ಕಾರು ಮಾರಾಟದಲ್ಲಿ ಇಳಿಕೆ- ಲೀಸ್ ಕಾರು ಯೋಜನೆಗೆ ಚಾಲನೆ ನೀಡಿದ ಮಾರುತಿ ಸುಜುಕಿ

ಕರೋನಾ ವೈರಸ್‌ನಿಂದಾಗಿ ಭಾರೀ ನಷ್ಟ ಅನುಭವಿಸುತ್ತಿರುವ ಆಟೋ ಕಂಪನಿಗಳು ವಾಹನ ಮಾರಾಟವನ್ನು ಸುಧಾರಿಸಲು ಹಲವಾರು ಹೊಸ ಯೋಜನೆಗಳಿಗೆ ಚಾಲನೆ ನೀಡುತ್ತಿದ್ದು, ಮಾರುತಿ ಸುಜುಕಿ ಕಂಪನಿಯು ವಿವಿಧ ಕಾರು ಮಾದರಿಗಳ ಮೇಲೆ ಲೀಸ್ ಆಯ್ಕೆಯನ್ನು ಆಫರ್ ನೀಡುತ್ತಿದೆ.

ಲೀಸ್ ಕಾರು ಯೋಜನೆಗೆ ಚಾಲನೆ ನೀಡಿದ ಮಾರುತಿ ಸುಜುಕಿ

ಹೊಸ ಲೀಸ್ ಯೋಜನೆ ಅಡಿ ಮಾರುತಿ ಸುಜುಕಿ ಕಂಪನಿಯು ವಿವಿಧ ಕಾರುಗಳನ್ನು ನಿಗದಿತ ಅವಧಿಗೆ ಇಂತಿಷ್ಟು ಪ್ರಮಾಣದ ದರ ನಿಗದಿ ಮಾಡಿದ್ದು, ಕಾರು ಮಾದರಿಗಳು ಮತ್ತು ಲೀಸ್ ಅವಧಿಯ ಮೇಲೆ ದರ ನಿಗದಿ ಮಾಡಲಾಗುತ್ತದೆ. ಇದು ಸದ್ಯಕ್ಕೆ ಇಳಿಕೆಯಾಗಿರುವ ಹೊಸ ವಾಹನಗಳ ಮಾರಾಟ ಪ್ರಮಾಣವನ್ನು ಸುಧಾರಿಸಲು ನೇರವಾಗಲಿದ್ದು, ಮಾರುತಿ ಸುಜುಕಿ ಸೇರಿದಂತೆ ಹಲವು ಕಂಪನಿಗಳು ಲೀಸ್ ಆಯ್ಕೆಗೆ ಚಾಲನೆ ನೀಡಿವೆ.

ಲೀಸ್ ಕಾರು ಯೋಜನೆಗೆ ಚಾಲನೆ ನೀಡಿದ ಮಾರುತಿ ಸುಜುಕಿ

ಮಾರುತಿ ಸುಜುಕಿ ಸಬ್‌ಸ್ಕೈಬ್‌ ಹೆಸರಿನಲ್ಲಿ ಲೀಸ್ ಕಾರುಗಳ ಆಯ್ಕೆ ನೀಡಲಾಗಿದ್ದು, ಅರೆನಾ ಮತ್ತು ನೆಕ್ಸಾ ಎರಡು ಮಾದರಿಯ ಕಾರು ಮಾರಾಟ ಮಳಿಗೆಗಳಲ್ಲೂ ಲೀಸ್ ಆಯ್ಕೆಯು ಲಭ್ಯವಿದೆ.

ಲೀಸ್ ಕಾರು ಯೋಜನೆಗೆ ಚಾಲನೆ ನೀಡಿದ ಮಾರುತಿ ಸುಜುಕಿ

ಅರೆನಾ ಕಾರು ಮಳಿಗೆಗಳಲ್ಲಿ ಸ್ವಿಫ್ಟ್, ಡಿಜೈರ್, ವಿಟಾರಾ ಬ್ರೆಝಾ ಮತ್ತು ಎರ್ಟಿಗಾ ಕಾರುಗಳ ಮೇಲೆ ಲೀಸ್ ಆಯ್ಕೆ ಲಭ್ಯವಿದ್ದಲ್ಲಿ ನೆಕ್ಸಾ ಕಾರು ಮಾರಾಟ ಮಳಿಗೆಗಳಲ್ಲಿ ಸಿಯಾಜ್, ಬಲೆನೊ ಮತ್ತು ಎಕ್ಸ್ಎಲ್6 ಕಾರುಗಳನ್ನು ಲೀಸ್ ಪಡೆಯಬಹುದಾಗಿದೆ.

