ಬಿಎಸ್ 6 ಸಿಎನ್‌ಜಿಯಲ್ಲಿ ಬಿಡುಗಡೆಯಾದ ಮಾರುತಿ ಸುಜುಕಿ ಇಕೋ
ಮಾರುತಿ ಸುಜುಕಿ ಕಂಪನಿಯು ತನ್ನ ವಾಹನಗಳನ್ನು ಮಿಷನ್ ಗ್ರೀನ್ ಮಿಲಿಯನ್ ಹೆಸರಿನಲ್ಲಿ ಪರಿಸರ ಸ್ನೇಹಿ ವಾಹನಗಳನ್ನಾಗಿ ಮಾರ್ಪಡಿಸುತ್ತಿದೆ. ಈ ಹಿನ್ನೆಲೆಯಲ್ಲಿ ತನ್ನ ಸರಣಿಯಲ್ಲಿರುವ ವಾಹನಗಳನ್ನು ಹೈಬ್ರಿಡ್, ಸಿಎನ್‌ಜಿ ಹಾಗೂ ಎಲೆಕ್ಟ್ರಿಕ್ ಗಳಲ್ಲಿ ಬಿಡುಗಡೆ ಮಾಡಲು ಮುಂದಾಗಿದೆ.

ಮಾರುತಿ ಸುಜುಕಿ ಕಂಪನಿಯು ತನ್ನ ಜನಪ್ರಿಯ ಮಾದರಿಗಳನ್ನು ಬಿಎಸ್ 6 ಮಾಲಿನ್ಯ ನಿಯಮಕ್ಕೆ ಅನುಸಾರವಾಗಿ ಬಿಡುಗಡೆಗೊಳಿಸುತ್ತಿದೆ. ಇದರ ಜೊತೆಗೆ ಸಿಎನ್‌ಜಿ ಆಯ್ಕೆಗಳಲ್ಲಿಯೂ ಕೆಲವು ವಾಹನಗಳನ್ನು ಬಿಡುಗಡೆಗೊಳಿಸುತ್ತಿದೆ.

ಮಾರುತಿ ಸುಜುಕಿ ಕಂಪನಿಯು ತನ್ನ ಅತ್ಯಂತ ಜನಪ್ರಿಯ ಮಾದರಿಗಳಲ್ಲಿ ಒಂದಾದ ಇಕೋ ಕಾರ್ ಅನ್ನು ಈಗ ಸಿಎನ್‌ಜಿ ಆವೃತ್ತಿಯಲ್ಲಿ ಬಿಡುಗಡೆಗೊಳಿಸಿದೆ. ಅಂದ ಹಾಗೆ ಇದು ಎಂಪಿವಿ ಕಾರು. ಈ ಸಿಎನ್‌ಜಿ ಆವೃತ್ತಿಯು ಹೆಚ್ಚಿನ ಜನರನ್ನು ಆಕರ್ಷಿಸಲಿ ಎಂಬ ಕಾರಣಕ್ಕೆ ಸ್ಪರ್ಧಾತ್ಮಕ ಬೆಲೆಯನ್ನು ನಿಗದಿಪಡಿಸಲಾಗಿದೆ.

ಸಿಎನ್‌ಜಿಯಲ್ಲಿ ಬಿಡುಗಡೆಯಾಗಿರುವ ಹೊಸ ಇಕೋ ಕಾರಿನ ಆರಂಭಿಕ ಬೆಲೆ ರೂ. 4.64 ಲಕ್ಷಗಳಾಗಿದೆ. ಹೈ-ಎಂಡ್ ಮಾದರಿಯ ಬೆಲೆ ರೂ.5.06 ಲಕ್ಷಗಳಾಗಿದೆ. ಈ ಬೆಲೆಗಳು ಎಕ್ಸ್ ಶೋ ರೂಂ ದರಗಳಾಗಿವೆ.

ಮಾರುತಿ ಸುಜುಕಿ ಕಂಪನಿಯು 2010ರ ಜನವರಿಯಲ್ಲಿ ಮೊದಲ ಬಾರಿಗೆ ಈ ಎಂಪಿವಿ ಯನ್ನು ದೇಶೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತ್ತು. ಅಂದಿನಿಂದ ಇದುವರೆಗೂ ಸುಮಾರು 6.7 ಲಕ್ಷ ಯುನಿಟ್‌ಗಳನ್ನು ಮಾರಾಟ ಮಾಡಲಾಗಿದೆ.

ಈ ಕಾರಿನಲ್ಲಿರುವ ಹೆಚ್ಚು ಸ್ಪೇಸ್ ಹಾಗೂ ಅಲ್ಟ್ರಾ ಎಫಿಶಿಯನ್ಸಿ ಎಂಜಿನ್ ಇದರ ಜನಪ್ರಿಯತೆಗೆ ಮುಖ್ಯ ಕಾರಣಗಳಾಗಿವೆ. ಈ ಕಾರಣಕ್ಕೆ ಮಾರುತಿ ಸುಜುಕಿ ಕಂಪನಿಯು ಇಕೋ ಕಾರ್ ಅನ್ನು ಸಿಎನ್‌ಜಿ ಆಯ್ಕೆಯೊಂದಿಗೆ ಬಿಡುಗಡೆಗೊಳಿಸಿದೆ. ಸಿಎನ್‌ಜಿ ಕಾರುಗಳು, ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ವಾಹನಗಳಿಗಿಂತ ಕಡಿಮೆ ಮಾಲಿನ್ಯವನ್ನು ಉಂಟು ಮಾಡುತ್ತವೆ.

