ಆಟೋ ಎಕ್ಸ್‌ಪೋ 2020: ಮಾರುತಿ ಸುಜುಕಿ ಬಹುನೀರಿಕ್ಷಿತ ಫ್ಯೂಚುರೊ-ಇ ಕಾನ್ಸೆಪ್ಟ್ ಅನಾವರಣ

ಮಾರುತಿ ಸುಜುಕಿ ಸಂಸ್ಥೆಯು ತನ್ನ ಬಹುನೀರಿಕ್ಷಿತ ಫ್ಯೂಚುರೊ-ಇ ಕಾನ್ಸೆಪ್ಟ್ ಎಸ್‌ಯುವಿ ಕಾರು ಆವೃತ್ತಿಯನ್ನು ದೆಹಲಿ ಆಟೋ ಎಕ್ಸ‌್‌ಪೋದಲ್ಲಿ ಅನಾವರಣಗೊಳಿಸಿದೆ. ವಿಶೇಷ ವಿನ್ಯಾಸ ಹೊಂದಿರುವ ಫ್ಯೂಚುರೊ-ಇ ಕಾರು ಮಾರುತಿ ನಿರ್ಮಾಣ ನಿರ್ಮಾಣದ ಇತರೆ ಕಾರುಗಳಿಂತಲೂ ವಿಭಿನ್ನವಾಗಿದ್ದು, ಕೂಪೆ ವಿನ್ಯಾಸದೊಂದಿಗೆ ಗ್ರಾಹಕರ ಗಮನಸೆಳೆಯಲಿದೆ.

ಆಟೋ ಎಕ್ಸ್‌ಪೋ 2020: ಮಾರುತಿ ಸುಜುಕಿ ಬಹುನೀರಿಕ್ಷಿತ ಫ್ಯೂಚುರೊ-ಇ ಕಾನ್ಸೆಪ್ಟ್ ಅನಾವರಣ

ಎಲೆಕ್ಟ್ರಿಕ್ ಕಾರುಗಳ ಮಾರಾಟದಲ್ಲಿ ಸದ್ಯ ಮಹತ್ವದ ಬದಲಾವಣೆ ತರುತ್ತಿರುವ ಮಾರುತಿ ಸುಜುಕಿಯು ವಿವಿಧ ಕಾರು ಮಾದರಿಗಳ ಎಲೆಕ್ಟ್ರಿಕ್ ಆವೃತ್ತಿಗಳನ್ನು ರೋಡ್ ಟೆಸ್ಟಿಂಗ್ ನಡೆಸುತ್ತಿದ್ದು, ಇದೀಗ ಹೊಸ ವಿನ್ಯಾಸದ ಫ್ಯೂಚುರೊ-ಇ ಕಾನ್ಸೆಪ್ಟ್ ಎಸ್‌ಯುವಿ ಕೂಪೆ ಅನಾವರಣಗೊಳಿಸಿದೆ. ಮಧ್ಯಮ ಗಾತ್ರದ ಎಸ್‌ಯುವಿ ಕಾರುಗಳ ಪಟ್ಟಿಯಲ್ಲಿ ಸ್ಥಾನಪಡೆದುಕೊಳ್ಳಲಿರುವ ಹೊಸ ಕಾರು ವಿಶೇಷ ವಿನ್ಯಾಸದ ಮತ್ತು ಪ್ರೀಮಿಯಂ ಫೀಚರ್ಸ್‌ನೊಂದಿಗೆ ಗ್ರಾಹಕರನ್ನು ರಂಜಿಸಲಿದೆ.

