ಬಿಎಸ್-6 ವೈಶಿಷ್ಟ್ಯತೆಯ ಮಾರುತಿ ಸೆಲೆರಿಯೊ ಎಸ್-ಸಿಎನ್‌ಜಿ ಬಿಡುಗಡೆ

ಮಾರುತಿ ಸುಜುಕಿ ಈಗಾಗಲೇ ಬಹುತೇಕ ಕಾರು ಮಾದರಿಗಳನ್ನು ಬಿಎಸ್-6 ಎಂಜಿನ್‌ನೊಂದಿಗೆ ಬಿಡುಗಡೆ ಮಾಡಿದ್ದು, ಪೆಟ್ರೋಲ್ ಮಾದರಿಗಳ ಜೊತೆಗೆ ಸಿಎನ್‌ಜಿ ಕಾರುಗಳನ್ನು ಸಹ ಹೊಸ ಎಂಜಿನ್‌ನೊಂದಿಗೆ ಉನ್ನತೀಕರಿಸಿದೆ.

ಬಿಎಸ್-6 ವೈಶಿಷ್ಟ್ಯತೆಯ ಮಾರುತಿ ಸೆಲೆರಿಯೊ ಎಸ್-ಸಿಎನ್‌ಜಿ ಬಿಡುಗಡೆ

ಹೊಸ ಎಂಜಿನ್ ಪ್ರೇರಿತ ಸೆಲೆರಿಯೊ ಎಸ್-ಸಿಎನ್‌ಜಿ ಆವೃತ್ತಿ ಕೂಡಾ ಇದೀಗ ಬಿಡುಗಡೆಗೊಂಡಿದ್ದು, ಹೊಸ ಕಾರಿನ ಬೆಲೆಯನ್ನು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 5.61 ಲಕ್ಷಕ್ಕೆ ಖರೀದಿಗೆ ಲಭ್ಯವಿದೆ. ಸಿಎನ್‌ಜಿ ಕಾರು ಪೆಟ್ರೋಲ್ ಮಾದರಿಗಿಂತ ರೂ. 81 ಸಾವಿರದಷ್ಟು ಹೆಚ್ಚುವರಿ ಬೆಲೆ ಹೊಂದಿದ್ದು, ಮಧ್ಯಂತರ ಆವೃತ್ತಿಯಾಗಿರುವ ವಿಎಕ್ಸ್ಐ(ಒ) ಮಾದರಿಯಲ್ಲಿ ಸಿಎನ್‌ಜಿ ಮಾದರಿಯು ಖರೀದಿಗೆ ಲಭ್ಯವಿದೆ.

ಬಿಎಸ್-6 ವೈಶಿಷ್ಟ್ಯತೆಯ ಮಾರುತಿ ಸೆಲೆರಿಯೊ ಎಸ್-ಸಿಎನ್‌ಜಿ ಬಿಡುಗಡೆ

ಸಿಎನ್‌ಜಿ ಮಾದರಿಯ ಎಂಜಿನ್ ತಂತ್ರಜ್ಞಾನ ಹೊರತುಪಡಿಸಿ ಬಹುತೇಕ ತಾಂತ್ರಿಕ ಸೌಲಭ್ಯಗಳು ಪೆಟ್ರೋಲ್ ಮಾದರಿಯಲ್ಲಿರುವಂತೆ ಸೌಲಭ್ಯಗಳಿದ್ದು, 1.0-ಲೀಟರ್ ಪೆಟ್ರೋಲ್ ಮಾದರಿಯೊಂದಿಗೆ ಸಿಎನ್‌ಜಿ ತಂತ್ರಜ್ಞಾನ ಹೊಂದಿರುವ ಹೊಸ ಕಾರು ಮೈಲೇಜ್ ಪ್ರಮಾಣದಲ್ಲಿ ಗಮನಸೆಳೆಯಲಿದೆ.

ಬಿಎಸ್-6 ವೈಶಿಷ್ಟ್ಯತೆಯ ಮಾರುತಿ ಸೆಲೆರಿಯೊ ಎಸ್-ಸಿಎನ್‌ಜಿ ಬಿಡುಗಡೆ

ಹೊಸ ಕಾರು ಸ್ಟ್ಯಾಂಡರ್ಡ್ ಆಗಿ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಹೊಂದಿದ್ದು, 68-ಬಿಎಚ್‌ಪಿ, 90-ಎನ್ಎಂ ಟಾರ್ಕ್ ಉತ್ಪಾದನೆಯೊಂದಿಗೆ ಪ್ರತಿ ಕೆ.ಜಿ ಸಿಎನ್‌ಜಿಗೆ 30ಕಿ.ಮೀ ನಿಂದ 32ಕಿ.ಮೀ ಮೈಲೇಜ್ ಹಿಂದಿರುಗಿಸುತ್ತದೆ.

ಬಿಎಸ್-6 ವೈಶಿಷ್ಟ್ಯತೆಯ ಮಾರುತಿ ಸೆಲೆರಿಯೊ ಎಸ್-ಸಿಎನ್‌ಜಿ ಬಿಡುಗಡೆ

ಡೀಸೆಲ್ ಕಾರು ಮಾರಾಟವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿರುವ ಮಾರುತಿ ಸುಜುಕಿಯು ಸದ್ಯ ಪೆಟ್ರೋಲ್, ಪೆಟ್ರೋಲ್ ಹೈಬ್ರಿಡ್ ಮತ್ತು ಸಿಎನ್‌ಜಿ ಕಾರುಗಳ ಮೇಲೆ ಹೆಚ್ಚು ಗಮನಹರಿಸುತ್ತಿದ್ದು, ಮಾಲಿನ್ಯ ತಡೆಗಾಗಿ ಕೇಂದ್ರ ಸರ್ಕಾರ ಜಾರಿಗೆ ತರುತ್ತಿರುವ ಹೊಸ ನಿಯಮಗಳಿಗೆ ಅನುಗುಣವಾಗಿ ಕಾರು ಉತ್ಪಾದನೆಯಲ್ಲಿ ಮಹತ್ವದ ಬದಲಾವಣೆ ಪರಿಚಯಿಸಿದೆ.

