ಮೊದಲ ಬಾರಿಗೆ ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಮಾರುತಿ ಡಿಜೈರ್ ಫೇಸ್‌ಲಿಫ್ಟ್

ಮಾರುತಿ ಸುಜುಕಿ ಕಂಪನಿಯು ತನ್ನ ಜನಪ್ರಿಯ ಡಿಜೈರ್ ಫೇಸ್‍‍ಲಿಫ್ಟ್ ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ಏಪ್ರಿಲ್ ತಿಂಗಳಲ್ಲಿ ಬಿಡುಗಡೆಗೊಳಿಸಲಿದೆ. ಕೆಲವು ತಿಂಗಳುಗಳ ಕಾಲ ಭಾರತೀಯ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಮಾರಾಟವಾದ ಕಾರು ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು.

ಮೊದಲ ಬಾರಿಗೆ ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಮಾರುತಿ ಡಿಜೈರ್ ಫೇಸ್‌ಲಿಫ್ಟ್

ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸುವ ಮೊದಲು ಮಾರುತಿ ಸುಜುಕಿ ಕಂಪನಿಯು ಡಿಜೈರ್ ಫೇಸ್‍‍ಲಿಫ್ಟ್ ಅನ್ನು ಮೊದಲ ಬಾರಿಗೆ ಭಾರತದ ರಸ್ತೆಗಳಲ್ಲಿ ಸ್ಪಾಟ್ ಟೆಸ್ಟ್ ನಡೆಸಲಾಗಿದೆ. ಈ ಕಾರು ಸ್ಪಾಟ್ ಟೆಸ್ಟ್ ನಡೆಸುತ್ತಿರುವುದನ್ನು ಗಾಡಿವಾಡಿ ಬಹಿರಂಗಪಡಿಸಿದೆ. ಹೊಸ ಡಿಜೈರ್ ಫೇಸ್‍ಲಿಫ್ಟ್ ಕಾರಿನ ಮುಂಭಾಗದಲ್ಲಿ ಸಂಪೂರ್ಣವಾಗಿ ನವೀಕರಿಸಲಾಗಿದೆ. ಈ ಡಿಜೈರ್ ಫೇಸ್‍‍ಲಿಫ್ಟ್ ನಲ್ಲಿ ಹೊಸ ಗ್ರಿಲ್ ಮತ್ತು ದೊಡ್ಡದಾದ ಏರ್‍‍ಡ್ಯಾಮ್ ಅನ್ನು ಹೊಂದಿದೆ.

ಮೊದಲ ಬಾರಿಗೆ ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಮಾರುತಿ ಡಿಜೈರ್ ಫೇಸ್‌ಲಿಫ್ಟ್

ಈ ಕಾರಿನ ಗ್ರಿಲ್‍‍‍ನಲ್ಲಿ ಕ್ರೋಮ್ ಸುತ್ತಳತೆ ಇದ್ದರೆ, ಬ್ಲ್ಯಾಕ್ ಗ್ರಿಲ್ ಮೇಲೆ ಮಾರುತಿ ಸುಜುಕಿ ಲೋಗೋವನ್ನು ಅಳವಡಿಸಿದೆ. ಈ ಹೊಸ ಕಾರಿನಲ್ಲಿ ದೊಡ್ಡ ಫಾಗ್ ಲ್ಯಾಂಪ್ ಮತ್ತು ಕ್ರೋಮ್‍‍ನೊಂದಿಗೆ ಹೊಸ ಬಂಪರ್ ಅನ್ನು ಅಳವಡಿಸಲಾಗಿದೆ. ಇದು ಡಿಜೈರ್ ಫೇಸ್‍‍ಲಿಫ್ಟ್ ಬೇಸ್ ಅಥವಾ ಮಿಡ್-ಎಂಡ್ ರೂಪಾಂತರವೆಂದು ತೋರುತ್ತದೆ. ಇನ್ನು ಟಾಪ್-ಎಂಡ್ ರೂಪಾಂತರಗಳ ವಿನ್ಯಾಸದಲ್ಲಿ ಹೆಚ್ಚಿನ ಬದಲಾವಣೆಗಳನ್ನು ನಿರೀಕ್ಷಿಸುತ್ತೇವೆ.

ಮೊದಲ ಬಾರಿಗೆ ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಮಾರುತಿ ಡಿಜೈರ್ ಫೇಸ್‌ಲಿಫ್ಟ್

ಹೊಸ ಡಿಜೈರ್ ಫೇಸ್‍ಲಿಫ್ಟ್ ನಲ್ಲಿ ಹೊಸ ಹೆಡ್‍‍ಲ್ಯಾಂಪ್ ಮತ್ತು ಹೊಸ ಡಿ‍ಆರ್‍ಎಲ್‍‍ಗಳನ್ನು ಅಳವಡಿಸಬಹುದು. ಇದು ಕೇವಲ ಟಾಪ್ ಎಂಡ್ ರೂಪಾಂತರಗಳಿಗೆ ಮಾತ್ರ ಸೀಮಿತವಾಗಿರುತ್ತದೆ. ಇನ್ನು 2020ರ ಡಿಜೈರ್ ಫೇಸ್‍ಲಿಫ್ಟ್ ಬಾಡಿಯಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ.

