ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಮಾರುತಿ ಸುಜುಕಿ ಇಗ್ನಿಸ್ ಫೇಸ್‍‍ಲಿಫ್ಟ್

ಮಾರುತಿ ಸುಜುಕಿ ಕಂಪನಿಯು ತನ್ನ ಇಗ್ನಿಸ್ ಫೇಸ್‍‍ಲಿಫ್ಟ್ ಅನ್ನು ಭಾರತದಲ್ಲಿ ಮೊದಲ ಬಾರಿಗೆ ಸ್ಪಾಟ್ ಟೆಸ್ಟ್ ನಡೆಸಲಾಗಿದೆ. ಇಗ್ನಿಸ್ ಫೇಸ್‍‍‍ಲಿಫ್ಟ್ ಅನ್ನು ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಗೊಳಿಸಲಿದೆ.

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಮಾರುತಿ ಸುಜುಕಿ ಇಗ್ನಿಸ್ ಫೇಸ್‍‍ಲಿಫ್ಟ್

ಇಗ್ನಿಸ್ ಕಾರು ಐಎಂ-4 ಕಾನ್ಸೆಪ್ಟ್ ಆಧರಿಸಿದೆ ಮತ್ತು ಹಳೆಯ ಸುಜುಕಿ ಮಾದರಿಗಳ ಕೆಲವು ವಿನ್ಯಾಸ ಅಂಶಗಳನ್ನು ಒಳಗೊಂಡಿದೆ. ಇಗ್ನಿಸ್ ಪ್ರೊಡಕ್ಷನ್-ಸ್ಪೆಕ್ ಮಾದರಿಯನ್ನು ಟೋಕಿಯೋ ಮೋಟಾರ್ ಶೋನಲ್ಲಿ ಪ್ರದರ್ಶಿಸಿದರು. ಭಾರತದಲ್ಲಿ ಹೊಸದಾಗಿ ಪ್ರಾರಂಭಿಸಿದ ನೆಕ್ಸಾ ಪ್ರೀಮಿಯಂ ಮಳಿಗೆಗಳಲ್ಲಿ ಮಾರಾಟವಾಗಲಿರುವ ಮೂರನೇ ವಾಹನ ಇಗ್ನಿಸ್ ಆಗಬಹುದು. ಬಜೆಟ್ ಆಧಾರಿತ ಹ್ಯಾಚ್‍‍ಬ್ಯಾಕ್‍‍ಗಳಿಂದಾಗಿ ಮಾರುತಿ ಸುಜುಕಿ ಕಂಪನಿಯು ಹೆಚ್ಚು ಹೆಸರುವಾಸಿಯಾಗಿದೆ.

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಮಾರುತಿ ಸುಜುಕಿ ಇಗ್ನಿಸ್ ಫೇಸ್‍‍ಲಿಫ್ಟ್

ಇಗ್ನಿಸ್ ಕಾರನ್ನು ಮೊದಲ ಬಾರಿಗೆ 2016ರ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶಿಸಿದರು. ಭರತೀಯ ಮಾರುಕಟ್ಟೆಯಲ್ಲಿ ನಂತರ ರಿಟ್ಜ್ ಅನ್ನು ಬದಲಾಯಿಸಿ ಆ ಸ್ಥಾನಕ್ಕೆ ಇಗ್ನಿಸ್ ಅನ್ನು ಬಿಡುಗಡೆಗೊಳಿಸಿದರು. ಭಾರತೀಯ ಮಾರುಕಟ್ಟೆಯಲ್ಲಿ ಹ್ಯಾಚ್‍‍ಬ್ಯಾಕ್ ಸೆಗ್‍‍ಮೆಂಟ್‍‍ನಲ್ಲಿ ಉತ್ತಮ ಪೈಪೋಟಿ ನಡೆಯುತ್ತಿದೆ.

