ಮಾರುತಿ ಸುಜುಕಿ ನೆಕ್ಸಾ ಕಾರು ಮಾದರಿಗಳ ಮೇಲೆ ಭರ್ಜರಿ ರಿಯಾಯ್ತಿ

ಮಾರುತಿ ಸುಜುಕಿಯು ಕುಸಿದಿರುವ ಹೊಸ ಕಾರುಗಳ ಮಾರಾಟ ಪ್ರಮಾಣವನ್ನು ಸುಧಾರಿಸುವ ನಿಟ್ಟಿನಲ್ಲಿ ಹಲವಾರು ಹೊಸ ಆಫರ್‌ಗಳ ಮೂಲಕ ಗ್ರಾಹಕರನ್ನು ಸೆಳೆಯುತ್ತಿದ್ದು, ನೆಕ್ಸಾ ಪ್ರೀಮಿಯಂ ಕಾರುಗಳ ಖರೀದಿ ಮೇಲೆ ಆಕರ್ಷಕ ಡಿಸ್ಕೌಂಟ್ ಆಫರ್‌ಗಳನ್ನು ನೀಡುತ್ತಿದೆ.

ಮಾರುತಿ ಸುಜುಕಿ ನೆಕ್ಸಾ ಕಾರು ಮಾದರಿಗಳ ಮೇಲೆ ಭರ್ಜರಿ ರಿಯಾಯ್ತಿ

ಕಾರು ಮಾರಾಟದಲ್ಲಿ ಎರಡು ಮಾದರಿಯ ಮಾರಾಟ ಸೌಲಭ್ಯ ಹೊಂದಿರುವ ಮಾರುತಿ ಸುಜುಕಿಯು ಅರೆನಾ ಮತ್ತು ನೆಕ್ಸಾ ಮೂಲಕ ಕಾರು ಮಾರಾಟ ಮಾಡುತ್ತಿದ್ದು, ಅರೆನಾದಲ್ಲಿ ಸಾಮಾನ್ಯ ಕಾರು ಮಾದರಿಗಳನ್ನು ಮತ್ತು ನೆಕ್ಸಾ ಶೋರೂಂಗಳ ಮೂಲಕ ಪ್ರೀಮಿಯಂ ಕಾರುಗಳ ಮಾರಾಟವನ್ನು ಕೈಗೊಳ್ಳುತ್ತಿದೆ. ಅರೆನಾದಲ್ಲಿ ಆಲ್ಟೊ, ಇಕೋ, ಎಸ್-ಪ್ರೆಸ್ಸೊ, ವ್ಯಾಗನ್ಆರ್, ಸೆಲೆರಿಯೊ, ಬ್ರೆಝಾ, ಡಿಜೈರ್ ಮತ್ತು ಎರ್ಟಿಗಾ ಕಾರುಗಳನ್ನು ಮಾರಾಟ ಮಾಡಲಿದ್ದರೆ ನೆಕ್ಸಾದಲ್ಲಿ ಇಗ್ನಿಸ್, ಬಲೆನೊ, ಸಿಯಾಜ್ ಮತ್ತು ಎಕ್ಸ್6 ಕಾರುಗಳನ್ನು ಮಾರಾಟ ಮಾಡುತ್ತದೆ.