ಇದರ ಜೊತೆಗೆ ಮೇಂಟೆನೆನ್ಸ್ ವೆಚ್ಚವು ಕಡಿಮೆ. ಮಾರುತಿ ಸುಜುಕಿ ಕಂಪನಿಯು ಇದೇ ರೀತಿ ಮಿಲಿಯನ್ ಗ್ರೀನ್ ಯೋಜನೆಯಡಿ ಅನೇಕ ವಾಹನಗಳನ್ನು ಮಾರಾಟ ಮಾಡಲು ಯೋಜಿಸಿದೆ.ಈ ಕಾರ್ಯಕ್ರಮದ ಮೂಲಕ ಲಕ್ಷಾಂತರ ಸ್ಮಾರ್ಟ್ ಹೈಬ್ರಿಡ್ ವಾಹನಗಳನ್ನು ಮಾರಾಟ ಮಾಡುವ ಯೋಜನೆಯನ್ನು ಹೊಂದಿದೆ.

ಈಗ ಬಿಡುಗಡೆಗೊಳಿಸಲಾಗಿರುವ ಸಿಎನ್‌ಜಿ ಬಿಎಸ್ -6 ಇಕೋ ಕಾರ್ ಅನ್ನು - ಇಕೋ ಕಾರ್ಗೋ ಸಿಎನ್‌ಜಿ, ಟೂರ್ ವಿ ಎಸಿ ಸಿಎನ್‌ಜಿ (5 ಆಸನ), ಇಕೋ ಎಸಿ ಸಿಎನ್‌ಜಿ (5 ಆಸನ) ಹಾಗೂ ಇಕೋ ಕಾರ್ಗೋ ಸಿಎನ್‌ಜಿ ಎಸಿ ಎಂಬ ನಾಲ್ಕು ಮಾದರಿಗಳಲ್ಲಿ ಮಾರಾಟ ಮಾಡಲಾಗುವುದು.

ಇಕೋ ಕಾರ್ಗೋ ಸಿಎನ್‌ಜಿಯ ಆರಂಭಿಕ ಬೆಲೆ ರೂ. 4,93,800ಗಳಾದರೆ, ಇಕೋ ಎಸಿ ಸಿಎನ್‌ಜಿ 5 ಸೀಟ್ ಮಾದರಿಯ ಬೆಲೆ ರೂ. 4,95,100 ಹಾಗೂ ಇಕೋ ಕಾರ್ಗೋ ಸಿಎನ್‌ಜಿ ಎಸಿ ಮಾದರಿಯ ಬೆಲೆ ರೂ. 5,6,200ಗಳಾಗಿದೆ. ಈ ಕಾರು ದೊಡ್ಡ ಕುಟುಂಬಗಳಿಗೆ ಹಾಗೂ ಕಮರ್ಷಿಯಲ್ ಕಂಪನಿಗಳ ಬಳಕೆಗೆ ಹೆಚ್ಚು ಸಹಕಾರಿಯಾಗಲಿದೆ.

ಈ ಕಾರು 5ರಿಂದ 7 ಸೀಟುಗಳನ್ನು ಹೊಂದಿದೆ. ಈ ಕಾರಿನಲ್ಲಿ 1.2 ಲೀಟರ್ ಪೆಟ್ರೋಲ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 73 ಬಿಹೆಚ್‌ಪಿ ಮತ್ತು 101 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ ನಲ್ಲಿ 5 ಸ್ಪೀಡಿನ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್ ಅಳವಡಿಸಲಾಗಿದೆ.

ಇಕೋ ಕಾರ್ ಅನ್ನು ಹೆಚ್ಚಾಗಿ ಕಾರ್ಗೋ ಹಾಗೂ ಆಂಬ್ಯುಲೆನ್ಸ್ ಗಾಗಿ ಬಳಸಲಾಗುತ್ತದೆ. ಈ ಕಾರಿನಲ್ಲಿ ಸ್ಲೈಡಿಂಗ್ ಟೂರ್ಸ್, ಇಬಿಡಿ ಹೊಂದಿರುವ ಎಬಿಎಸ್ ಬ್ರೇಕಿಂಗ್, ರಿವರ್ಸ್ ಪಾರ್ಕಿಂಗ್ ಸೆನ್ಸಾರ್, ಡ್ರೈವರ್ ಹಾಗೂ ಕೋ ಡ್ರೈವರ್‌ಗಳಿಗಾಗಿ ಸೀಟ್ ಬೆಲ್ಟ್ ರಿಮ್ಯಾಂಡರ್, ಹೈಸ್ಪೀಡ್ ಅಲರ್ಟ್ ಸೇರಿದಂತೆ ಹಲವಾರು ಫೀಚರ್ ಗಳಿವೆ.


Click it and Unblock the Notifications