ಮಾರುತಿ ಸುಜುಕಿ ಕಾರು ಮಾರಾಟ ಪುನಾರಂಭ- ನೆಲಕಚ್ಚಿದ ಗ್ರಾಹಕರ ಬೇಡಿಕೆ..

ಮಾಹಾಮಾರಿ ಕರೋನಾ ವೈರಸ್‌ನಿಂದಾಗಿ ಇಡೀ ವಿಶ್ವವೇ ಸಂಕಷ್ಟಕ್ಕೆ ಸಿಲುಕಿದ್ದು, ಬಹುತೇಕ ವಾಣಿಜ್ಯ ವ್ಯಾಪಾರಗಳು ನೆಲಕಚ್ಚಿವೆ. ಭಾರತದಲ್ಲೂ ಲಾಕ್‌ಡೌನ್ ವಿಧಿಸಿದ ದಿನದಿಂದಲೂ ಎಲ್ಲಾ ಮಾದರಿಯ ವಾಣಿಜ್ಯ ಚಟುವಟಿಕೆಗಳನ್ನು ಬಂದ್ ಮಾಡಿದ್ದರಿಂದ ಆಟೋ ಉದ್ಯಮ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲೂ ಆರ್ಥಿಕ ಬಿಕ್ಕಟ್ಟು ಶುರುವಾಗಿದೆ.

ಮಾರುತಿ ಸುಜುಕಿ ಕಾರು ಮಾರಾಟ ಪುನಾರಂಭ- ನೆಲಕಚ್ಚಿದ ಗ್ರಾಹಕರ ಬೇಡಿಕೆ..

ವೈರಸ್ ತಡೆಗಾಗಿ ಲಾಕ್‌ಡೌನ್ ಅನಿವಾರ್ಯವಾಗಿದ್ದರಿಂದ ಭಾರತೀಯ ಆಟೋ ಉದ್ಯಮವು ಸಹ ದಿನಂಪ್ರತಿ ನೂರಾರು ಕೋಟಿ ನಷ್ಟ ಅನುಭವಿಸುತ್ತಿದ್ದು, ಇದೀಗ ಪರಿಸ್ಥಿತಿಗೆ ಅನುಗುಣವಾಗಿ ಆಟೋ ಕ್ಷೇತ್ರಕ್ಕೆ ವಿನಾಯ್ತಿ ನೀಡಲಾಗಿದೆಯಾದರೂ ಆರ್ಥಿಕ ಮುಗ್ಗಟ್ಟು ತೀವ್ರ ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ. ಹೊಸ ಸುರಕ್ಷಾ ಮಾರ್ಗಸೂಚಿತಂತೆ ಆಟೋ ಉದ್ಯಮವು ಮರು ಚಾಲನೆಗೊಂಡರು ನೀರಿಕ್ಷಿತ ಮಟ್ಟದಲ್ಲಿ ಗ್ರಾಹಕರಿಲ್ಲದೆ ಪರದಾಡುತ್ತಿವೆ.

ಮಾರುತಿ ಸುಜುಕಿ ಕಾರು ಮಾರಾಟ ಪುನಾರಂಭ- ನೆಲಕಚ್ಚಿದ ಗ್ರಾಹಕರ ಬೇಡಿಕೆ..

ಜೊತೆಗೆ ಲಾಕ್‌ಡೌನ್‌ಗೂ ಮೊದಲ ಬುಕ್ಕಿಂಗ್ ಮಾಡಿ ವಾಹನ ಖರೀದಿಯ ಸಂಭ್ರಮದಲ್ಲಿದ್ದ ಗ್ರಾಹಕರು ಇದೀಗ ಖರೀದಿ ಪ್ರಕ್ರಿಯೆಯಿಂದ ಹಿಂದೆ ಸರಿಯುತ್ತಿದ್ದು, ಮಾರಾಟ ಮಳಿಗೆಗಳು ಪುನಾರಂಭಗೊಂಡ ನಂತರ ವಾಹನ ಖರೀದಿ ಬದಲು ಬುಕ್ಕಿಂಗ್ ಹಣ ವಾಪಸ್ ನೀಡುವಂತೆ ಬೇಡಿಕೆಯಿಡುತ್ತಿದ್ದಾರೆ.

ಮಾರುತಿ ಸುಜುಕಿ ಕಾರು ಮಾರಾಟ ಪುನಾರಂಭ- ನೆಲಕಚ್ಚಿದ ಗ್ರಾಹಕರ ಬೇಡಿಕೆ..

ಸದ್ಯಕ್ಕೆ ವಾಹನ ಖರೀದಿ ಮಾಡಲು ಸಾಧ್ಯವಾಗುತ್ತಿಲ್ಲ ಎನ್ನುತ್ತಿರುವ ಬಹುತೇಕ ಗ್ರಾಹಕರು ಬುಕ್ಕಿಂಗ್ ಹಣ ವಾಪಸ್ ಪಡೆದುಕೊಳ್ಳುತ್ತಿದ್ದು, ಲಾಕ್‌ಡೌನ್ ನಂತರ ವಾಹನ ಮಾರಾಟ ಯೋಜನೆಯಲ್ಲಿದ್ದ ಆಟೋ ಕಂಪನಿಗಳಿಗೆ ಗ್ರಾಹಕರು ಬುಕ್ಕಿಂಗ್ ಹಣ ವಾಪಸ್ ಪಡೆದುಕೊಳ್ಳುವ ಮೂಲಕ ಮತ್ತೊಂದು ಶಾಕ್ ನೀಡಿದ್ದಾರೆ.

