ಬಿಎಸ್-6 ಎಂಜಿನ್‍ನಲ್ಲಿ ಬಿಡುಗಡೆಯಾಯ್ತು ಮಾರುತಿ ಸುಜುಕಿ ಸೆಲೆರಿಯೊ ಎಕ್ಸ್
ಹೊಸ ಬಿಎಸ್-6 ಮಾಲಿನ್ಯ ನಿಯಮ ಜಾರಿಯಾಗುದಕ್ಕೆ ಕೆಲವೇ ದಿನಗಳು ಬಾಕಿ ಇದೆ. ಈ ಸಂದರ್ಭದಲ್ಲಿ ದೇಶದ ಅತಿ ದೊಡ್ಡ ವಾಹನ ಉತ್ಪಾದನಾ ಕಂಪನಿಯಾಗಿರುವ ಮಾರುತಿ ಸುಜುಕಿ ತನ್ನ ಹೊಸ ಸೆಲೆರಿಯೊ ಎಕ್ಸ್ ಮಾದರಿಯನ್ನು ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ಬಿಡುಗಡೆಗೊಳಿಸಲಾಗಿದೆ.

ಬಿಡುಗಡೆಯಾಗಿರುವ ಬಿಎಸ್-6 ಸೆಲೆರಿಯೊ ಎಕ್ಸ್ ಮಾದರಿಯ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.4.90 ಲಕ್ಷಗಳಾಗಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿರುವ ಮಾದರಿಗೆ ಹೋಲಿಸಿದರೆ ರೂ.15,000 ದಷ್ಟು ಹೆಚ್ಚಿಸಲಾಗಿದೆ. ಮಾರುತಿ ಸುಜುಕಿ ಕಂಪನಿಯು ತನ್ನ ಎಲ್ಲಾ ಜನಪ್ರಿಯ ಮಾದರಿಗಳನ್ನು ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೂಳಿಸಲಾಗಿದೆ. ಮಾರುತಿ ಸುಜುಕಿ ಕಂಪನಿಯು ಡೀಸೆಲ್ ಎಸ್-ಕ್ರಾಸ್ ಮತ್ತು ಆಲ್ಟೋ ಕೆ10 ಮಾದರಿಯನ್ನು ಸ್ಥಗಿತಗೊಳಿಸಲಾಗಿದೆ.

ಹೊಸ ಮಾರುತಿ ಸೆಲೆರಿಯೊ ಎಕ್ಸ್ ಮಾದರಿಯು ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸುವುದನ್ನು ಹೊರತುಪಡಿಸಿ ಇತರೆ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ.

ಹೊಸ ಸೆಲೆರಿಯೊ ಎಕ್ಸ್ ಕಾರಿನಲ್ಲಿ 1.0-ಲೀಟರ್ ಟ್ರಿಪಲ್-ಸಿಲಿಂಡರ್ ಕೆ10 ಬಿ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 67 ಬಿಹೆಚ್‌ಪಿ ಪವರ್ ಮತ್ತು 90 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಈ ಎಂಜಿನ್ ನೊಂದಿಗೆ 5 ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಅನ್ನು ಅಳವಡಿಸಲಾಗಿದೆ. ಇದರೊಂದಿಗೆ 5 ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯನ್ನು ನೀಡಲಾಗಿದೆ. ಹೊಸ ಸೆಲೆರಿಯೊ ಎಕ್ಸ್ ಕಾರು ಪ್ರತಿ ಲೀಟರ್‌ಗೆ 21.63 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ.