ಆಟೋ ಎಕ್ಸ್‌ಪೋ 2020: ಮಾರುತಿ ಸುಜುಕಿ ಬಹುನೀರಿಕ್ಷಿತ ಫ್ಯೂಚುರೊ-ಇ ಕಾನ್ಸೆಪ್ಟ್ ಅನಾವರಣ

ಸದ್ಯ ಅನಾವರಣಗೊಂಡಿರುವ ಫ್ಯೂಚುರೊ-ಇ ಕಾನ್ಸೆಪ್ಟ್ ಆವೃತ್ತಿಯಾಗಿರುವುದರಿಂದ ಉತ್ಪಾದನಾ ಆವೃತ್ತಿಯು ತುಸು ಬದಲಾವಣೆ ಹೊಂದಲಿದ್ದು, ತಾಂತ್ರಿಕ ಅಂಶಗಳ ಕುರಿತಾಗಿ ಯಾವುದೇ ಅಧಿಕೃತ ಮಾಹಿತಿಯನ್ನು ಹಂಚಿಕೊಂಡಿಲ್ಲ.

ಆಟೋ ಎಕ್ಸ್‌ಪೋ 2020: ಮಾರುತಿ ಸುಜುಕಿ ಬಹುನೀರಿಕ್ಷಿತ ಫ್ಯೂಚುರೊ-ಇ ಕಾನ್ಸೆಪ್ಟ್ ಅನಾವರಣ

ಕೆಲವು ಮಾಹಿತಿಗಳ ಪ್ರಕಾರ, ಫ್ಯೂಚುರೊ-ಇ ಕಾನ್ಸೆಪ್ಟ್ ಆವೃತ್ತಿಯನ್ನು ಸದ್ಯ ಮಾರುಕಟ್ಟೆಯಲ್ಲಿರುವ ಎಸ್-ಪ್ರೆಸ್ಸೊ ಮಾದರಿಯಲ್ಲೇ ಪರಿಚಯಿಸುವ ಸಾಧ್ಯತೆಗಳಿದ್ದು, ಪ್ರತಿ ಚಾರ್ಜ್‌ಗೆ 280ಕಿ.ಮೀ ನಿಂದ 350 ಕಿ.ಮೀ ಮೈಲೇಜ್ ರೇಂಜ್ ಹೊಂದಿರಲಿದೆ.

ಆಟೋ ಎಕ್ಸ್‌ಪೋ 2020: ಮಾರುತಿ ಸುಜುಕಿ ಬಹುನೀರಿಕ್ಷಿತ ಫ್ಯೂಚುರೊ-ಇ ಕಾನ್ಸೆಪ್ಟ್ ಅನಾವರಣ

ಹಾಗೆಯೇ ಹೊಸ ಕಾರಿನಲ್ಲಿ ಪೆಟ್ರೋಲ್ ಹೈಬ್ರಿಡ್ ಎಂಜಿನ್ ಆಯ್ಕೆ ಕೂಡಾ ಪಡೆದುಕೊಳ್ಳಬಹುದು ಎಂದು ಹೇಳಲಾಗುತ್ತಿದ್ದು, ಒಂದು ವೇಳೆ ಪೆಟ್ರೋಲ್ ಹೈಬ್ರಿಡ್ ಎಂಜಿನ್ ಪಡೆದುಕೊಂಡಲ್ಲಿ ಹೊಸ ಕಾರು ಮಧ್ಯಮ ಗಾತ್ರದ ಎಸ್‌ಯುವಿ ಆವೃತ್ತಿಯಾಗಿರುವ ಕಿಯಾ ಸೆಲ್ಟೊಸ್ ಮತ್ತು ಹ್ಯುಂಡೈ ಕ್ರೆಟಾ ಕಾರಿಗೆ ಪ್ರಬಲ ಪೈಪೋಟಿಯಾಗಲಿದೆ. ಸದ್ಯ ಮಾರುಕಟ್ಟೆಯಲ್ಲಿರುವ ವಿಟಾರಾ ಬ್ರೆಝಾಗಿಂತಲೂ ಉತ್ತಮ ವೀಲ್ಹ್‌ಬೆಸ್ ಹೊಂದಿರುವ ಫ್ಯೂಚುರೊ-ಇ ಕಾರು ಎಸ್‌ಯುವಿ ಕಾರುಗಳ ಮಾರಾಟದಲ್ಲಿ ಹೊಸ ಸಂಚಲನ ಮೂಡಿಸುವುದಂತೂ ಬಹುತೇಕ ಖಚಿತ ಎನ್ನಬಹುದು.

