20 ದಿನಗಳಲ್ಲಿ 1,500 ವೆಂಟಿಲೆಟರ್‌ಗಳನ್ನು ಸಿದ್ದಪಡಿಸಿದ ಮಾರುತಿ ಸುಜುಕಿ

ಕರೋನಾ ವೈರಸ್ ವಿರುದ್ಧ ಸಮರ ಸಾರಿರುವ ಸರ್ಕಾರದ ಕೈ ಜೋಡಿಸಿರುವ ಆಟೋ ಉತ್ಪಾದನಾ ಕಂಪನಿಗಳು ಸಂಕಷ್ಟದಲ್ಲೂ ವೈದ್ಯಕೀಯ ಉಪಕರಣಗಳ ಉತ್ಪಾದನೆಗೆ ಚಾಲನೆ ನೀಡಿದ್ದು, ಮಾರುತಿ ಸುಜುಕಿಯ ಸಹ ಸರ್ಕಾರದ ಆದೇಶದಂತೆ ವಿನೂತನ ಮಾದರಿಯ ವೆಂಟಿಲೆಟರ್‌ಗಳನ್ನು ಸಿದ್ದಪಡಿಸಿದೆ.

20 ದಿನಗಳಲ್ಲಿ 1,500 ವೆಂಟಿಲೆಟರ್‌ಗಳನ್ನು ಸಿದ್ದಪಡಿಸಿದ ಮಾರುತಿ ಸುಜುಕಿ

ದೇಶದ ವಿವಿಧ ಭಾಗದಲ್ಲಿರುವ 3 ಕಾರು ಉತ್ಪಾದನಾ ಘಟಕಗಳಲ್ಲೂ ಆಗ್ವಾ ಹೆಲ್ತ್ ಕೇರ್ ಸಂಸ್ಥೆಯ ಸಹಯೋಗದೊಂದಿಗೆ ವೆಂಟಿಲೆಟರ್‌ಗಳನ್ನು ನಿರ್ಮಾಣ ಮಾಡುತ್ತಿರುವ ಮಾರುತಿ ಸುಜುಕಿ ಕಂಪನಿಯು ಮೊದಲ ಹಂತವಾಗಿ 1,500 ವೆಂಟಿಲೆಟರ್‌ಗಳನ್ನು ಉತ್ಪಾದನೆ ಮಾಡಿದ್ದು, ಅಗತ್ಯವಿರುವ ವಿವಿಧ ಸರ್ಕಾರಿ ಆಸ್ಪತ್ರೆಗಳಿಗೆ ರವಾನಿಸುವುದಕ್ಕಾಗಿ ಸರ್ಕಾರದ ಆದೇಶವನ್ನು ಕಾಯುತ್ತಿದೆ. ಸರ್ಕಾರದ ಸೂಚನೆ ಮೇರೆಗೆ ವೆಂಟಿಲೆಟರ್‌ಗಳ ಪೂರೈಕೆ ಆರಂಭವಾಗಲಿದ್ದು, ಪ್ರತಿ ತಿಂಗಳು 10 ಸಾವಿರ ಯುನಿಟ್ ಉತ್ಪಾದನೆ ಮಾಡುವ ಸಾಮಾರ್ಥ್ಯವಿರುವುದಾಗಿ ಮಾರುತಿ ಸುಜುಕಿಯು ಸರ್ಕಾರಕ್ಕೆ ಭರವಸೆ ನೀಡಿದೆ.

20 ದಿನಗಳಲ್ಲಿ 1,500 ವೆಂಟಿಲೆಟರ್‌ಗಳನ್ನು ಸಿದ್ದಪಡಿಸಿದ ಮಾರುತಿ ಸುಜುಕಿ

ಹಾಗೆಯೇ ಮಾರುತಿ ಸುಜುಕಿ ಕಂಪನಿಯ ಮತ್ತೊಂದು ಸಹಭಾಗಿತ್ವದ ಸಂಸ್ಥೆಯಾದ ಭಾರತ್ ಸೀಟ್ ಲಿಮಿಟೆಡ್ ಕಂಪನಿಯು ಸಹ ವೈದ್ಯಕೀಯ ಸೇವೆಗಳಿಗೆ ಬಳಕೆ ಮಾಡುವ ಪ್ರೋಕ್ಟೆಕ್ಟಿವ್ ಕ್ಲಾಥ್‌ಗಳನ್ನು ಸಿದ್ದಪಡಿಸಿ ಪೂರೈಕೆ ಮಾಡುತ್ತಿದ್ದು, ವೈದ್ಯಕೀಯ ಉಪಕರಣಗಳ ಜೊತೆಗೆ ಸಾಮಾಜಿಕ ಸೇವೆಯನ್ನು ಸಹ ನಿರ್ವಹಿಸುತ್ತಿವೆ.

