ನಿಮ್ಮಷ್ಟದಂತೆ ಕಾರು ಖರೀದಿಸಲು ಹೊಸ ಅವಕಾಶವನ್ನ ನೀಡಿದ ಮಾರುತಿ ಸುಜುಕಿ

ಕಾರು ಮಾರಾಟ ಪ್ರಕ್ರಿಯೆಯನ್ನು ಬಹುತೇಕ ಆಟೋ ಕಂಪನಿಗಳು ಸರಳಗೊಳಿಸುತ್ತಿದ್ದು, ಕಾರು ಮಾರಾಟದಲ್ಲಿ ನಂ.1 ಸ್ಥಾನದಲ್ಲಿರುವ ಮಾರುತಿ ಸುಜುಕಿ ಸಹ ಕೆಲವು ಕಾರು ಮಾದರಿಗಳ ಮಾರಾಟಕ್ಕಾಗಿ ಆನ್‌ಲೈನ್ ಕಾನ್ಫಿಗೆಟರ್ ಸೌಲಭ್ಯವನ್ನು ತೆರೆದಿದೆ.

ನಿಮ್ಮಷ್ಟದಂತೆ ಕಾರು ಖರೀದಿಸಲು ಹೊಸ ಅವಕಾಶವನ್ನ ನೀಡಿದ ಮಾರುತಿ ಸುಜುಕಿ

ಆನ್‌ಲೈನ್ ಕಾನ್ಫಿಗೆಟರ್ ಮೂಲಕ ಗ್ರಾಹಕರು ತಮ್ಮ ಇಷ್ಟದ ಕಾರನ್ನು ಬೇಡಿಕೆಗೆ ತಕ್ಕಂತೆ ಸಿದ್ದಪಡಿಸಿಕೊಂಡು ಬುಕ್ಕಿಂಗ್ ಮಾಡಬಹುದಾಗಿದ್ದು, ಮೊದಲ ಹಂತದಲ್ಲಿ ಡಿಜೈರ್ ಫೇಸ್‌ಲಿಫ್ಟ್ ಆವೃತ್ತಿಯಲ್ಲಿ ಆನ್‌ಲೈನ್ ಕಾನ್ಫಿಗೆಟರ್ ಪರಿಚಯಿಸಲಾಗಿದೆ. ಆನ್‌ಲೈನ್ ಕಾನ್ಫಿಗೆಟರ್‌ನಲ್ಲಿ ಕೆಲವು ಸ್ಟ್ಯಾಂಡರ್ಡ್ ಫೀಚರ್ಸ್‌ಗಳನ್ನು ಹೊರತುಪಡಿಸಿ ಇನ್ನುಳಿದ ಹೆಚ್ಚುವರಿ ತಾಂತ್ರಿಕ ಸೌಲಭ್ಯಗಳನ್ನು ಮತ್ತು ಬಣ್ಣದ ಆಯ್ಕೆಯನ್ನು ನಿರ್ಧರಿಸಬಹುದಾಗಿದ್ದು, ಬಜೆಟ್‌ಗೆ ತಕ್ಕಂತೆ ಫೀಚರ್ಸ್‌‌ಗಳನ್ನು ಸೇರಿಬಹುದಾಗಿದೆ.

ನಿಮ್ಮಷ್ಟದಂತೆ ಕಾರು ಖರೀದಿಸಲು ಹೊಸ ಅವಕಾಶವನ್ನ ನೀಡಿದ ಮಾರುತಿ ಸುಜುಕಿ

ಇನ್ನು ಡಿಜೈರ್ ಫೇಸ್‌ಲಿಫ್ಟ್ ಆವೃತ್ತಿಯು ನವೀಕೃತ ಬಿಎಸ್-6 ಎಂಜಿನ್‌ನೊಂದಿಗೆ ಬಿಡುಗಡೆಗೊಂಡಿದ್ದು, ಹೊಸ ಕಾರು ವಿನೂತನ ಡಿಸೈನ್‌ನೊಂದಿಗೆ ಮತ್ತಷ್ಟು ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದೆ.

ನಿಮ್ಮಷ್ಟದಂತೆ ಕಾರು ಖರೀದಿಸಲು ಹೊಸ ಅವಕಾಶವನ್ನ ನೀಡಿದ ಮಾರುತಿ ಸುಜುಕಿ

ಡಿಜೈರ್ ಫೇಸ್‌ಲಿಫ್ಟ್ ಆವೃತ್ತಿಯ ಸದ್ಯಕ್ಕೆ ಪೆಟ್ರೋಲ್ ಎಂಜಿನ್ ಆಯ್ಕೆಯಲ್ಲಿ ಮಾತ್ರವೇ ಖರೀದಿಗೆ ಲಭ್ಯವಾಗಿದ್ದು, ನ್ಯೂ ಜನರೇಷನ್ ಬಲೆನೊದಲ್ಲಿ ಬಳಕೆ ಮಾಡಲಾಗಿರುವ ಕೆ12ಸಿ ಡ್ಯುಯಲ್ ಜೆಟ್ ಎಂಜಿನ್ ಪಡೆದುಕೊಂಡಿದೆ.

