ಇತಿಹಾಸದ ಪುಟ ಸೇರಿದ ಜನಪ್ರಿಯ ಮಾರುತಿ ಆಲ್ಟೋ ಕೆ10 ಕಾರು

ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ ಕಂಪನಿಯು ಮಾರುತಿ ಆಲ್ಟೋ ಕೆ10 ಕಾರನ್ನು ಅಧಿಕೃತವಾಗಿ ಸ್ಥಗಿತಗೊಳಿಸಿದೆ. ಈ ಎಂಟ್ರಿ ಲೆವೆಲ್ ಹ್ಯಾಚ್‍‍ಬ್ಯಾಕ್ ಕಂಪನಿಯ ಜನಪ್ರಿಯ ಮಾದರಿಗಳಲ್ಲಿ ಒಂದಾಗಿದೆ.

ಇತಿಹಾಸದ ಪುಟ ಸೇರಿದ ಜನಪ್ರಿಯ ಮಾರುತಿ ಆಲ್ಟೋ ಕೆ10

ಆಲ್ಟೋ ಈಗ 796 ಸಿಸಿ ಮೂರು ಸಿಲಿಂಡರ್‍‍‍ನಲ್ಲಿ ಮಾತ್ರ ಲಭ್ಯವಿದೆ. ಕಂಪನಿಯು ತನ್ನ ಅಧಿಕೃತ ವೆಬ್‍‍ಸೈಟ್‍ನಿಂದ ಆಲ್ಟೋ ಕೆ10 ಕಾರಿನ ಪಟ್ಟಿಯನ್ನು ತೆಗೆದುಹಾಕಿಲ್ಲ. ಆದರೆ ಮಾರುತಿ ಆಲ್ಟೋ ಕೆ10 ಉತ್ಪಾದನೆಯನ್ನು ಸ್ಥಗಿತಗೊಳಿಸಲಾಗಿದೆ. ಡೀಲರ್‍‍ಗಳು ಸ್ಟಾಕ್‍ನಲ್ಲಿರುವ ಯುನಿಟ್‍‍‍ಗಳನ್ನು ತೆರವುಗೊಳಿಸುವ ಸಲುವಾಗಿ ಈ ಕಾರಿನ ಮಾರಾಟ ಮಾಡುತ್ತಿದ್ದಾರೆ.

ಇತಿಹಾಸದ ಪುಟ ಸೇರಿದ ಜನಪ್ರಿಯ ಮಾರುತಿ ಆಲ್ಟೋ ಕೆ10

ಮಾರುತಿ ಅಲ್ಟೋ ಕೆ10 ಕಾರು 998 ಸಿಸಿ ಬಿಎಸ್-4 ಮೂರು ಸಿಲಿಂಡರ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 67 ಬಿ‍ಹೆಚ್‍‍ಪಿ ಪವರ್ ಮತ್ತು 90 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್‍‍ನೊಂದಿಗೆ 5 ಸ್ಪೀಡ್ ಮ್ಯಾನುವಲ್ ಮತ್ತು ಆಟೋ ಮ್ಯಾಟಿಕ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಾಗಿದೆ.

ಇತಿಹಾಸದ ಪುಟ ಸೇರಿದ ಜನಪ್ರಿಯ ಮಾರುತಿ ಆಲ್ಟೋ ಕೆ10

ಆಲ್ಟೋ ಕೆ10 ಕಾರಿನಲ್ಲಿರುವ ಎಂಜಿನ್ 998 ಸಿಸಿ ಮೂರು ಸಿಲಿಂಡರ್ ಸಿ‍ಎನ್‍ಜಿ ಎಂಜಿನ್‍‍ನೊಂದಿಗೆ ಲಭ್ಯವಿದೆ. ಈ ಎಂಜಿನ್ 58 ಬಿಹೆಚ್‍‍ಪಿ ಮತ್ತು 78 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‍‍ನೊಂದಿಗೆ 5 ಸ್ಪೀಡ್ ಮ್ಯಾನುವಲ್ ಗೇರ್‍‍‍ಬಾಕ್ಸ್ ಅಳವಡಿಸಲಾಗಿದೆ.

ಇತಿಹಾಸದ ಪುಟ ಸೇರಿದ ಜನಪ್ರಿಯ ಮಾರುತಿ ಆಲ್ಟೋ ಕೆ10

ಮೊದಲ ತಲೆಮಾರಿನ ಮಾರುತಿ ಆಲ್ಟೋ ಕೆ10 ಕಾರನ್ನು 2010ರಲ್ಲಿ ಬಿಡುಗಡೆಗೊಳಿಸಲಾಗಿತ್ತು. ನಂತರ 2014ರಲ್ಲಿ ಎರಡನೇ ತಲೆಮಾರಿನ ಮತ್ತು 2019ರಲ್ಲಿ ಫೇಸ್‍‍‍ಲಿಫ್ಟ್ ಮಾದರಿಯನ್ನು ಬಿಡುಗಡೆ ಮಾಡಲಾಯಿತು.

