ಬೇರೆ ಕಂಪನಿಗಳಿಗೆ ವಿಶಿಷ್ಟವಾಗಿ ಟಾಂಗ್ ಕೊಟ್ಟ ಮಾರುತಿ ಸುಜುಕಿ

ಇತ್ತೀಚಿಗೆ ಕಾರು ತಯಾರಕ ಕಂಪನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಪರಸ್ಪರ ನಿಂದಿಸಿಕೊಳ್ಳುತ್ತಿವೆ. ಇತ್ತೀಚಿಗೆ ಟಾಟಾ ಮೋಟಾರ್ಸ್ ಹ್ಯುಂಡೈ ಮೋಟಾರ್ಸ್ ಕಂಪನಿಗೆ ಟಾಂಗ್ ನೀಡಿತ್ತು. ಈಗ ಮಾರುತಿ ಸುಜುಕಿ ಕಂಪನಿಯು ತನ್ನ ಸಾಮಾಜಿಕ ಜಾಲತಾಣದ ಬೇರೆ ಕಂಪನಿಗಳಿಗೆ ಟಾಂಗ್ ನೀಡಿದೆ.

ಬೇರೆ ಕಂಪನಿಗಳಿಗೆ ವಿಶಿಷ್ಟವಾಗಿ ಟಾಂಗ್ ಕೊಟ್ಟ ಮಾರುತಿ ಸುಜುಕಿ

ಮಾರುತಿ ಸುಜುಕಿ ಕಂಪನಿಗೆ ಕಳೆದ ಕೆಲವು ದಿನಗಳಿಂದ ಟಾಂಗ್ ನೀಡಲಾಗುತ್ತಿತ್ತು. ಈ ಕಾರಣಕ್ಕೆ ಮಾರುತಿ ಸುಜುಕಿ ಕಂಪನಿಯು ತನ್ನ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ತನ್ನನ್ನು ಭಾರತದ ಅತ್ಯಂತ ಜನಪ್ರಿಯ ಆಟೋಮೊಬೈಲ್ ಕಂಪನಿ ಎಂದು ಬಣ್ಣಿಸಿಕೊಂಡಿದೆ. ಇದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಹೇಳಿಕೊಂಡಿದೆ.

ಬೇರೆ ಕಂಪನಿಗಳಿಗೆ ವಿಶಿಷ್ಟವಾಗಿ ಟಾಂಗ್ ಕೊಟ್ಟ ಮಾರುತಿ ಸುಜುಕಿ

ಮಾರುತಿ ಸುಜುಕಿ ಕಂಪನಿಯ ಎಸ್-ಪ್ರೆಸ್ಸೊ ಕಾರು ಗ್ಲೋಬಲ್ ಎನ್‌ಸಿಎಪಿ ಕ್ರಾಶ್ ಟೆಸ್ಟ್ ನಲ್ಲಿ ಶೂನ್ಯ ರೇಟಿಂಗ್ ಪಡೆದ ಕಾರಣ ಟಾಟಾ ಮೋಟಾರ್ಸ್, ಆ ಕಾರಿನ ಚಿತ್ರಗಳನ್ನು ಪೋಸ್ಟ್ ಮಾಡಿ ಅಪಹಾಸ್ಯ ಮಾಡಿತ್ತು.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಬೇರೆ ಕಂಪನಿಗಳಿಗೆ ವಿಶಿಷ್ಟವಾಗಿ ಟಾಂಗ್ ಕೊಟ್ಟ ಮಾರುತಿ ಸುಜುಕಿ

ಮಾರುತಿ ಸುಜುಕಿ ಕಂಪನಿಯು ಈ ಪೋಸ್ಟ್ ನಲ್ಲಿ ಯಾವುದೇ ಕಂಪನಿಯ ಬಗ್ಗೆ ಹೇಳಿಲ್ಲ. ಆದರೆ ಈ ಪೋಸ್ಟ್ ಮೂಲಕ ಬೇರೆ ಕಂಪನಿಗಳಿಗೆ ಟಾಂಗ್ ನೀಡುತ್ತಿದೆ. ಈ ಮೂಲಕ ಕಂಪನಿಯು ತಾನು ದೇಶದ ಅತಿದೊಡ್ಡ ಕಾರು ಉತ್ಪಾದಕ ಕಂಪನಿ ಹಾಗೂ ಜನಪ್ರಿಯ ಕಂಪನಿ ಎಂದು ಹೇಳಿಕೊಂಡಿದೆ.