ನಿಮ್ಮಷ್ಟದಂತೆ ಕಾರು ಖರೀದಿಸಲು ಹೊಸ ಅವಕಾಶವನ್ನ ನೀಡಿದ ಮಾರುತಿ ಸುಜುಕಿ

ಜೊತೆಗೆ ಹಳೆಯ ಆವೃತ್ತಿಗಿಂತಲೂ ಹಲವಾರು ಪ್ರೀಮಿಯಂ ಫೀಚರ್ಸ್‌ಗಳನ್ನು ಹೊಸ ಕಾರಿನಲ್ಲಿ ಜೋಡಿಸಲಾಗಿದ್ದು, ಬಿಎಸ್-4 ಆವೃತ್ತಿಗಿಂತಲೂ ಹೊಸ ಕಾರು ರೂ.6 ಸಾವಿರದಿಂದ ರೂ.21 ಸಾವಿರದಷ್ಟು ದುಬಾರಿ ಬೆಲೆ ಪಡೆದುಕೊಂಡಿದೆ. ಡಿಜೈರ್ ಹೊಸ ಕಾರು ಪೆಟ್ರೋಲ್ ಎಂಜಿನ್‌ನೊಂದಿಗೆ ಮ್ಯಾನುವಲ್ ಮತ್ತು ಎಜಿಎಸ್(ಆಟೋ) ಗೇರ್‌ಬಾಕ್ಸ್ ಆಯ್ಕೆಯನ್ನು ಹೊಂದಿದ್ದು, ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 5.89 ಲಕ್ಷ ಮತ್ತು ಹೈ ಎಂಡ್ ಆವೃತ್ತಿಯು ರೂ. 8.81 ಲಕ್ಷ ಬೆಲೆ ಹೊಂದಿದೆ.

ನಿಮ್ಮಷ್ಟದಂತೆ ಕಾರು ಖರೀದಿಸಲು ಹೊಸ ಅವಕಾಶವನ್ನ ನೀಡಿದ ಮಾರುತಿ ಸುಜುಕಿ

ಎಂಜಿನ್ ಸಾಮರ್ಥ್ಯ ಮತ್ತು ಮೈಲೇಜ್

ಸದ್ಯ ಬಿಎಸ್-6 ವೈಶಿಷ್ಟ್ಯತೆ 1.2-ಲೀಟರ್ ಫೋರ್ ಸಿಲಿಂಡರ್ ಕೆ12ಸಿ ಡ್ಯುಯಲ್‌ಜೆಟ್ ಪೆಟ್ರೋಲ್ ಎಂಜಿನ್ ಆಯ್ಕೆ ಮಾತ್ರ ಹೊಂದಿರುವ ಡಿಜೈರ್ ಫೇಸ್‌ಲಿಫ್ಟ್ ಕಾರು 5-ಸ್ಪೀಡ್ ಮ್ಯಾನುವಲ್ ಮತ್ತು 5-ಸ್ಪೀಡ್ ಆಟೋಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ 90-ಬಿಎಚ್‌ಪಿ ಉತ್ಪಾದನೆ ಮಾಡಬಲ್ಲದು.

ನಿಮ್ಮಷ್ಟದಂತೆ ಕಾರು ಖರೀದಿಸಲು ಹೊಸ ಅವಕಾಶವನ್ನ ನೀಡಿದ ಮಾರುತಿ ಸುಜುಕಿ

ಈ ಮೂಲಕ ಇಂಧನ ದಕ್ಷತೆಯಲ್ಲೂ ಗಮನಸೆಳೆದಿರುವ ಹೊಸ ಕಾರು ಪ್ರತಿ ಲೀಟರ್ ಪೆಟ್ರೋಲ್‌ಗೆ ಮ್ಯಾನುವಲ್ ಮಾದರಿಯು 23.26 ಕಿ.ಮೀ ಮತ್ತು ಆಟೋಮ್ಯಾಟಿಕ್ ಮಾದರಿಯು 24.12 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತದೆ.

ನಿಮ್ಮಷ್ಟದಂತೆ ಕಾರು ಖರೀದಿಸಲು ಹೊಸ ಅವಕಾಶವನ್ನ ನೀಡಿದ ಮಾರುತಿ ಸುಜುಕಿ

ಹೊಸ ಕಾರಿನಲ್ಲಿ ಇಂಧನ ದಕ್ಷತೆಗಾಗಿ ಐಡೆಲ್ ಸ್ಟಾರ್ಟ್ ಮತ್ತು ಸ್ಟಾಪ್ ತಂತ್ರಜ್ಞಾನವನ್ನು ಬಳಕೆ ಮಾಡಲಾಗಿದ್ದು, ಇದು ಕಂಪ್ಯಾಕ್ಟ್ ಸೆಡಾನ್ ಆವೃತ್ತಿಗಳಲ್ಲೇ ಅತಿ ಹೆಚ್ಚು ಇಂಧನ ದಕ್ಷತೆ ಹೊಂದಿರುವ ಕಾರು ಮಾದರಿಯಾಗಿದೆ.

