ಮಾರುತಿ ಸುಜುಕಿ ಎಸ್-ಕ್ರಾಸ್ ಪೆಟ್ರೋಲ್ ಕಾರು ಮಾದರಿಯ ಖರೀದಿಗಾಗಿ ಅಧಿಕೃತ ಬುಕ್ಕಿಂಗ್ ಆರಂಭ

ಬಹುನೀರಿಕ್ಷಿತ ಮಾರುತಿ ಸುಜುಕಿ ಎಸ್-ಕ್ರಾಸ್ ಪೆಟ್ರೋಲ್ ಮಾದರಿಯು ಮುಂದಿನ ತಿಂಗಳು ಅಗಸ್ಟ್ 5ಕ್ಕೆ ಅಧಿಕೃತವಾಗಿ ಮಾರುಕಟ್ಟೆಗೆ ಪ್ರವೇಶಿಸುವುದು ಬಹುತೇಕ ಖಚಿತವಾಗಿದ್ದು, ಹೊಸ ಕಾರು ಬಿಡುಗಡೆಗೂ ಮುನ್ನ ಕಾರು ಖರೀದಿಗಾಗಿ ರೂ.11 ಸಾವಿರ ಮುಂಗಡದೊಂದಿಗೆ ಅಧಿಕೃತ ಬುಕ್ಕಿಂಗ್ ಪ್ರಕ್ರಿಯೆಯನ್ನು ಆರಂಭಿಸಲಾಗಿದೆ.

ಮಾರುತಿ ಸುಜುಕಿ ಎಸ್-ಕ್ರಾಸ್ ಪೆಟ್ರೋಲ್ ಕಾರು ಮಾದರಿಯ ಖರೀದಿಗಾಗಿ ಅಧಿಕೃತ ಬುಕ್ಕಿಂಗ್ ಆರಂಭ

ಕರೋನಾ ವೈರಸ್ ಹಿನ್ನಲೆಯಲ್ಲಿ ಹೊಸ ಕಾರಿನ ಬಿಡುಗಡೆ ದಿನಾಂಕವನ್ನು ಮುಂದೂಡುತ್ತಲೇ ಬಂದಿದ್ದ ಮಾರುತಿ ಸುಜುಕಿ ಕಂಪನಿಯು ಇದೀಗ ಅಂತಿಮವಾಗಿ ಅಗಸ್ಟ್ 5ಕ್ಕೆ ಹೊಸ ಎಸ್-ಕ್ರಾಸ್ ಕಾರು ಮಾದರಿಯನ್ನು ಬಿಡುಗಡೆ ಮಾಡುವುದಾಗಿ ಹೇಳಿಕೊಂಡಿದ್ದು, ಬಿಎಸ್-6 ಎಮಿಷನ್ ಜಾರಿಯಿಂದಾಗಿ ಹೊಸ ಕಾರಿನಲ್ಲಿ ಈ ಬಾರಿ ಪೆಟ್ರೋಲ್ ಮಾದರಿಯನ್ನು ಮಾತ್ರವೇ ಪರಿಚಯಿಸಲಾಗುತ್ತಿದೆ.

ಮಾರುತಿ ಸುಜುಕಿ ಎಸ್-ಕ್ರಾಸ್ ಪೆಟ್ರೋಲ್ ಕಾರು ಮಾದರಿಯ ಖರೀದಿಗಾಗಿ ಅಧಿಕೃತ ಬುಕ್ಕಿಂಗ್ ಆರಂಭ

ಬಿಎಸ್-6 ನಿಯಮ ಜಾರಿ ಹಿನ್ನಲೆಯಲ್ಲಿ ಹೊಸ ಕಾರು ಮಾರಾಟದಲ್ಲಿ ಕೆಲವು ಮಹತ್ವದ ಬದಲಾವಣೆಗಳನ್ನು ಪರಿಚಯಿಸಿರುವ ಮಾರುತಿ ಸುಜುಕಿಯು ಈ ಹಿಂದಿನ ಡೀಸೆಲ್ ಎಂಜಿನ್ ಪ್ರೇರಿತ ವಿಟಾರಾ ಬ್ರೆಝಾ ಮತ್ತು ಎಸ್-ಕ್ರಾಸ್ ಕಾರಿನಲ್ಲಿ ಮೊದಲ ಬಾರಿಗೆ ಪೆಟ್ರೋಲ್ ಎಂಜಿನ್ ಜೋಡಣೆ ಮಾಡಿದೆ.