ಇತಿಹಾಸದ ಪುಟ ಸೇರಿದ ಜನಪ್ರಿಯ ಮಾರುತಿ ಆಲ್ಟೋ ಕೆ10

ಈ ಕಾರಿನ ಫೀಚರ್‍‍‍ಗಳಲ್ಲಿ ಡ್ರೈವರ್ ಸೈಡ್ ಏರ್‌ಬ್ಯಾಗ್, ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಮ್ (ಎಬಿಎಸ್), ಎಲೆಕ್ಟ್ರಾನಿಕ್ ಫೋರ್ಸ್ ಡಿಸ್ಟ್ರಿಬ್ಯೂಷನ್ (ಇಬಿಡಿ ), ರೇರ್ ಪಾರ್ಕಿಂಗ್ ಸೆನ್ಸಾರ್‌, ಸ್ಪೀಡ್ ಅಲರ್ಟ್ ಸಿಸ್ಟಂ ಹಾಗೂ ಸೀಟ್‌ಬೆಲ್ಟ್ ರಿಮ್ಯಾಂಡರ್‍‍ಗಳಿವೆ.

ಇತಿಹಾಸದ ಪುಟ ಸೇರಿದ ಜನಪ್ರಿಯ ಮಾರುತಿ ಆಲ್ಟೋ ಕೆ10

ಈಗ ಸ್ಥಗಿತಗೊಂಡಿರುವ ಆಲ್ಟೋ ಕೆ10 ಕಾರಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ತಕಾರ ರೂ.3.72 ದಿಂದ 4.51 ಲಕ್ಷಗಳಾಗಿದೆ. ಸ್ಟಾಕ್‍‍ನಲ್ಲಿರುವ ಕಾರುಗಳನ್ನು ಮಾರ್ಚ್ 31ರವರೆಗೊ ಮಾರಾಟ ಮಾಡಲಾಗುತ್ತದೆ.

ಇತಿಹಾಸದ ಪುಟ ಸೇರಿದ ಜನಪ್ರಿಯ ಮಾರುತಿ ಆಲ್ಟೋ ಕೆ10

ಆಲ್ಟೋ ಕೆ10 ಕಾರನ್ನು ಸ್ಥಗಿತಗೊಳಿಸಿ ಮಾರುತಿ ಸುಜುಕಿ ಕಂಪನಿಯ ಹೊಸ ಎಸ್-ಪ್ರೆಸ್ಸೊ ಹ್ಯಾಚ್‍‍ಬ್ಯಾಕ್‍ಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಿದೆ. ಮಾರುತಿ ಎಸ್-ಪ್ರೆಸ್ಸೊ ಕಾರು ಮಾರುತಿ ಆಲ್ಟೋ ಕೆ10 ಕಾರಿನ ಸ್ಥಾನವನ್ನು ತುಂಬಲಿದೆ. ದೇಶಿಯ ಮಾರುಕಟ್ಟೆಯಲ್ಲಿ ಮಾರುತಿ-ಎಸ್-ಪ್ರೆಸ್ಸೊ ಉತ್ತಮವಾಗಿ ಮಾರಾಟವಾಗುತ್ತಿದೆ.

ಇತಿಹಾಸದ ಪುಟ ಸೇರಿದ ಜನಪ್ರಿಯ ಮಾರುತಿ ಆಲ್ಟೋ ಕೆ10

ಎಸ್-ಪ್ರೆಸ್ಸೊ ಮಿನಿ ಎಸ್‍‍ಯು‍ವಿ 998 ಸಿಸಿ ಪೆಟ್ರೋಲ್ ಎಂಜಿನ್‌ ‌67 ಬಿಎಚ್‌ಪಿ ಪವರ್ ಮತ್ತು 90 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಆರಂಭಿಕ ಕಾರು ಮಾದರಿಯಲ್ಲಿ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಮತ್ತು ಹೈ ಎಂಡ್ ಮಾದರಿಯಲ್ಲಿ 5-ಸ್ಪೀಡ್ ಆಟೋ ಗೇರ್ ಶಿಫ್ಟ್(ಎಜಿಎಸ್) ಆಯ್ಕೆಯನ್ನು ಹೊಂದಿದೆ.

ಇತಿಹಾಸದ ಪುಟ ಸೇರಿದ ಜನಪ್ರಿಯ ಮಾರುತಿ ಆಲ್ಟೋ ಕೆ10

ಅಲ್ಟೋ ಕೆ10 ಮಾರುತಿ ಸುಜುಕಿ ಕಂಪನಿಯ ಕಾರುಗಳ ಸರಣಿಯಲ್ಲಿ ಅತಿ ಹೆಚ್ಚು ಮಾರಾಟವಾಗುತ್ತಿರುವ ಕಾರುಗಳಲ್ಲಿ ಒಂದಾಗಿದೆ. ಆಲ್ಟೋ ಕೆ10 ಆಹ್ಲಾದಕರ ಡ್ರೈವಿಂಗ್ ಅನುಭವ ಮತ್ತು ಇಂಟಿರಿಯರ್‍‍ನಲ್ಲಿ ಉತ್ತಮ ಸ್ಪೇಸ್‍ನಿಂದ ಕೊಡಿದ ಕಾರು ಆಗಿದೆ. ಮಾರುತಿ ಸುಜುಕಿ ಕಂಪನಿಯು ಇಷ್ಟು ಜನಪ್ರಿಯ ಕಾರನ್ನು ಸ್ಥಗಿತಗೊಳಿಸುವುದು ಆಶ್ಚರ್ಯಕರ ಸಂಗತಿಯಾಗಿದೆ.

Most Read Articles

Kannada
English summary
Maruti Suzuki Alto K10 Discontinued In India: S-Presso Establishes Itself As Bankable. Read in Kananda.
Story first published: Saturday, February 1, 2020, 16:03 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X