ಬಿಎಸ್-6 ವೈಶಿಷ್ಟ್ಯತೆಯ ಮಾರುತಿ ಸೆಲೆರಿಯೊ ಎಸ್-ಸಿಎನ್‌ಜಿ ಬಿಡುಗಡೆ

ಸದ್ಯ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಕಾರುಗಳು ಪೆಟ್ರೋಲ್ ಮತ್ತು ಸಿಎನ್‌ಜಿ ಆವೃತ್ತಿಯಲ್ಲಿ ಮಾತ್ರವೇ ಮಾರಾಟಕ್ಕೆ ಲಭ್ಯವಿದ್ದು, ಜನಪ್ರಿಯ ಕಾರು ಮಾದರಿಗಳಾದ ಆಲ್ಟೊ, ವ್ಯಾಗನ್‌ಆರ್, ಸೆಲೆರಿಯೊ ಮತ್ತು ಎರ್ಟಿಗಾ ಮಾದರಿಯಲ್ಲಿ ಸಿಎನ್‌ಜಿ ಮಾದರಿಗಳು ಖರೀದಿಗೆ ಲಭ್ಯವಿವೆ.

ಬಿಎಸ್-6 ವೈಶಿಷ್ಟ್ಯತೆಯ ಮಾರುತಿ ಸೆಲೆರಿಯೊ ಎಸ್-ಸಿಎನ್‌ಜಿ ಬಿಡುಗಡೆ

2019-20ರ ಆರ್ಥಿಕ ವರ್ಷದಲ್ಲಿ ಸಿಎನ್‌ಜಿ ಕಾರುಗಳ ಮಾರಾಟ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಮಾರುತಿ ಸುಜುಕಿಯು 1 ವರ್ಷದ ಅವಧಿಯಲ್ಲಿ 1,06,443 ಸಿಎನ್‌ಜಿ ಕಾರುಗಳನ್ನು ಮಾರಾಟ ಮಾಡಿದ್ದು, ಶೀಘ್ರದಲ್ಲೇ ಮತ್ತಷ್ಟು ಕಾರು ಮಾದರಿಗಳಲ್ಲಿ ಸಿಎನ್‌ಜಿ ಮಾದರಿಯನ್ನು ಜೋಡಣೆ ಮಾಡುವ ಯೋಜನೆಯಲ್ಲಿದೆ.

ಬಿಎಸ್-6 ವೈಶಿಷ್ಟ್ಯತೆಯ ಮಾರುತಿ ಸೆಲೆರಿಯೊ ಎಸ್-ಸಿಎನ್‌ಜಿ ಬಿಡುಗಡೆ

ಮಾಲಿನ್ಯ ತಗ್ಗಿಸುವ ಉದ್ದೇಶದಿಂದಾಗಿ ಸಾಮಾನ್ಯ ಪೆಟ್ರೋಲ್ ಮತ್ತು ಡೀಸೆಲ್ ಕಾರುಗಳ ಮಾರಾಟವನ್ನು ತಗ್ಗಿಸಲಾಗುತ್ತಿದ್ದು, ಪರಿಸರಕ್ಕೆ ಪೂರಕರವಾದ ಸಿಎನ್‌ಜಿ, ಹೈಬ್ರಿಡ್ ಮತ್ತು ಎಲೆಕ್ಟ್ರಿಕ್ ಕಾರುಗಳನ್ನು ಹೆಚ್ಚು ಅಭಿವೃದ್ದಿಗೊಳಿಸಲಾಗುತ್ತಿದೆ.

ಬಿಎಸ್-6 ವೈಶಿಷ್ಟ್ಯತೆಯ ಮಾರುತಿ ಸೆಲೆರಿಯೊ ಎಸ್-ಸಿಎನ್‌ಜಿ ಬಿಡುಗಡೆ

ಈ ನಿಟ್ಟಿನಲ್ಲಿ ಹಂತಹಂತವಾಗಿ ಎಲ್ಲಾ ಕಾರು ಮಾದರಿಗಳಲ್ಲೂ ಅಧಿಕ ಮೈಲೇಜ್ ಪ್ರೇರಿತ ಸಿಎನ್‌ಜಿ ಆಯ್ಕೆಯನ್ನು ನೀಡುತ್ತಿರುವ ಮಾರುತಿ ಸುಜುಕಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆಲ್ಟೊ ಮಾದರಿಯನ್ನು ರೂ.4.11 ಲಕ್ಷಕ್ಕೆ, ಸೆಲೆರಿಯೊ ಮಾದರಿಯನ್ನು ರೂ.5.61 ಲಕ್ಷಕ್ಕೆ, ವ್ಯಾಗನ್‌ಆರ್ ಮಾದರಿಯನ್ನು ರೂ.4.99 ಲಕ್ಷಕ್ಕೆ ಮತ್ತು ಎರ್ಟಿಗಾ ಮಾದರಿಯನ್ನು 8.87 ಲಕ್ಷಕ್ಕೆ ಮಾರಾಟ ಮಾಡುತ್ತಿದೆ.

Article Published On: Friday, June 12, 2020, 21:53 [IST]
English summary
Maruti Suzuki Celerio BS6 S-CNG Launched In India. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+