ಮಾರುತಿ ಸುಜುಕಿ ನೆಕ್ಸಾ ಕಾರು ಮಾದರಿಗಳ ಮೇಲೆ ಭರ್ಜರಿ ರಿಯಾಯ್ತಿ

ಅರೆನಾ ಮತ್ತು ನೆಕ್ಸಾ ಕಾರು ಮಾರಾಟ ಪ್ರಕ್ರಿಯೆಯನ್ನು ಪ್ರತ್ಯೇಕವಾಗಿಯೇ ಕೈಗೊಳ್ಳುವ ಮಾರುತಿ ಸುಜುಕಿಯು ಇದೀಗ ನೆಕ್ಸಾ ಮಾದರಿಗಳ ಮೇಲೆ ಹೊಸ ಡಿಸ್ಕೌಂಟ್ ಆಫರ್‌ಗಳನ್ನು ಘೋಷಣೆ ಮಾಡಿದ್ದು, ಕಾರು ಮಾದರಿಗಳಿಗೆ ಅನುಗುಣವಾಗಿ ರೂ.15 ಸಾವಿರದಿಂದ ರೂ. 20 ಸಾವಿರದಷ್ಟು ಕ್ಯಾಶ್‌ಬ್ಯಾಕ್ ಆಫರ್‌ಗಳನ್ನು ಘೋಷಣೆ ಮಾಡಿದೆ.

ಮಾರುತಿ ಸುಜುಕಿ ನೆಕ್ಸಾ ಕಾರು ಮಾದರಿಗಳ ಮೇಲೆ ಭರ್ಜರಿ ರಿಯಾಯ್ತಿ

ಹೊಸ ಡಿಸ್ಕೌಂಟ್ ಆಫರ್‌ಗಳಲ್ಲಿ ಕ್ಯಾಶ್‌ಬ್ಯಾಕ್ ಜೊತೆಗೆ ಬೋನಸ್, ಎಕ್ಸ್‌ಚೆಂಜ್ ಮತ್ತು ಕಾರ್ಪೋರೆಟ್ ಡಿಸ್ಕೌಂಟ್ ಸಹ ಸೇರ್ಪಡೆಯಾಗಿದ್ದು, ದೇಶದ ಪ್ರಮುಖ ನಗರಗಳಲ್ಲಿ ಡೀಲರ್ಸ್ ಮಟ್ಟದಲ್ಲೂ ಸಹ ಹಲವು ಆಫರ್‌ಗಳನ್ನು ನೀಡಲಾಗುತ್ತಿದೆ.

ಮಾರುತಿ ಸುಜುಕಿ ನೆಕ್ಸಾ ಕಾರು ಮಾದರಿಗಳ ಮೇಲೆ ಭರ್ಜರಿ ರಿಯಾಯ್ತಿ

ಇದರೊಂದಿಗೆ ಅರೆನಾದಲ್ಲೂ ಮಾರಾಟವಾಗುವ ಮಾರುತಿ ಸುಜುಕಿ ಕಾರುಗಳ ಖರೀದಿ ಮೇಲೂ ರೂ.20 ಸಾವಿರದಿಂದ ರೂ.45 ಸಾವಿರದಷ್ಟು ಡಿಸ್ಕೌಂಟ್ ಆಫರ್‌ಗಳನ್ನು ನೀಡಲಾಗುತ್ತಿದ್ದು, ಲಾಕ್‌ಡೌನ್ ವೇಳೆ ಕುಸಿದಿರುವ ಕಾರು ಮಾರಾಟವನ್ನು ಹೆಚ್ಚಿಸಲು ಹೊಸ ಆಫರ್‌ಗಳು ಸಹಕಾರಿಯಾಗಿವೆ.

MOST READ: ರೂ.5 ಲಕ್ಷಕ್ಕಿಂತ ಕಡಿಮೆ ಬೆಲೆಯ ಜನಪ್ರಿಯ ಕಾರುಗಳಿವು

ಮಾರುತಿ ಸುಜುಕಿ ನೆಕ್ಸಾ ಕಾರು ಮಾದರಿಗಳ ಮೇಲೆ ಭರ್ಜರಿ ರಿಯಾಯ್ತಿ

ಇನ್ನು ಬಿಎಸ್-6 ಎಮಿಷನ್ ಜಾರಿಗೂ ಮುನ್ನವೇ ತನ್ನ ಪ್ರಮುಖ ಕಾರುಗಳಲ್ಲಿನ ಡೀಸೆಲ್ ಎಂಜಿನ್ ಆಯ್ಕೆಯನ್ನು ತೆಗೆದುಹಾಕಿರುವ ಮಾರುತಿ-ಸುಜುಕಿಯು ಭವಿಷ್ಯದಲ್ಲೂ ಯಾವುದೇ ಕಾರಣಕ್ಕೂ ಹೊಸ ಡೀಸೆಲ್ ಎಂಜಿನ್‌ಗಳನ್ನು ಸೇರ್ಪಡೆಗೊಳಿಸದಿರಲು ನಿರ್ಧರಿಸಿದೆ.