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಮಾರುತಿ ಸುಜುಕಿ ಇಗ್ನಿಸ್ ಫೇಸ್‍‍ಲಿಫ್ಟ್

ಇದೇ ಕಾರಣದಿಂದ ಮಾರುತಿ ಸುಜುಕಿಯು ಎಸ್-ಪ್ರೆಸ್ಸೊ ಮತ್ತು ಮೂರನೇ ತಲೆಮಾರಿನ ವ್ಯಾಗನ್‍ಆರ್ ಕಾರುಗಳನ್ನು ಬಿಡುಗಡೆಗೊಳಿಸಿದರು. ಇಗ್ನಿಸ್‍ ಕಾರನ್ನು ಮಿಡ್-ಸೈಕಲ್ ಅಪ್‍‍ಡೇಟ್‍ಗೊಳಿಸಿದ ಬಳಿಕ ಮುಂಭಾಗದಲ್ಲಿ ಕೆಲವು ಬದಲಾವಣೆಗಳು ಆಗಿದೆ. ಕಾರಿನ ಮುಂಭಾಗ ಬಂಪರ್‍‍‍ನ ಸ್ಪೋರ್ಟಿ ಲುಕ್ ಅನ್ನು ಹೆಚ್ಚಿಸಿದೆ.

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಮಾರುತಿ ಸುಜುಕಿ ಇಗ್ನಿಸ್ ಫೇಸ್‍‍ಲಿಫ್ಟ್

ಇಗ್ನಿಸ್ ಕಾರಿನಲ್ಲಿ ಯು-ಆಕಾರದ ಫ್ರಂಟ್ ಗ್ರಿಲ್ ಕ್ರೋಮ್ ಸ್ಲ್ಯಾಟ್ ಅನ್ನು ಬದಲಾಯಿಸಿರುವುದು ಮತ್ತೊಂದು ಪ್ರಮುಖ ಅಂಶವಾಗಿದೆ. ಎಸ್-ಪ್ರೆಸ್ಸೊದಂತಹ ಮಾದರಿಗಳಿಗೆ ಅನುಗುಣವಾಗಿ 2020ರ ಮಾರುತಿ ಸುಜುಕಿ ಇಗ್ನಿಸ್ ಕಾರಿನ ಮುಂಭಾಗದಲ್ಲಿ ಬದಲಾವಣೆಗಳನ್ನು ಮಾಡಲಾಗಿದೆ.

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಮಾರುತಿ ಸುಜುಕಿ ಇಗ್ನಿಸ್ ಫೇಸ್‍‍ಲಿಫ್ಟ್

ಕಾರಿನ ಹಿಂಭಾಗದಲ್ಲಿ ಕೆಲವು ಸೂಕ್ಷ್ಮ ಬದಲಾವಣೆಗಳನ್ನು ಮಾಡಲಾಗಿದೆ. ಹೊಸ ಫೀಚರ್ಸ್‍‍ಗಳು ಮತ್ತು ಹಲವಾರು ಸುರಕ್ಷತಾ ಫೀಚರ್ಸ್‍‍ಗಳನ್ನು ಅಳವಡಿಸಲಾಗಿದೆ. ಮಾರುತಿ ಸುಜುಕಿ ಇಗ್ನಿಸ್ ಸ್ಪಾಟ್ ಟೆಸ್ಟ್ ನಡೆಸಿರುವುದನ್ನು ಗಾಡಿವಾಡಿ ಬಹಿರಂಗಪಡಿಸಿದೆ.

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಮಾರುತಿ ಸುಜುಕಿ ಇಗ್ನಿಸ್ ಫೇಸ್‍‍ಲಿಫ್ಟ್

ಹೊಸ ಇಗ್ನಿಸ್ ಫೇಸ್‍‍ಲಿಫ್ಟ್ ಕಾರಿನಲ್ಲಿ ಇಂಟಿರಿಯರ್ ಕ್ಯಾಬಿನ್ ಅನ್ನು ನವೀಕರಿಸಬಹುದು. ಇನ್ನೂ ಕಾರಿನ ಇಂಟಿರಿಯರ್‍‍ನಲ್ಲಿ ಅ್ಯಪಲ್ ಕಾರ್‍‍ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಕನೆಕ್ಟಿವಿಟ್‍‍‍ಯೊಂದಿಗೆ ಸ್ಮಾರ್ಟ್‍‍ಪ್ಲೇ ಟಚ್‍‍ಸ್ಕ್ರೀನ್ ಇನ್ಫೋಟೇನ್‍‍ಮೆಂಟ್ ಸಿಸ್ಟಂ ಅನ್ನು ಅಳವಡಿಸಲಾಗಿದೆ.