ಬೇರೆ ಕಂಪನಿಗಳಿಗೆ ವಿಶಿಷ್ಟವಾಗಿ ಟಾಂಗ್ ಕೊಟ್ಟ ಮಾರುತಿ ಸುಜುಕಿ

ಉಳಿದ ಆಟೋಮೊಬೈಲ್ ತಯಾರಕ ಕಂಪನಿಗಳು, ಕಂಪನಿಗಳ ಈ ಜಗಳವನ್ನು ಆನಂದಿಸುತ್ತಿವೆ. ಕೆಲವರು ಈ ಪೋಸ್ಟ್ ಗಳನ್ನು ಮೂರ್ಖತನವೆನ್ನುತ್ತಿದ್ದಾರೆ. ಮಾರುತಿ ಸುಜುಕಿ ಕಂಪನಿಯ ಎಸ್-ಪ್ರೆಸ್ಸೊ ಇತ್ತೀಚೆಗೆ ಗ್ಲೋಬಲ್ ಎನ್‌ಸಿಎಪಿ ಕ್ರಾಶ್ ಟೆಸ್ಟ್ ನಲ್ಲಿ ಸುರಕ್ಷತೆಯ ದೃಷ್ಟಿಯಿಂದ ಶೂನ್ಯ ರೇಟಿಂಗ್ ಪಡೆದಿದೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಬೇರೆ ಕಂಪನಿಗಳಿಗೆ ವಿಶಿಷ್ಟವಾಗಿ ಟಾಂಗ್ ಕೊಟ್ಟ ಮಾರುತಿ ಸುಜುಕಿ

ಇದರಿಂದಾಗಿ ಈ ಕಾರು ಹಾಗೂ ಕಂಪನಿಯ ಪ್ರತಿಷ್ಠೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಹಾಳಾಗಿದೆ. ಇದರಿಂದ ಗ್ರಾಹಕರ ಮೇಲೆ ಪ್ರಭಾವ ಉಂಟಾಗುವುದನ್ನು ಅರಿತ ಕಂಪನಿಯು ಪತ್ರಿಕಾ ಹೇಳಿಕೆಯನ್ನು ನೀಡಿ ಎಸ್-ಪ್ರೆಸ್ಸೊ ಸುರಕ್ಷಿತ ಕಾರು ಎಂದು ಹೇಳಿದೆ.

ಬೇರೆ ಕಂಪನಿಗಳಿಗೆ ವಿಶಿಷ್ಟವಾಗಿ ಟಾಂಗ್ ಕೊಟ್ಟ ಮಾರುತಿ ಸುಜುಕಿ

ಈ ಕಾರಿನಲ್ಲಿ ಭಾರತೀಯ ನಿಯಮಗಳ ಪ್ರಕಾರ ಕಡ್ಡಾಯವಾಗಿರುವ ಎಲ್ಲಾ ಫೀಚರ್ ಹಾಗೂ ಉಪಕರಣಗಳನ್ನು ನೀಡಲಾಗಿದೆ ಎಂದು ಹೇಳಲಾಗುತ್ತಿತ್ತು. ಆದರೆ ಉಳಿದ ಕಂಪನಿಗಳು ಈ ಕಾರನ್ನು ಗೇಲಿ ಮಾಡುವುದನ್ನು ನಿಲ್ಲಿಸಲಿಲ್ಲ. ಮಾರುತಿ ಸುಜುಕಿ ಮಾತ್ರವಲ್ಲದೇ ಹ್ಯುಂಡೈ ಹಾಗೂ ಕಿಯಾ ಕಂಪನಿಗಳನ್ನು ಸಹ ಟ್ರೋಲ್ ಮಾಡಲಾಗುತ್ತಿದೆ. ಈ ಕಂಪನಿಯ ಕಾರುಗಳು ಸಹ ಕ್ರಾಶ್ ಟೆಸ್ಟ್ ನಲ್ಲಿ ಉತ್ತೀರ್ಣರಾಗಿಲ್ಲ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಬೇರೆ ಕಂಪನಿಗಳಿಗೆ ವಿಶಿಷ್ಟವಾಗಿ ಟಾಂಗ್ ಕೊಟ್ಟ ಮಾರುತಿ ಸುಜುಕಿ

ಸುರಕ್ಷಿತ ಕಾರುಗಳ ಬಗ್ಗೆ ದೇಶಾದ್ಯಂತ ಚರ್ಚೆ ನಡೆಯುತ್ತಿದ್ದು, ಎಲ್ಲಾ ಕಂಪನಿಗಳು ತಮ್ಮ ಕಾರುಗಳು ಸುರಕ್ಷಿತವೆಂದು ಹೇಳಿಕೊಳ್ಳುತ್ತಿವೆ. ಮಾರುತಿ ಸುಜುಕಿ ಕಂಪನಿಯ ಕಾರುಗಳು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತಿವೆ. ಕಳೆದ ತಿಂಗಳು ಕಂಪನಿಯ ಕಾರುಗಳು ದೊಡ್ಡ ಪ್ರಮಾಣದಲ್ಲಿ ಮಾರಾಟವಾಗಿವೆ.

Most Read Articles

Kannada
English summary
Maruti Suzuki claims itself as most favorite company. Read in Kannada.
Story first published: Saturday, November 21, 2020, 17:54 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X