ಲೀಸ್ ಕಾರು ಯೋಜನೆಗೆ ಚಾಲನೆ ನೀಡಿದ ಮಾರುತಿ ಸುಜುಕಿ

ಸದ್ಯ ಕರೋನಾ ವೈರಸ್ ಪರಿಣಾಮ ಹೊಸ ಕಾರುಗಳನ್ನು ಸ್ವಂತಕ್ಕೆ ಖರೀದಿಸಲು ಸಾಧ್ಯವಾಗದೆ ಇರುವ ಗ್ರಾಹಕರಿಗೆ ಲೀಸ್ ಆಯ್ಕೆಯು ಉತ್ತಮ ಆಯ್ಕೆಯಾಗಿದ್ದು, ಅವಶ್ಯಕತೆಯಿದ್ದಾಗ ಮಾಲೀಕ್ವ ಪಡೆದುಕೊಂಡು ಬೇಡವಾದಗ ಕಾರನ್ನು ಹಿಂದಿರುಗಿಸಲು ಅವಕಾಶವಿರುತ್ತದೆ.

MOST READ: ರೂ.5 ಲಕ್ಷಕ್ಕಿಂತ ಕಡಿಮೆ ಬೆಲೆಯ ಜನಪ್ರಿಯ ಕಾರುಗಳಿವು

ಲೀಸ್ ಕಾರು ಯೋಜನೆಗೆ ಚಾಲನೆ ನೀಡಿದ ಮಾರುತಿ ಸುಜುಕಿ

ಲೀಸ್ ಸಂದರ್ಭದಲ್ಲಿ ಹೊಸ ಕಾರಿನ ನೋಂದಣಿ, ವಿಮೆ ಮತ್ತು ನಿರ್ವಹಣಾ ವೆಚ್ಚವನ್ನು ಆಯಾ ವಾಹನ ಕಂಪನಿಗಳೇ ನಿರ್ವಹಿಸಲಿದ್ದು, ಲೀಸ್ ಅವಧಿ ಮತ್ತು ಕಾರು ಮಾದರಿಯ ಆಧಾರದ ಮೇಲೆ ದರಗಳನ್ನು ನಿರ್ಧರಿಸಲಾಗುತ್ತದೆ.

ಲೀಸ್ ಕಾರು ಯೋಜನೆಗೆ ಚಾಲನೆ ನೀಡಿದ ಮಾರುತಿ ಸುಜುಕಿ

ಲೀಸ್ ಪಡೆಯುವ ಗ್ರಾಹಕರು ಕಾರುಗಳು ಪಡೆಯುವ ಮುನ್ನವೇ ಲೀಸ್ ಹಣ ಪಾವತಿ ಮಾಡಬೇಕಿದ್ದು, ಅತಿ ಸುಲಭ ಪತ್ರ ವ್ಯವಹಾರಗಳ ಮೂಲಕ ಕಾರು ಮಾಲೀಕ್ವತವನ್ನು ನೀಡಲಾಗುತ್ತದೆ.

MOST READ: ಪ್ರತಿ ಚಾರ್ಜ್‌ಗೆ 480 ಕಿ.ಮೀ ಮೈಲೇಜ್ ನೀಡುವ ಎಲೆಕ್ಟ್ರಿಕ್ ಎಸ್‌ಯುವಿ ಬಿಡುಗಡೆ ಮಾಡಲಿದೆ ನಿಸ್ಸಾನ್

ಲೀಸ್ ಕಾರು ಯೋಜನೆಗೆ ಚಾಲನೆ ನೀಡಿದ ಮಾರುತಿ ಸುಜುಕಿ

ಇದು ಹೊಸ ಕಾರುಗಳ ಮಾರಾಟದಷ್ಟೇ ಲಾಭದಾಯಕ ಉದ್ಯಮವಾಗಿದ್ದು, ಹಲವಾರು ಕಾರು ಕಂಪನಿಗಳು ಲೀಸ್ ವಾಹನ ಸಂಖ್ಯೆಯನ್ನು ಇದೇ ಕಾರಣಕ್ಕೆ ಹೆಚ್ಚಿಸುತ್ತ ಗಮನಹರಿಸುತ್ತಿವೆ. ಇದರ ಜೊತೆಗೆ ಗ್ರಾಹಕರಿಗೂ ಇದು ಸಾಕಷ್ಟು ಅನುಕೂಲಕರವಾಗಿದ್ದು, ಬೇಕೆಂದ ಸಂದರ್ಭಗಳಲ್ಲಿ ಮಾಲೀಕತ್ವ ಪಡೆದುಕೊಂಡು ಬೇಡವಾದಾಗ ಕಾರುಗಳನ್ನು ಹಿಂದಿರುಗಿಸಬಹುದು.

Most Read Articles

Kannada
English summary
Maruti Suzuki Subscribe Launched In India. Read in Kannada.
Story first published: Thursday, July 2, 2020, 20:55 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X