ಮಾರುತಿ ಸುಜುಕಿ ನೆಕ್ಸಾ ಕಾರು ಮಾದರಿಗಳ ಮೇಲೆ ಭರ್ಜರಿ ರಿಯಾಯ್ತಿ

ಏಪ್ರಿಲ್ 1ರಿಂದ ಕಡ್ಡಾಯವಾಗಿ ಜಾರಿಗೆ ಬಂದಿರುವ ಹೊಸ ಎಮಿಷನ್ ಪ್ರಕಾರ ಡೀಸೆಲ್ ಕಾರುಗಳ ಮಾರಾಟದಲ್ಲಿ ಮಹತ್ವದ ಬದಲಾವಣೆ ಪರಿಚಯಿಸಿರುವ ಮಾರುತಿ ಸುಜುಕಿ ಕಂಪನಿಯು ಕಡಿಮೆ ಸಾಮರ್ಥ್ಯದ ಡೀಸೆಲ್ ಕಾರುಗಳ ಮಾರಾಟಕ್ಕೆ ಗುಡ್‌ಬೈ ಹೇಳಿದ್ದು, ಕೇವಲ ಪೆಟ್ರೋಲ್, ಪೆಟ್ರೋಲ್ ಹೈಬ್ರಿಡ್ ಮತ್ತು ಆಯ್ದ ಕಾರು ಮಾದರಿಗಳಲ್ಲಿ ಸಿಎನ್‌ಜಿ ಎಂಜಿನ್ ಆಯ್ಕೆಯನ್ನು ನೀಡುವ ಮೂಲಕ ಡೀಸೆಲ್ ಎಂಜಿನ್ ಮಾರಾಟವನ್ನೇ ಸ್ಥಗಿತಗೊಳಿಸಿದೆ.

MOST READ: ಪ್ರತಿ ಚಾರ್ಜ್‌ಗೆ 480 ಕಿ.ಮೀ ಮೈಲೇಜ್ ನೀಡುವ ಎಲೆಕ್ಟ್ರಿಕ್ ಎಸ್‌ಯುವಿ ಬಿಡುಗಡೆ ಮಾಡಲಿದೆ ನಿಸ್ಸಾನ್

ಮಾರುತಿ ಸುಜುಕಿ ನೆಕ್ಸಾ ಕಾರು ಮಾದರಿಗಳ ಮೇಲೆ ಭರ್ಜರಿ ರಿಯಾಯ್ತಿ

ಪ್ರಸ್ತುತ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ನಿರ್ಮಾಣದ ಒಂದೇ ಒಂದು ಕಾರು ಮಾದರಿಯಲ್ಲೂ ಡೀಸೆಲ್ ಎಂಜಿನ್ ಖರೀದಿಗೆ ಲಭ್ಯವಿಲ್ಲದಿರುವುದೇ ಇದಕ್ಕೆ ಪ್ರಮುಖ ಕಾರಣವಾಗಿದ್ದು, ಭವಿಷ್ಯದಲ್ಲೂ ಡೀಸೆಲ್ ಎಂಜಿನ್ ಆಯ್ಕೆ ನೀಡುವುದು ಅನುಮಾನವೆನ್ನಲಾಗಿದೆ.

Article Published On: Wednesday, July 22, 2020, 8:45 [IST]
English summary
Maruti Offers Great Discounts On Premium Nexa Model In 2020 July. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+