MOST READ: ಸ್ಕ್ರ್ಯಾಪಿಂಗ್ ನೀತಿ ಜಾರಿಗೆ ಅಂತಿಮ ಸಿದ್ದತೆ- ಆಟೋ ಉದ್ಯಮದಲ್ಲಿ ಹೊಸ ಸಂಚಲನ..

ಮಾರುತಿ ಸುಜುಕಿ ಕಾರು ಮಾರಾಟ ಪುನಾರಂಭ- ನೆಲಕಚ್ಚಿದ ಗ್ರಾಹಕರ ಬೇಡಿಕೆ..

ಲಾಕ್‌ಡೌನ್‌ಗೂ ಮುನ್ನ ದೇಶಾದ್ಯಂತ ಹೊಸ ವಾಹನಗಳಿಗೆ ಬುಕ್ಕಿಂಗ್ ಮಾಡಿದ್ದ ಗ್ರಾಹಕರಲ್ಲಿ ಸುಮಾರು ಶೇ.60ರಿಂದ ಶೇ.70ರಷ್ಟು ಜನ ಇದೀಗ ಬುಕ್ಕಿಂಗ್ ಹಣ ವಾಪಸ್‌ ನೀಡುವಂತೆ ಬೇಡಿಕೆ ಸಲ್ಲಿಸಿದ್ದು, ಇದು ಆಟೋ ಕಂಪನಿಗಳನ್ನು ಮತ್ತಷ್ಟು ಚಿಂತೆಗೀಡು ಮಾಡಿದೆ.

ಮಾರುತಿ ಸುಜುಕಿ ಕಾರು ಮಾರಾಟ ಪುನಾರಂಭ- ನೆಲಕಚ್ಚಿದ ಗ್ರಾಹಕರ ಬೇಡಿಕೆ..

ಲಾಕ್‌ಡೌನ್‌ಗೂ ದಿನಂಪ್ರತಿ ಸಾವಿರಾರು ವಾಹನಗಳನ್ನು ಮಾರಾಟ ಮಾಡುತ್ತಿದ್ದ ಮಾರುತಿ ಸುಜುಕಿ ಕೂಡಾ ಇದೀಗ ತೀವ್ರ ಹಿನ್ನಡೆ ಅನುಭವಿಸುತ್ತಿದ್ದು, ಮೇ 4ರಿಂದಲೇ ಮಾರಾಟ ಪುನಾರಂಭಿಸಿದ್ದ ಮಾರುತಿ ಸುಜುಕಿಯು ಇದುವರೆಗೆ ಕೇವಲ 1,400 ಯುನಿಟ್ ಮಾತ್ರವೇ ಮಾರಾಟ ಮಾಡಿದೆ.

MOST READ: ಲಾಕ್‌ಡೌನ್‌ನಿಂದ ತತ್ತರಿಸಿರುವ ಆಟೋ ಕಂಪನಿಗಳಿಗೆ ಇದೀಗ ಮತ್ತೊಂದು ಸಂಕಷ್ಟ

ಮಾರುತಿ ಸುಜುಕಿ ಕಾರು ಮಾರಾಟ ಪುನಾರಂಭ- ನೆಲಕಚ್ಚಿದ ಗ್ರಾಹಕರ ಬೇಡಿಕೆ..

ಸದ್ಯ ಕರೋನಾ ವೈರಸ್ ಪ್ರಮಾಣವು ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದು ಕೂಡಾ ಹೊಸ ವಾಹನಗಳ ಖರೀದಿದಾರರನ್ನು ಚಿಂತೆಗೀಡು ಮಾಡಿದ್ದು, ವಾಹನ ಖರೀದಿ ನಂತರ ಮತ್ತಷ್ಟು ಆರ್ಥಿಕ ಸಂಕಷ್ಟ ಎದುರಾದರೆ ಹೇಗೆ? ಎನ್ನುವ ಭಯ ಕೂಡಾ ಗ್ರಾಹಕರನ್ನು ಕಾಡತೊಡಗಿದೆ.

MOST READ: ಕರೋನಾ ಸಂಕಷ್ಟ: ಟ್ಯಾಕ್ಸಿ ಮತ್ತು ಆಟೋ ಚಾಲಕರಿಗೆ ವಿಶೇಷ ಪ್ಯಾಕೇಜ್ ಘೋಷಣೆ

ಮಾರುತಿ ಸುಜುಕಿ ಕಾರು ಮಾರಾಟ ಪುನಾರಂಭ- ನೆಲಕಚ್ಚಿದ ಗ್ರಾಹಕರ ಬೇಡಿಕೆ..

ಹೀಗಾಗಿ ಕರೋನಾ ವೈರಸ್ ಅಬ್ಬರ ತಗ್ಗುವ ತನಕವು ವಾಹನ ಖರೀದಿ ಯೋಜನೆಯನ್ನು ಮುಂದೂಡುವುದೇ ಉತ್ತಮ ಎನ್ನುವ ಯೋಜನೆಯಲ್ಲಿರುವ ಗ್ರಾಹಕರು ಬುಕ್ಕಿಂಗ್ ಹಣ ವಾಪಸ್ ಪಡೆದುಕೊಳ್ಳುತ್ತಿದ್ದು, ವೈರಸ್ ಅಬ್ಬರ ಒಂದು ಹಂತಕ್ಕೆ ನಿಯಂತ್ರಣ ಬಂದ ನಂತರವೇ ವಾಹನಗಳ ಖರೀದಿ ಮಾಡುವುದು ಉತ್ತಮ ಎನ್ನುವುದು ಬಹುತೇಕ ಗ್ರಾಹಕರ ಅಭಿಪ್ರಾಯವಾಗಿದೆ.

Most Read Articles

Kannada
English summary
Maruti Suzuki Registers 1,600 Units Of Vehicle Deliveries Since Restart Of Dealership Operations. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X