MOST READ: ಲಾಕ್‌ಡೌನ್ ವೇಳೆ ಕಾರು ಚಾಲನೆ ಮಾಡಿ ಸಿಕ್ಕಿಬಿದ್ದ ಮಹಿಳೆಯಿಂದ ಹೈಡ್ರಾಮಾ..

20 ದಿನಗಳಲ್ಲಿ 1,500 ವೆಂಟಿಲೆಟರ್‌ಗಳನ್ನು ಸಿದ್ದಪಡಿಸಿದ ಮಾರುತಿ ಸುಜುಕಿ

ಮಾರುತಿ ಸುಜುಕಿ ಕಂಪನಿಯ ಮತ್ತೊಂದು ಸಹಭಾಗಿತ್ವದ ಸಂಸ್ಥೆಯಾದ ಕೃಷ್ಣಾ ಮಾರುತಿಯು ಕೂಡಾ ಕರೋನಾ ವೈರಸ್ ವಿರುದ್ದದ ಹೋರಾಟಕ್ಕೆ ಹರಿಯಾಣ ಸರ್ಕಾರದ ಕೈಜೋಡಿಸಿದ್ದು, ಉಚಿತವಾಗಿ 10 ಲಕ್ಷ ಮಾಸ್ಕ್‌ಗಳನ್ನು ಉತ್ಪಾದನೆ ಮಾಡಿ ವಿತರಣೆಗೆ ಚಾಲನೆ ನೀಡಿದೆ.

20 ದಿನಗಳಲ್ಲಿ 1,500 ವೆಂಟಿಲೆಟರ್‌ಗಳನ್ನು ಸಿದ್ದಪಡಿಸಿದ ಮಾರುತಿ ಸುಜುಕಿ

ಕಾರು ಸೀಟ್ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಕೃಷ್ಣಾ ಮಾರುತಿಯು ಮಾರುತಿ ಸುಜುಕಿ ಕಂಪನಿಯ ಸಹಭಾಗಿತ್ವದ ಸಂಸ್ಥೆಯಾಗಿದ್ದು, ಕರೋನಾ ವೈರಸ್ ವಿರುದ್ಧ ಹೋರಾಟಕ್ಕೆ ಮಾಸ್ಕ್ ಉತ್ಪಾದನೆ ಮಾಡಿಕೊಡುವುದಾಗಿ ಹೇಳಿತ್ತು. ಇದೀಗ ಮಾಸ್ಕ್ ಉತ್ಪಾದನೆಗೆ ಚಾಲನೆ ನೀಡಿರುವುದಲ್ಲದೆ ಸುಮಾರು 2 ಲಕ್ಷ ಮಾಸ್ಕ್‌ಗಳನ್ನು ಸ್ಥಳೀಯ ಆಡಳಿತ ಸಂಸ್ಥೆಗಳಿಗೆ ವಿತರಣೆ ಮಾಡಿದೆ.

MOST READ: ಲಾಕ್‌ಡೌನ್ ಸಂಕಷ್ಟ- ಆಟೋ ಚಾಲಕರ ಬ್ಯಾಂಕ್ ಖಾತೆ ಸೇರಿದ ರೂ.5 ಸಾವಿರ ಪರಿಹಾರ..

20 ದಿನಗಳಲ್ಲಿ 1,500 ವೆಂಟಿಲೆಟರ್‌ಗಳನ್ನು ಸಿದ್ದಪಡಿಸಿದ ಮಾರುತಿ ಸುಜುಕಿ

ಇನ್ನುಳಿದ ಮಾಸ್ಕ್‌ಗಳನ್ನು ಸದ್ಯ ಉತ್ಪಾದನೆಯನ್ನು ಪೂರ್ಣಗೊಳಿಸುತ್ತಿದ್ದು, ದಿನಂಪ್ರತಿ 50 ಸಾವಿರ ಮಾಸ್ಕ್‌ಗಳನ್ನು ಉತ್ಪಾದನೆ ಮಾಡಲಾಗುತ್ತಿದೆ. ಇದಲ್ಲದೆ ಲಾಕ್‌ಡೌನ್‌ನಿಂದ ಸಂಕಷ್ಟದಲ್ಲಿರುವ ಬಡವರ ಹಸಿವುವನ್ನು ನೀಗಿಸುತ್ತಿರುವ ಸಾಕಷ್ಟು ಮೆಚ್ಚುಗೆ ಕಾರಣವಾಗಿದೆ.