ಮಾರುತಿ ಸುಜುಕಿ ಎಸ್-ಕ್ರಾಸ್ ಪೆಟ್ರೋಲ್ ಕಾರು ಮಾದರಿಯ ಖರೀದಿಗಾಗಿ ಅಧಿಕೃತ ಬುಕ್ಕಿಂಗ್ ಆರಂಭ

ವಿಟಾರಾ ಬ್ರೆಝಾ ಕಾರು ಮಾದರಿಯು ಈಗಾಗಲೇ ಹೊಸ ಪೆಟ್ರೋಲ್ ಎಂಜಿನ್‌ನೊಂದಿಗೆ ಬಿಡುಗಡೆಗೊಂಡಿದ್ದು, ಇದೀಗ ಎಸ್-ಕ್ರಾಸ್ ಮಾದರಿಯು ಸಹ ವಿಟಾರಾ ಬ್ರೆಝಾ ಮಾದರಿಯಲ್ಲೇ ಹೊಸ ಪೆಟ್ರೋಲ್ ಎಂಜಿನ್‌ನೊಂದಿಗೆ ಬಿಡುಗಡೆಗೊಳ್ಳುತ್ತಿದೆ.

ಮಾರುತಿ ಸುಜುಕಿ ಎಸ್-ಕ್ರಾಸ್ ಪೆಟ್ರೋಲ್ ಕಾರು ಮಾದರಿಯ ಖರೀದಿಗಾಗಿ ಅಧಿಕೃತ ಬುಕ್ಕಿಂಗ್ ಆರಂಭ

ಹೊಸ ಎಸ್-ಕ್ರಾಸ್ ಕಾರಿನಲ್ಲಿ ವಿಟಾರಾ ಬ್ರೆಝಾದಲ್ಲಿ ಜೋಡಣೆ ಮಾಡಲಾಗಿರುವ 1.5-ಲೀಟರ್ ಪೆಟ್ರೋಲ್ ಮಾದರಿಯನ್ನೇ ಜೋಡಣೆ ಮಾಡಲಾಗುತ್ತಿದ್ದು, ಇದು ಸ್ಮಾರ್ಟ್ ಹೈಬ್ರಿಡ್ ತಂತ್ರಜ್ಞಾನದೊಂದಿಗೆ 103-ಬಿಎಚ್‌ಪಿ ಮತ್ತು 138-ಎನ್‌ಎಂ ಟಾರ್ಕ್‌ನೊಂದಿಗೆ ಅತ್ಯುತ್ತಮ ಮೈಲೇಜ್ ಪಡೆದುಕೊಂಡಿದೆ.

ಮಾರುತಿ ಸುಜುಕಿ ಎಸ್-ಕ್ರಾಸ್ ಪೆಟ್ರೋಲ್ ಕಾರು ಮಾದರಿಯ ಖರೀದಿಗಾಗಿ ಅಧಿಕೃತ ಬುಕ್ಕಿಂಗ್ ಆರಂಭ

ಜೊತೆಗೆ ಹೊಸ ಕಾರು 5-ಸ್ಪೀಡ್ ಮ್ಯಾನುವಲ್ ಮತ್ತು 4-ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆ ಹೊಂದಿದ್ದು, ಎರಡು ಮಾದರಿಯಲ್ಲೂ ಸ್ಮಾರ್ಟ್ ಹೈಬ್ರಿಡ್ ತಂತ್ರಜ್ಞಾನ ಜೋಡಣೆ ಮಾಡಬಹುದಾಗಿದೆ. ಇದು ಪರ್ಫಾಮೆನ್ಸ್ ಜೊತೆಗೆ ಮೈಲೇಜ್ ಪ್ರಮಾಣದಲ್ಲೂ ಉತ್ತಮ ರೇಟಿಂಗ್ಸ್ ಪಡೆದುಕೊಳ್ಳಲಿದೆ.