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಮಾರುತಿ ಸುಜುಕಿ ಇಗ್ನಿಸ್ ಫೇಸ್‍‍ಲಿಫ್ಟ್

ಕೇಂದ್ರ ಸರ್ಕಾರವು ಮಾಲಿನ್ಯ ಪ್ರಮಾಣವನ್ನು ಕಡಿಮೆಗೊಳಿಸುವ ಉದ್ದೇಶದಿಂದ ಬಿಎಸ್-4 ಎಂಜಿನ್ ವಾಹನಗಳ ಮಾರಾಟವನ್ನು ನಿಷೇಧಿಸಿ 2020ರ ಏಪ್ರಿಲ್ 1ರಿಂದಲೇ ಬಿಎಸ್-6 ವಾಹನಗಳ ಮಾರಾಟವನ್ನು ಕಡ್ಡಾಯಗೊಳಿಸಿದೆ.

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಮಾರುತಿ ಸುಜುಕಿ ಇಗ್ನಿಸ್ ಫೇಸ್‍‍ಲಿಫ್ಟ್

ಭಾರತದ ಅಗ್ರಗಣ್ಯ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ ತನ್ನ ಸರಣಿಯ ಕಾರುಗಳನ್ನು ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸುತ್ತಿದೆ. ಇದರಂತೆ ಮಾರುತಿ ಸುಜುಕಿ ಇಗ್ನಿಸ್ ಫೇಸ್‍‍ಲಿಫ್ಟ್ ಕೂಡ ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿರಲಿದೆ.

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಮಾರುತಿ ಸುಜುಕಿ ಇಗ್ನಿಸ್ ಫೇಸ್‍‍ಲಿಫ್ಟ್

ಹೊಸ ಇಗ್ನಿಸ್ ಫೇಸ್‍ಲಿಫ್ಟ್ ಕಾರಿನಲ್ಲಿ 1.2 ಲೀಟರ್ ಕೆ-ಸೀರಿಸ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 6,000 ಆರ್‍‍ಪಿಎಂನಲ್ಲಿ 83 ಬಿ‍ಹೆಚ್‍‍ಪಿ ಪವರ್ ಮತ್ತು 4,200 ಆರ್‍‍‍ಪಿಎಂನಲ್ಲಿ 113 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್‍ನೊಂದಿಗೆ 5 ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ಅನ್ನು ಸ್ಟ್ಯಾಂಡರ್ಡ್ ಆಗಿ ಅಳವಡಿಸಲಾಗಿದೆ. ಇದರೊಂದಿಗೆ 5 ಸ್ಪೀಡ್ ಎಎಂಟಿಯನ್ನು ಆಯ್ಕೆಯಾಗಿ ನೀಡಲಾಗಿದೆ.

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಮಾರುತಿ ಸುಜುಕಿ ಇಗ್ನಿಸ್ ಫೇಸ್‍‍ಲಿಫ್ಟ್

ಮಾರುತಿ ಸುಜುಕಿ ಇಗ್ನಿಸ್ ಫೇಸ್‍‍ಲಿಫ್ಟ್ ಕಾರಿನ ಬೆಲೆಯು ತುಸು ಹೆಚ್ಚಿರಲಿದೆ. ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸುವುದರಿಂದ ಮಾರುತಿ ಸುಜುಕಿ ಇಗ್ನಿಸ್ ಕಾರು ತುಸು ದುಬಾರಿಯಾಗಿರಲಿದೆ. ಮಾರುತಿ ಸುಜುಕಿ ಇಗ್ನಿಸ್ ಕಾರು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಹ್ಯುಂಡೈ ಹ್ಯಾಚ್‍‍ಬ್ಯಾಕ್‍ಗಳಿಗೆ ಪೈಪೋಟಿ ನೀಡುತ್ತದೆ.

More from DriveSpark

Article Published On: Thursday, January 16, 2020, 16:01 [IST]
English summary
2020 Maruti Ignis Facelift Spied Undisguised In India, Launch Soon. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+