ಈ ಹೊಸ ಕಾರು ಸ್ಪೋರ್ಟ್ಸ್ ಮಾದರಿಯ ವಿನ್ಯಾಸವನ್ನು ಹೊಂದಿದೆ. ಈ ಕಾರಿನ ಮುಂಭಾಗದಲ್ಲಿ ಫ್ರಂಟ್ ಬಂಪರ್, ಫಾಗ್ ಲ್ಯಾಂಪ್ ಸುತ್ತಲೂ ಇನ್ಸರ್ಟ್, ಸೈಡ್ ಕ್ಲಾಡಿಂಗ್, ಇಂಟಿಗ್ರೇಟೆಡ್ ರೂಫ್ ಅನ್ನು ಹೊಂದಿದೆ. ಇದರೊಂದಿಗೆ ಬ್ಲ್ಯಾಕ್ ವ್ಹೀಲ್ ಕ್ಯಾಪ್ಸ್ ಮತ್ತು ಸಿಲ್ವರ್ ಇನ್ಸರ್ಟ್‌ಗಳನ್ನು ಹೊಂದಿರುವ ಸ್ಪೋರ್ಟಿ ಬ್ಲ್ಯಾಕ್ ರೇರ್ ಬಂಪರ್ ಅನ್ನು ಹೊಂದಿದೆ. ಒಟ್ಟಿನಲ್ಲಿ ಈ ಕಾರು ಆಕರ್ಷಕ ಸ್ಪೋರ್ಟಿ ಲುಕ್ ಅನ್ನು ಹೊಂದಿದೆ.

ಹೊಸ ಸೆಲೆರಿಯೊ ಎಕ್ಸ್ ಕಾರಿನಲ್ಲಿ ನಾಲ್ಕು ಪವರ್ ವಿಂಡೋಗಳು, ಎಸಿ, ಯುಎಸ್‌ಬಿ, ಬ್ಲೂಟೂತ್ ಕನೆಕ್ಟಿವಿಟಿಯೊಂದಿಗೆ ಮ್ಯೂಸಿಕ್ ಸಿಸ್ಟಂ ಸ್ಟೀಯರಿಂಗ್ ಮೌಂಟಡ್ ಕಂಟ್ರೋಲ್, ಎಲೆಕ್ಟ್ರಿಕ್ ಆಗಿ ಹೋಂದಾಣಿಕ ಮಾಡಬಹುದಾದ ರೇರ್ ವ್ಯೂ ಮಿರರ್, ಕೀ ಲೆಸ್ ಎಂಟ್ರಿ ಮತ್ತು ಸೆಮಿ ಡಿಜಿಟಲ್ ಇನ್ಸ್ ಟ್ರೂಮೆಂಟ್ ಪ್ಯಾನೆಲ್ ಅನ್ನು ಹೊಂದಿದೆ.

ಬಿಎಸ್-6 ಮಾರುತಿ ಸುಜುಕಿ ಸೆಲೆರಿಯೊ ಎಕ್ಸ್ ಕಾರಿನಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ಡ್ರೈವರ್ ಸೈಡ್ ಏರ್‌ಬ್ಯಾಗ್, ಎಬಿಎಸ್, ರಿವರ್ಸ್ ಪಾರ್ಕಿಂಗ್ ಸೆನ್ಸಾರ್ ಮತ್ತು ಸ್ಪೀಡ್ ಅಲರ್ಟ್ ಸಿಸ್ಟಂ ಅನ್ನು ಸ್ಟ್ಯಾಂಡರ್ಡ್ ಆಗಿ ಅಳವಡಿಸಲಾಗಿದೆ.

ಸಾಮಾನ್ಯ ಮಾದರಿ ಸ್ಟ್ಯಾಂಡರ್ಡ್ ಸೆಲೆರಿಯೊವನ್ನು ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ಜನವರಿ ತಿಂಗಳಲ್ಲಿ ಬಿಡುಗಡೆಗೊಳಿಸಿದ್ದರು. ಬಿಎಸ್-6 ಮಾರುತಿ ಸುಜುಕಿ ಸೆಲೆರಿಯೊ ಎಕ್ಸ್ ಕಾರು ಭಾರತೀಯ ಮಾರುಕಟ್ಟೆಯಲ್ಲಿ ಹ್ಯುಂಡೈ ಸ್ಯಾಂಟ್ರೊ, ಟಾಟಾ ಟಿಯಾಗೊ ಫೇಸ್‌ಲಿಫ್ಟ್ ಮತ್ತು ದಡ್ಸನ್ ಗೋ ಕಾರುಗಳಿಗೆ ಪೈಪೋಟಿಯನ್ನು ನೀಡಲಾಗುತ್ತದೆ.


Click it and Unblock the Notifications