MOST READ: ರೂ.5 ಲಕ್ಷಕ್ಕಿಂತ ಕಡಿಮೆ ಬೆಲೆಯ ಜನಪ್ರಿಯ ಕಾರುಗಳಿವು

ಮಾರುತಿ ಸುಜುಕಿ ಎಸ್-ಕ್ರಾಸ್ ಪೆಟ್ರೋಲ್ ಕಾರು ಮಾದರಿಯ ಖರೀದಿಗಾಗಿ ಅಧಿಕೃತ ಬುಕ್ಕಿಂಗ್ ಆರಂಭ

ಇನ್ನು ಬಿಎಸ್-6 ಜಾರಿಗೆ ಬಂದ ಹಿನ್ನಲೆಯಲ್ಲಿ ಮಾರುತಿ ಸುಜುಕಿಯು ಈ ಹಿಂದಿನ 1.3-ಲೀಟರ್ ಡೀಸೆಲ್ ಮಾದರಿಯನ್ನ ಸ್ಥಗಿತಗೊಳಿಸಿದ್ದು, ಡೀಸೆಲ್ ಆವೃತ್ತಿಗಳ ಮಾರಾಟವನ್ನು ಕೈಬಿಟ್ಟು ಕೇವಲ ಪೆಟ್ರೋಲ್ ಮತ್ತು ಸ್ಮಾರ್ಟ್ ಹೈಬ್ರಿಡ್ ತಂತ್ರಜ್ಞಾನ ಪ್ರೇರಿತ ಪೆಟ್ರೋಲ್ ಮಾದರಿಗಳನ್ನು ಮಾತ್ರವೇ ಮಾರಾಟ ಮಾಡುತ್ತಿದೆ.

ಮಾರುತಿ ಸುಜುಕಿ ಎಸ್-ಕ್ರಾಸ್ ಪೆಟ್ರೋಲ್ ಕಾರು ಮಾದರಿಯ ಖರೀದಿಗಾಗಿ ಅಧಿಕೃತ ಬುಕ್ಕಿಂಗ್ ಆರಂಭ

ಮಾಲಿನ್ಯ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರವು ಕೆಲವು ಕಠಿಣ ನಿಯಮಗಳನ್ನು ಜಾರಿಗೆ ತಂದಿರುವುದೇ ಡೀಸೆಲ್ ಎಂಜಿನ್ ಕಾರುಗಳ ಮಾರಾಟದಲ್ಲಿ ಮಹತ್ವದ ಬದಲಾವಣೆಗೆ ಕಾರಣವಾಗಿದ್ದು, ಮಾರುತಿ ಸುಜುಕಿ ಸೇರಿದಂತೆ ಬಹುತೇಕ ಕಾರು ಉತ್ಪಾದನಾ ಸಂಸ್ಥೆಗಳು ಕಡಿಮೆ ಸಾಮರ್ಥ್ಯದ ಡೀಸೆಲ್ ಕಾರುಗಳ ಮಾರಾಟವನ್ನು ಸ್ಥಗಿತಗೊಳಿಸಿವೆ.

MOST READ: ಹೊಸ ಪೊಲೊ ಕಾರು ವಿತರಣೆ ಮಾಡಿದ ಎರಡೇ ನಿಮಿಷದಲ್ಲಿ ನಡೆಯಿತು ಅಪಘಾತ..!

ಮಾರುತಿ ಸುಜುಕಿ ಎಸ್-ಕ್ರಾಸ್ ಪೆಟ್ರೋಲ್ ಕಾರು ಮಾದರಿಯ ಖರೀದಿಗಾಗಿ ಅಧಿಕೃತ ಬುಕ್ಕಿಂಗ್ ಆರಂಭ

ಮಾರುತಿ ಸುಜುಕಿಯು ಸದ್ಯಕ್ಕೆ 800ಸಿಸಿ, 1.0-ಲೀಟರ್, 1.2-ಲೀಟರ್ ಮತ್ತು 1.5-ಲೀಟರ್ ಪೆಟ್ರೋಲ್ ಕಾರು ಮಾದರಿಗಳನ್ನು ಮಾತ್ರವೇ ಮಾರಾಟ ಮಾಡುತ್ತಿದ್ದು, ಮುಂಬರುವ ದಿನಗಳಲ್ಲಿ ಹ್ಯಾಚ್‌ಬ್ಯಾಕ್ ಕಾರುಗಳನ್ನು ಹೊರತುಪಡಿಸಿ ಸೆಡಾನ್, ಎಸ್‌ಯುವಿ ಮತ್ತು ಎಂಪಿವಿ ಕಾರು ಮಾದರಿಗಳಲ್ಲಿ ಮಾತ್ರವೇ ಹೊಸ ತಂತ್ರಜ್ಞಾನ ಪ್ರೇರಿತ 1.5-ಲೀಟರ್ ಡೀಸೆಲ್ ಎಂಜಿನ್ ಅನ್ನು ಬಿಡುಗಡೆಗೊಳಿಸಬಹುದಾದ ಸಾಧ್ಯತೆಗಳಿವೆ.

Article Published On: Friday, July 24, 2020, 12:27 [IST]
English summary
Maruti S-Cross Petrol Bookings Starts. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+