ಮೊದಲ ಬಾರಿಗೆ ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಮಾರುತಿ ಡಿಜೈರ್ ಫೇಸ್‌ಲಿಫ್ಟ್

ಪ್ರಸ್ತುತ ದೇಶಿಯ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಮಾದರಿಯಂತಿದೆ. ಹೊಸ ಟಾಪ್ ಎಂಡ್ ರೂಪಾಂತರದಲ್ಲಿ ಹೊಸ ಅಲಾಯ್ ವ್ಹೀಲ್ ಅನ್ನು ಅಳವಡಿಸಬಹುದು. ಈ ಹೊಸ ಕಾರಿನ ಹಿಂಭಾಗದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿರಬಹುದೆಂದು ನಿರೀಕ್ಷಿಸುತ್ತೇವೆ.

ಮೊದಲ ಬಾರಿಗೆ ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಮಾರುತಿ ಡಿಜೈರ್ ಫೇಸ್‌ಲಿಫ್ಟ್

ಹೊಸ ಡಿಜೈರ್ ಫೇಸ್‍‍ಲಿಫ್ಟ್ ಕಾರಿನ ಇಂಟಿರಿಯರ್‍‍ನಲ್ಲಿ ಹೆಚ್ಚಿನ ಬದಲಾವಣೆಗಳಿರುವುದಿಲ್ಲ. ಆದರೆ ಟಾಪ್ ಎಂಡ್ ರೂಪಾಂತರದ ಇಂಟಿರಿಯರ್‍‍ನಲ್ಲಿ ಕೆಲವು ಹೆಚ್ಚುವರಿ ಫೀಚರ್ಸ್‍‍ಗಳನ್ನು ಅಳವಡಿಸಲಿದೆ.

ಮೊದಲ ಬಾರಿಗೆ ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಮಾರುತಿ ಡಿಜೈರ್ ಫೇಸ್‌ಲಿಫ್ಟ್

ಡಿಜೈರ್ ಫೇಸ್‍‍ಲಿಫ್ಟ್ ಕಾರಿನ ಇಂಟಿರಿಯರ್ ಆಕರ್ಷಕ ಲುಕ್ ಅನ್ನು ಹೊಂದಿದೆ. ಸ್ಟೀಯರಿಂಗ್ ವ್ಹೀಲ್, ಲೆದರ್ ಸೀಟುಗಳು, ಟಚ್ ಸ್ಕ್ರೀನ್ ಇನ್ಫೋಟೇನ್‍‍ಮೆಂಟ್, ಆಂಡ್ರಾಯ್ಡ್ ಆಟೋ, ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಮತ್ತು ಕ್ರೂಸ್ ಕಂಟ್ರೊಲರ್ ಅನ್ನು ಹೊಂದಿರಲಿದೆ.

ಮೊದಲ ಬಾರಿಗೆ ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಮಾರುತಿ ಡಿಜೈರ್ ಫೇಸ್‌ಲಿಫ್ಟ್

ಹೊಸ ಡಿಜೈರ್ ಫೇಸ್‍‍ಲಿಫ್ಟ್ ಕಾರಿನಲ್ಲಿ ಸ್ಟೆಬಿಲಿಟಿ ಪ್ರೋಗಾಂ ವಿಥ್ ಹಿಲ್ ಹೋಲ್ಡ್ ಫಂಕ್ಷನ್ , ಕ್ರೂಸ್ ಕಂಟ್ರೋಲ್ ಸಿಸ್ಟಂ, ವಾಯ್ಸ್ ರೆಕೆಗ್ನಿಷನ್ ಸಿಸ್ಟಂ ಮತ್ತು ಹೊಸ ಮಾರುತಿ ವಿಟಾರಾ ಬ್ರೆಝಾ ಕಾರಿನಲ್ಲಿರುವ ಕೆಲವು ಪೀಚರ್ಸ್‍ಗಳನ್ನು ಅಳವಡಿಸಬಹುದು.

ಮೊದಲ ಬಾರಿಗೆ ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಮಾರುತಿ ಡಿಜೈರ್ ಫೇಸ್‌ಲಿಫ್ಟ್

ಈ ಹೊಸ ಕಾರಿನಲ್ಲಿ 1.2 ಡ್ಯುಯಲ್ ಜೆಟ್ ಎಂಜಿನ್ ಅನ್ನು ಹೊಂದಿರಲಿದೆ. ಈ ಎಂಜಿನ್ 90 ಬಿ‍‍ಹೆಚ್‍‍ಪಿ ಪವರ್ ಮತ್ತು 113 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್‍‍ನೊಂದಿಗೆ 5 ಸ್ಪೀಡ್ ಮ್ಯಾನುವರ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಿದೆ. ಮುಂದಿನ ಏಪ್ರಿಲ್ ತಿಂಗಳಲ್ಲಿ ಮಾರುತಿ ಸುಜುಕಿ ಕಂಪನಿಯು ಈ ಕಾರನ್ನು ಭಾರತದಲಿ ಬಿಡುಗಡೆಗೊಳಿಸುವ ಸಾಧ್ಯತೆಗಳಿದೆ.

Article Published On: Wednesday, March 4, 2020, 15:19 [IST]
English summary
2020 Maruti Dzire Facelift Spotted For The First Time. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+