆಯ್ಕೆಯನ್ನು ಸ್ಥಗಿತಗೊಳಿಸುತ್ತಿದ್ದು, ಡೀಸೆಲ್ ಕಾರುಗಳಿಗೆ ಭವಿಷ್ಯದಲ್ಲಿ ಮಾರುಕಟ್ಟೆ ಇರುವುದಿಲ್ಲ ಎನ್ನುವುದೇ ಈ ಮಹತ್ವದ ಬದಲಾವಣೆಗೆ ಕಾರಣವಾಗಿದೆ.

Article Published On: Wednesday, January 22, 2020, 12:17 [IST]
English summary
Maruti BS6 car sales cross 5 lakh units in 10 months. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+