20 ದಿನಗಳಲ್ಲಿ 1,500 ವೆಂಟಿಲೆಟರ್‌ಗಳನ್ನು ಸಿದ್ದಪಡಿಸಿದ ಮಾರುತಿ ಸುಜುಕಿ

ಮಾಹಾಮಾರಿ ಕರೋನಾ ವೈರಸ್ ವಿರುದ್ಧದ ಹೋರಾಟಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ದೇಣಿಗೆ ಸಂಗ್ರಹ ಅಭಿಯಾನಕ್ಕೆ ಸ್ಪಂದಿಸಿರುವ ಆಟೋ ಉತ್ಪಾದನಾ ಕಂಪನಿಗಳು ಭಾರೀ ಪ್ರಮಾಣದ ಧನಸಹಾಯ ಮತ್ತು ವೈದ್ಯಕೀಯ ಉಪಕರಣಗಳ ಉತ್ಪಾದನೆಗೆ ಚಾಲನೆ ನೀಡಿವೆ.

MOST READ: ಕರೋನಾ ಕಾರಣಕ್ಕೆ ಕಾರಿನಲ್ಲೇ ತಂಗುತ್ತಿರುವ ವೈದ್ಯ..!

20 ದಿನಗಳಲ್ಲಿ 1,500 ವೆಂಟಿಲೆಟರ್‌ಗಳನ್ನು ಸಿದ್ದಪಡಿಸಿದ ಮಾರುತಿ ಸುಜುಕಿ

ಕರೋನಾ ವೈರಸ್ ಅಟ್ಟಹಾಸ ಹೆಚ್ಚಾಗುತ್ತಿದ್ದಂತೆ ಇಡೀ ದೇಶವನ್ನೇ ಲಾಕ್ ಡೌನ್ ಮಾಡಲಾಗಿದ್ದು, ಬಹುತೇಕ ವಾಣಿಜ್ಯ ಚಟುವಟಿಕೆಗಳನ್ನು ಸ್ಥಗಿತಗೊಂಡಿವೆ. ಈ ಹಿನ್ನಲೆಯಲ್ಲಿ ಆರ್ಥಿಕ ಪರಿಸ್ಥಿತಿ ಶೋಚನೀಯ ಸ್ಥಿತಿ ತಲುಪಿದ್ದು, ಕರೋನಾ ವಿರುದ್ಧ ಹೋರಾಟಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ದೇಣಿಗೆ ಸಂಗ್ರಹ ಅಭಿಯಾನವನ್ನು ಕೈಗೊಂಡಿವೆ.

20 ದಿನಗಳಲ್ಲಿ 1,500 ವೆಂಟಿಲೆಟರ್‌ಗಳನ್ನು ಸಿದ್ದಪಡಿಸಿದ ಮಾರುತಿ ಸುಜುಕಿ

ದೇಣಿಗೆ ಸಂಗ್ರಹ ಅಭಿಯಾನಕ್ಕೆ ಈಗಾಗಲೇ ಭಾರೀ ಪ್ರಮಾಣದ ನೆರವು ಹರಿದು ಬಂದಿದ್ದು, ಉದ್ಯಮಿಗಳು, ಚಿತ್ರ ನಟರು, ಸರ್ಕಾರಿ ಅಧಿಕಾರಿಗಳು ಮತ್ತು ಜನಸಾಮಾನ್ಯರು ಸಹ ತಮ್ಮ ಕೈಲಾದಷ್ಟು ದೇಣಿಗೆ ನೀಡಿ ಕರೋನಾ ವಿರುದ್ಧದ ಸರ್ಕಾರದ ಹೋರಾಟಕ್ಕೆ ಶಕ್ತಿ ತುಂಬುತ್ತಿದ್ದಾರೆ.

MOST READ: ಲಾಕ್ ಡೌನ್ ಎಫೆಕ್ಟ್- ಮಾರ್ಗ ಮಧ್ಯದಲ್ಲೇ ಉಳಿದ ಸಾವಿರಾರು ಕೋಟಿ ಮೌಲ್ಯದ ಹೊಸ ವಾಹನಗಳು

20 ದಿನಗಳಲ್ಲಿ 1,500 ವೆಂಟಿಲೆಟರ್‌ಗಳನ್ನು ಸಿದ್ದಪಡಿಸಿದ ಮಾರುತಿ ಸುಜುಕಿ

ಅದರಲ್ಲೂ ಆಟೋ ಉತ್ಪಾದನಾ ಕಂಪನಿಗಳು ಕರೋನಾ ವಿರುದ್ದ ಹೋರಾಟಕ್ಕಾಗಿ ಸಂಕಷ್ಟದ ಸಮಯದಲ್ಲೂ ಸರ್ಕಾರದ ಜೊತೆ ನಿಂತಿರುವುದಲ್ಲದೆ ವೈದ್ಯಕೀಯ ಉಪಕರಣಗಳ ತಯಾರಿಕೆಯ ಜೊತೆಗೆ ಧನಸಹಾಯವನ್ನು ಕೂಡಾ ಮಾಡುತ್ತಿವೆ.

Article Published On: Tuesday, April 28, 2020, 18:45 [IST]
English summary
Maruti produce 1500 ventilators in 20 days awaits government approval for dispatch details. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+