ಆಟೋ ಎಕ್ಸ್‌ಪೋ 2020: ಮಾರುತಿ ಸುಜುಕಿ ಬಹುನೀರಿಕ್ಷಿತ ಫ್ಯೂಚುರೊ-ಇ ಕಾನ್ಸೆಪ್ಟ್ ಅನಾವರಣ

ಜೊತೆಗೆ ಹೊಸ ಕಾರಿನಲ್ಲಿ ಹಲವಾರು ಪ್ರೀಮಿಯಂ ಫೀಚರ್ಸ್‌ಗಳನ್ನು ಅಳವಡಿಸಲಾಗಿದ್ದು, ನಾಲ್ಕು ಆಸನ ಸೌಲಭ್ಯದೊಂದಿಗೆ ಆಫ್ ರೋಡ್ ಮಾದರಿಯ ಚಕ್ರಗಳು, ಸನ್‌ರೂಫ್, ಕ್ಯಾಮೆರಾ ಪ್ರೇರಣೆಯ ಮಿರರ್ ಸೌಲಭ್ಯವಿದೆ.

ಆಟೋ ಎಕ್ಸ್‌ಪೋ 2020: ಮಾರುತಿ ಸುಜುಕಿ ಬಹುನೀರಿಕ್ಷಿತ ಫ್ಯೂಚುರೊ-ಇ ಕಾನ್ಸೆಪ್ಟ್ ಅನಾವರಣ

ಬಿಡುಗಡೆಯ ಅವಧಿ ಮತ್ತು ಬೆಲೆ(ಅಂದಾಜು)

ಸದ್ಯ ಅನಾವರಣಗೊಂಡಿರುವ ಫ್ಯೂಚುರೊ-ಇ ಕಾರು ಉತ್ಪಾದನಾ ಹಂತದ ವೇಳೆಗೆ ಮತ್ತಷ್ಟು ಬದಲಾವಣೆಯಾಗುವ ಸಾಧ್ಯತೆಗಳಿದ್ದು, ಮಾರುಕಟ್ಟೆಯಲ್ಲಿನ ಬೇಡಿಕೆ ಮತ್ತು ಬೆಲೆ ಆಧಾರದ ಮೇಲೆ ಹೊಸ ಫೀಚರ್ಸ್‌ಗಳನ್ನು ಪಡೆದುಕೊಳ್ಳಲಿದೆ.

ಆಟೋ ಎಕ್ಸ್‌ಪೋ 2020: ಮಾರುತಿ ಸುಜುಕಿ ಬಹುನೀರಿಕ್ಷಿತ ಫ್ಯೂಚುರೊ-ಇ ಕಾನ್ಸೆಪ್ಟ್ ಅನಾವರಣ

ಫ್ಯೂಚುರೊ-ಇ ಕಾರು ಇತರೆ ಕಾನ್ಸೆಪ್ಟ್ ಎಲೆಕ್ಟ್ರಿಕ್ ಕಾರುಗಳಿಂತಲೂ ವಿಭಿನ್ನವಾಗಿದ್ದು, ದೆಹಲಿ ಎಕ್ಸ್‌ಶೋರೂಂ ಪ್ರಕಾರ ಹೊಸ ಕಾರು ರೂ.12 ಲಕ್ಷ ರೂ.15 ಲಕ್ಷ ಬೆಲೆ ಅಂತರದಲ್ಲಿ ಬಿಡುಗಡೆಯಾಗಲಿದ್ದು, 2021ರ ಅವಧಿಯಲ್ಲಿ ಮಾರುಕಟ್ಟೆ ಪ್ರವೇಶಿಸಲಿದೆ.

More from DriveSpark

Article Published On: Wednesday, February 5, 2020, 9:52 [IST]
English summary
Auto Expo 2020: Maruti Futuro-e Concept Unveiled. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+