ನಿಮ್ಮಷ್ಟದಂತೆ ಕಾರು ಖರೀದಿಸಲು ಹೊಸ ಅವಕಾಶವನ್ನ ನೀಡಿದ ಮಾರುತಿ ಸುಜುಕಿ

ಇನ್ನುಳಿದಂತೆ ಹೊಸ ಕಾರಿನ ಗ್ರಿಲ್ ಡಿಸೈನ್ ಅನ್ನು ಸಂಪೂರ್ಣವಾಗಿ ಬದಲಾಣೆಗೊಳಿಸಿರುವ ಕಾರಿನ ಆಕರ್ಷಣೆಯನ್ನು ಹೆಚ್ಚಿಸಿದ್ದು, ಹೊಸ ವಿನ್ಯಾಸದ ಫ್ರಂಟ್ ಬಂಪರ್ ಜೊತೆಗೆ ಹೊಸದಾದ ಫಾಗ್ ಲ್ಯಾಂಪ್ ಮತ್ತು ಡ್ಯುಯಲ್ ಟೋನ್ ಅಯಾಲ್ ವೀಲ್ಹ್ ನೀಡಲಾಗಿದೆ.

ನಿಮ್ಮಷ್ಟದಂತೆ ಕಾರು ಖರೀದಿಸಲು ಹೊಸ ಅವಕಾಶವನ್ನ ನೀಡಿದ ಮಾರುತಿ ಸುಜುಕಿ

ಹಾಗೆಯೇ ಕಾರಿನ ಒಳಭಾಗದ ವಿನ್ಯಾಸದಲ್ಲೂ ಹಲವಾರು ಬದಲಾವಣೆಗಳನ್ನು ಪರಿಚಯಿಸಲಾಗಿದ್ದು, ಆಂಡ್ರಾಯಿಡ್ ಆಟೋ ಮತ್ತು ಆ್ಯಪಲ್ ಕಾರ್ ಪ್ಲೇಗೆ ಸರ್ಪೋಟ್ ಮಾಡಬಲ್ಲ ಸ್ಮಾರ್ಟ್ ಸ್ಟುಡಿಯೋ ಇನ್ಪೋಟೈನ್‌ಮೆಂಟ್ ಸಿಸ್ಟಂ, ಡ್ಯುಯಲ್ ಟೋನ್ ಆಸನಗಳು, ಫ್ಲಕ್ಸ್ ವುಡ್ ಟ್ರಮ್, ಆಟೋ ಫ್ಲೊಡಿಂಗ್ ರಿಯರ್ ವ್ಯೂ ಮಿರರ್, ಟಿಎಫ್‌ಟಿ ಸ್ಕ್ರೀನ್, ಎಂಡಿಐ ಸೌಲಭ್ಯ ಹೊಂದಿದೆ.

ನಿಮ್ಮಷ್ಟದಂತೆ ಕಾರು ಖರೀದಿಸಲು ಹೊಸ ಅವಕಾಶವನ್ನ ನೀಡಿದ ಮಾರುತಿ ಸುಜುಕಿ

ಪ್ರಯಾಣಿಕ ಸುರಕ್ಷತೆಗೂ ಈ ಬಾರಿ ಹೆಚ್ಚು ಗಮನಹರಿಸಿರುವ ಮಾರುತಿ ಸುಜುಕಿಯು ಹೊಸ ಕಾರಿನಲ್ಲಿ ಎಬಿಎಸ್ ಜೊತೆ ಇಬಿಡಿ, ಫ್ರಂಟ್ ಡ್ಯುಯಲ್ ಏರ್‌ಬ್ಯಾಗ್, ಕ್ರೂಸ್ ಕಂಟ್ರೋಲ್ ಮತ್ತು ಆಟೋಮ್ಯಾಟಿಕ್ ಆವೃತ್ತಿಗಳಲ್ಲಿ ಹೆಚ್ಚುವರಿಯಾಗಿ ಎಲೆಕ್ಟ್ರಾನಿಕ್ ಸ್ಟ್ಯಾಬಿಲಿಟಿ ಪ್ರೋಗ್ರಾಂ ಮತ್ತು ಹಿಲ್ ಹೋಲ್ಡ್ ಅಸಿಸ್ಟ್ ಸೌಲಭ್ಯಗಳನ್ನು ನೀಡಲಾಗಿದೆ.

Article Published On: Thursday, March 26, 2020, 20:22 [IST]
English summary
Maruti Suzuki has introduces online configurator for the new Dzire BS6 model in India. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+